Just In
- 10 min ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 1 hr ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 2 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
- 3 hrs ago
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
Don't Miss!
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- News
ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Sports
ಚೇತನ್ ಸಕಾರಿಯಾ ಕುಟುಂಬದ ದುರಂತ ಕತೆ ಬಿಚ್ಚಿಟ್ಟ ಸೆಹ್ವಾಗ್
- Lifestyle
ಮಂಗಳವಾರದ ದಿನ ಭವಿಷ್ಯ: ಯುಗಾದಿಯಂದು ಹೇಗಿದೆ ನಿಮ್ಮ ರಾಶಿಫಲ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಮುಖ ಕಾರು ಮಾದರಿಗಳ ನ್ಯೂ ಜನರೇಷನ್ ಆವೃತ್ತಿಗಳ ಬಿಡುಗಡೆಗೆ ಸಿದ್ದವಾದ ಮಾರುತಿ ಸುಜುಕಿ
ಮಾರುತಿ ಸುಜುಕಿ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳೊಂದಿಗೆ ಕಾರು ಮಾರಾಟದಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸುವ ಸುಳಿವು ನೀಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಮಾದರಿಗಳ ಮಾರಾಟವನ್ನು ಹೊಂದಿರುವ ಮಾರುತಿ ಸುಜುಕಿಯು ಟಾಪ್ 10 ಕಾರುಗಳ ಮಾರಾಟ ಪಟ್ಟಿಯಲ್ಲಿ ಒಟ್ಟು 7 ಕಾರು ಮಾದರಿಗಳ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು, ಮುಂದಿನ 3 ವರ್ಷಗಳ ಅವಧಿಗಾಗಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದೆ. ಮಾಹಿತಿಗಳ ಪ್ರಕಾರ ಮಾರುತಿ ಕಂಪನಿಯು 2021ರ ಆರಂಭದಿಂದ 2023ರ ಅಂತ್ಯದೊಳಗೆ ಒಟ್ಟು ಆರು ಹೊಸ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಹೊಸ ಎಸ್‌ಯುವಿ ಕಾರುಗಳ ಪಟ್ಟಿಯಲ್ಲಿ ಮೆಡ್ ಇನ್ ಇಂಡಿಯಾ ಜಿಮ್ನಿ ಮತ್ತು ವಿಟಾರಾ ಫುಲ್ ಸೈಜ್ ಎಸ್‌ಯುವಿ ಸೇರಿದಂತೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ, ಬಲೆನೊ, ಆಲ್ಟೊ ಮತ್ತು ಸ್ವಿಫ್ಟ್ ಕಾರುಗಳ ಹೊಸ ತಲೆಮಾರಿನ ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆ.

ಪ್ರತಿ ಆರು ತಿಂಗಳಿಗೆ ಒಂದರಂತೆ ಹೊಸ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಮಾರುತಿ ಸುಜುಕಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರಿಗೆ ಪೈಪೋಟಿಯಾಗಿ ಹೊಸ ವಿಟಾರಾ ಬ್ರೆಝಾ ಕಾರು ಮಾದರಿಯನ್ನು ಭಾರೀ ಬದಲಾವಣೆಗಳೊಂದಿಗೆ ಅಭಿವೃದ್ದಿಗೊಳಿಸುತ್ತಿದೆ.

ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ಹೊಸ ವಿಟಾರಾ ಬ್ರೆಝಾ ಮಾದರಿಯು 2022ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಹೊಸ ಎಂಜಿನ್ ಆಯ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಬಿಎಸ್-6 ಎಮಿಷನ್ ಜಾರಿ ನಂತರ ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸಿರುವ ಮಾರುತಿ ಸುಜುಕಿ ಬಜೆಟ್ ಕಾರುಗಳ ಮಾದರಿಗಳ ಮಾರಾಟದ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಹೊಸ ಎಮಿಷನ್ ಜಾರಿ ನಂತರ ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಮಾರುತಿ ಸುಜುಕಿ ಕಂಪನಿಯು ಪೆಟ್ರೋಲ್, ಪೆಟ್ರೋಲ್ ಸ್ಮಾರ್ಟ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದೆ.

ಇದರಲ್ಲಿ ಹೊಸ ತಲೆಮಾರಿನ ಆಲ್ಟೊ, ಬಲೆನೊ ಮತ್ತು ಸ್ವಿಫ್ಟ್ ಸೇರಿದಂತೆ ಹೊಚ್ಚ ಹೊಸ ಕಾರು ಮಾದರಿಯಾದ ವಿಟಾರಾ ಎಸ್‌ಯುವಿ ಕೂಡಾ ಒಂದಾಗಿದ್ದು, ವಿಟಾರಾ ಬ್ರೆಝಾ ಕಾರುಗಳಿಂತಲೂ ವಿಭಿನ್ನವಾಗಿರುವ ವಿಟಾರಾ ಎಸ್‌ಯುವಿ ಕಾರು ಎಸ್ ಕ್ರಾಸ್ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿದೆ.

ಹೊಸ ವಿಟಾರಾ ಎಸ್‌ಯುವಿ ಮಾದರಿಯು 2021ರ ಎರಡನೇ ತ್ರೈಮಾಸಿಕ ಅವಧಿಗೆ ಭಾರತದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಈ ಕಾರು ಕೂಡಾ ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.
MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನು ಈಗಾಗಲೇ ಭಾರತದಲ್ಲಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸಲಾಗಿದ್ದು, ಹೊಸ ಕಾರಿನ ಡಿಸೈನ್‌ಗಳು ಎಸ್‌ಯುವಿ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಾರುತಿ ಸುಜುಕಿ ಕಂಪನಿಯು ಈ ಹಿಂದಿನ ವಿಟಾರಾ ಗ್ರ್ಯಾಂಡ್ ಎಸ್‌ಯುವಿ ಮಾರಾಟದಲ್ಲಿ ಆದ ಹಿನ್ನಡೆಯನ್ನು ಹೊಸ ಕಾರಿನ ಮೂಲಕ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಹೊಸ ಕಾರಿನ ಮೂಲಕ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ಯೋಜನೆಯಲ್ಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮಿಡ್ ರೇಂಜ್ ಎಸ್‍ಯುವಿ ವೈಶಿಷ್ಟ್ಯತೆ ಹೊಂದಿರುವ ವಿಟಾರಾ ಕಾರು ಹತ್ತು ಹಲವು ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರು ಮಾರುತಿ ಸುಜುಕಿ ಕಂಪನಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ವಿಟಾರಾ ಕಾರು 5 ಸೀಟರ್ ಮತ್ತು 7 ಸೀಟರ್ ಆವೃತ್ತಿಯಲ್ಲಿ ಬರಲಿದೆ ಎನ್ನಲಾಗಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಯಾವುದೇ ನಿಖರ ಮಾಹಿತಿಗಳಿಲ್ಲ.