ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

2030ರಿಂದ ವಿವಿಧ ಕಾರು ಉತ್ಪಾದನಾ ಕಂಪನಿಗಳು ಸಂಪೂರ್ಣವಾಗಿ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಿ ಕೇವಲ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹಂತ-ಹಂತವಾಗಿ ಹೆಚ್ಚಿಸಲಾಗುತ್ತಿದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ಇವಿ ನೀತಿಗಳ ಪರಿಣಾಮ ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟವದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬರುತ್ತಿದ್ದು, ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ಕೂಡಾ ಈಗಾಗಲೇ ಇಕ್ಯೂಸಿ 400, ಇಕ್ಯೂಎ ಎಲೆಕ್ಟ್ರಿಕ್ ಎಸ್‌ಯುವಿಯೊಂದಿಗೆ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ದುಬಾರಿ ಬೆಲೆ ನಡುವೆಯು ಹೊಸ ಇವಿ ಕಾರು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಮರ್ಸಿಡಿಸ್ ಬೆಂಝ್ ಕಂಪನಿಯು 2023ರ ವೇಳೆಗೆ ಒಟ್ಟು 6 ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಮಾರಾಟ ಹೊಂದಿರುವ ಗುರಿಹೊಂದಿದ್ದು, 2030ರ ವೇಳೆಗೆ ಸಂಪೂರ್ಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಲಿದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ಮರ್ಸಿಡಿಸ್ ಬೆಂಝ್ ಹೊಸ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಸೂಪರ್ ಕಾರು ಮಾದರಿಗಳು ಸಹ ಒಳಗೊಂಡಿದ್ದು, ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳ್ಳಲಿರುವ ಭವಿಷ್ಯದ ಮರ್ಸಿಡಿಸ್ ಬೆಂಝ್ ಕಾರುಗಳು ಪ್ರತಿ ಚಾರ್ಜ್‌ಗೆ 1 ಸಾವಿರ ಕಿ.ಮೀ ಮೈಲೇಜ್ ಹಿಂದಿರುಗಿಸುವ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿವೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ಹೊಸ ಯೋಜನೆಗಾಗಿ ಮರ್ಸಿಡಿಸ್ ಬೆಂಝ್ ಕಂಪನಿಯು ವಿಶ್ವಾದ್ಯಂತ ಕಾರ್ಯನಿರ್ವಹಣೆಯಲ್ಲಿರುವ ಪ್ರಮುಖ ಕಾರು ಉತ್ಪಾದನಾ ಘಟಕ ಉನ್ನತೀಕರಣಕ್ಕಾಗಿ ಅಂದಾಜು ರೂ. 3.50 ಲಕ್ಷ ಕೋಟಿ ಹೂಡಿಕೆ ಮಾಡುತ್ತಿದ್ದು, ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳು, ಎಲೆಕ್ಟ್ರಿಕ್ ಸ್ಪೋರ್ಟ್ ವೆಹಿಕಲ್ ಮತ್ತು ಎಲೆಕ್ಟ್ರಿಕ್ ಕಮರ್ಷಿಯಲ್ ವೆಹಿಕಲ್ ವಿಭಾಗಗಳ ಮೇಲೆ ಪ್ರತ್ಯೇಕವಾಗಿ ಹೂಡಿಕೆ ಮಾಡುತ್ತಿದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ಸದ್ಯ ಇಕ್ಯೂಸಿ 400, ಇಕ್ಯೂಎ ಎಲೆಕ್ಟ್ರಿಕ್ ಕಾರುಗಳ ಮೂಲಕ ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಉತ್ಪನ್ನಗಳಿಗಾಗಿ ಕಂಪನಿಯು ನಿರಂತರವಾಗಿ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದೆ. ಮರ್ಸಿಡಿಸ್ ಬೆಂಝ್ ಮುಂದಿನ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಇಕ್ಯೂಇ ಎಸ್‌ಯುವಿ ಸಲೂನ್ ಮಾದರಿಯು ಬಿಡುಗಡೆಯಾಗುತ್ತಿದ್ದು, ಹೊಸ ಕಾರು ಇಕ್ಯೂಎಸ್ ಕಾರು ಮಾದರಿಯ ಪ್ಲ್ಯಾಟ್‌ಫಾರ್ಮ್ ಆಧರಿಸಿ ನಿರ್ಮಾಣ ಕೈಗೊಂಡಿದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಇಕ್ಯೂಇ ಕಾರಿನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ಸ್‌ಗಳನ್ನು ಅಳವಡಿಸಿದ್ದು, ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನು