ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಎಂಜಿ ಮೋಟಾರ್ ಕಂಪನಿಯು 2019ರಲ್ಲಿ ಹೆಕ್ಟರ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದ ಕೆಲವು ದಿನಗಳಲ್ಲಿಯೇ ಈ ಎಸ್‌ಯುವಿಯು ಜನಪ್ರಿಯತೆಯನ್ನು ಹೊಂದಿತ್ತು.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಯಾವುದೇ ಕಾರು ತಯಾರಕ ಕಂಪನಿಗಳು ಯಾವುದೇ ಹೊಸ ವಾಹನವನ್ನು ಬಿಡುಗಡೆಗೊಳಿಸಿದ ಎರಡು ವರ್ಷಗಳ ನಂತರ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸುತ್ತವೆ. ಆದರೆ ಎಂಜಿ ಮೋಟಾರ್ ಕಂಪನಿಯು ಹೆಕ್ಟರ್‌ನ ಬಿಡುಗಡೆಯಾದ ಕೇವಲ 18 ತಿಂಗಳಲ್ಲಿ ಹೊಸ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಆವೃತ್ತಿಯ ಆರಂಭಿಕ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.12,89,800ಗಳಾದರೆ, ಡೀಸೆಲ್ ಮ್ಯಾನುವಲ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.18,32,800ಲಕ್ಷಗಳಾಗಿದೆ. ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಆವೃತ್ತಿಯ ಫಸ್ಟ್ ಲುಕ್ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಎಕ್ಸ್ ಟಿರಿಯರ್ ಹಾಗೂ ಡಿಸೈನ್

ಮೊದಲ ಬಾರಿಗೆ ಈ ಎಸ್‌ಯುವಿಯನ್ನು ನೋಡಿದರೆ ಯಾವುದೇ ಬದಲಾವಣೆಗಳು ಕಂಡು ಬರುವುದಿಲ್ಲ. ಆದರೂ ಈ ಕಾರಿನ ಎಕ್ಸ್ ಟಿರಿಯರ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಈ ಬದಲಾವಣೆಗಳಲ್ಲಿ ಫ್ರಂಟ್ ಗ್ರಿಲ್ ಸೇರಿದೆ. ಈ ಎಸ್‌ಯುವಿಯಲ್ಲಿ ಅಳವಡಿಸಿರುವ ಬೋಲ್ಡ್ ಆಗಿರುವ ಥರ್ಮೋ ಪ್ರೆಸ್ ಫ್ರಂಟ್ ಗ್ರಿಲ್ ಹೊಸ ಹೆಕ್ಟರ್ ಫೇಸ್‌ಲಿಫ್ಟ್‌ಗೆ ಪ್ರೀಮಿಯಂ ಲುಕ್ ನೀಡುತ್ತದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಇದರ ಜೊತೆಗೆ ಡೈನಾಮಿಕ್ ಇಂಡಿಕೇಟರ್ ಹೊಂದಿರುವ ಎಲ್ಇಡಿ ಡಿಆರ್ ಎಲ್ ಹಾಗೂ ಫ್ರಂಟ್ ಬಂಪರ್'ನಲ್ಲಿರುವ ಪೂರ್ಣ ಎಲ್ಇಡಿ ಹೆಡ್ ಲೈಟ್ ಹೊರತುಪಡಿಸಿ ಮುಂಭಾಗದಲ್ಲಿ ಬೇರೆ ಬದಲಾವಣೆಗಳಾಗಿಲ್ಲ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಸೈಡ್ ಪ್ರೊಫೈಲ್ ನಲ್ಲಿ ಡ್ಯುಯಲ್-ಟೋನ್ ನಲ್ಲಿರುವ ಹೊಸ 18 ಇಂಚಿನ ಅಲಾಯ್ ವ್ಹೀಲ್ ಅಳವಡಿಸಲಾಗಿದೆ. ಈ ಆಲಾಯ್ ವ್ಹೀಲ್ ನ ವಿನ್ಯಾಸವು ಝಡ್ಎಸ್ ಇವಿಯ ರೀತಿಯಲ್ಲಿದೆ. ಈ ದೊಡ್ಡ ಗಾತ್ರದ ವ್ಹೀಲ್'ಗಳು ಈ ದೊಡ್ಡ ಎಸ್‌ಯುವಿಯ ಗಾತ್ರಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತವೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಇನ್ನು ಸೈಡ್ ಪ್ರೊಫೈಲ್ ನಲ್ಲಿರುವ ಬಹುತೇಕ ಅಂಶಗಳು ಸಾಕಷ್ಟು ಕ್ರೋಮ್ ಬಣ್ಣವನ್ನು ಹೊಂದಿವೆ. ಈ ಎಸ್‌ಯುವಿಯಲ್ಲಿ ಈಗ ಕಪ್ಪು ಬಣ್ಣದ ಒಆರ್‌ವಿಎಂ ಅಳವಡಿಸಲಾಗಿದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಇದರ ಜೊತೆಗೆ ಇಂಟಿಗ್ರೇಟೆಡ್ ಇಂಡಿಕೇಟರ್ ಹಾಗೂ 360 ಡಿಗ್ರಿ ಕ್ಯಾಮೆರಾಗಾಗಿ ಪ್ರತಿ ಬದಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಹಿಂಬದಿಯಲ್ಲಿ ಟೇಲ್‌ಲೈಟ್‌ಗಳನ್ನು ಕನೆಕ್ಟ್ ಮಾಡಲು ಬಳಸುವ ರಿಫ್ಲೆಕ್ಟಿವ್ ಸ್ಟ್ರೈಪ್ ಬದಲಿಗೆ ಡಾರ್ಕ್ ರೇರ್ ಟೇಲ್‌ಗೇಟ್ ಗಾರ್ನಿಷ್ ನೀಡಲಾಗಿದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಈ ಎಸ್‌ಯುವಿಯ ಎಡ ಭಾಗದಲ್ಲಿ ಹೆಕ್ಟರ್ ಹಾಗೂ ಇಂಟರ್ ನೆಟ್ ಇನ್ ಸೈಡ್ ಎಂಬ ಬ್ಯಾಡ್ಜ್ ಗಳನ್ನು ಕಾಣಬಹುದು. ಹೊಸ ಎಸ್‌ಯುವಿಯು ಕ್ರೋಮ್ ಬಣ್ಣದಲ್ಲಿರುವ ಎಲೆಕ್ಟ್ರಿಕ್ ಟೇಲ್‌ಗೇಟ್ ಹಾಗೂ ಸಿಂಗಲ್ ಸೈಡ್-ಮೌಂಟೆಡ್ ಎಕ್ಸಾಸ್ಟ್ ಗಳನ್ನು ಸಹ ಹೊಂದಿದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಇಂಟಿರಿಯರ್ ಹಾಗೂ ಫೀಚರ್

