ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಭಾರತೀಯ ಮೂಲದ ಮಹೀಂದ್ರಾ ಅಂಡ್ ಮಹೀಂದ್ರಾ (Mahindra and Mahindra) ಕಂಪನಿಯ ಥಾರ್ (Thar) ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಈ ಎಸ್‌ಯುವಿ ಭಾರತದಲ್ಲಿರುವ ಜನಪ್ರಿಯ 4×4 ಎಸ್‌ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾಾ ಅಂಡ್ ಮಹೀಂದ್ರಾ ಕಂಪನಿಯು ಕಳೆದ ವರ್ಷ ಈ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಬಿಡುಗಡೆಯಾದಾಗಿನಿಂದ ಈ ಎಸ್‌ಯುವಿಯು ಹೆಚ್ಚು ಬೇಡಿಕೆಯನ್ನು ಹೊಂದಿದೆ. ದೇಶದ ಬಹುತೇಕ ನಗರಗಳಲ್ಲಿ ಥಾರ್‌ ಎಸ್‌ಯುವಿಯ ವಿತರಣೆ ಪಡೆಯಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ. ಕೆಲವು ವಾರಗಳ ಹಿಂದೆ ಮಹೀಂದ್ರಾ ಥಾರ್ ಎಸ್‌ಯುವಿಯಲ್ಲಿ ಸಿ‌ಎನ್‌ಜಿ ಕಿಟ್ ಅನ್ನು ಹೇಗೆ ಅಳವಡಿಸಬಹುದು ಎಂಬ ಬಗ್ಗೆ ಮಾರಾಟಗಾರರೊಬ್ಬರು ಮಾಹಿತಿ ನೀಡಿದ್ದರು.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಈಗ ಅದೇ ಸಿಎನ್‌ಜಿ ಕಿಟ್‌ನ ಮಾರಾಟಗಾರರು ಮತ್ತೊಂದು ವೀಡಿಯೊವನ್ನು ಅಪ್ ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಅವರು ಹೊಸ ತಲೆಮಾರಿನ ಮಹೀಂದ್ರಾ ಥಾರ್‌ ಎಸ್‌ಯುವಿಯಲ್ಲಿ ಸಿಎನ್‌ಜಿ ಕಿಟ್ ಅನ್ನು ಅಳವಡಿಸಿದ್ದಾರೆ. ಗ್ರೀನ್ ಫ್ಯುಯೆಲ್ಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಥಾರ್ ಎಸ್‌ಯುವಿಯಲ್ಲಿ ಅಳವಡಿಸಿರುವ ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್ ಬಗ್ಗೆ ವಿವರಿಸಲಾಗಿದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಈ ಕಿಟ್ ಅನ್ನು ಮಹೀಂದ್ರಾ ಥಾರ್‌ ಎಸ್‌ಯುವಿಯ ಟರ್ಬೊ ಪೆಟ್ರೋಲ್ ಆವೃತ್ತಿಯಲ್ಲಿ ಅಳವಡಿಸಲಾಗಿದೆ. ಮಹೀಂದ್ರಾ ಥಾರ್‌ ಎಸ್‌ಯುವಿಯ ಎಂಜಿನ್ ಡೈರೆಕ್ಟ್ ಇಂಜೆಕ್ಷನ್ ಎಂಜಿನ್ ಎಂಬುದು ಗಮನಾರ್ಹ. ಇದರಿಂದ ಈ ಎಂಜಿನ್‌ಗೆ ಸಿಎನ್‌ಜಿ ಫಿಟ್ಟಿಂಗ್‌ ಮಾಡುವಾಗ ವಿಶೇಷ ಕಿಟ್'ನ ಅಗತ್ಯವಿದೆ. ಈ ಸಂದರ್ಭದಲ್ಲಿ ಸಾಮಾನ್ಯ ಸಿ‌ಎನ್‌ಜಿ ಕಿಟ್‌ಗಳು ಯಶಸ್ವಿಯಾಗುವುದಿಲ್ಲ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಸಿ‌ಎನ್‌ಜಿ ಕಿಟ್ ಅಳವಡಿಸಿದ ನಂತರ ಕಾರಿನಲ್ಲಿ ತಿರುಗಾಡಲು ತೆರಳುತ್ತಾರೆ. ಕಾರ್ ಸೆಂಟರ್ ಕನ್ಸೋಲ್‌ನಲ್ಲಿ ಸಿ‌ಎನ್‌ಜಿ ಲೆವೆಲ್ ಇಂಡಿಕೇಟರ್ ಸ್ವಿಚ್ ಅನ್ನು ನೀಡಲಾಗಿದೆ. ಇದನ್ನು ಹೊರತು ಪಡಿಸಿ ಕಾರಿನೊಳಗೆ ಬೇರೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪೆಟ್ರೋಲ್‌ನಿಂದ ಸಿಎನ್‌ಜಿಗೆ ಬದಲಾಯಿಸುವುದು ಆರಾಮದಾಯಕವಾಗಿದ್ದು, ಕಾರ್ಯಕ್ಷಮತೆಯ ಸಮಸ್ಯೆ ಇಲ್ಲವೆಂದು ಕಾರು ಚಾಲಕ ಹೇಳುತ್ತಾನೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಎಂಜಿನ್ ವೇಗವಾಗಿದ್ದು, ರೆಸ್ಪಾನ್ಸ್ ಅವಧಿಯು ಪೆಟ್ರೋಲ್ ಆವೃತ್ತಿಯಂತೆಯೇ ಇರುತ್ತದೆ. ಈ ಎಸ್‌ಯುವಿಯಲ್ಲಿ ಸಿ‌ಎನ್‌ಜಿ ಕಿಟ್ ಅನ್ನು ಹೇಗೆ ಅಳವಡಿಸಲಾಗಿದೆ ಎಂಬುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಹುಡ್ ಒಳಗೆ ಇಂಜೆಕ್ಟರ್‌, ರಿಡ್ಯೂಸರ್‌ ಹಾಗೂ ಇಸಿಯುಗಳನ್ನು ಕಾರಿನಲ್ಲಿ ಡೈರೆಕ್ಟ್ ಇಂಜೆಕ್ಷನ್ ಎಂಜಿನ್ ವಾಹನಕ್ಕಾಗಿ ಸ್ಥಾಪಿಸಲಾಗಿದೆ. ವೈರ್, ಪೈಪ್ ಗಳನ್ನು ಹುಡ್ ಅಡಿಯಲ್ಲಿ ಇರಿಸಲಾಗಿದೆ.

