Just In
- 38 min ago
ಮಕ್ಕಳಿಗಾಗಿ 60-70 ಕಿ.ಮೀ ಮೈಲೇಜ್ ನೀಡುವ ಮಿನಿ ಎಲೆಕ್ಟ್ರಿಕ್ ಜೀಪ್ ತಯಾರಿಸಿದ ತಂದೆ
- 1 hr ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 3 hrs ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 3 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
Don't Miss!
- News
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ವ್ಯಕ್ತಿಚಿತ್ರ
- Sports
ಐಪಿಎಲ್ : ಈ ದಾಖಲೆ ಮಾಡಿದ್ದು ಕೊಹ್ಲಿ ಬಿಟ್ರೆ ಸಂಜು ಸ್ಯಾಮ್ಸನ್
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಲೆಕ್ಸಸ್ ಎಲ್‍ಸಿ 500ಹೆಚ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಬೆಲೆ ರೂ.2.15 ಕೋಟಿ
ಐಷಾರಾಮಿ ಕಾರುಗಳ ಉತ್ಪಾದನಾ ಕಂಪನಿಯಾಗಿರುವ ಲೆಕ್ಸಸ್ ತನ್ನ ಎಲ್‍ಸಿ 500ಹೆಚ್ ಸೆಡಾನ್‌ನ ಲಿಮಿಟೆಡ್-ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಲೆಕ್ಸಸ್ ಎಲ್‍ಸಿ 500ಹೆಚ್ ಲಿಮಿಟೆಡ್ ಎಡಿಷನ್ ಮಾದರಿಯ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.15 ಕೋಟಿಯಾಗಿದೆ.

ಲೆಕ್ಸಸ್‌ನಿಂದ ಪ್ರೀಮಿಯಂ ಸೆಡಾನ್‌ನ ಲಿಮಿಟೆಡ್ ಎಡಿಷನ್ ಏರ್-ರೇಸಿಂಗ್ ಏರೋಡೈನಾಮಿಕ್ ಪ್ರೇರಿತವಾಗಿದೆ ಎಂದು ಹೇಳಲಾಗುತ್ತಿದೆ. ಲೆಕ್ಸಸ್ ಎಂಜಿನಿಯರ್‌ಗಳು ಮತ್ತು ಯೋಶಿಹೈಡ್ ಮೊರುಯಾ ಏರ್ ರೇಸ್ ಪೈಲಟ್ ನಡುವಿನ ಪಾಲುಗಾರಿಕೆಯಲ್ಲಿ ಈ ಹೊಸ ಲಿಮಿಟೆಡ್ ಎಡಿಷನ್ ಅನ್ನು ಅಭಿವೃದ್ದಿ ಪಡಿಸಲಾಗಿದೆ. ಈ ಹೊಸ ಲೆಕ್ಸಸ್ ಎಲ್‍ಸಿ 500ಹೆಚ್ ಲಿಮಿಟೆಡ್ ಎಡಿಷನ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಲೆಕ್ಸಸ್ ಎಲ್‍ಸಿ 500ಹೆಚ್ ಲಿಮಿಟೆಡ್ ಎಡಿಷನ್ ಸೆಡಾನ್ ನಲ್ಲಿ 21 ಇಂಚಿನ ಅಲಾಯ್ ವ್ಹೀಲ್ ಗಳು, ರೇರ್ ವಿಂಗ್ ಮತ್ತು ಮುಂಭಾಗದ ಗ್ರಿಲ್‌ನಲ್ಲಿ ಬ್ಲ್ಯಾಕ್ ಅಲಂಕಾರಿಕತೆಯನ್ನು ಹೊಂದಿದೆ. ಹೊಸ ಲಿಮಿಟೆಡ್ ಎಡಿಷನ್ ರೇರ್ ವಿಂಗ್ ಮತ್ತು ಸ್ಕಫ್ ಪ್ಲೇಟ್‌ಗಳಲ್ಲಿ ಸೊಗಸಾದ ಕಾರ್ಬನ್-ಫೈಬರ್ ಪ್ಲಾಸ್ಟಿಕ್ ಅನ್ನು ಸಹ ಬಳಸಲಾಗಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಈ ಲಿಮಿಟೆಡ್ ಎಡಿಷನ್ ಅಪ್ ಸೈಡ್-ಡೌನ್ ವಿಂಗ್‌ಟಿಪ್‌ಗಳೊಂದಿಗೆ ಬರುತ್ತದೆ, ಇದು ಹೊಸ ಮಾದರಿಯ ಏರೋಡೈನಾಮಿಕ್ ದಕ್ಷತೆಯನ್ನು ಇನ್ನಷ್ಟು ಸುಧಾರಿಸುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಮಾದರಿಯ ಒಳಭಾಗ ಹೆಚ್ಚು ಐಷಾರಾಮಿ ಆಗಿದೆ.

