ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿಯ ಟೀಸರ್ ಬಿಡುಗಡೆ

ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಬಿಡುಗಡೆಗೊಳಿಸುವ ಗುರಿಯನ್ನು ಹೊಂದಿದೆ. ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಇಂಧನ ಚಾಲಿತ ವಾಹನಗಳನ್ನು ಕೈಬಿಟ್ಟು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖಮಾಡುತ್ತಿದ್ದಾರೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿಯ ಟೀಸರ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಕಂಪನಿಯು ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಇಕ್ಯೂ, ಎಲೆಕ್ಟ್ರಿಕ್ ಇಕ್ಯೂಎಸ್ ಎಸ್‌ಯುವಿ, ಎಲೆಕ್ಟ್ರಿಕ್ ಜಿ-ಕ್ಲಾಸ್ ಮತ್ತು ಮರ್ಸಿಡಿಸ್-ಮೇಬ್ಯಾಕ್ ಎಕ್ಯೂಎಸ್ ಎಸ್‍ಯುವಿಗಳು ಬಿಡುಗಡೆಯಾಗಲಿದೆ. ಮರ್ಸಿಡಿಸ್ ಬೆಂಜ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ಮುಖ್ಯಸ್ಥ ಬ್ರಿಟ್ಟಾ ಸೀಗರ್ ಅವರು ಜಿಟಲ್ ಸಮ್ಮೇಳನದಲ್ಲಿ ಇಕ್ಯೂ ಎಸ್‌ಯುವಿ ಮತ್ತು ಇಕ್ಯೂಎಸ್ ಎಸ್‌ಯುವಿ ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಇಕ್ಯೂಎಸ್ ಎಸ್‌ಯುವಿಯ ಮರ್ಸಿಡಿಸ್-ಮೇಬ್ಯಾಕ್ ಆವೃತ್ತಿ ಕೂಡ ಇದೇ ಹಾದಿಯಲ್ಲಿದೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿಯ ಟೀಸರ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಕಂಪನಿಯು ಬಿಡುಗಡೆಯಾಗಲಿರುವ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿಗಾಗಿ ಮೊದಲ ಅಧಿಕೃತ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯು ಜರ್ಮನ್ ಕಾರು ತಯಾರಕರ ಇವಿಎ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ನಿರೀಕ್ಷಿಸುತ್ತೇವೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿಯ ಟೀಸರ್ ಬಿಡುಗಡೆ

ಹೊಸ ಮೇಬ್ಯಾಕ್ ಇಕ್ಯೂಎಸ್ ಎಲೆಕ್ಟ್ರಿಕ್ ಎಸ್‍ಯುವಿಯು 770 ಕಿಲೋಮೀಟರ್ ರೇಂಜ್ ಅನ್ನು ನೀಡಬಹುದು. ಮುಂಬರುವ ಮರ್ಸಿಡಿಸ್-ಮೇಬ್ಯಾಕ್ ಇಕ್ಯೂಎಸ್ ಎಲೆಕ್ಟ್ರಿಕ್ ಎಸ್‌ಯುವಿ ಮುಂದಿನ ದಿನಗಳಲ್ಲಿ ಮರ್ಸಿಡಿಸ್ ಕಂಪನಿಯ ಪ್ರಮುಖ ಇವಿ ಮಾದರಿಯಾಗಲಿದೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿಯ ಟೀಸರ್ ಬಿಡುಗಡೆ

ವರದಿಗಳ ಪ್ರಕಾರ, ಮೇಬ್ಯಾಕ್ ಇಕ್ಯೂಎಸ್ ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿದ್ದು, ಇದು ಮೇಬ್ಯಾಕ್ ಮಾದರಿಗಳಲ್ಲಿ ಸಾಮಾನ್ಯವಾಗಿದೆ. ಇದು ಜರ್ಮನಿಯ ಆಟೋ ದೈತ್ಯದಿಂದ ಇಕ್ಯೂಎಸ್ ಐಷಾರಾಮಿ ಸೆಡಾನ್ ಎಲೆಕ್ಟ್ರಿಕ್ ಮಾದರಿಯಂತಹ ಹೆಡ್‌ಲೈಟ್‌ಗಳಿಂದ ಸುತ್ತುವರೆದಿರುವ ದೊಡ್ಡ ಗ್ರಿಲ್ ಅನ್ನು ನೀಡುವ ಸಾಧ್ಯತೆಯಿದೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿಯ ಟೀಸರ್ ಬಿಡುಗಡೆ

ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿ ಎಲೆಕ್ಟ್ರಿಕ್ ಇಕ್ಯೂಎಸ್ ಸೆಡಾನ್‌ನಿಂದ ಇತರ ಕೆಲವು ಸ್ಟೈಲಿಂಗ್ ಅಂಶಗಳನ್ನು ಸಹ ಎರವಲು ಪಡೆಯುವ ಸಾಧ್ಯತೆಯಿದೆ. ಇಕ್ಯೂಎಸ್ ಎಸ್‌ಯುವಿ ಮಾದರಿಯ ಕೆಲವು ವಿಶೇಷಣಗಳು ಸಹ ಅದೇ ಕಾರಿನಿಂದ ಎರವಲು ಪಡೆಯುವ ಸಾಧ್ಯತೆಯಿದೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿಯ ಟೀಸರ್ ಬಿಡುಗಡೆ

ಇದು ಇಕ್ಯೂಎಸ್ ಸೆಡಾನ್‌ಗೆ ಶಕ್ತಿ ತುಂಬುವ ಬ್ಯಾಟರಿ ಪ್ಯಾಕ್‌ಗಳ ಒಂದೇ ಗುಂಪನ್ನು ಪಡೆಯುವ ಸಾಧ್ಯತೆಯಿದೆ. ಇದು 90 ಕಿ.ವ್ಯಾಟ್ ಮತ್ತು 108 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಗಳಾಗಿರುತ್ತದೆ. ಇದು 200 ಕಿ.ವ್ಯಾಟ್ ವೇಗದ ಚಾರ್ಜರ್‌ಗೆ ಪ್ಲಗ್ ಮಾಡಿದರೆ 15 ನಿಮಿಷಗಳಲ್ಲಿ 300 ಕಿ.ಮೀ.ವರೆಗೆ ಚಲಿಸಿವಂತೆ ವಾಹನವನ್ನು ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿವೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿಯ ಟೀಸರ್ ಬಿಡುಗಡೆ

ಈ ಎರಡು ಸೆಟ್ ಬ್ಯಾಟರಿ ಪ್ಯಾಕ್‌ಗಳಿಂದ ಚಾಲಿತವಾಗಿದ್ದರೆ, ಇಕ್ಯೂಎಸ್ ಎಲೆಕ್ಟ್ರಿಕ್ ಎಸ್‌ಯುವಿ ರೇಂಜ್ ರೀಚಾರ್ಜ್ ಮಾಡದೆಯೇ 643 ಕಿ.ಮೀ.ವರೆಗೆ ಹೋಗಬಹುದು. ಇದು ಇಕ್ಯೂಎಸ್ ಸೆಡಾನ್ ಅನ್ನು ಚಾಲನೆ ಮಾಡುವ ಅದೇ ಎಲೆಕ್ಟ್ರಿಕ್ ಮೋಟರ್ ಅನ್ನು ಎರವಲು ಪಡೆಯುವ ಸಾಧ್ಯತೆಯಿದೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿಯ ಟೀಸರ್ ಬಿಡುಗಡೆ

ಒಳಭಾಗದಲ್ಲಿ ಮೇಬ್ಯಾಕ್ ಇಕ್ಯೂಎಸ್ ಬ್ರ್ಯಾಂಡ್ ನಿಂದ ಉನ್ನತ-ಮಟ್ಟದ ಐಷಾರಾಮಿ ಮಾದರಿಯಾಗಿ ಎದ್ದು ಕಾಣುವಂತೆ ಕೆಲವು ಸಣ್ಣ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ. ಇಡೀ ಡ್ಯಾಶ್‌ಬೋರ್ಡ್‌ನ ಉದ್ದಕ್ಕೂ ಹರಡಿರುವ ಮರ್ಸಿಡಿಸ್ ಎಂಬಿಎಕ್ಸ್ 'ಹೈಪರ್‌ಸ್ಕ್ರೀನ್' ಇನ್ಫೋಟೈನ್‌ಮೆಂಟ್ ಸಿಸ್ಟಂ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿಗೆ ಪ್ರವೇಶಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಮರ್ಸಿಡಿಸ್ ಮೇಬ್ಯಾಕ್ ಇಕ್ಯೂಎಸ್ ಎಸ್‌ಯುವಿ ಅಧಿಕೃತವಾಗಿ 2022 ರಲ್ಲಿ ಅನಾವರಣಗಲಿದೆ.

Most Read Articles

Kannada
English summary
Mercedes Benz Maybach EQS SUV Teases. Read In Kannada.
Story first published: Saturday, July 24, 2021, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X