ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿದೆ 7 ಸೀಟರ್ ಕಿಯಾ ಸೊನೆಟ್ ಕಾರು

ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಕಾರು ಮಾದರಿಗಳ ಮಾರಾಟ ಸೌಲಭ್ಯವನ್ನು ಹೊಂದಿದ್ದು, ಕಂಪನಿಯು ಶೀಘ್ರದಲ್ಲೇ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಹಲವಾರು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿದೆ 7 ಸೀಟರ್ ಕಿಯಾ ಸೊನೆಟ್ ಕಾರು

ಕಿಯ ಮೋಟಾರ್ಸ್ ಹೊಸ ಕಾರುಗಳ ಪಟ್ಟಿಯಲ್ಲಿ ಸೊನೆಟ್ 7 ಸೀಟರ್ ಮಾದರಿ ಕೂಡಾ ಒಂದಾಗಿದ್ದು, ಹೊಸ ಕಾರು ಮಾದರಿಯನ್ನು ಕಂಪನಿಯು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯ ಉದ್ದೇಶದೊಂದಿಗೆ ಇಂಡೋನೇಷ್ಯಾದಲ್ಲಿ ಹೊಸ ಕಾರು ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಮುಂದಿನ ಕೆಲವೇ ದಿನಗಳಲ್ಲಿ ಇಂಡೋನೇಷ್ಯಾದಲ್ಲಿ ಮಾರಾಟಗೊಳ್ಳಲಿದೆ.

ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿದೆ 7 ಸೀಟರ್ ಕಿಯಾ ಸೊನೆಟ್ ಕಾರು

ಇಂಡೋನೇಷ್ಯಾದಲ್ಲಿ ಬಿಡುಗಡೆಯ ನಂತರ ವಿವಿಧ ಮಾರುಕಟ್ಟೆಗಳಲ್ಲಿ ಹೊಸ ಕಾರು ಮಾರಾಟ ವಿಸ್ತರಣೆ ಮಾಡಲಿರುವ ಕಂಪನಿಯು ಭಾರತದಲ್ಲೂ ಹೊಸ ಕಾರು ಬಿಡುಗಡೆಯ ಸಿದ್ದತೆಯಲ್ಲಿದ್ದು, ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.

ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿದೆ 7 ಸೀಟರ್ ಕಿಯಾ ಸೊನೆಟ್ ಕಾರು

ಭಾರತದಲ್ಲಿ ಸದ್ಯ 5 ಸೀಟರ್ ಸೌಲಭ್ಯದೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಸೊನೆಟ್ ಕಾರು ಮಾದರಿಯು ಮೂರನೇ ಸಾಲಿನ ಆಸನದೊಂದಿಗೆ 7 ಸೀಟರ್ ಸೌಲಭ್ಯ ಪಡೆದುಕೊಳ್ಳಲಿದೆ.

ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿದೆ 7 ಸೀಟರ್ ಕಿಯಾ ಸೊನೆಟ್ ಕಾರು

ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಸದ್ಯ 7 ಸೀಟರ್ ಆವೃತ್ತಿಗಳನ್ನು ಪರಿಚಯಿಸುತ್ತಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಕಿಯಾ ಮೋಟಾರ್ಸ್ ಕಂಪನಿಯು ಸಹ ಸೊನೆಟ್ ಕಾರಿನಲ್ಲಿ 7 ಸೀಟಟರ್ ಮಾದರಿಯ ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಇಂಡೋನೇಷ್ಯಾದಲ್ಲಿ ಮಾರಾಟಕ್ಕೆ ಸಿದ್ದವಾಗಿರುವ ಸೊನೆಟ್ ಕಾರು ಮಾದರಿಯು ಭಾರತದಿಂದಲೇ ಪೂರ್ಣ ಪ್ರಮಾಣದಲ್ಲಿ ರಫ್ತುಗೊಳ್ಳಲಿದ್ದು, ಆಂಧ್ರಪ್ರದೇಶದ ಅನಂತಪುರದಲ್ಲಿರುವ ಕಿಯಾ ಕಾರು ಘಟಕದಲ್ಲಿ ಸಿದ್ದಗೊಳ್ಳುತ್ತಿದೆ.

ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿದೆ 7 ಸೀಟರ್ ಕಿಯಾ ಸೊನೆಟ್ ಕಾರು

ಭಾರತದಲ್ಲಿ ಕಿಯಾ ಕಂಪನಿಯು ಸೊನೆಟ್ ಮಾದರಿಯಲ್ಲೇ 7 ಸೀಟರ್ ಮಾದರಿಯನ್ನು ಅಭಿವೃದ್ದಿಗೊಳಿಸಲಿದೆಯಾ ಅಥವಾ ಸಂಪೂರ್ಣವಾಗಿ ಹೊಸ ಕಾರು ಮಾದರಿಯಲ್ಲಿ 7 ಸೀಟರ್ ಆವೃತ್ತಿಯನ್ನು ನಿರ್ಮಾಣ ಮಾಡುತ್ತಿದೆಯಾ ಎನ್ನುವ ಕುರಿತು ಕೆಲವು ಗೊಂದಲಗಳಿವೆ.

ಏಕೆಂದರೆ ಇಂಡೋನೇಷ್ಯಾದಲ್ಲಿ ಮಾರಾಟವಾಗುತ್ತಿರುವ ಸೊನೆಟ್ ಕಾರು ಮಾದರಿಯು 4,200 ಎಂಎಂ ಉದ್ದಳತೆ ಹೊಂದಿದ್ದರೆ, ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಸೊನೆಟ್ ಮಾದರಿಯ ಉದ್ದಳತೆಯು 3,995 ಎಂಎಂ ಉದ್ದಳತೆ ಹೊಂದಿದೆ.

ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿದೆ 7 ಸೀಟರ್ ಕಿಯಾ ಸೊನೆಟ್ ಕಾರು

ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಸಬ್ ಫೋರ್ ಮೀಟರ್ ಆವೃತ್ತಿಗಾಗಿ ಮತ್ತು ತೆರಿಗೆ ಶ್ರೇಣಿಯ ಮುಂದಿನ ಹಂತವನ್ನು ತಪ್ಪಿಸಲು 4 ಮೀಟರ್‌ಗಿಂತಲೂ ಕಡಿಮೆ ಉದ್ದಳತೆ ಹೊಂದಿದ್ದು, ಹೆಚ್ಚುವರಿ ಉದ್ದಳತೆ ಹೊರತುಪಡಿಸಿ ಅಗಲ ಮತ್ತು ಎತ್ತರ ಒಂದೇ ಆಗಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿದೆ 7 ಸೀಟರ್ ಕಿಯಾ ಸೊನೆಟ್ ಕಾರು

ಹೆಚ್ಚುವರಿ ಉದ್ದಳತೆಯಲ್ಲೇ ಕಿಯಾ ಮೋಟಾರ್ಸ್ ಕಂಪನಿಯು ಇಂಡೋನೇಷ್ಯಾದಲ್ಲಿ ಮಾರಾಟವಾಗುವ ಸೊನೆಟ್ ಮಾದರಿಯಲ್ಲಿ 2+3+2 ಮಾದರಿಯ ಆಸನ ಸೌಲಭ್ಯವನ್ನು ನೀಡಿದ್ದು, ಭಾರತದಲ್ಲಿನ ಸೊನೆಟ್ ಮಾದರಿಯಲ್ಲಿ ಇದು ಸಾಧ್ಯವಿಲ್ಲ ಎನ್ನಲಾಗಿದೆ.

ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿದೆ 7 ಸೀಟರ್ ಕಿಯಾ ಸೊನೆಟ್ ಕಾರು

ಹೀಗಾಗಿ ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಪ್ರತ್ಯೇಕವಾದ 7 ಸೀಟರ್ ಸೌಲಭ್ಯವುಳ್ಳ ಎಂಪಿವಿ ಮಾದರಿಯನ್ನೇ ಅಭಿವೃದ್ದಿಗೊಳ್ಳುವ ಸಾಧ್ಯಗಳಿದ್ದು, ಶೀಘ್ರದಲ್ಲೇ ಕಾರು ಖರೀದಿದಾರರ ಗೊಂದಲಕ್ಕೆ ತೆರೆ ಎಳೆಯಲು ಸಿದ್ದವಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿದೆ 7 ಸೀಟರ್ ಕಿಯಾ ಸೊನೆಟ್ ಕಾರು

ಭಾರತದಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ನಡುವಿನ ದರ ಅಂತರವನ್ನು ಸರಿದೂಗಿಸುವಂತಹ ಹೊಸ ಎಂಪಿವಿ ಮಾದರಿಯನ್ನು ಬಿಡುಗಡೆ ಮಾಡಲಿದ್ದು, ಮುಂದಿನ ಕೆಲ ದಿನಗಳಲ್ಲಿ ಕಿಯಾ ಹೊಸ ಕಾರು ಅನಾವರಣಗೊಳ್ಳುವ ಸಿದ್ದತೆಯಲ್ಲಿದೆ.

Most Read Articles

Kannada
English summary
Kia Sonet 7 Seater First Look Walkaround. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X