ಎಸ್‌ಯುವಿಯ ಹಿಂಭಾಗದಲ್ಲಿರುವ ಬೂಟ್ ಸ್ಪೇಸ್'ನಲ್ಲಿ 14 ಕೆ.ಜಿ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಸಿ‌ಎನ್‌ಜಿ ರೀಫಿಲಿಂಗ್ ಪೈಪ್ ಅನ್ನು ಪೆಟ್ರೋಲ್ ಫಿಲ್ಲರ್ ಕ್ಯಾಪ್ ಪಕ್ಕದಲ್ಲಿ ನೀಡಲಾಗಿದೆ. ಈ ಮಹೀಂದ್ರಾ ಥಾರ್‌ನಲ್ಲಿರುವ ಸಿಎನ್‌ಜಿ ಕಿಟ್ ಫಿಟ್ಟಿಂಗ್‌ಗಳು ತುಂಬಾ ಅಚ್ಚುಕಟ್ಟಾಗಿ ಕಾಣುತ್ತವೆ. ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ XUV 700 ಎಸ್‌ಯುವಿಯಲ್ಲಿಯೂ ಸಿ‌ಎನ್‌ಜಿ ಕಿಟ್ ಅಳವಡಿಸಬಹುದು ಎಂದು ಅವರು ಹೇಳಿದ್ದಾರೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ಎರಡೂ ರೂಪಾಂತರಗಳು 4×4 ಸ್ಟ್ಯಾಂಡರ್ಡ್‌ನೊಂದಿಗೆ ಮಾರಾಟವಾಗುತ್ತವೆ. ಪೆಟ್ರೋಲ್ ಆವೃತ್ತಿಯ ಬಗ್ಗೆ ಹೇಳುವುದಾದರೆ, ಈ ಆವೃತ್ತಿಯಲ್ಲಿ 2.0 ಲೀಟರ್ mStallion ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಈ ಎಂಜಿನ್ 150 ಬಿ‌ಹೆಚ್‌ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಡೀಸೆಲ್ ಆವೃತ್ತಿಯ ಬಗ್ಗೆ ಹೇಳುವುದಾದರೆ, ಕಂಪನಿಯು ಈ ಆವೃತ್ತಿಯಲ್ಲಿ 2.2 ಲೀಟರ್ mHawk ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 130 ಬಿ‌ಹೆಚ್‌ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

2019 ರ ಜನವರಿಯಲ್ಲಿ ವಾಹನಗಳನ್ನು ಮಾರ್ಪಡಿಸುವುದು ಕಾನೂನುಬಾಹಿರವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದರೆ ಕಾರುಗಳಲ್ಲಿ ಮಾಡುವ ಎಲ್ಲಾ ಮಾರ್ಪಾಡುಗಳು ಕಾನೂನುಬಾಹಿರವಲ್ಲ. ಕಾನೂನುಬದ್ಧವಾಗಿ ಕಾರುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಅವು ಯಾವುವು ಎಂಬುದನ್ನು ನೋಡುವುದಾದರೆ...

