ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್

ಇಸುಝು ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ತನ್ನ ಜನಪ್ರಿಯ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್

ಆಟೋ ಉದ್ಯದಲ್ಲಿನ ಏರಿಳಿತ ಪರಿಣಾಮ ಕಳೆದ ಜೂನ್ ತಿಂಗಳನಲ್ಲೇ ಬಿಡುಗಡೆಯಾಗಬೇಕಿದ್ದ ಬಿಎಸ್-6 ಡಿ-ಕ್ರಾಸ್ ವಿ-ಕ್ರಾಸ್ ಲೈಫ್‌ಸ್ಟೈಲ್ ಪಿಕ್‌ಅಪ್ ಟ್ರಕ್ ಮಾದರಿಯನ್ನು ಇದೀಗ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಇದೀಗ ಪೂರ್ಣಗೊಳಿಸಲಾಗುತ್ತಿದೆ. 2020ರ ಏಪ್ರಿಲ್ 1ರಿಂದ ಜಾರಿಗೆ ಬಂದ ಹೊಸ ಎಮಿಷನ್‌ಗೆ ಅನುಗುಣವಾಗಿ ಎಂಜಿನ್ ಹೊಂದಿರುವ ವಿ-ಕ್ರಾಸ್ ಪಿಕ್‌ಅಪ್ ಎಸ್‌ಯುವಿ ಮಾದರಿಯು ಏಪ್ರಿಲ್ ಅಥವಾ ಮೇ ಹೊತ್ತಿಗೆ ಖರೀದಿಗೆ ಲಭ್ಯವಿರಲಿದೆ ಎನ್ನಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್

ಇಸುಝು ಕಂಪನಿಯು ತನ್ನ ಡಿ-ಮ್ಯಾಕ್ಸ್ ಸರಣಿಯ ವಾಣಿಜ್ಯ ಬಳಕೆಯ ಪಿಕ್ಅಪ್ ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟ ಮಾಡುತ್ತಿದ್ದು, ಮಾರುಕಟ್ಟೆ ಏರಿಳಿತದ ಪರಿಣಾಮ ಲೈಫ್‌ಸ್ಟೈಲ್ ಡಿ-ಮ್ಯಾಕ್ಸ್ ವಿ-ಕ್ರಾಸ್ ಬಿಡುಗಡೆಯನ್ನು ತಡೆಹಿಡಿದಿತ್ತು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್

ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಗಳನ್ನು ಇದೀಗ ಬಿಡುಗಡೆಯಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹೊಸ ಆಟೋಮ್ಯಾಟಿಕ್ ಎಂಜಿನ್‌ನೊಂದಿಗೆ ವಿನ್ಯಾಸದಲ್ಲೂ ಬಾರಿ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿರುವುದು ರೋಡ್ ಟೆಸ್ಟಿಂಗ್ ವೇಳೆ ಬಹಿರಂಗವಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್

ಹೊಸ ಪಿಕ್ಅಪ್ ಎಸ್‌ಯುವಿಯ ಒಳಭಾಗದಲ್ಲಿನ ಬದಲಾದ ತಾಂತ್ರಿಕ ಅಂಶಗಳ ಕುರಿತಾಗಿ ಅಷ್ಟಾಗಿ ಲಭ್ಯವಾಗಿಲ್ಲವಾದರೂ ಹೊರಭಾಗದಲ್ಲಿನ ವಿನ್ಯಾಸದಲ್ಲಿ ಕೆಲವು ಪ್ರಮುಖ ಬದಲಾವಣೆ ಪರಿಚಯಿಸಲಾಗಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಟೈಲ್‌ಗೆಟ್ ವಿಭಾಗವನ್ನು ಬದಲಾವಣೆ ಮಾಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್

ಬಿಎಸ್-6 ವಿ-ಕ್ರಾಸ್ ಮಾದರಿಯು ಈ ಬಾರಿ ಬಿಎಸ್-4 ಮಾದರಿಯೆಂತೆ ಎರಡು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗಲಿದ್ದು, ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ 1.9-ಲೀಟರ್ ಡೀಸೆಲ್ ಮತ್ತು 2.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್

ಇದರಲ್ಲಿ 1.9-ಲೀಟರ್ ಡೀಸೆಲ್ ಮಾದರಿಯೇ ಟಾಪ್ ಎಂಡ್ ಮಾದರಿಯಾಗಿ ಮಾರಾಟವಾಗಲಿದ್ದು, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ 148-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್

2.5-ಲೀಟರ್ ಡೀಸೆಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 135-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಎರಡು ಮಾದರಿಗಳಲ್ಲೂ 4x4 ಡ್ರೈವ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್

ಹೊಸ ಎಂಜಿನ್‌ನಿಂದಾಗಿ ಪಿಕ್‌ಅಪ್ ಎಸ್‌ಯುವಿ ಬೆಲೆಯಲ್ಲೂ ತುಸು ದುಬಾರಿಯಾಗಲಿದ್ದು, ಬಿಎಸ್ 4 ಮಾದರಿಗಿಂತಲೂ ತುಸು ದುಬಾರಿಯಾಗಲಿರುವ ಹೊಸ ಪಿಕ್ಅಪ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 17 ಲಕ್ಷದಿಂದ ರೂ. 19 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

Most Read Articles

Kannada
Read more on ಇಸುಝು isuzu
English summary
Upcoming Isuzu D-Max V-Cross BS6 SUV Spied Testing Once Again. Read in Kannada.
Story first published: Friday, March 26, 2021, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X