ಅವಧಿ ಮುಗಿದ ಲೀಥಿಯಂ ಬ್ಯಾಟರಿ ಮರುಬಳಕೆ ಯೋಜನೆಗೆ ಚಾಲನೆ ನೀಡಿದ ಎಂಜಿ ಮೋಟಾರ್

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹಂತ ಹಂತವಾಗಿ ಬೆಳವಣಿಗೆ ಸಾಧಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಜೆಡ್ಎಸ್ ಇವಿ ಮೂಲಕ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದು, ಭವಿಷ್ಯದ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಪರಿಸರ ಸ್ನೇಹಿ ವಾಹನ ಮಾದರಿಗಳ ಬಳಕೆ ಉತ್ತೇಜಿಸುತ್ತಿದೆ.

ಅವಧಿ ಮುಗಿದ ಲೀಥಿಯಂ ಬ್ಯಾಟರಿ ಮರುಬಳಕೆ ಯೋಜನೆಗೆ ಚಾಲನೆ ನೀಡಿದ ಎಂಜಿ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಪರಿಸರ ಸ್ನೇಹಿಯಾಗಿಸಲು ಹೊಸ ಯೋಜನೆಯೊಂದನ್ನು ಆರಂಭಿಸಿರುವ ಎಂಜಿ ಮೋಟಾರ್ ಕಂಪನಿಯು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಮರುಬಳಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ನಿಗದಿತ ವಾರಂಟಿ ಅವಧಿ ಮುಗಿದ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ವೈಜ್ಞಾನಿಕವಾಗಿ ಮರುಬಳಕೆ ಮಾಡಿಕೊಳ್ಳುವ ಮೂಲಕ ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಇಳಿಕೆ ಮಾಡುವ ಯೋಜನೆ ರೂಪಿಸಲಾಗಿದೆ.

ಅವಧಿ ಮುಗಿದ ಲೀಥಿಯಂ ಬ್ಯಾಟರಿ ಮರುಬಳಕೆ ಯೋಜನೆಗೆ ಚಾಲನೆ ನೀಡಿದ ಎಂಜಿ

ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಕೆ ಮಾಡುವ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯವು ಒಂದು ನಿರ್ದಿಷ್ಟ ಅವಧಿ ನಂತರ ಅದರ ಬಳಕೆಯು ಕೊನೆಕೊಳ್ಳಲಿದ್ದು, ನಿಗದಿತ ಅವಧಿ ಮುಗಿದ ನಂತರವು ಆ ಬ್ಯಾಟರಿ ಸೌಲಭ್ಯವನ್ನು ಬಳಕೆ ಮಾಡಿದ್ದಲ್ಲಿ ಅದು ಮುಂದೆ ಪರಿಸರಕ್ಕೆ ಹೊಸ ಸವಾಲಾಗುವ ಸಾಧ್ಯತೆಗಳಿವೆ.

ಅವಧಿ ಮುಗಿದ ಲೀಥಿಯಂ ಬ್ಯಾಟರಿ ಮರುಬಳಕೆ ಯೋಜನೆಗೆ ಚಾಲನೆ ನೀಡಿದ ಎಂಜಿ

ಇದಕ್ಕಾಗಿಯೇ ಬಳಕೆಯ ಅವಧಿ ಮುಗಿದ ಲೀಥಿಯಂ ಅಯಾನ್ ಬ್ಯಾಟರಿಯನ್ನು ವೈಜ್ಞಾನಿಕವಾಗಿ ಮರುಬಳಕೆ ಮಾಡುವುದು ಮತ್ತು ವಿಲೇವಾರಿ ಪ್ರಕ್ರಿಯೆಗಳನ್ನು ಯಶಸ್ವಿ ಕೈಗೊಳ್ಳುವ ಮುಂದಾಗಿರುವ ಎಂಜಿ ಮೋಟಾರ್ ಕಂಪನಿಯು ಅಟೆರೊ ಕಂಪನಿ ಜೊತೆಗೂಡಿದ್ದು, ಇದು ಅವಧಿ ಮುಗಿದ ಬ್ಯಾಟರಿ ಸಂಪನ್ಮೂಲವನ್ನು ವೈಜ್ಞಾನಿಕವಾಗಿ ಉನ್ನತೀಕರಿಸಿ ಮರುಬಳಕೆಗೆ ಸಹಕರಿಸಲಿದೆ.

