ಯುಗಾದಿ ಸ್ಪೆಷಲ್: ಅರೆನಾ ಕಾರುಗಳ ಮೇಲೆ ವಿಶೇಷ ಆಫರ್ ಘೋಷಿಸಿದ ಮಾರುತಿ ಸುಜುಕಿ

2021ರ ಮಾರ್ಚ್ ತಿಂಗಳಿನಲ್ಲಿ ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಹೊಸ ಗ್ರಾಹಕರನ್ನು ಸೆಳೆಯಲು ತನ್ನ ಕಾರುಗಳ ಮೇಲೆ ಹಲವಾರು ಕೊಡುಗೆ ಹಾಗೂ ನಗದು ರಿಯಾಯಿತಿಗಳನ್ನು ನೀಡುತ್ತಿದ್ದು, ಅರೆನಾ ಕಾರು ಮಾದರಿಗಳ ಮೇಲೆ ವಿಶೇಷ ರಿಯಾಯ್ತಿ ಘೋಷಣೆ ಮಾಡಿದೆ.

ವಿವಿಧ ಕಾರುಗಳ ಮೇಲೆ ವಿಶೇಷ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಹೊಸ ಕಾರುಗಳ ಬೆಲೆ ಏರಿಕೆಯ ನಡುವೆ ಗ್ರಾಹಕರಿಗೆ ಯುಗಾದಿ ಪ್ರಯುಕ್ತ ಹೊಸ ಕೊಡುಗೆಗಳು ಹಾಗೂ ನಗದು ರಿಯಾಯಿತಿಗಳನ್ನು ಘೋಷಣೆ ಮಾಡಿದ್ದು, ಮಾರುತಿ ಸುಜುಕಿಯ ಅರೆನಾ ಪ್ಲಾಟ್‌ಫಾರಂ ಅಡಿಯಲ್ಲಿರುವ ಕಾರು ಮಾದರಿಗಳ ಮೇಲೆ ರಿಯಾಯಿತಿ ಹಾಗೂ ಕೊಡುಗೆಗಳ ಬಗೆಗೆ ಈ ಲೇಖನದಲ್ಲಿ ತಿಳಿಯೋಣ. ಹೊಸ ಆಫರ್‌ಗಳಲ್ಲಿ ನಗದು ರಿಯಾಯ್ತಿ, ವಿನಿಯಮ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ವಿವಿಧ ಕಾರುಗಳ ಮೇಲೆ ವಿಶೇಷ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ತನ್ನ ಎಂಟ್ರಿ ಲೆವೆಲ್ ಆಲ್ಟೊ ಕಾರಿನ ಮೇಲೆ ರೂ.17 ಸಾವಿರ ನಗದು ರಿಯಾಯಿತಿ ಹಾಗೂ ರೂ.18 ಸಾವಿರ ವಿನಿಮಯ ಬೋನಸ್ ನೀಡುತ್ತಿದೆ. ಹಾಗೆಯೇ ಎಸ್ ಪ್ರೆಸ್ಸೊ ಕಾರಿನ ಮೇಲೆ ಕಂಪನಿಯು ರೂ.14 ಸಾವಿರ ನಗದು ರಿಯಾಯಿತಿ ಹಾಗೂ ರೂ.18 ಸಾವಿರ ವಿನಿಮಯ ಬೋನಸ್ ನೀಡುತ್ತಿದೆ.

ವಿವಿಧ ಕಾರುಗಳ ಮೇಲೆ ವಿಶೇಷ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಿನಿ ವ್ಯಾನ್ ಮಾರುತಿ ಇಕೊ ಕಾರಿನ ಮೇಲೆ ರೂ.10 ಸಾವಿರ ನಗದು ರಿಯಾಯಿತಿ ಹಾಗೂ ರೂ.15 ಸಾವಿರ ವಿನಿಮಯ ಬೋನಸ್ ನೀಡಲಾಗುತ್ತದೆ. ಇದರ ಜೊತೆಗೆ ಕಂಪನಿಯ ಜನಪ್ರಿಯ ವ್ಯಾಗನ್-ಆರ್ ಕಾರಿನ ಪೆಟ್ರೋಲ್ ಮಾದರಿಯ ಮೇಲೆ ರೂ.8,000 ನಗದು ರಿಯಾಯಿತಿ ನೀಡಿದರೆ, ಸಿಎನ್‌ಜಿ ಮಾದರಿಯ ಮೇಲೆ ರೂ.13,000 ರಿಯಾಯಿತಿ ನೀಡಲಾಗುತ್ತದೆ.

