ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿವೆ ಕಿಯಾ ಮೋಟಾರ್ಸ್ ಕಾರುಗಳು

ಕಿಯಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ತನ್ನ ಮುಂದಿನ ಯೋಜನೆ ಹಾಗೂ ಹೊಸ ಕಾರ್ಯ ತಂತ್ರದ ವಿವರಗಳನ್ನು ಬಹಿರಂಗಪಡಿಸಿದೆ. ಈ ಬದಲಾವಣೆಯನ್ನು ತೋರಿಸುವ ಸಲುವಾಗಿ ಕಂಪನಿಯು ಹೊಸ ಲೋಗೋವನ್ನು ಪರಿಚಯಿಸಿದೆ.

ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿವೆ ಕಿಯಾ ಮೋಟಾರ್ಸ್ ಕಾರುಗಳು

ಜೊತೆಗೆ ಕಂಪನಿಯ ಸ್ಲೋಗನ್ ಅನ್ನು ಸಹ ಬದಲಿಸಲಾಗಿದೆ. ಕಂಪನಿಯು ತನ್ನ ಹೆಸರನ್ನು ಕಿಯಾ ಮೋಟಾರ್ಸ್ ಕಾರ್ಪೊರೇಶನ್‌ನಿಂದ ಕಿಯಾ ಎಂದು ಬದಲಿಸಿಕೊಂಡಿದೆ. ಕಿಯಾ ಕಂಪನಿಯ ಈ ಹೊಸ ಲೋಗೋ ಟ್ರೆಂಡಿ ಹಾಗೂ ಫ್ಯೂಚರಿಸ್ಟಿಕ್ ಆಗಿದ್ದು ಆಕರ್ಷಕವಾಗಿ ಕಾಣುತ್ತದೆ.

ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿವೆ ಕಿಯಾ ಮೋಟಾರ್ಸ್ ಕಾರುಗಳು

ಕಂಪನಿಯು ಮೂರು ಅಕ್ಷರಗಳ ಈ ಹೊಸ ಲೋಗೊ ಮೂಲಕ ಜಾಗತಿಕ ಕಾರು ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸಲು ಬಯಸಿದೆ. ಈ ಹೊಸ ಲೋಗೋ ಕಂಪನಿಯ ಹೊಸ ತಲೆಮಾರಿನ ಎಲೆಕ್ಟ್ರಿಕ್ ವಾಹನಗಳಿಗೂ ಸೂಕ್ತವಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿವೆ ಕಿಯಾ ಮೋಟಾರ್ಸ್ ಕಾರುಗಳು

ಕಂಪನಿಯು 2027ರ ವೇಳೆಗೆ ಏಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ಲೋಗೋವನ್ನು ಭಾರತದಲ್ಲಿ ಮಾರಾಟವಾಗುತ್ತಿರುವ ಸೊನೆಟ್‌ ಹಾಗೂ ಸೆಲ್ಟೋಸ್‌ ಕಾರುಗಳಲ್ಲಿಯೂ ಅಳವಡಿಸಲಾಗುವುದು.

ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿವೆ ಕಿಯಾ ಮೋಟಾರ್ಸ್ ಕಾರುಗಳು

2021ರ ಮಧ್ಯದಲ್ಲಿ ಹೊಸ ಲೋಗೋವನ್ನು ಹೊಂದಿರುವ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಕಿಯಾ ಕಂಪನಿಯ ಸಿಇಒ ಹೋ ಸಾಂಗ್ ಸಾಂಗ್ ಹೇಳಿದ್ದಾರೆ. ಇದು ಕಂಪನಿಯ ಹೊಸ ಕಾರ್ಯತಂತ್ರದ ಭಾಗವಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿವೆ ಕಿಯಾ ಮೋಟಾರ್ಸ್ ಕಾರುಗಳು

ಹೊಸ ಲೋಗೋವನ್ನು ಡೀಲರ್'ಗಳು ಸಹ ಅಳವಡಿಸಿಕೊಳ್ಳಲಿದ್ದಾರೆ. ಕಂಪನಿಯು ಡೀಲರ್'ಗಳ ಅನುಭವವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಬಯಸಿದೆ. ಕಿಯಾ ಕಂಪನಿಯು 2027ರ ವೇಳೆಗೆ ಎಲೆಕ್ಟ್ರಿಕ್ ಎಸ್‌ಯುವಿ, ಎಂಪಿವಿ ಹಾಗೂ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ.

ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿವೆ ಕಿಯಾ ಮೋಟಾರ್ಸ್ ಕಾರುಗಳು

ಕಂಪನಿಯ ಮೊದಲ ಎಲೆಕ್ಟ್ರಿಕ್ ವಾಹನವನ್ನು ಮುಂದಿನ ತಿಂಗಳು ಪರಿಚಯಿಸುವ ಸಾಧ್ಯತೆಗಳಿವೆ. ಈ ಎಲೆಕ್ಟ್ರಿಕ್ ವಾಹನವು ಪೂರ್ತಿಯಾಗಿ ಚಾರ್ಜ್ ಆದ ನಂತರ 500 ಕಿ.ಮೀಗಳವರೆಗೆ ಚಲಿಸಲಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿವೆ ಕಿಯಾ ಮೋಟಾರ್ಸ್ ಕಾರುಗಳು

ವೇಗದ ಚಾರ್ಜರ್‌ ಮೂಲಕ ಈ ಕಾರಿನಲ್ಲಿರುವ ಬ್ಯಾಟರಿಯನ್ನು ಕೇವಲ 20 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು. ಕಂಪನಿಯು 2025ರ ವೇಳೆಗೆ ಜಾಗತಿಕ ಎಲೆಕ್ಟ್ರಿಕ್ ವಾಹನದ 6.6% ಮಾರುಕಟ್ಟೆ ಪಾಲನ್ನು ಹೊಂದುವ ಗುರಿಯನ್ನು ಹೊಂದಿದೆ.

ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿವೆ ಕಿಯಾ ಮೋಟಾರ್ಸ್ ಕಾರುಗಳು

ಇದರ ಜೊತೆಗೆ ಕಂಪನಿಯು 2026ರ ವೇಳೆಗೆ 5 ಲಕ್ಷ ಯುನಿಟ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಮತ್ತೊಂದು ಯೋಜನೆಯ ಭಾಗವಾಗಿ ಕಂಪನಿಯು ಪರ್ಪಸ್ ಬಿಲ್ಟ್ ವಾಹನಗಳನ್ನು ಸಹ ಅಭಿವೃದ್ಧಿಪಡಿಸುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿವೆ ಕಿಯಾ ಮೋಟಾರ್ಸ್ ಕಾರುಗಳು

ಕಿಯಾ ಕಂಪನಿಯು ಎಲೆಕ್ಟ್ರಿಕ್ ವಾಹನ ಹಾಗೂ ಅಟಾನಾಮಸ್ ಡ್ರೈವಿಂಗ್ ಟೆಕ್ನಾಲಜಿಯನ್ನು ಹೊಂದಿರುವ ಪರಿಸರ ಸ್ನೇಹಿ ವಾಹನಗಳನ್ನು ಅಭಿವೃದ್ಧಿಪಡಿಸಲು ಬಯಸಿದೆ. ಈ ವಾಹನಗಳು ವಿಶ್ವದ ಹಲವು ನಗರಗಳಲ್ಲಿ ಮಾರಾಟವಾಗಲಿವೆ.

ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿವೆ ಕಿಯಾ ಮೋಟಾರ್ಸ್ ಕಾರುಗಳು

ಕಿಯಾ ಮೋಟಾರ್ಸ್ ಅಲ್ಪಾವಧಿಯಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿದೆ. ಕಂಪನಿಯು ಎಸ್‌ಯು‌ವಿ ಸೆಗ್'ಮೆಂಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಗೆ ದೇಶಿಯ ಮಾರುಕಟ್ಟೆಯು ಪ್ರಮುಖ ಮಾರುಕಟ್ಟೆಯಾಗಿರುವ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Kia Motors gets new logo and slogan. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X