ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Kia Seltos X-Line ವೆರಿಯೆಂಟ್

ಜನಪ್ರಿಯ Kia ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ Seltos ಆಗಿದೆ. ಈ Seltos ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ Seltos ಎಸ್‍ಯುವಿಯು ಯಶ್ವಸಿಯಾಗಿತ್ತು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

ಭಾರತದ ಗ್ರಾಹಕರು ಈ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ. ಬಿಡುಗಡೆಯಾದಾಗಿನಿಂದ Seltos ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಮಾರಾಟದಲ್ಲಿ Kia Seltos ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಇದೀಗ ದಕ್ಷಿಣ ಕೊರಿಯಾದ ಆಟೋ ಮೇಜರ್ ಕಿಯಾ ತನ್ನ X-Line ಎಸ್‍ಯುವಿಯ ಹೊಸ ಎಕ್ಸ್-ಲೈನ್ ವೆರಿಯೆಂಟ್ ಟೀಸರ್ ಚಿತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ X-Line ವೆರಿಯೆಂಟ್ ಸೆಪ್ಟಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

ಈ ಟೀಸರ್ ಚಿತ್ರದಲ್ಲಿ ಪ್ರೋಜೆಕ್ಟ್ ಎಕ್ಸ್ ಶೀರ್ಷಿಕೆಯೊಂದಿಗೆ 'ಶೀಘ್ರದಲ್ಲೇ ಹೊಸ ಬ್ಯಾಡಸ್ ಅನ್ಲೀಶಿಂಗ್' ಎಂದಿದೆ. ಆದರೆ ಇದು Seltos ಎಸ್‍ಯುವಿಯ X-Line ವೆರಿಯೆಂಟ್ ಆಗುವ ಸಾಧ್ಯತಯಿದೆ. 2020ರ ಆಟೋ ಎಕ್ಸ್‌ಪೋದಲ್ಲಿ ಕಿಯಾ X-Line ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿದರು. ನಂತರ 2019ರ ಲಾಸ್ ಏಂಜಲೀಸ್ ಆಟೋ ಶೋನಲ್ಲಿ ತನ್ನ ಜಾಗತಿಕ ಪ್ರೀಮಿಯರ್ ನಲ್ಲಿ ಅನಾವರಣಗೊಳಿಸಿತು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

ಹೊಸ ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ವೆರಿಯೆಂಟ್ ಮುಂಭಾಗದ ಗ್ರಿಲ್, ಬಂಪರ್ ಟ್ರಿಮ್, ಆಫ್ ಫಾಗ್ ಲ್ಯಾಂಪ್ ಹೌಸಿಂಗ್‌ಗಳು, ಸೈಡ್‌ಬೋರ್ಡ್‌ಗಳ ಉದ್ದಕ್ಕೂ ಕ್ರೋಮ್ ಆಪ್ಲಿಕ್, ಜಿಟಿ-ಲೈನ್ ಟ್ರಿಮ್‌ನಂತೆಯೇ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

ಹಿಂಭಾಗದಲ್ಲಿ ಡಾರ್ಕ್ ಕ್ರೋಮ್ ಬಾರ್ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಕನೆಕ್ಟ್ ಮಾಡುತ್ತದೆ. ಪ್ರಮುಖ ಫಾಕ್ಸ್ ಸ್ಕಫ್ ಪ್ಲೇಟ್, ಬ್ರೌನ್ಸ್ ಅಸ್ಸೆಂಟ್ ಗಳು, ಟೈಲ್‌ಗೇಟ್ ಅಡ್ಡಲಾಗಿ ಸೆಲ್ಟೋಸ್ ಬ್ಯಾಡ್ಜಿಂಗ್, ಮುಂಭಾಗದ ಗ್ರಿಲ್ ಮತ್ತು ಡೋರುಗಳ ಮೇಲೆ ಎಕ್ಸ್-ಲೈನ್ ಲೋಗೊವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

Seltos X-Line ಉತ್ಪಾದನೆಯ ಒಳಭಾಗವು ಕಾಂಟ್ರಾಸ್ಟ್ ಹೈಲೈಟ್‌ಗಳೊಂದಿಗೆ ಇದೇ ರೀತಿಯ ಡಾರ್ಕ್ ಟ್ರೀಟ್ಮೆಂಟ್ ಪಡೆಯಬಹುದು. ಈ Seltos X-Line ವೆರಿಯೆಂಟ್ ಕಿಯಾಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

2021ರ ಕಿಯಾ Seltos X-Line ವೆರಿಯೆಂಟ್ 1.5-ಲೀಟರ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ನಾಲ್ಕು-ಪಾಟ್ ಎಂಜಿನ್ ಅನ್ನು ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