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಟಯರ್‌ಗಳನ್ನು ಕಾನೂನುಬದ್ಧವಾಗಿ ಅಪ್ ಡೇಟ್ ಮಾಡಬಹುದು. ಆದರೆ ಹೊಸ ಟಯರ್ ಗಳು ತಯಾರಕ ಕಂಪನಿಗಳ ಅವಶ್ಯಕತೆಗಳಿಗೆ ಒಳಪಟ್ಟಿರಬೇಕು. ಹೊಸ ಟಯರ್‌ಗಳು ಅದೇ ವೇಗದ ರೇಟಿಂಗ್ (ಎ) ಅಥವಾ ಸ್ಟಾಕ್ ಟಯರ್‌ಗಳಿಗಿಂತ ಹೆಚ್ಚಿನದನ್ನು ಹೊಂದಿರ ಬೇಕಾಗುತ್ತದೆ. ಹೊಸ ಟಯರ್ ಗಳು ಹೆಚ್ಚು ಅಗಲವನ್ನು ಹೊಂದಿದ್ದರೆ, ಕಾರಿನ ಸೈಡ್ವಾಲ್ ಎತ್ತರವನ್ನು ಕಡಿಮೆ ಮಾಡಬೇಕಾಗುತ್ತದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಕಾರು ಮಾಲೀಕರು ತಮ್ಮ ಇಷ್ಟದ ಬಣ್ಣವನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ ಬಣ್ಣದ ಮಾರ್ಪಾಡುಗಳಿಗೆ ಆರ್‌ಟಿಒ ಅನುಮೋದನೆ ಪಡೆಯಬೇಕು. ಇದರ ಬಗ್ಗೆ ಕಾರಿನ ನೋಂದಣಿ ಪ್ರಮಾಣಪತ್ರದಲ್ಲಿ ಕಾರಿನ ಬಣ್ಣವನ್ನು ಬದಲಾಯಿಸಲಾಗಿದೆ ಎಂದು ತಿಳಿಸಬೇಕು. ಆದರೆ ಆರ್ಮಿ ಗ್ರೀನ್ ಬಣ್ಣದಲ್ಲಿ ಕಾರುಗಳನ್ನು ಪೇಂಟ್ ಮಾಡುವಂತಿಲ್ಲ. ಈ ಬಣ್ಣವನ್ನು ಮಿಲಿಟರಿ ಬಳಕೆಗೆ ಮಾತ್ರ ಮೀಸಲಿಡಲಾಗಿದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಕಾರು ಮಾಲೀಕರು ತಮ್ಮ ಕಾರಿಗೆ ಅತ್ಯುತ್ತಮವಾದ ಸಸ್ಪೆಂಷನ್ ಪಡೆಯಬಹುದು. ಇದರಿಂದ ಕಾರು ಪ್ರಯಾಣದ ಅನುಭವ ಹೆಚ್ಚುತ್ತದೆ. ಆ್ಯಂಟಿ ರೋಲ್ ಬಾರ್ ಇತ್ಯಾದಿಗಳನ್ನು

ಅಳವಡಿಸಿಕೊಳ್ಳುವ ಮೂಲಕ ತಿರುವುಗಳಲ್ಲಿ ಕಾರು ತಿರುಗಿಸುವಾಗ ಬಾಡಿ ರೋಲ್‌ನಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ಇದರಿಂದ ಆರಾಮದಾಯಕ ಸವಾರಿಯನ್ನು ಪಡೆಯಬಹುದು.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ Mahindra Thar

ಕಾರುಗಳಲ್ಲಿ ವಿಶೇಷ ಚೇತನರಿಗೆ ನೆರವಾಗುವ ಮಾರ್ಪಾಡುಗಳನ್ನು ಮಾಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ವಿಶೇಷ ಚೇತನರಿಗಾಗಿ ಕಾರುಗಳಲ್ಲಿರುವ ಒಆರ್‌ವಿ‌ಎಂ, ವ್ಹೀಲ್‌ಚೇರ್ ಲಿಫ್ಟ್‌, ಆಟೋಮ್ಯಾಟಿಕ್ ಅಥವಾ ಕೈಯಿಂದ ಚಾಲಿತವಾಗುವ ಕ್ಲಚ್, ಆಕ್ಸಲರೇಟರ್, ಬ್ರೇಕ್‌ ಸೇರಿದಂತೆ ಕೆಲವು ಭಾಗಗಳನ್ನು ಮಾರ್ಪಾಡು ಮಾಡಬಹುದು.

Most Read Articles

Kannada
English summary
Mahindra thar fitted with aftermarket cng kit video details
Story first published: Friday, December 10, 2021, 15:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X