ಅನಾವರಣವಾಯ್ತು ಐಷಾರಾಮಿ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಕಾರು

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಹೊಸ ಮೇಬ್ಯಾಕ್ ಎಸ್ 680 ಅಲ್ಟ್ರಾ-ಐಷಾರಾಮಿ ಸೆಡಾನ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಸೆಡಾನ್ ತನ್ನ ಹಿಂದಿನ ಮಾದರಿಯ ವಿನ್ಯಾಸದ ಹೆಚ್ಚಿನ ವಿನ್ಯಾಸ ಅಂಶಗಳನ್ನು ಮುಂದಕ್ಕೆ ಸಾಗಿಸಿದೆ.

ಅನಾವರಣವಾಯ್ತು ಐಷಾರಾಮಿ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಕಾರು

2022ರ ಮರ್ಸಿಡಿಸ್ ಮೇಬ್ಯಾಕ್ ಎಸ್ 680 ಪ್ರೀಮಿಯಂ ಡ್ಯುಯಲ್-ಟೋನ್ ಫಿನಿಶ್ ಮತ್ತು ದೊಡ್ಡ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ. ಅದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಕ್ರೋಮ್ ಅನ್ನು ನೀಡಿದೆ. ಒಳಭಾಗದಲ್ಲಿ ಐದು ಸ್ಕ್ರೀನ್ ಗಳನ್ನು ಒಳಗೊಂಡಿದೆ. ಅವುಗಳಲ್ಲಿ ಒಂದು 12.3-ಇಂಚಿನ ಡ್ರೈವರ್ ಡಿಸ್ ಪ್ಲೇ ಮತ್ತು ಇನ್ನೊಂದು ಇನ್ಫೋಟೈನ್‌ಮೆಂಟ್ ಯುನಿಟ್ 12.8-ಇಂಚಿನ ಒಎಲ್‌ಇಡಿ ಟಚ್‌ಸ್ಕ್ರೀನ್ ಆಗಿದೆ.

ಅನಾವರಣವಾಯ್ತು ಐಷಾರಾಮಿ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಕಾರು

ಇನ್ನು ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಇದೀಗ ಮ್ಯಾಟಿಕ್ ಆಲ್-ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಬರುತ್ತದೆ. ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಸೆಡಾನ್ ಚಿತ್ರಗಳನ್ನು ಹೊರತುಪಡಿಸಿ ಇತರ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಐಷಾರಾಮಿ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಕಾರು

ಇನ್ನು ಈ ಐಷಾರಾಮಿ ಕಾರಿನಲ್ಲಿ ದೊಡ್ಡ ಡೋರುಗಳನ್ನು ಆಟೋಮ್ಯಾಟಿಕ್ ಆಗಿ ಕಂಟ್ರೋಲ್ ಮಾಡಬಹುದು. ಡೋರ್ ಮನ್ ಫೀಚರ್ ನೆರವಿನಿಂದ ಚಾಲಕನು ಕಾರಿನೊಳಗೆ ಕುಳಿತೇ ಡೋರುಗಳನ್ನು ತೆಗೆಯಬಹುದು ಮತ್ತು ಮುಚ್ಚಬಹುದು.

ಅನಾವರಣವಾಯ್ತು ಐಷಾರಾಮಿ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಕಾರು

ಈ ಐಷಾರಾಮಿ ಕಾರಿನಲ್ಲಿ ಅಡ್ಜಸ್ಟಬಲ್ ಬಕೆಟ್ ಸೀಟ್, ಲೆಗ್ ರೆಸ್ಟ್ ವಿತ್ ಸೀಟ್, ಎಕ್ಸಿಕ್ಯುಟಿವ್ ರೇರ್ ಸೀಟ್, ವುಡ್ ಟ್ರಿಮ್, ಟ್ರೇ ಟೇಬಲ್, ಷಾಂಪೇನ್ ಕೂಲರ್, ಎಲ್'ಸಿಡಿ ಡಿಸ್ ಪ್ಲೇ, ಉದ್ದವಾಗಿರುವ ಕನ್ಸೋಲ್ ಸೇರಿದಂತೆ ಹಲವಾರು ಐಷಾರಾಮಿ ಫೀಚರ್'ಗಳನ್ನು ನೀಡಲಾಗುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಯ್ತು ಐಷಾರಾಮಿ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಕಾರು

ಇನ್ನು ಈ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಕಾರಿನಲ್ಲಿ ಅದೇ 6.0-ಲೀಟರ್ ವಿ 12 ಎಂಜಿನ್ ಅನ್ನು ಹೊಂದಿರುತ್ತದೆ. ಆದರೆ ಈ ಎಂಜಿನ್ ಅನ್ನು ನವೀಕರಿಸಲಾಗುತ್ತದೆ ಮತ್ತು ಹೆಚ್ಚಿನ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಐಷಾರಾಮಿ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಕಾರು

ಇದರ ಹಿಂದಿನ ಮಾದರಿಯಲ್ಲಿದ್ದ 6.0-ಲೀಟರ್ ವಿ 12 ಎಂಜಿನ್ 630 ಬಿಎಚ್‌ಪಿ ಮತ್ತು 1000 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಹೊಸ ಮಾದರಿಯ ಎಂಜಿನ್ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಶೀಘ್ರದಲ್ಲೇ ಬಹಿರಂಗವಾಗುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅನಾವರಣವಾಯ್ತು ಐಷಾರಾಮಿ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಕಾರು

ಮರ್ಸಿಡಿಸ್ ಬೆಂಝ್ ಕಂಪನಿಯು ಇಕ್ಯೂಎ, ಇಕ್ಯೂಬಿ, ಇಕ್ಯೂ ಹಾಗೂ ಇಕ್ಯೂಎಸ್ ಫ್ಲ್ಯಾಗ್‌ಶಿಪ್ ಸೆಡಾನ್‌ಗಳನ್ನು ಇಕ್ಯೂ ಬ್ರ್ಯಾಂಡ್‌ನಡಿ ಬಿಡುಗಡೆಗೊಳಿಸಲಿದೆ. ಕಂಪನಿಯು 2025ರ ವೇಳೆಗೆ 25 ಹೊಸ ಪ್ಲಗ್-ಇನ್ ಹೈಬ್ರಿಡ್ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಅನಾವರಣವಾಯ್ತು ಐಷಾರಾಮಿ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಕಾರು

ಮರ್ಸಿಡಿಸ್-ಮೇಬ್ಯಾಕ್ಎಸ್ 680 ಕಾರು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಅನ್ನು ಆಧರಿಸಿದೆ, ಈ ಐಷಾರಾಮಿ ಮರ್ಸಿಡಿಸ್-ಮೇಬ್ಯಾಕ್ಎಸ್ 680 ಕಾರು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಭಾರತದಲ್ಲಿ ಈ ಹೊಸ ಐಷಾರಾಮಿ ಕಾರು ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
2022 Mercedes-Maybach S680 Revealed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X