ಈ ಎಸ್‌ಯುವಿಯು ವಿಶಾಲವಾದ ಕ್ಯಾಬಿನ್, ಪನೋರಾಮಿಕ್ ಸನ್‌ರೂಫ್ ಗಳನ್ನು ಹೊಂದಿದೆ. ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿಯಲ್ಲಿ ಐಷಾರಾಮಿ ಷಾಂಪೇನ್ ಹಾಗೂ ಕಪ್ಪು ಡ್ಯುಯಲ್-ಟೋನ್ ಥಿಮ್ ಇಂಟಿರಿಯರ್ ಆಯ್ಕೆಗಳನ್ನು ನೀಡಲಾಗಿದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಇದರಲ್ಲಿ ವೈರ್‌ಲೆಸ್ ಚಾರ್ಜಿಂಗ್, ಅಪ್​ಡೇಟ್ ಮಾಡಲಾದ ಐ-ಸ್ಮಾರ್ಟ್ ಕನೆಕ್ಟಿವಿಟಿ ಟೆಕ್ನಾಲಜಿಯನ್ನು ನೀಡಲಾಗಿದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಈ ಅಪ್‌ಡೇಟ್‌ನಿಂದಾಗಿ ಈಗ ಎಕ್ಸ್ ಟಿರಿಯರ್ ಅನ್ನು ಸಂಪರ್ಕಿಸಿ, ಹವಾಮಾನ ಮಾಹಿತಿಯನ್ನು ಪಡೆಯಬಹುದು. ಈಗ ಹಿಂದಿ ಕಮಾಂಡ್ ಫೀಚರ್ ಜೊತೆಗೆ ಇಂಗ್ಲಿಷ್ ಕಮಾಂಡ್ ಅನ್ನು ಸಹ ಸೇರಿಸಲಾಗಿದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಹೊಸ ಹೆಕ್ಟರ್ ಆಟೋ ಡಿಮ್ಮಿಂಗ್ ಐಆರ್ ವಿಎಂ, ಇನ್ಫೋಟೇನ್ ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಸಿಸ್ಟಂ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪವರ್ಡ್ ಟೇಲ್‌ಗೇಟ್, ರೇರ್ ಎಸಿ ವೆಂಟ್ ಸೇರಿದಂತೆ ಹಲವಾರು ಫೀಚರ್'ಗಳನ್ನು ಹೊಂದಿದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್ ಗಳನ್ನು ಸೂಕ್ತವಾಗಿರಿಸಲಾಗಿದ್ದು, ಬಳಸಲು ಸುಲಭವಾಗಿದೆ. ಆದರೆ ವೆಂಟಿಲೇಟೆಡ್ ಸೀಟುಗಳ ಬಟನ್ ಅನ್ನು ಬೇರೆ ಜಾಗದಲ್ಲಿ ಇರಿಸಬಹುದಾಗಿತ್ತು.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಮುಂಭಾಗದ ಸೀಟುಗಳು ಬೆನ್ನಿಗೆ ಹಾಗೂ ತೊಡೆಗಳಿಗೆ ಆರಾಮದಾಯಕ ಅನುಭವವನ್ನು ನೀಡುತ್ತವೆ. ನಾವು ಕಾರನ್ನು ಚಾಲನೆ ಮಾಡದಿದ್ದರೂ ಸಹ ಈ ಸೀಟುಗಳು ಲಾಂಗ್ ಡ್ರೈವ್ ನಲ್ಲಿ ಆರಾಮದಾಯಕವಾಗಿರುತ್ತವೆ ಎಂದು ಹೇಳಬಹುದು.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಎರಡನೇ ಸಾಲು ವಿಶಾಲವಾಗಿದ್ದು ಮೂವರು ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಎಸ್‌ಯುವಿಯು ಫ್ಲಾಟ್ ಫ್ಲೋರ್ ಹೊಂದಿದ್ದು, ಮಧ್ಯದಲ್ಲಿ ಕುಳಿತಿರುವ ವ್ಯಕ್ತಿ ಆರಾಮವಾಗಿ ಕುಳಿತುಕೊಳ್ಳುವಂತೆ ಮಾಡುತ್ತದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಎಂಜಿನ್ ಆಯ್ಕೆಗಳು

