ಸೊನೆಟ್ 7-ಸೀಟರ್ ಎಸ್‍ಯುವಿಯ ಟೀಸರ್ ಬಿಡುಗಡೆಗೊಳಿಸಿದ ಕಿಯಾ ಮೋಟಾರ್ಸ್
ಕಿಯಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಸೊನೆಟ್ 7-ಸೀಟರ್ ಎಸ್‍ಯುವಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಇದೀಗ ಕಿಯಾ ಮೋಟಾರ್ಸ್ ಕಂಪನಿಯು ಈ ಹೊಸ ಸೊನೆಟ್ 7-ಸೀಟರ್ ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಕಿಯಾ ಮೋಟಾರ್ಸ್ ಕಂಪನಿಯು ಕಳೆದ ವರ್ಷ ಭಾರತ ಸೇರಿಂದತೆ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡಿತು. ಕಿಯಾ ಸೊನೆಟ್ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತದಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಸೊನೆಟ್ 4 ಮೀಟರ್‌ಗಿಂತ ಕಡಿಮೆ ಉದ್ದದಲ್ಲಿದ್ದರೆ, ಇತರ ಮಾರುಕಟ್ಟೆಗಳಲ್ಲಿ ಮಾರಾಟವಾದ ಸೋನೆಟ್ 4 ಮೀಟರ್‌ಗಿಂತ ಹೆಚ್ಚು ಉದ್ದವಿದೆ. ಈ ಹೊಸ ಸೊನೆಟ್ 7 ಸೀಟರ್ ಎಸ್‍ಯುವಿಯು ಇದೇ ತಿಂಗಳ 8ರಂದು ಅನಾವರಣವಾಗಲಿದೆ.

ಕಿಯಾ ಮೋಟಾರ್ಸ್ ಕಂಪನಿಯು ಈ ಹೊಸ ಸೊನೆಟ್ 7-ಸೀಟರ್ ಎಸ್‍ಯುವಿಯನ್ನು ಮೊದಲಿಗೆ ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ನಂತರ ತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇಂಡೋನೇಷ್ಯಾದಲ್ಲಿ 5 ಸೀಟರ್ ಮಾದರಿ ಈಗಾಗಲೇ ಮಾರಾಟದಲ್ಲಿದೆ, ಇದು 4,120 ಎಂಎಂ ಉದ್ದವನ್ನು ಹೊಂದಿದೆ. ಇಂಡಿಯಾ-ಸ್ಪೆಕ್ ಕಿಯಾ ಸೊನೆಟ್ 3,995 ಎಂಎಂ ಉದ್ದವಿದೆ. ಈ ಎರಡೂ ಆವೃತ್ತಿಗಳನ್ನು ಆಂಧ್ರಪ್ರದೇಶದ ಕಿಯಾ ಮೋಟಾರ್ಸ್‌ನ ಅನಂತಪುರ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದಿಸಲಾಗಿದೆ.

ಕಿಯಾ ಸೊನೆಟ್ 7-ಸೀಟರ್ ಎಸ್‍ಯುವಿಯು ಸದ್ಯ ಮಾರುಕಟ್ಟೆಯಲ್ಲಿರುವ 5 ಸೀಟರ್ ಎಸ್‍ಯುವಿಗೆ ಹೋಲುವ ರೀತಿ ಇರುತ್ತದೆ ಎಂದು ವರದಿಗಳಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಜೀಪ್ ಮತ್ತು ಜೀಪ್ 7-ಸೀಟರ್ ಹಾಗೆ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಆಗಿದೆ. ಅಂದರೆ ಮೂರನೇ ಸಾಲಿಗೆ ಬೂಟ್ ಜಾಗವನ್ನು ಬಳಸಲಾಗುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಮೂರನೆಯ ಸಾಲು ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ವಯಸ್ಕರರು ಮೂರನೇ ಸಾಲಿನಲ್ಲಿ ಬಿಗಿಯಾಗಿ ಕುಳಿತುಕೊಳ್ಳಬೇಕಾಗುತ್ತದೆ. ಹೆಚ್ಚಿನ 7-ಸೀಟರ್ ಎಸ್‍ಯುವಿಗಳು ಇದೇ ಮಾದರಿಯಲ್ಲಿರುತ್ತದೆ.

ಸೊನೆಟ್ 7-ಸೀಟರ್ ಎಸ್‍ಯುವಿಗಳಲ್ಲಿ ಹೆಚ್ಚಿನ ಬೂಟ್ ಸ್ಪೇಸ್ ಲಭ್ಯವಿರುವುದಿಲ್ಲ. ಇನ್ನು ಕಿಯಾ ಸೊನೆಟ್ 7-ಸೀಟರ್ ಎಸ್‍ಯುವಿಯಲ್ಲಿ ಮೂರನೇ ಸಾಲಿನ ಸೀಟನ್ನು 50:50 ಸ್ಪ್ಲಿಟ್ ಆಗಿ ಮಾಡಚುವ ಆಯ್ಕೆಯನ್ನು ನೀಡಬಹುದು. ಹೀಗೆ ನೀಡಿದರೆ ಹೆಚ್ಚಿನ ಬೂಟ್ ಸ್ಪೇಸ್ ಲಭ್ಯವಾಗುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಲಿರುವ ಸೊನೆಟ್ 7-ಸೀಟರ್ ಎಸ್‍ಯುವಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಕಿಯಾ ಸೊನೆಟ್ 7-ಸೀಟರ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಈ ಎಸ್‍ಯುವಿಯು ಅನಾವರಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗವಾಗುತ್ತದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಅತಿ ಹೆಚ್ಚು ಪೈಪೋಟಿ ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಇನ್ನು ಮುಂದಿನ ವರ್ಷಗಳಲ್ಲಿ ಕಿಯಾ ಸೊನೆಟ್ 7-ಸೀಟರ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸೊನೆಟ್ 7-ಸೀಟರ್ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








