ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ MG Motor

ಜಪಾನ್ ನ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಭವಿನಾ ಪಟೇಲ್ ರವರಿಗೆ ಕಾರ್ ಅನ್ನು ಉಡುಗೊರೆಯಾಗಿ ನೀಡಿ ಗೌರವಿಸುವುದಾಗಿ MG Motor ಕಂಪನಿ ತಿಳಿಸಿದೆ. ಈ ಬಗ್ಗೆ MG Motor ಇಂಡಿಯಾ ಕಂಪನಿಯ ಅಧ್ಯಕ್ಷರಾದ ರಾಜೀವ್ ಚಾಬಾ ಮಾಹಿತಿ ನೀಡಿದ್ದಾರೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

ರಾಜೀವ್ ಚಾಬಾರವರು MG Motor ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು. ಈಗ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್ ಫೈನಲ್ ನಲ್ಲಿ ಭಾರತದ ಭವಿನಾ ಚೀನಾದ ಚೌ ಯಿಂಗ್ ವಿರುದ್ಧ ಸೋತರು.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

ಫೈನಲ್ ನಲ್ಲಿ ಸೋತರೂ ಭವಿನಾ ಬೆಳ್ಳಿ ಪದಕ ಗೆದ್ದರು. ಅವರ ಈ ವಿಜಯವನ್ನು ದೇಶದೆಲ್ಲೆಡೆ ಸಂಭ್ರಮಿಸಲಾಗುತ್ತಿದೆ. ಸಾರ್ವಜನಿಕರು, ರಾಜಕಾರಣಿಗಳು, ಕ್ರೀಡಾಪಟುಗಳು ಹಾಗೂ ಉದ್ಯಮಿಗಳು ಸೇರಿದಂತೆ ಹಲವರು ಬೆಳ್ಳಿ ಪದಕ ಗೆದ್ದ ಭವಿನಾರವರಿಗೆ ಶುಭಾಶಯ ಸಲ್ಲಿಸುತ್ತಿದ್ದಾರೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

ಅವರಿಗೆ ಹಲವಾರು ಕಂಪನಿಗಳು ಉಡುಗೊರೆಗಳನ್ನು ಘೋಷಿಸಿವೆ. ಇವುಗಳಲ್ಲಿ MG Motor ಕಂಪನಿಯು ಸಹ ಸೇರಿದೆ. ಕಂಪನಿಯು ಭವಿನಾರವರಿಗೆ ಕಾರೊಂದನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದೆ. ಆದರೆ ಭವಿನಾರವರಿಗೆ ಯಾವ ಕಾರನ್ನು ಉಡುಗೊರೆಯಾಗಿ ನೀಡಲಾಗುವುದು ಎಂಬ ಬಗ್ಗೆ MG Motor ಕಂಪನಿಯು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

MG Motor ಕಂಪನಿಯ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಕಾರನ್ನು ಬಿಡುಗಡೆಗೊಳಿಸಲಿದೆ. ಕಂಪನಿಯು ತನ್ನ ಹೊಸ Aster ಕಾರ್ ಅನ್ನುಭಾರತದಲ್ಲಿ ಬಿಡುಗಡೆಗೊಳಿಸಲಿದೆ. MG Motor ಕಂಪನಿಯು ಆಸ್ಟರ್ ಎಸ್‌ಯುವಿಯ ಬಿಡುಗಡೆಗೆ ಸಿದ್ದತೆ ನಡೆಸಿದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

ಎಂಜಿ ಆಸ್ಟರ್ ಎಸ್‌ಯುವಿಯನ್ನು ಬಹುಶಃ ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ಈ ಎಸ್‌ಯುವಿಯಲ್ಲಿ MG Motor ಕಂಪನಿಯು ವಿವಿಧ ಅತ್ಯಾಧುನಿಕ ಫೀಚರ್ ಗಳನ್ನು ನೀಡಲಿದೆ. ಇದರಿಂದಾಗಿ ಎಂಜಿ ಆಸ್ಟರ್ ಎಸ್‌ಯುವಿಯು ಭಾರತದ ಗ್ರಾಹಕರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