ಎಂಜಿ ಹೆಕ್ಟರ್ ಫೇಸ್‌ಲಿಫ್ಟ್‌ನಲ್ಲಿ ಮಾರುಕಟ್ಟೆಯಲ್ಲಿರುವ ಮಾದರಿ ಹೊಂದಿರುವಂತಹ ಎಂಜಿನ್ ಹಾಗೂ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ನೀಡಲಾಗಿದೆ. ಎಂಜಿ ಹೆಕ್ಟರ್ ಫೇಸ್‌ಲಿಫ್ಟ್‌ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಇವುಗಳಲ್ಲಿ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 143 ಬಿಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸಿದರೆ, 2.0-ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಪೆಟ್ರೋಲ್ ಎಂಜಿನ್ ಅನ್ನು 48 ವೋಲ್ಟ್'ನ ಮೈಲ್ಡ್ ಹೈಬ್ರಿಡ್ ಮಾದರಿಯೊಂದಿಗೆ ನೀಡಲಾಗುತ್ತದೆ. ಈ ಮಾದರಿಯು ಹೆಚ್ಚಿನ ಇಂಧನ ದಕ್ಷತೆ ಹಾಗೂ ಕಡಿಮೆ ಶಬ್ದವನ್ನುಂಟು ಮಾಡುತ್ತದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಎಲ್ಲಾ ಎಂಜಿನ್ ಆಯ್ಕೆಗಳು ಆರು-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್‌ನಂತೆ ಹೊಂದಿಕೆಯಾಗುತ್ತವೆ. ಹೈಬ್ರಿಡ್ ಅಲ್ಲದ ಪೆಟ್ರೋಲ್ ಎಂಜಿನ್ ಅನ್ನು ಡಿಸಿಟಿ ಟ್ರಾನ್ಸ್‌ಮಿಷನ್ ಯೂನಿಟ್'ನೊಂದಿಗೆ ನೀಡಲಾಗುತ್ತದೆ.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

2021 ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿ ಕೆಲವು ಬದಲಾವಣೆಗಳೊಂದಿಗೆ ಉತ್ತಮವಾಗಿದೆ. ವೆಂಟಿಲೇಟೆಡ್ ಸೀಟುಗಳ ಬಳಿಯಿರುವ ಸ್ವಿಚ್ ಅನ್ನು ಇನ್ನೂ ಸೂಕ್ತವಾದ ಜಾಗಕ್ಕೆ ಸ್ಥಳಾಂತರಿಸಬೇಕು.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಪ್ರಯಾಣಿಕರ ಭಾಗದಲ್ಲಿ ಸೀಟ್ ಅಡ್ಜಸ್ಟ್ ಮೆಂಟ್ ನೀಡಿ, ಕೆಲವು ಸ್ಥಳಗಳಿಂದ ಕ್ರೋಮ್ ಅನ್ನು ತೆಗೆದು ಹಾಕಬೇಕಿತ್ತು ಎಂಬುದು ನಮ್ಮ ಅನಿಸಿಕೆ. ಇವುಗಳನ್ನು ಹೊರತುಪಡಿಸಿದರೆ ದುಬಾರಿಯಲ್ಲದ, ದೊಡ್ಡದಾದ ಹಾಗೂ ಸಾಕಷ್ಟು ಫೀಚರ್ ಹೊಂದಿರುವ ಫ್ಯಾಮಿಲಿ ಕಾರು ಖರೀದಿಸಲು ಬಯಸಿದರೆ ಹೊಸ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಖರೀದಿಸಬಹುದು.

ಎಂಜಿ ಹೆಕ್ಟರ್‌ ಫೇಸ್‌ಲಿಫ್ಟ್ ಫಸ್ಟ್ ಲುಕ್: ಹಳೆ ಮಾದರಿಯಂತೆ ಮೋಡಿ ಮಾಡಲಿದೆಯಾ ಫೇಸ್‌ಲಿಫ್ಟ್ ಆವೃತ್ತಿ?

ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್ ಫೇಸ್‌ಲಿಫ್ಟ್, ಟಾಟಾ ಹ್ಯಾರಿಯರ್ ಹಾಗೂ ನಿಸ್ಸಾನ್ ಕಿಕ್ಸ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
MG Hector facelift SUV first look: exterior, design, engine, features and other details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X