9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

ಪ್ರೀಮಿಯಂ ಎಂಪಿವಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಿಯಾ ಕಾರ್ನಿವಾಲ್ ಮಾದರಿಯು ಬಿಡುಗಡೆಯ ನಂತರ ಹಲವಾರು ಬದಲಾವಣೆಗಳೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಳ್ಳುತ್ತಿದ್ದು, ಶೀಘ್ರದಲ್ಲೇ ಹೊಸ ಕಾರು ಮತ್ತಷ್ಟು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

ಕಿಯಾ ಇಂಡಿಯಾ ಕಂಪನಿಯು ಕಾರ್ನಿವಾಲ್ ಕಾರು ಮಾದರಿಯನ್ನು ಸದ್ಯ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಗಳಲ್ಲಿ ಮಾರಾಟ ಮಾಡುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಮಧ್ಯಮ ಕ್ರಮಾಂಕದಲ್ಲಿ ಮಾರಾಟಗೊಳ್ಳುತ್ತಿದ್ದ 9 ಸೀಟರ್ ಮಾದರಿಯನ್ನು ಸ್ಥಗಿತಗೊಳಿಸಿ ಹೊಸದಾಗಿ 6 ಸೀಟರ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

ಕಾರ್ನಿವಾಲ್ ಮಾದರಿಯಲ್ಲಿ ಹೆಚ್ಚಿನ ಗ್ರಾಹಕರು 7 ಸೀಟರ್ ಮತ್ತು 8 ಸೀಟರ್ ಮಾದರಿಗಳೊಂದಿಗೆ 6 ಸೀಟರ್ ಮಾದರಿಗಾಗಿ ಬೇಡಿಕೆ ಸಲ್ಲಿಸುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿರುವ 9 ಸೀಟರ್ ಮಾದರಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

9 ಸೀಟರ್ ಮಾದರಿಗಿಂತಲೂ ಅರಾಮದಾಯಕ ಪ್ರಯಾಣಕ್ಕಾಗಿ ಐಷಾರಾಮಿ ಕಾರು ಖರೀದಿದಾರರು ಪ್ರತ್ಯೇಕ ಆಸನ ಸೌಲಭ್ಯವನ್ನು ಹೊಂದಿರುವ 6 ಸೀಟರ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಸಲ್ಲಿಸುತ್ತಿದ್ದು, ಹೊಸ ಮಾದರಿಯು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

7 ಸೀಟರ್ ಮಾದರಿಯು 2+2+3 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 8 ಸೀಟರ್ ಮಾದರಿಯು 2+3+3 ಮಾದರಿಯ ಆಸನ ಸೌಲಭ್ಯ ಹೊಂದಿದ್ದು, 9 ಸೀಟರ್ ಮಾದರಿಯು 2+2+2+3 ಮಾದರಿಯ ಆಸನ ಸೌಲಭ್ಯವನ್ನು ಹೊಂದಿತ್ತು.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

2+2+2+3 ಮಾದರಿಯ ಆಸನ ಸೌಲಭ್ಯದಿಂದ ಅರಾಮದಾಯಕ ಸವಾರಿಗೆ ಅನುಕೂಲಕರವಾಗಿದ ಹಿನ್ನಲೆಯಲ್ಲಿ ಗ್ರಾಹಕರು ಪ್ರತಿ ಆಸನ ಸಾಲಿನಲ್ಲೂ ಉತ್ತಮ ಸ್ಥಳಕಾಶ ಹೊಂದಿರುವ 2+2+2 ಮಾದರಿಯಲ್ಲಿ ಆಸನ ಸೌಲಭ್ಯ ಹೊಂದಿರುವ 6 ಸೀಟರ್ ಮಾದರಿಯ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

ಹೀಗಾಗಿ ಉತ್ತಮ ಸ್ಥಳಾವಕಾಶದೊಂದಿಗೆ ಪ್ರತ್ಯೇಕ ನಿಯಂತ್ರಣ ಹೊಂದಿರುವ 6 ಆಸನದ ಮಾದರಿಯ ಬಿಡುಗಡೆ ಕಂಪನಿಯು ಸಿದ್ದತೆ ನಡೆಸಿದ್ದು, ಹೊಸ ಮಾದರಿಯಲ್ಲಿ 6 ಆಸನ ಸೌಲಭ್ಯ ಹೊರತುಪಡಿಸಿ ಇನ್ನುಳಿದಂತೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯಂತೆಯೇ ತಾಂತ್ರಿಕ ಅಂಶಗಳನ್ನು ಹೊಂದಿರಲಿದೆ.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

ಈ ಹೊಸ ಎಂಪಿವಿ ಕಾರು ಸದ್ಯ ಮಾರುಕಟ್ಟೆಯಲ್ಲಿ ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 24.95 ಲಕ್ಷಗಳಿಂದ ಟಾಪ್ ಮಾದರಿಗೆ ರೂ. 33.99 ಲಕ್ಷ ಬೆಲೆ ಹೊಂದಿದ್ದು, ಮಧ್ಯಮ ಕ್ರಮಾಂಕದಲ್ಲಿ ಬಿಡುಗಡೆಯಾಗಲಿರುವ 6 ಸೀಟರ್ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 28.95 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