ಈ ಎಂಜಿನ್ 115 ಬಿಹೆಚ್‍ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಇನ್ನು 1.4-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ ಅನ್ನು ಹೊಂದಿರಲಿದೆ. ಈ ಎಂಜಿನ್ 140 ಬಿಹೆಚ್‍ಪಿ ಪವರ್ ಮತ್ತು 242 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

ಕಿಯಾ Seltos X-Line ವೆರಿಯೆಂಟ್ ನಲ್ಲಿ ಎಫ್‌ಡಬ್ಲ್ಯೂಡಿ (ಫ್ರಂಟ್-ವೀಲ್-ಡ್ರೈವ್) ಸಿಸ್ಟಂ ಅನ್ನು ಹೊಂದಿರುತ್ತದೆ. ಇನ್ನು ಸೆಂಟ್ರಲ್ ಡಿಫರೆನ್ಷಿಯಲ್ ಲಾಕಿಂಗ್ ಸಿಸ್ಟಂನೊಂದಿಗೆ ಎಲೆಕ್ಟ್ರಿಕ್ ಎಡಬ್ಲ್ಯುಡಿ (ಆಲ್-ವೀಲ್-ಡ್ರೈವ್) ಸಿಸ್ಟಂ ಅನ್ನು ಹೊಂದಿರುತ್ತದೆ. ಸಾಮಾನ್ಯ ಸೆಲ್ಟೋಸ್‌ಗೆ ಹೋಲಿಸಿದರೆ X-Line ವೆರಿಯೆಂಟ್ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರಬಹುದು. ದೊಡ್ಡದಾದ ಟೈರ್‌ಗಳನ್ನು ಹೊಂದಿದ್ದು, ಬ್ಲ್ಯಾಕ್ ಅಲಾಯ್ ವ್ಹೀಲ್ ಗಳನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

ಇನ್ನು ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ 3 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. ಕಿಯಾ ಇಂಡಿಯಾ 3 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದ ಭಾರತದ ಅತಿ ವೇಗದ ಕಾರು ತಯಾರಕವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್‌ ಆಗಿರುವ ಕಿಯಾ ಸೆಲ್ಟೋಸ್ ಮತ್ತು ಸೊನೆಟ್ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ . ಕಿಯಾ Seltos ಕಾಂಪ್ಯಾಕ್ಟ್ ಎಸ್‌ಯುವಿಯು ಅದರ ಒಟ್ಟಾರೆ ಮಾರಾಟದ ಶೇಕಡಾ 66 ರಷ್ಟಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

ಕಿಯಾ ಇಂಡಿಯಾ 2021ರ ಜುಲೈ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದೆ. ಈ ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ ಒಟ್ಟು 15,016 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2020ರ ಜುಲೈ ತಿಂಗಳಿನಲ್ಲಿ ಕಿಯಾ ಕಂಪನಿಯು 8502 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.76 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

ಇನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ಕಿಯಾ ಕಂಪನಿಯು 15,015 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕೇವಲ ಒಂದು ಯುನಿಟ್ ಮಾತ್ರ ಹೆಚ್ಚು ಮಾರಾಟವಾಗಿದೆ. ಕಳೆದ ತಿಂಗಳು ಕಿಯಾ ಸೊನೆಟ್ ಮತ್ತೊಮ್ಮೆ 7,675 ಯುನಿಟ್‌ಗಳಲ್ಲಿ ಕಂಪನಿಯ ಅತ್ಯುತ್ತಮ ಮಾರಾಟವಾದ ಮಾದರಿಯಾಗಿದೆ. ನಂತರ ಕಿಯಾ Seltos ಎಸ್‍ಯುವಿಯ 6,983 ಯುನಿಟ್‌ಗಳು ಮಾರಾಟವಾಗಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಕಿಯಾ ಹೊಸ Seltos X-Line ವೆರಿಯೆಂಟ್

ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬ್ಲ್ಯಾಕ್ ಥೀಮ್ ವಾಹನಗಳು ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಇದರಿಂದ ಕಿಯಾ ಕೂಡ ತನ್ನ ಜನಪ್ರಿಯ Seltos ಎಸ್‍ಯುವಿಯನ್ನು ಬ್ಲ್ಯಾಕ್ ಥೀಮ್ ಎಕ್ಸ್-ಲೈನ್ ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ವೆರಿಯೆಂಟ್ ಸೆಪ್ಟಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಈ ಕಿಯಾ Seltos X-Line ವೆರಿಯೆಂಟ್ ಕೂಡ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Major highlights of new kia seltos x line variant launch details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X