ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಆಧಾರಿತ ಹೈಡ್ರೋಜನ್ ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ಅಭಿವೃದ್ಧಿಪಡಿಸುತ್ತಿರುವುದಾಗಿ ತಿಳಿಸಿದೆ.

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ನಡೆಸಲ್ಪಡುವ ಮೂಲ ಮಾದರಿಯ ಡಿಫೆಂಡರ್ ಎಸ್‌ಯುವಿಯ ಪರೀಕ್ಷೆ ಈ ವರ್ಷದ ಕೊನೆಯಲ್ಲಿ ಆರಂಭವಾಗಲಿದೆ. ಹೈಡ್ರೋಜನ್ ಫ್ಯೂಯಲ್ ಸೆಲ್ ವಾಹನದಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಚಲಾಯಿಸಲು ಹೈಡ್ರೋಜನ್ ಸೆಲ್ ಬಳಸಲಾಗುತ್ತದೆ.

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

ಹೈಡ್ರೋಜನ್ ಸೆಲ್ ವಾಹನಗಳನ್ನು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳಿಗೆ ಪರ್ಯಾಯವಾಗಿ ನೋಡಲಾಗುತ್ತದೆ. ಜಾಗ್ವಾರ್ ಲ್ಯಾಂಡ್ ರೋವರ್ 2036ರ ವೇಳೆಗೆ ಪರಿಸರ ಸ್ನೇಹಿ ವಾಹನಗಳನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ.

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

ಪ್ರಾಜೆಕ್ಟ್ ಜೀಯಸ್ ಎಂದು ಕರೆಯಲ್ಪಡುವ ಜಾಗ್ವಾರ್ ಲ್ಯಾಂಡ್ ರೋವರ್‌ನ ಸುಧಾರಿತ ಎಂಜಿನಿಯರಿಂಗ್ ಯೋಜನೆಯನ್ನು ಬ್ರಿಟನ್ ಸರ್ಕಾರವು ಬೆಂಬಲಿಸುತ್ತದೆ. ಈ ಯೋಜನೆಯಲ್ಲಿ ಹೈಡ್ರೋಜನ್ ಫ್ಯೂಯಲ್ ಸೆಲ್ ಮಾದರಿಗಾಗಿ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಪರೀಕ್ಷಿಸಲಾಗುತ್ತದೆ.

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

ಜೊತೆಗೆ ಹೊಸ ಇಂಧನವನ್ನು ಬಳಸಿಕೊಂಡು ವಾಹನದ ಕಾರ್ಯಕ್ಷಮತೆಯ ಬದಲಾವಣೆಗಳನ್ನು ಪರೀಕ್ಷಿಸಲಾಗುತ್ತದೆ. ಹೈಡ್ರೋಜನ್ ಫ್ಯೂಯಲ್ ಸೆಲ್ ಆಧಾರಿತ ವಾಹನಗಳನ್ನು ಅಭಿವೃದ್ಧಿಪಡಿಸಲು ಜಾಗ್ವಾರ್ ಲ್ಯಾಂಡ್ ರೋವರ್ ಹಲವು ಕಂಪನಿಗಳೊಂದಿಗೆ ಕೈ ಜೋಡಿಸಿದೆ.

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

ಇವುಗಳಲ್ಲಿ ಡೆಲ್ಟಾ ಮೋಟಾರ್ಸ್ಪೋರ್ಟ್, ಎವಿಎಲ್, ಮಾರೆಲ್ಲಿ ಆಟೋಮೋಟಿವ್ ಸಿಸ್ಟಂ, ಯುಕೆ ಬ್ಯಾಟರಿ ಇಂಡಸ್ಟ್ರಿಯಲೈಸೇಶನ್ ಸೆಂಟರ್ (ಯುಕೆಬಿಐಸಿ) ಗಳು ಸೇರಿದ್ದು, ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ನಡೆಸಲ್ಪಡುವ ಡಿಫೆಂಡರ್ ಮೂಲ ಮಾದರಿಯ ಎಸ್‌ಯುವಿಯನ್ನು ಸಂಶೋಧಿಸಲು, ಅಭಿವೃದ್ಧಿಪಡಿಸಲು ಹಾಗೂ ತಯಾರಿಸಲು ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಗೆ ನೆರವಾಗಲಿವೆ.