ವಿವಿಧ ಕಾರುಗಳ ಮೇಲೆ ವಿಶೇಷ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ತನ್ನ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ ರೂ.15 ಸಾವಿರ ನಗದು ಇಲ್ಲವೆ ರೂ. 18 ಸಾವಿರ ಎಕ್ಸ್‌ಚೆಂಜ್ ಲಭ್ಯವಿದ್ದು, ಸ್ವಿಫ್ಟ್‌ ಕಾರಿನ ಎಲ್‌ಎಕ್ಸ್‌ಐ ರೂಪಾಂತರದ ಮೇಲೆ ರೂ.30 ಸಾವಿರ ನಗದು ರಿಯಾಯಿತಿ ನೀಡುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ವಿವಿಧ ಕಾರುಗಳ ಮೇಲೆ ವಿಶೇಷ ಆಫರ್ ಘೋಷಿಸಿದ ಮಾರುತಿ ಸುಜುಕಿ

ಸ್ವಿಫ್ಟ್ ಕಾರಿನ ಇತರೆ ಮಾದರಿಗಳ ಬೆಲೆ 10 ಸಾವಿರದಿಂದ ರೂ. 20 ಸಾವಿರ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದ್ದು, ವಿಟಾರಾ ಬ್ರೆಝಾ ಮೇಲೆ ರೂ. 10 ಸಾವಿರ ನಗದು ರಿಯಾಯಿತಿ ಮತ್ತು ರೂ. 20 ಸಾವಿರಿ ವಿನಿಮಯ ಬೋನಸ್ ಘೋಷಣೆ ಮಾಡಿದೆ.

ವಿವಿಧ ಕಾರುಗಳ ಮೇಲೆ ವಿಶೇಷ ಆಫರ್ ಘೋಷಿಸಿದ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಹೊಸ ದರ ಪಟ್ಟಿ ಬಿಡುಗಡೆ ಮಾಡಲು ಕಂಪನಿಯು ಅಂತಿಮ ಸಿದ್ದತೆ ನಡೆಸಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ವಿವಿಧ ಕಾರುಗಳ ಮೇಲೆ ವಿಶೇಷ ಆಫರ್ ಘೋಷಿಸಿದ ಮಾರುತಿ ಸುಜುಕಿ

ಬಿಡಿಭಾಗಗಳ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಕಾರುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದಿರುವ ಕಂಪನಿಯು ವಿವಿಧ ವೆರಿಯೆಂಟ್ ಮತ್ತು ಬ್ರಾಂಡ್‌ಗಳಿಗೆ ಅನುಗುಣವಾಗಿ ಶೇ.1 ರಿಂದ ಶೇ.2 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ.

ವಿವಿಧ ಕಾರುಗಳ ಮೇಲೆ ವಿಶೇಷ ಆಫರ್ ಘೋಷಿಸಿದ ಮಾರುತಿ ಸುಜುಕಿ

2021ರ ಅವಧಿಯಲ್ಲೇ ಈಗಾಗಲೇ ಒಂದು ಬಾರಿ ಬಹುತೇಕ ಹೊಸ ವಾಹನಗಳ ಬೆಲೆ ಹೆಚ್ಚಳವಾಗಿದ್ದು, ಇದೀಗ ಎರಡನೇ ಬಾರಿಗೆ ಏಪ್ರಿಲ್‌ನಲ್ಲಿ ಮತ್ತೆ ಹೊಸ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತಿದೆ. ಈ ಹಿಂದೆ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಕಂಪನಿಗಳು ಬಿಡಿಭಾಗಗಳ ವೆಚ್ಚವು ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

ವಿವಿಧ ಕಾರುಗಳ ಮೇಲೆ ವಿಶೇಷ ಆಫರ್ ಘೋಷಿಸಿದ ಮಾರುತಿ ಸುಜುಕಿ

ಬೆಲೆ ಪರಿಷ್ಕರಣೆಯಿಂದಾಗಿ ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿದ್ದು, ಕಳೆದ ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 50 ಸಾವಿರದಿಂದ ರೂ.1 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

Most Read Articles

Kannada
English summary
Maruti Suzuki Announced Some Attractive Offers And Discounts For 2021 April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X