ಅವಧಿ ಮುಗಿದ ಲೀಥಿಯಂ ಬ್ಯಾಟರಿ ಮರುಬಳಕೆ ಯೋಜನೆಗೆ ಚಾಲನೆ ನೀಡಿದ ಎಂಜಿ

ಹೊಸ ಯೋಜನೆಯಿಂದ ನಿರ್ವಹಣಾ ವೆಚ್ಚ ಪರಿಣಾಮಕಾರಿಯಾಗಿ ತಗ್ಗುವುದಲ್ಲದೆ ಬ್ಯಾಟರಿ ಸಂಪನ್ಮೂಲಗಳ ಮೇಲಿನ ಅವಲಂಬನೆಯು ತಗ್ಗಿಸಲಿದ್ದು, ಹೊಸ ಕಾರು ಉತ್ಪಾದನಾ ವೆಚ್ಚವು ಸಹ ತಗ್ಗುವ ನೀರಿಕ್ಷೆಗಳಿವೆ.

ಅವಧಿ ಮುಗಿದ ಲೀಥಿಯಂ ಬ್ಯಾಟರಿ ಮರುಬಳಕೆ ಯೋಜನೆಗೆ ಚಾಲನೆ ನೀಡಿದ ಎಂಜಿ

ಇನ್ನು ಜೆಡ್ಎಸ್ ಎಲೆಕ್ಟ್ರಿಕ್ ಕಾರು ಸದ್ಯ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸೈಟ್ ಮಾದರಿಯ ಬೆಸ್ ವೆರಿಯೆಂಟ್ ಮಾದರಿಯಾಗಿ ಮತ್ತು ಎಕ್ಸ್‌ಕ್ಲೂಸಿವ್ ವೆರಿಯೆಂಟ್ ಹೈ ಎಂಡ್ ಮಾದರಿಯಾಗಿ ಮಾರಾಟವಾಗುತ್ತಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಅವಧಿ ಮುಗಿದ ಲೀಥಿಯಂ ಬ್ಯಾಟರಿ ಮರುಬಳಕೆ ಯೋಜನೆಗೆ ಚಾಲನೆ ನೀಡಿದ ಎಂಜಿ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಎಕ್ಸೈಟ್ ಮಾದರಿಯು ರೂ. 20,99,800 ಮತ್ತು ಎಕ್ಸ್‌ಕ್ಲೂಸಿವ್ ಮಾದರಿಯು ರೂ. 24,18,000 ಬೆಲೆ ಹೊಂದಿದ್ದು, ಕಂಪನಿಯು ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯನ್ನು ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಬದಲಾವಣೆಗಳೊಂದಿಗೆ ಉನ್ನತೀಕರಿಸಿ ಬಿಡುಗಡೆಗೊಳಿಸಿದೆ.

ಅವಧಿ ಮುಗಿದ ಲೀಥಿಯಂ ಬ್ಯಾಟರಿ ಮರುಬಳಕೆ ಯೋಜನೆಗೆ ಚಾಲನೆ ನೀಡಿದ ಎಂಜಿ

ಹೈಟೆಕ್ ತಂತ್ರಜ್ಞಾನ ಪ್ರೇರಿತ 44.5 kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು ಹೊಸ ಬ್ಯಾಟರಿ ಪ್ಯಾಕ್ ಜೋಡಣೆಯ ನಂತರ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಪ್ರಮಾಣವು ಪ್ರತಿ ಚಾರ್ಜ್‌ಗೆ ಈ ಹಿಂದೆ ನೀಡಲಾಗುತ್ತಿದ್ದ 340 ಕಿಮೀ ನಿಂದ 419 ಕಿಮೀ ಗೆ ಏರಿಕೆಯಾಗಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಅವಧಿ ಮುಗಿದ ಲೀಥಿಯಂ ಬ್ಯಾಟರಿ ಮರುಬಳಕೆ ಯೋಜನೆಗೆ ಚಾಲನೆ ನೀಡಿದ ಎಂಜಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಧನಗಳ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಎಂಜಿ ಮೋಟಾರ್ ಕಂಪನಿಯು ತನ್ನ ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯನ್ನು ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಬದಲಾವಣೆಗಳೊಂದಿಗೆ ಉನ್ನತೀಕರಿಸಿ ಬಿಡುಗಡೆಗೊಳಿಸಿದೆ.

Most Read Articles

Kannada
English summary
MG Motor Made Partnership With Attero For Recycle EV Batteries In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X