ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

ಕೊರಿಯಾದ ಕಾರು ತಯಾರಕ ಕಂಪನಿಯಾದ ಕಿಯಾ ಯುಎಸ್ ಮಾರುಕಟ್ಟೆಗಾಗಿ ತನ್ನ ಮುಂಬರುವ ಎಸ್‌ಯುವಿಯ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಕಿಯಾ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲವಾದರೂ, ಇದು ನ್ಯೂ ಜನರೇಷನ್ ಸ್ಪೋರ್ಟೇಜ್ ಎಸ್‌ಯುವಿ ಟೀಸರ್ ಎಂದು ನಿರೀಕ್ಷಿಸುತ್ತೇವೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

ಟೀಸರ್ ನಲ್ಲಿ ಹೊಸ ಕಿಯಾ ಎಸ್‍ಯುವಿಯು ಇದೇ ತಿಂಗಳ 27 ರಂದು ಅಮೆರಿಕ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಲಿದೆ ಎಂದು ಖಚಿತಪಡಿಸಿದೆ. ಇನ್ನು ಈ ಹೊಸ ಕಿಯಾ ಎಸ್‍ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಸ್ಪೋರ್ಟೇಜ್ ಎಸ್‌ಯುವಿಯು ಪವರ್ ಫುಲ್ ಮತ್ತು ದಕ್ಷ ಎಂಜಿನ್'ಗಳೊಂದಿಗೆ ಬರುತ್ತದೆ ಎಂದು ಹೇಳಿದೆ. ಎಸ್‌ಯುವಿಯು ಫ್ರಂಟ್-ವೀಲ್ ಮತ್ತು ಆಲ್-ವೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ಕಾರ್ ತಯಾರಕರು ಭರವಸೆ ನೀಡಿದ್ದಾರೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

ಅದರ ಹೊರತಾಗಿ, 2022ರ ಸ್ಪೋರ್ಟೇಜ್ ಎಸ್‌ಯುವಿಯು 'ಬಹು ಗುಣಮಟ್ಟದ ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಂಗಳು ಮತ್ತು ಹೈಟೆಕ್ ಇನ್ಫೋಟೈನ್‌ಮೆಂಟ್ ಆಯ್ಕೆಗಳನ್ನು ಪಡೆಯುವ ಸಾಧ್ಯತೆಯಿದೆ. ಕಿಯಾ ಸ್ಪೋರ್ಟೇಜ್ ಎಸ್‌ಯುವಿಗೆ ಉತ್ಸಾಹಿಗಳಲ್ಲಿ ಸಾಕಷ್ಟು ಆಸಕ್ತಿಯನ್ನು ಗಳಿಸುವ ಲಕ್ಷಣಗಳನ್ನು ಹೊತ್ತುಕೊಳ್ಳುವ ಭರವಸೆ ನೀಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

ಹೊಸ ಕಿಯಾ ಸ್ಪೋರ್ಟೇಜ್ ಹೆಚ್ಚಿದ ಗ್ರೌಂಡ್ ಕ್ಲಿಯರೆನ್ಸ್, ಬಹು ಚಾಲಕ-ಆಯ್ಕೆ ಮಾಡಬಹುದಾದ ಭೂಪ್ರದೇಶದ ಮೋಡ್‌ಗಳು ಮತ್ತು ಎಲ್ಲಾ ಭೂಪ್ರದೇಶದ ಟೈರ್‌ಗಳೊಂದಿಗೆ 'ಆಫ್-ರೋಡ್ ಸಾಮರ್ಥ್ಯದ ಹೊಸ ಮಟ್ಟವನ್ನು' ಹೊಂದುವ ಸಾಧ್ಯತೆಯಿದೆ. ಐದನೇ ತಲೆಮಾರಿನ ಸ್ಪೋರ್ಟೇಜ್ ಎಸ್‍ಯುವಿ ಕಿಯಾ N3 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

ಈ ಹೊಸ ಸ್ಪೋರ್ಟೇಜ್ ವಿನ್ಯಾಸ ಮತ್ತು ಒಳಭಾಗದಲ್ಲಿ ಗಮನಾರ್ಹವಾದ ನವೀಕರಣಗಳನ್ನು ಪಡೆಯುತ್ತದ. ಕಿಯಾ ಅವರ ಹೊಸ 'ಆಪೋಸಿಟ್ಸ್ ಯುನೈಟೆಡ್' ತತ್ತ್ವಶಾಸ್ತ್ರದ ಆಧಾರದ ಮೇಲೆ ಹೊಸ ಸ್ಪೋರ್ಟೇಜ್ ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಪಡೆಯಲಿದೆ. ಇದರ ವಿನ್ಯಾಸವು ಆಕರ್ಷಕವಾಗಿ ಮತ್ತು ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