ಈ ಹೊಸ ಕಾರ್ನಿವಾಲ್ ಎಂಪಿವಿಯು ಕಳೆದ ತಿಂಗಳ ಹಿಂದಷ್ಟೇ ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು. ಹಳೆಯ ಮಾದರಿಗಿಂತ ಒಂದೆರಡು ಅಪ್ ಡೇಟ್ ಗಳನ್ನು ಹೊಂದಿದೆ. ಹೊಸ ಕಾರಿನಲ್ಲಿ ಟಾಪ್ ಎಂಡ್ ಮಾದರಿಯಾಗಿ ಲಿಮೊಸಿನ್ ಪ್ಲಸ್ ಪರಿಚಯಿಸಿದ್ದು, ಎರಡನೇ ಸಾಲಿನಲ್ಲಿ ಲೆಗ್ ಸಪೋರ್ಟ್ ನೊಂದಿಗೆ ಪ್ರೀಮಿಯಂ ಲೆಥೆರೆಟ್ ಸೀಟುಗಳನ್ನು ನೀಡಲಾಗಿದೆ.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

ಜೊತೆಗೆ 2021ರ ಕಾರ್ನಿವಾಲ್ ಎಂಪಿವಿಯು 8 ಇಂಚಿನ ಇನ್ಫೋಟೈನ್‌ಮೆಂಟ್, ಒಟಿಎ ಮ್ಯಾಪ್ ಅಪ್ ಡೇಟ್, ಯುವಿಒ ಸಪೋರ್ಟ್, ಇಸಿಎಂ ಮಿರರ್, ಹಿಂಭಾಗದ ಪ್ರಯಾಣಿಕರಿಗಾಗಿ ಸಿಂಗಲ್ 10.1 ಇಂಚಿನ ಡಿಸ್‌ಪ್ಲೇ, ಸ್ಮಾರ್ಟ್ ಪ್ಯೂರ್ ಏರ್ ಪ್ಯೂರಿಫೈಯರ್ ಗಳನ್ನು ಹೊಂದಿದೆ.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

ಹೈ ಎಂಡ್ ಮಾದರಿಯಲ್ಲಿ ಹರ್ಮನ್ ಕಾರ್ಡನ್ ಪ್ರೀಮಿಯಂ 8 ಸ್ಪೀಕರ್ ಆಡಿಯೋ ಸಿಸ್ಟಂ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 10 ವೇ ಪವರ್ ಡ್ರೈವರ್ ಸೀಟ್, ಡ್ರೈವರ್ ಸೀಟ್ ವೆಂಟಿಲೇಷನ್, ಲೆದರ್ ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಹಾಗೂ ಗೇರ್ ನಾಬ್, ಪ್ರೀಮಿಯಂ ವುಡ್ ಗಾರ್ನಿಷ್, ಡ್ಯುಯಲ್ 10.1 ಇಂಚಿನ ಹಿಂಭಾಗದ ಡಿಸ್ಪ್ಲೇ, ಟಿಪಿಎಂಎಸ್ ಫೀಚರ್ ಗಳನ್ನು ಹೊಂದಿದೆ.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

ನವೀಕೃತ ಎಂಪಿವಿಯಲ್ಲಿ ಮೆಕ್ಯಾನಿಕಲ್‌ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಹೊಸ ಎಂಪಿವಿಯಲ್ಲಿ 2.2 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 197 ಬಿ‌ಹೆಚ್‌ಪಿ ಪವರ್ ಹಾಗೂ 440 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಎಂಟು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್'ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

9 ಸೀಟರ್ ಕಾರ್ನಿವಾಲ್ ಸ್ಥಗಿತ- ಶೀಘ್ರದಲ್ಲೇ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಕಿಯಾ..

ಕಾರ್ನಿವಾಲ್ ಎಂಪಿವಿಯನ್ನು ಭಾರತದಲ್ಲಿ 2020 ರ ಆಟೋ ಎಕ್ಸ್‌ಪೋದಲ್ಲಿ ಮೊದಲು ಬಿಡುಗಡೆಗೊಳಿಸಲಾಗಿತ್ತು. ಗಮನಿಸಬೇಕಾದ ಸಂಗತಿಯೆಂದರೆ ಈ ಎಂಪಿವಿಯು ಬಿಡುಗಡೆಯಾದಾಗಿನಿಂದ ಅದರ ಬೆಲೆಗಳು ಬದಲಾಗದೆ ಹಾಗೆ ಉಳಿದಿವೆ. ಕಾರ್ನಿವಾಲ್ ಎಂಪಿವಿಯನ್ನು ಕಂಪ್ಲೀಟ್ಲಿ ನಾಕ್ ಡೌನ್ (ಸಿಕೆಡಿ) ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ನಂತರ ಆಂಧ್ರಪ್ರದೇಶದಲ್ಲಿರುವ ಕಿಯಾಕಂಪನಿಯ ಉತ್ಪಾದನಾ ಘಟಕದಲ್ಲಿ ಜೋಡಣೆ ಮಾಡಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Kia india launch soon carnival 6 seater variant details
Story first published: Wednesday, November 10, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X