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

ಜಾಗ್ವಾರ್ ಲ್ಯಾಂಡ್ ರೋವರ್‌ನ ಹೈಡ್ರೋಜನ್ ಫ್ಯೂಯಲ್ ಸೆಲ್'ಗಳ ಮುಖ್ಯಸ್ಥರಾದ ರಾಲ್ಫ್ ಕ್ಲಾಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾರಿಗೆ ಉದ್ಯಮದಾದ್ಯಂತ ಹೈಡ್ರೋಜನ್ ಫ್ಯೂಯಲ್ ಸೆಲ್'ಗಳು ಭವಿಷ್ಯದಲ್ಲಿ ಇಂಧನದ ಪಾತ್ರವನ್ನು ವಹಿಸಲಿವೆ.

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

ಭವಿಷ್ಯದಲ್ಲಿ ಹೈಡ್ರೋಜನ್ ವಾಹನಗಳು ಬ್ಯಾಟರಿ ಚಾಲಿತ ವಾಹನಗಳನ್ನು ಹಿಂದಿಕ್ಕುತ್ತವೆ. ಹೈಡ್ರೋಜನ್ ವಾಹನಗಳಿಂದ ಯಾವುದೇ ಮಾಲಿನ್ಯ ಹೊರ ಬಾರದ ಕಾರಣ ಭವಿಷ್ಯದಲ್ಲಿ ಹೈಡ್ರೋಜನ್ ಫ್ಯೂಯಲ್ ಸೆಲ್ ವಾಹನಗಳನ್ನು ಮಾತ್ರ ಬಳಸಲಾಗುತ್ತದೆ.

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

2039ರ ವೇಳೆಗೆ ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗುವ ಡಿಫೆಂಡರ್ ಎಸ್‌ಯುವಿಗೆ ನಿಜವಾದ ಆಕಾರ ನೀಡುವುದು ಕಂಪನಿಯ ಗುರಿಯಾಗಿದೆ ಎಂದು ರಾಲ್ಫ್ ಕ್ಲಾಗ್ ಹೇಳಿದರು.

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

ಕಂಪನಿಯು 2039ರಿಂದ 100%ನಷ್ಟು ಮಾಲಿನ್ಯ ರಹಿತ ಡಿಫೆಂಡರ್ ಎಸ್‌ಯುವಿ ಉತ್ಪಾದನೆಯನ್ನು ಆರಂಭಿಸಲಿದೆ. ಹೈಡ್ರೋಜನ್ ಇಂಧನದಿಂದ ಚಲಿಸುವ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಹಾಗೂ ಕಡಿಮೆ ತಾಪಮಾನದಲ್ಲಿ ಚಲಿಸುವ ವಾಹನಗಳಾಗಿವೆ.

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

ಈ ವಾಹನಗಳು ಇಂಧನ ತುಂಬುವಿಕೆಯ ಬಗ್ಗೆ ಚಿಂತಿಸದೆ ದೂರದ ಪ್ರಯಾಣವನ್ನು ಸುಲಭಗೊಳಿಸುತ್ತವೆ. ವರದಿಗಳ ಪ್ರಕಾರ ಹೈಡ್ರೋಜನ್ ಫ್ಯೂಯಲ್ ವಾಹನಗಳ ಸಂಖ್ಯೆ 2018ರಿಂದ ದ್ವಿಗುಣಗೊಂಡಿದೆ.

ಹೈಡ್ರೋಜನ್ ಫ್ಯೂಯಲ್ ಸೆಲ್'ನಿಂದ ಚಾಲನೆಯಾಗಲಿದೆ ಡಿಫೆಂಡರ್ ಎಸ್‌ಯುವಿ

ಜೊತೆಗೆ ಹೈಡ್ರೋಜನ್ ಫ್ಯೂಯಲ್ ತುಂಬುವ ಕೇಂದ್ರಗಳ ಸಂಖ್ಯೆಯು 20%ಗಿಂತ ಹೆಚ್ಚಾಗಿದೆ. ಮುಂದಿನ ಒಂಬತ್ತು ವರ್ಷಗಳಲ್ಲಿ 10 ಮಿಲಿಯನ್ ಹೈಡ್ರೋಜನ್ ಸೆಲ್ ಚಾಲಿತ ವಾಹನಗಳು ಇರಲಿವೆ ಎಂದು ಹೇಳಲಾಗಿದೆ.

Most Read Articles

Kannada
English summary
Land Rover developing hydrogen fuel cell powered Defender SUV. Read in Kannada.
Story first published: Tuesday, June 15, 2021, 16:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X