ಒಳಭಾಗದಲ್ಲಿ ಬ್ಲ್ಯಾಕ್ ಅಲ್ಕಾಂಟರಾ ಲೆದರ್ ಸೀಟುಗಳನ್ನು ಒಳಗೊಂಡಿವೆ. ಇನ್ನು ಸ್ಟೀಯರಿಂಗ್ ವ್ಹೀಲ್, ಶಿಫ್ಟ್ ಲಿವರ್ ಮತ್ತು ಡೋರ್ ಟ್ರಿಮ್‌ಗಳನ್ನು ಒಳಗೊಂಡ ಹೆಚ್ಚಿನ ಅಲ್ಕಾಂಟರಾ ಬಿಟ್‌ಗಳಿವೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕಾಸ್ಮೆಟಿಕ್ ಮತ್ತು ವೈಶಿಷ್ಟ್ಯಗಳ ಸೇರ್ಪಡೆ ಹೊರತಾಗಿ, ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲಾಗಿಲ್ಲ. ಹೊಸ ಲೆಕ್ಸಸ್ ಎಲ್‍ಸಿ 500ಹೆಚ್ ಲಿಮಿಟೆಡ್ ಎಡಿಷನ್ ಸ್ಟ್ಯಾಂಡರ್ಡ್ ಸೆಡಾನ್ ನಂತೆಯೇ 3.5-ಲೀಟರ್ ಆರು ಸಿಲಿಂಡರ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 6600 ಆರ್‌ಪಿಎಂನಲ್ಲಿ 354 ಬಿಹೆಚ್‌ಪಿ ಮತ್ತು 3000 ಆರ್‌ಪಿಎಂನಲ್ಲಿ 500 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಆಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಲೆಕ್ಸಸ್ ಎಲ್‍ಸಿ 500ಹೆಚ್ ಲಿಮಿಟೆಡ್ ಎಡಿಷನ್ ಬಿಡುಗಡೆಯ ಬಗ್ಗೆ ಲೆಕ್ಸಸ್ ಇಂಡಿಯಾದ ಅಧ್ಯಕ್ಷ ಪಿ.ಬಿ.ವೇಣುಗೋಪಾಲ್ ಅವರು ಮಾತನಾಡಿ, ಈ ಹೊಸ ಮಾದರಿಯನ್ನು ಬಿಡುಗಡೆಗೊಳಿಸಲು ತುಂಬಾ ಉತ್ಸುಕರಾಗಿದ್ದೇವೆ. ಇದರ ಎವಿಎಷನ್ ಪ್ರೇರಿತ ವಿನ್ಯಾಸ ಶೈಲಿ ಆಕರ್ಷಕವಾಗಿದೆ ಎಂದು ಹೇಳಿದರು.

ಲೆಕ್ಸಸ್ ಎಲ್‍ಸಿ 500ಹೆಚ್ ಲಿಮಿಟೆಡ್ ಎಡಿಷನ್ ಮಾದರಿಯು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಕಪ್ಪು ಸುಂದರಿಯಂತೆ ಮಿಂಚುವ ಈ ಮಾದರಿಯು ಕೆಲವು ಹೊಸ ಫೀಚರ್ ಗಳನ್ನು ಪಡೆದುಕೊಂಡಿದೆ. ಇದನ್ನು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಇದು ಹೆಚ್ಚು ಸ್ಪೋರ್ಟಿಯಾಗಿದೆ.