ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ (Mercedes Benz) ಭಾರತದಲ್ಲಿ ಸದ್ಯ ಮುಂಚೂಣಿ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಕಂಪನಿಯು ಕೋವಿಡ್ ಅಬ್ಬರದ ನಡುವೆಯೂ ಭರ್ಜರಿ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರು ಮಾರಾಟ ವಿಭಾಗದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, 2021ರ ಮೂರನೇ ತ್ರೈಮಾಸಿಕ ಅವಧಿಯಲ್ಲಿ 4101 ಕಾರುಗಳನ್ನು ಮಾರಾಟ ಮಾಡುವ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯ ಕಳೆದ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿನ ಕಾರು ಮಾರಾಟ ಪ್ರಮಾಣಕ್ಕಿಂತಲೂ ಶೇ.99ರಷ್ಟು ಬೆಳವಣಿಗೆ ಸಾಧಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು ಕೇವಲ 2060 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಿತ್ತು.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಮೂರನೇ ತ್ರೈಮಾಸಿಕ ಅವಧಿಯಾದ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿನ ಐಷಾರಾಮಿ ಕಾರು ಮಾರಾಟದಲ್ಲಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಭಾರತದಲ್ಲಿ ಸದ್ಯ ಜಮರ್ನ್ ಕಾರು ಕಂಪನಿಯು ಒಟ್ಟು 24 ವಿವಿಧ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 24 ಕಾರು ಮಾದರಿಗಳಲ್ಲಿ 13 ಕಾರು ಮಾದರಿಗಳನ್ನು ಸ್ಥಳೀಯವಾಗಿ ಉತ್ಪಾದನೆಗೊಳ್ಳುತ್ತಿರುವ ಕಾರು ಮಾದರಿಗಳಾಗಿವೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಇ-ಕ್ಲಾಸ್, ಜಿಎಲ್ಎ, ಜಿಎಲ್‌ಸಿ ಎಫ್ಎಲ್, ಎಸ್-ಕ್ಲಾಸ್, ಜಿಎಲ್ಎಸ್ ಮೇಬ್ಯಾಚ್, ಎಎಂಜಿ ಎ35, ಎಎಂಜಿ ಜಿಎಲ್ಎ 35, ಎಎಂಜಿ ಇ53, ಎಎಂಜಿ ಇ63 ಮತ್ತು ಎಎಂಜಿ ಜಿಎಲ್ಇ63 ಎಸ್ ಮಾದರಿಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣ ಮಾಡುತ್ತಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಇನ್ನುಳಿದ ಕಾರು ಮಾದರಿಗಳನ್ನು ಕೇಂದ್ರ ಸರ್ಕಾರದ ಹೊಸ ಆಮದು ನೀತಿಯಲ್ಲಿ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಕಂಪನಿಯು ಹೊಸ ಉತ್ಪನ್ನಗಳೊಂದಿಗೆ 2021ರ ಮೊದಲ ತ್ರೈಮಾಸಿಕ ಅವಧಿಯಲ್ಲಿ 3193 ಯುನಿಟ್, ಎರಡನೇ ತ್ರೈಮಾಸಿಕ ಅವಧಿಯಲ್ಲಿ 1664 ಯುನಿಟ್ ಮತ್ತು ಮೂರನೇ ತ್ರೈಮಾಸಿಕ ಅವಧಿಯಲ್ಲಿ 4101 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಕಂಪನಿಯ ಪ್ರಮುಖ 24 ಕಾರು ಮಾದರಿಗಳಲ್ಲಿ ಸದ್ಯ ಜಿಎಲ್‌ಸಿ, ಜಿಎಲ್ಇ, ಜಿಎಲ್ಎಸ್, ಜಿಎಲ್ಎಸ್ ಮೇಬ್ಯಾಚ್, ಎಸ್-ಕ್ಲಾಸ್ ಮತ್ತು ಎಎಂಜಿ ಕಾರು ಮಾದರಿಗಳು ಹೆಚ್ಚಿನ ಬೇಡಿಕೆ ಹೊಂದಿದ್ದು, 2021ರ ಆರಂಭದಿಂದ ಕಂಪನಿಯು ಇದುವರೆಗೆ ಕಂಪನಿಯು ಒಟ್ಟು 8,958 ಯುನಿಟ್ ಐಷಾರಾಮಿ ಕಾರುಗಳನ್ನು ಮಾಡಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಭಾರತದಲ್ಲಿ ಕಾರು ಉತ್ಪಾದನೆ ಆರಂಭಿಸಿದ ನಂತರ ಹಲವಾರು ಹೊಸ ಬದಲಾವಣೆಗಳೊಂದಿಗೆ ತಂತ್ರಜ್ಞಾನ ಉನ್ನತೀಕರಣ ಹೊಂದಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಕಳೆದ 10 ವರ್ಷಗಳಲ್ಲಿ 