ಕಂಪನಿಯು 2022ರ ಆರಂಭದಲ್ಲಿ ಅನಾವರಣಗೊಳಿಸುವ ಸಿದ್ದತೆಯಲ್ಲಿದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ಮಧ್ಯಮ ಕ್ರಮಾಂಕದ ಎಲೆಕ್ಟ್ರಿಕ್ ಸೆಡಾನ್ ಮಾದರಿಗಳಿಗಾಗಿ ಕಂಪನಿಯು ಬೆಸ್ಪೋಕ್ ಎಲೆಕ್ಟ್ರಿಕ್ MEA (ಅಥವಾ EVA2) ಪ್ಲಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದು, ಹೊಸ ಕಾರು ಇಕ್ಯೂಸಿ 400, ಇಕ್ಯೂಎಸ್ ಎಲೆಕ್ಟ್ರಿಕ್ ಕಾರು ಮಾದರಿಗಳಿಂತಲೂ ವಿಭಿನ್ನವಾದ ಸ್ಟೈಲ್ ಮತ್ತು ತಂತ್ರಜ್ಞಾನ ಪ್ರೇರಣೆ ಹೊಂದಲಿದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ಜೊತೆಗೆ ಹೈಪರ್ ಸ್ಕ್ರೀನ್ ಸೌಲಭ್ಯವನ್ನು ಹೊಂದಿರುವ ಹೊಸ ಇಕ್ಯೂಇ ಎಸ್‌ಯುವಿ ಸಲೂನ್ ಮಾದರಿಯ ಡ್ಯಾಶ್‍ಬೋರ್ಡ್‌ ಮೂಲಕ ಒಂದೇ ಸೂರಿನಡಿ ಹಲವಾರು ತಾಂತ್ರಿಕ ಅಂಶಗಳನ್ನು ನಿಯಂತ್ರಿಸಬಹುದಾಗಿದ್ದು, ಹೊಸ ಫೀಚರ್ಸ್‌ಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ಇನ್ನು ಇಕ್ಯೂಇ ಆಧರಿಸಿರುವ ಇಕ್ಯೂಎಸ್ 580 ಆಲ್ ವೀಲ್ಹ್ ಡ್ರೈವ್ ವ್ಯವಸ್ಥೆಯೊಂದಿಗೆ ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ಯುರೋಪ್ ಮತ್ತು ಅಮೆರಿಕದ ಪ್ರಮುಖ ಮಾರುಕಟ್ಟೆಗಳನ್ನು ಪ್ರವೇಶಿಸಲಿದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ತದನಂತರವಷ್ಟೇ ಭಾರತದಲ್ಲೂ ಬಿಡುಗಡೆಯಾಗಲಿರುವ ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟಗೊಳ್ಳುತ್ತಿರುವ ಇಕ್ಯೂಸಿ 400 ಮಾದರಿಗಿಂತ ಕೆಳದರ್ಜೆಯಲ್ಲಿ ಮಾರಾಟವಾಗಲಿದ್ದರೂ ಹೆಚ್ಚಿನ ಮಟ್ಟದ ಮೈಲೇಜ್‌ನೊಂದಿಗೆ ಗ್ರಾಹಕರನ್ನು ಸೆಳೆಯಲಿದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ಮರ್ಸಿಡಿಸ್ ಬೆಂಝ್ ಮುಂದಿನ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಇಕ್ಯೂಎಸ್ ಸೆಡಾನ್ ಮಾದರಿಯು ಬಿಡುಗಡೆಯಾಗುತ್ತಿದ್ದು, ಹೊಸ ಕಾರನ್ನು ಎಂಟ್ರಿ ಲೆವಲ್ ಕಾರು ಮಾದರಿಗಳ ಪ್ಲ್ಯಾಟ್‌ಫಾರ್ಮ್ ಆಧರಿಸಿ ನಿರ್ಮಾಣ ಕೈಗೊಂಡಿದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ಸ್‌ಗಳನ್ನು ಅಳವಡಿಸಿದ್ದು, ಹೊಸ ಕಾರು ಆಲ್ ವ್ಹೀಲ್ ಡ್ರೈವ್ ಮತ್ತು ರಿಯರ್ ವ್ಹೀಲ್ ಡ್ರೈವ್ ಆಯ್ಕೆ ಪಡೆದುಕೊಳ್ಳಲಿದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ವಿವಿಧ ಮಾರುಕಟ್ಟೆಗಳಿಗಾಗಿ ರಿಯರ್ ವ್ಹೀಲ್ ಡ್ರೈವ್ ಆಯ್ಕೆಯನ್ನು ನೀಡಲಾಗುತ್ತಿದ್ದು, ಹೊಸ ಡ್ರೈವ್ ಸಿಸ್ಟಂ ಮೂಲಕ ಸುಮಾರು 10 ಡಿಗ್ರಿಗಳವರೆಗೂ ತಿರುಗಲು ಅನುವು ಮಾಡಿಕೊಡುತ್ತದೆ.

ಪ್ರತಿ ಚಾರ್ಜ್‌ಗೆ 416 ಕಿ.ಮೀ ಮೈಲೇಜ್ ನೀಡಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಇ ಎಸ್‌ಯುವಿ

ಜೊತೆಗೆ ಹೈಪರ್ ಸ್ಕ್ರೀನ್ ಸೌಲಭ್ಯವನ್ನು ಹೊಂದಿರುವ ಹೊಸ ಇಕ್ಯೂಎಸ್ ಸೆಡಾನ್ ಮಾದರಿಯು ಡ್ಯಾಶ್‍ಬೋರ್ಡ್‌ನಲ್ಲಿ ನಿಯಂತ್ರಿಸಬಹುದಾದ ಸುಮಾರು ಫೀಚರ್ಸ್‌ಗಳನ್ನು ನೀಡಿದ್ದು, ಹೊಸ ಕಾರು ಇಕ್ಯೂಎಸ್ 450 ಪ್ಲಸ್ ಮತ್ತು ಇಕ್ಯೂಎಸ್ 580 ಎರಡು ವೆರಿಯೆಂಟ್‌ಗಳೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 770 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

Most Read Articles

Kannada
English summary
Mercedes benz new eqe to be unveiled in 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X