ಕಿಯಾ ಸ್ಪೋರ್ಟೇಜ್ 1993 ರಿಂದಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿದೆ ಮತ್ತು ಇದರ ಎಲ್ಲಾ ನಾಲ್ಕು ತಲೆಮಾರುಗಳು ವಿನ್ಯಾಸದಕ್ಕೆ ಹೋಲಿಸಿದರೆ ಪ್ರಮುಖ ಬದಲಾವಣೆಗಳೊಂದಿಗೆ ಐದನೇ ತಲೆಮಾರಿನ ಸ್ಪೋರ್ಟೇಜ್ ಎಸ್‍ಯುವಿಯನ್ನು ಪರಿಚಯಿಸುತ್ತಿದೆ. ಮರುವಿನ್ಯಾಸಗೊಳಿಸಲಾದ 2022ರ ಕಿಯಾ ಸ್ಪೋರ್ಟೇಜ್ ಹಿಂದೆಂದಿಗಿಂತಲೂ ಹೆಚ್ಚು ಶಾರ್ಪ್ ಆದ ಅಗ್ರೇಸಿವ್ ಬಾಡಿ ಲೈನ್ ಗಳನ್ನು ಹೊಂದಿವೆ. ಮುಂಭಾಗದಲ್ಲಿ ಇದು ಬ್ಲ್ಯಾಕ್ ಮೆಶ್ಡ್ ಕೆಳಭಾಗದೊಂದಿಗೆ ಹೊಚ್ಚ ಹೊಸ ಗ್ರಿಲ್‌ನೊಂದಿಗೆ ಬರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

ಇದರೊಂದಿಗೆ ಪ್ರಮುಖ ಬೂಮರಾಂಗ್ ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಲಂಬ ಹೆಡ್‌ಲ್ಯಾಂಪ್‌ಗಳನ್ನು ಹೊಂದಿರಲಿದೆ. ಕೆಳಗಿನ ಬಂಪರ್ ಕ್ರೋಮ್ ಜೊತೆ ಫಾಗ್ ಲ್ಯಾಂಪ್ ಗಳನ್ನು ನೀಡಲಾಗಿದೆ. ಎಸ್‍ಯುವಿಯ ಮುಂಭಾಗದ ಮಧ್ಯದಲ್ಲಿ ಏರ್ ಇನ್ ಟೆಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

ಈ ಎಸ್‍ಯುವಿಯ ಹಿಂಭಾಗದ ಟೈಲ್‌ಗೇಟ್‌ನೊಂದಿಗೆ ಹೊಸ ಕಿಯಾ ಲೋಗೊವನ್ನು ನೀಡಿದೆ. ಹಿಂಭಾಗದಲ್ಲಿ ನಯವಾದ ಎಲ್‌ಇಡಿ ಟೈಲ್ ಲ್ಯಾಂಪ್ ಮತ್ತು ಫಾಕ್ಸ್ ಸ್ಕಿಡ್ ಪ್ಲೇಟ್‌ನೊಂದಿಗೆ ಹೊಸ ಬಂಪರ್ ಅನ್ನು ಹೊಂದಿದೆ. ಈ ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಎಸ್‍ಯುವಿಯಲ್ಲಿ ಹೊಸ ವ್ಹೀಲ್ ಗಳು, ಭಾರಿ ಗಾತ್ರದ ಮುಂಭಾಗದ ವಿಂಡ್‌ಶೀಲ್ಡ್, ಬ್ಲ್ಯಾಕ್ ರೂಫ್ ಮೌಂಟಡ್ ರೈಲ್ ಮತ್ತು ಸೈಡ್ ಫ್ರೊಫೈಲ್ ನಲ್ಲಿ ಲೈನ್ ಗಳನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

ಸ್ಪೋರ್ಟೇಜ್ ಎಕ್ಸ್-ಲೈನ್ ರೂಪಾಂತರದಲ್ಲಿ ವಿಭಿನ್ನ ಬಂಪರ್ ಗಳು ಮತ್ತು ಬ್ಲ್ಯಾಕ್ ಅಸ್ಸೆಂಟ್ ಗಳನ್ನು ಹೊಂದಿರುತ್ತದೆ. ಈ ಹೊಸ ಎಸ್‍ಯುವಿಯಲ್ಲಿ ಹೊಸ ಸೆಂಟರ್ ಕನ್ಸೋಲ್ ಮತ್ತು ರೋಟರಿ ಶಿಫ್ಟರ್, ಡ್ರೈವ್ ಮೋಡ್ ಸೆಲೆಕ್ಟರ್, ಫ್ರಂಟ್ ಸೀಟ್ ವೆಂಟಿಲೇಷನ್ ಮತ್ತು ಹೀಟಿಂಗ್ ಫಂಕ್ಷನ್ ಅನ್ನು ಹೊಂದಿದೆ. ಇನ್ನು ಇದರಲ್ಲಿ ಆಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ವೈಡ್ಸ್ಕ್ರೀನ್ ಇನ್ಫೋಟೈನ್ಮೆಂಟ್, 3ಡಿ ಏರ್ ವೆಂಟ್ಸ್ ಮತ್ತು ಇತರ ಪ್ರೀಮಿಯಂ ಫೀಚರ್ಸ್ ಗಳನ್ನು ಹೊಂದಿವೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

