ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಭಾರತದಲ್ಲಿ ಹಳೆಯ ಕಾರುಗಳನ್ನು ಖರೀದಿಸುವ ಅಸಂಖ್ಯಾತ ಜನರಿದ್ದಾರೆ. ಕೆಲವರು ಹಳೆಯ ಕಾರುಗಳನ್ನು ಇಷ್ಟಪಟ್ಟರೆ ಇನ್ನೂ ಕೆಲವರು ಹಳೆಯ ಕಾರುಗಳನ್ನು ಮಾಡಿಫೈಗೊಳಿಸುತ್ತಾರೆ. ಹೀಗೆ ಮಾಡಿಫೈಗೊಂಡ ಹಳೆಯ ಕಾರುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗುತ್ತದೆ.

ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಈಗ ಮಾಡಿಫೈಗೊಂಡಿರುವ ಮಾರುತಿ 800 ಕಾರಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಮಾರುತಿ ಸುಜುಕಿ ಕಂಪನಿಯು ಮಾರುತಿ 800 ಕಾರಿನ ಉತ್ಪಾದನೆಯನ್ನು ಹಲವಾರು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಿದೆ.

ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮಾರುತಿ 800 ಕಾರು ಜಿಪ್ಸಿ ಕಾರ್ ಆಗಿ ಮಾಡಿಫೈಗೊಂಡಿದೆ. ಮಾರುತಿ ಸುಜುಕಿ ಕಂಪನಿಯು ಈ ಎರಡೂ ಕಾರುಗಳಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರೂ, ಈ ಕಾರುಗಳ ಬಗ್ಗೆ ಜನರಿಗೆ ಇರುವ ಕ್ರೇಜ್ ಕಡಿಮೆಯಾಗಿಲ್ಲ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಮಾಡಿಫೈಗೊಂಡಿರುವ ಮಾರುತಿ 800 ಕಾರಿಗೆ ಮಾರುತಿ ಜಿಪ್ಸಿಯ ಶೇಪ್ ನೀಡಲಾಗಿದೆ. ಈ ಫೋಟೋವನ್ನು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾಕಷ್ಟು ಬಾರಿ ಶೇರ್ ಮಾಡಲಾಗಿದೆ.

ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಆದರೆ ಈ ಕಾರ್ ಅನ್ನು ಯಾರು ಮಾಡಿಫೈಗೊಳಿಸಿದರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಕಾರನ್ನು ಮಾಡಿಫೈಗೊಳಿಸಿರುವವರು ಕಾರಿನ ವಿನ್ಯಾಸದ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ ಎಂಬುದು ಗಮನಾರ್ಹ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಚಿತ್ರಗಳಲ್ಲಿ ಕಂಡುಬರುವ ಮಾರುತಿ ಜಿಪ್ಸಿ ಅಂದರೆ ಮಾರುತಿ 800 ಕಾರು ಹಸಿರು ಬಣ್ಣವನ್ನು ಹೊಂದಿದೆ. ಮಾರುತಿ ಜಿಪ್ಸಿ ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಆಲ್ ವ್ಹೀಲ್ ಡ್ರೈವ್ ಎಸ್‌ಯುವಿಯಾಗಿದೆ.

ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಈ ಕಾರನ್ನು ಭಾರತೀಯ ಸೇನೆಯು ಹೆಚ್ಚು ಬಳಸುತ್ತಿತ್ತು. ಪೆರೇಡ್'ಗಳಲ್ಲಿ ಅಥವಾ ಸೇನಾ ಕವಾಯತುಗಳಲ್ಲಿ ಸೇನಾ ಸಿಬ್ಬಂದಿ ಈ ಕಾರಿನ ಮೇಲೆ ಸವಾರಿ ಮಾಡುತ್ತಿದ್ದರು. ಮಾರುತಿ ಜಿಪ್ಸಿ ಆಫ್ ರೋಡ್ ಎಸ್‌ಯುವಿಯಾಗಿ ಜನಪ್ರಿಯವಾಗಿತ್ತು.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಮಾರುತಿ 800 ಕಾರ್ ಅನ್ನು ಅದ್ಭುತವೆನಿಸುವ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ. ಈ ಕಾರು ಮೃದುವಾದ ರೂಫ್ ಹಾಗೂ ಎರಡು ಎಂಟ್ರಿ ಡೋರ್'ಗಳನ್ನು ಹೊಂದಿದೆ. ಇವುಗಳಿಗಾಗಿ ವಾಟರ್ ಪ್ರೂಫ್ ಫ್ಯಾಬ್ರಿಕ್ ಬಳಸಲಾಗಿದೆ.

ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಈ ಕಾರಿನ ಇಂಟಿರಿಯರ್ ಮಾಡಿಫಿಕೇಶನ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಭಾರತದಲ್ಲಿ ಕಾರುಗಳನ್ನು ಮಾಡಿಫೈ ಮಾಡುವುದು ಕಾನೂನುಬಾಹಿರ. ಇದರ ಬಗ್ಗೆ ಸುಪ್ರೀಂ ಕೋರ್ಟ್ ಸಹ ನಿರ್ದೇಶನ ನೀಡಿದೆ.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಯಾವುದೇ ಕಾರಿನಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಬಹುದು. ಆದರೆ ಇದಕ್ಕಾಗಿ ಆರ್‌ಟಿಒ ಕಚೇರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.ಮಾಡಿಫೈಗೊಂಡಿರುವ ಈ ಜಿಪ್ಸಿಯು ನಿಜವಾದ ಜಿಪ್ಸಿಗಿಂತ ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಜೊತೆಗೆ ಬಾಡಿ ಪ್ಯಾನೆಲ್'ಗಳು ಮೂಲ ಜಿಪ್ಸಿಗಿಂತ ಬೇರೆಯಾಗಿವೆ. ಈ ಕಾರು ಸ್ಟ್ಯಾಂಡರ್ಡ್ ಮಾರುತಿ 800 ಕಾರಿಗಿಂತ ದೊಡ್ಡದಾಗಿದೆ. ಈ ಕಾರಿನಲ್ಲಿ ಜಿಪ್ಸಿಯಲ್ಲಿರುವಂತಹ ರೌಂಡ್ ಹ್ಯಾಲೊಜೆನ್ ಲ್ಯಾಂಪ್, ಬಾಡಿ ಕಲರ್ ಬಂಪರ್ ಹಾಗೂ ಬ್ಲ್ಯಾಕ್ ಗ್ರಿಲ್'ನಲ್ಲಿ ಮಾರುತಿ ಲೋಗೋ ನೀಡಲಾಗಿದೆ.

MOSTREAD: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಜಿಪ್ಸಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಜಿಪ್ಸಿ ಕಾರಿನ ಫೀಲ್ ನೀಡಲು ಮಾಡಿಫೈಗೊಂಡಿರುವ ಈ ಮಾರುತಿ 800 ಕಾರಿನಲ್ಲಿ ಜಿಪ್ಸಿ ಕಾರಿನಲ್ಲಿರುವಂತಹ ಅಲಾಯ್ ವ್ಹೀಲ್'ಗಳನ್ನು ಅಳವಡಿಸಲಾಗಿದೆ.

ಚಿತ್ರಕೃಪೆ: ಫೇಸ್‌ಬುಕ್

Most Read Articles

Kannada
English summary
Maruti 800 modified as Maruti Gypsy images viral on social media. Read in Kannada.
Story first published: Monday, April 26, 2021, 17:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X