1 ಲಕ್ಷ ಯುನಿಟ್ ಐಷಾರಾಮಿ ಕಾರುಗಳನ್ನು ಭಾರತದಲ್ಲಿಯೇ ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಯ ಜೊತೆಗೆ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ರಫ್ತು ಮಾಡಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ನವೀಕೃತ ಕಾರ್ ಕನೆಕ್ಟೆಡ್ ಕಾರುಗಳಿಗೆ ಬೇಡಿಕೆ ಹೆಚ್ಚಿದ ನಂತರ ಇದುವರೆಗೆ ಕಂಪನಿಯು ಭಾರತದಲ್ಲಿಯೇ ಸುಮಾರು 43 ಸಾವಿರ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಕಾರ್ ಕನೆಕ್ಟ್ ಫೀಚರ್ಸ್ ಉನ್ನತೀಕರಣದಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಕೋವಿಡ್ ಅಬ್ಬರದಿಂದಾಗಿ ಈ ವರ್ಷದ ಮಧ್ಯಂತರದಲ್ಲಿನ ಕಾರು ಮಾರಾಟದಲ್ಲಿ ತುಸು ಕುಸಿತ ಕಂಡರೂ ಪರಿಸ್ಥಿತಿಗೆ ಅನುಗುಣವಾಗಿ ಇದೀಗ ವಾಹನ ಮಾರಾಟವು ಸುಧಾರಣೆ ಕಂಡಿದ್ದು, ಐಷಾರಾಮಿ ಕಾರು ಮಾರಾಟ ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಹಲವು ವರ್ಷಗಳಿಂದ ಸತತವಾಗಿ ನಂ.1 ಸ್ಥಾನ ಕಾಯ್ದುಕೊಳ್ಳುತ್ತಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಇನ್ನು ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟವನ್ನು ಸರಳಗೊಳಿಸಲು ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಕಂಪನಿಯು ಹೊಸ ಮಾದರಿಯ ಮಾರಾಟ ವೈಶಿಷ್ಟ್ಯತೆಗಳನ್ನು ಒಳಗೊಂಡ ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ಕಾರ್ಯನಿರ್ವಹಣೆಯು ಈ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಗೆ ಅಧಿಕೃವಾಗಿ ಜಾರಿಗೆ ಬರಲಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಐಷಾರಾಮಿ ಕಾರು ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರು ಮತ್ತು ಕಂಪನಿಯ ನಡುವೆ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಹೊಸ ಕಾರು ಮಾರಾಟ ಪ್ರಕ್ರಿಯೆಯಲ್ಲಿ ಫ್ರ್ಯಾಂಚೈಸ್ ಪಾಲುದಾರರ ಕನಿಷ್ಠ ಹಸ್ತಕ್ಷೇಪದೊಂದಿಗೆ ನೇರವಾಗಿ ಕಂಪನಿಯೇ ಗ್ರಾಹಕರೊಂದಿಗೆ ವ್ಯವಹರಿಸಲಿದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಹೊಸ ಯೋಜನೆಯಿಂದ ಫ್ರ್ಯಾಂಚೈಸ್ ಪಾಲುದಾರರು ಸ್ಟಾಕ್ ಪ್ರಮಾಣದಿಂದ ಅನುಭವಿಸುತ್ತಿದ್ದ ಆರ್ಥಿಕ ಸಂಕಷ್ಟವನ್ನು ತಡೆಯಲು ಹೊಸ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದ್ದು, ಇದು ಪ್ರಸ್ತುತ ಮಾರಾಟ ಮಾದರಿಗಿಂತಲೂ ಭಿನ್ನವಾಗಿರುತ್ತದೆ.

Mercedes Benz ಐಷಾರಾಮಿ ಕಾರುಗಳಿಗೆ ಭರ್ಜರಿ ಬೇಡಿಕೆ

ಅಂದರೆ ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಾದ್ಯಂತದ ಎಲ್ಲಾ ಗ್ರಾಹಕರಿಗೆ ಒಂದೇ ಬೆಲೆಗಳನ್ನು ನಿಗದಿಪಡಿಸಲಿದ್ದು, ಕಾರು ಮಾರಾಟವನ್ನೇ ಕಂಪನಿಯೇ ನಿರ್ವಹಿಸಿದರೂ ವಿತರಣೆಗಾಗಿ ಶೋರೂಂಗಳ ಮೂಲಕ ಪಡೆದುಕೊಳ್ಳಬೇಕಿರುತ್ತದೆ.

Most Read Articles

Kannada
English summary
Mercedes benz india shared q3 2021 sales report details
Story first published: Saturday, October 9, 2021, 20:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X