ಇನ್ನು ಕಿಯಾ ತಲೆಮಾರಿನ ಸ್ಪೋರ್ಟೇಜ್ ಜಿಟಿ-ಲೈನ್ ಎಸ್‍ಯುವಿಯನ್ನು ಯುರೋಪಿಯನ್ ಮಾರುಕಟ್ಟೆಗಳಿಗಾಗಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಯುರೋ-ಸ್ಪೆಕ್ ಮಾದರಿಯು ಜಾಗತಿಕ ಮಾದರಿಯ ವಿನ್ಯಾಸ ಶೈಲಿಯನ್ನು ಹೊಂದಿದೆ. ಯುರೋಪಿಯನ್-ಸ್ಪೆಕ್ ಮಾದರಿಯು ಇತ್ತೀಚೆಗೆ ಆರಂಭವಾದ ಕೊರಿಯನ್-ಸ್ಪೆಕ್ ಸ್ಪೋರ್ಟೇಜ್‌ಗಿಂತ ಸ್ವಲ್ಪ ವಿಭಿನ್ನವಾಗಿ ಕಾಣಲು ಸೂಕ್ಷ್ಮ ಬದಲಾವಣೆಗಳನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

ಸ್ಪೋರ್ಟೇಜ್ ಜಿಟಿ-ಲೈನ್ ಎಸ್‍ಯುವಿಯು ಹುಂಡೈನ ಹೊಸ N3 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಹೊಸ-ಜನರೇಷನ್ ಟ್ಯೂಸಾನ್ ಅನ್ನು ಸಹ ಬೆಂಬಲಿಸುತ್ತದೆ. ಯುರೋಪಿಯನ್-ಸ್ಪೆಕ್ ಮಾದರಿಯು ಸಣ್ಣ ವೀಲ್‌ಬೇಸ್‌ ಅನ್ನು ಹೊಂದಿದೆ. ಮತ್ತೊಂದೆಡೆ, ಯುಎಸ್ ಮತ್ತು ದಕ್ಷಿಣ ಕೊರಿಯಾದ ಮಾದರಿಯು ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ. ಈ ಯುರೋಪಿಯನ್-ಸ್ಪೆಕ್ 2022 ಕಿಯಾ ಸ್ಪೋರ್ಟೇಜ್ 2,680 ಎಂಎಂ ವೀಲ್ ಬೇಸ್ ಹೊಂದಿದ್ದು, ಗ್ಲೋಬಲ್-ಸ್ಪೆಕ್ ಮಾಡೆಲ್ 1,755 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ,

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Kia Sportage ಎಸ್‍ಯುವಿ

2022ರ ಕಿಯಾ ಸ್ಪೋರ್ಟೇಜ್‌ನ ಎಂಜಿನ್ ಆಯ್ಕೆಗಳ ಕುರಿತು ಯಾವುದೇ ಅಧಿಕೃತ ಮಾಹಿತಿಯು ಇನ್ನು ಬಹಿರಂಗವಾಗಿಲ್ಲ, ಆದರೆ ಪ್ಲಗ್-ಇನ್ ಹೈಬ್ರಿಡ್ ರೂಪಾಂತರವನ್ನು ಹೊಂದಿರಬಹುದು, ಈ ಅಕಿಯಾ ಸೊರೆಂಟೊಗಳಂತಹ 1.6-ಲೀಟರ್ ಟರ್ಬೊ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಪಡೆಯುವ ಸಾಧ್ಯತೆಯಿದೆ. ಇಂಜಿನ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗೆ ಸಂಪರ್ಕ ಹೊಂದಿದ ಎಲೆಕ್ಟ್ರಿಕ್ ಮೋಟಾರ್‌ನಿಂದ ಶಕ್ತಿಯನ್ನು ಪಡೆದುಕೊಳ್ಳುತ್ತದೆ ಮತ್ತು ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸುವ ನಿರೀಕ್ಷೆಯಿದೆ. ಇನ್ನು ಈ ಎಸ್‍ಯುವಿಯು ಇದೇ ತಿಂಗಳು ಅಮೆರಿಕ ಮಾರುಕಟ್ಟೆಯಲ್ಲಿ ಅನಾವರಣವಾಗಲಿದೆ.

Most Read Articles

Kannada
English summary
Kia revealed teaser images of new sportage suv details
Story first published: Thursday, October 21, 2021, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X