MG Motor ಕಂಪನಿಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ Hector, Hector Plus, ZS ಎಲೆಕ್ಟ್ರಿಕ್ ಹಾಗೋ Gloster ಕಾರುಗಳನ್ನು ಮಾರಾಟ ಮಾಡುತ್ತಿದೆ. ಇವೆಲ್ಲವೂ ಎಸ್‌ಯುವಿ ಮಾದರಿ ಕಾರುಗಳಾಗಿವೆ. ಈಗ ಈ ಸಾಲಿಗೆ MG Motor ಕಂಪನಿಯ ಆಸ್ಟರ್ ಎಸ್‌ಯುವಿ ಸಹ ಸೇರಿದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

ದೇಶಿಯ ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ MG Motor ಕಂಪನಿಯು ಎಸ್‌ಯುವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಮಾಡುತ್ತಿದೆ. ಎಂಜಿ ಮೋಟಾರ್ ಕಂಪನಿಯು ಇತ್ತೀಚಿಗೆ ಆಸ್ಟರ್ ಎಸ್‌ಯುವಿಗೆ ಕೆಲವು ವಿವರಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ಈ ಮಾಹಿತಿಗಳ ಪ್ರಕಾರ ಆಸ್ಟರ್ ಎಸ್‌ಯುವಿಯಲ್ಲಿ ಎಐ ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಳವಡಿಸಲಾಗಿದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

ಎಂಜಿ ಆಸ್ಟರ್ ಎಸ್‌ಯುವಿಯು ಮುಂದಿನ ಕೆಲವು ವಾರಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಬರುವ ನಿರೀಕ್ಷೆಗಳಿವೆ. ಬಿಡುಗಡೆಯಾದ ನಂತರ ಆಸ್ಟರ್ ಎಸ್‌ಯುವಿಯು Hyundai Creta, Kia Seltos ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

MG Motor ಕಂಪನಿಯು Aster ಎಸ್‌ಯುವಿಯನ್ನು ಭವಿನಾರವರಿಗೆ ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಾಗಿದೆ. ಈ ಮೂಲಕ ಎಂಜಿ ಕಂಪನಿಯು Aster ಎಸ್‌ಯುವಿಯತ್ತ ಜನರನ್ನು ಆಕರ್ಷಿಸಲು ಮುಂದಾಗಿದೆ. ಆದರೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಘೋಷಣೆಯಾಗಿಲ್ಲ.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

ಇತ್ತೀಚಿಗೆ ಟೋಕಿಯೋದಲ್ಲಿ ಮುಕ್ತಾಯಗೊಂಡ ಒಲಿಂಪಿಕ್ಸ್‌ನಲ್ಲಿ ಹಲವು ಭಾರತೀಯ ಕ್ರೀಡಾಪಟುಗಳು ವಿವಿಧ ಪದಕಗಳನ್ನು ಗೆದ್ದಿದ್ದರು. Renault ಕಂಪನಿಯು ಅವರಿಗೆ Renault Kiger ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಉಡುಗೊರೆಯಾಗಿ ನೀಡಿದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

ಇನ್ನು Mahindra and Mahindra ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರು ಜಾವೆಲಿನ್ ಎಸೆತದಲ್ಲಿ ಬಂಗಾರದ ಪದಕ ಗೆದ್ದ ನೀರಜ್ ಚೋಪ್ರಾ ರವರಿಗೆ ಹೊಸ XUV 700 ಕಾರನ್ನು ಉಡುಗೊರೆಯಾಗಿ ನಿಡುವುದಾಗಿ ಘೋಷಿಸಿದ್ದಾರೆ. ನೀರಜ್ ಚೋಪ್ರಾ ಒಲಂಪಿಕ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತಕ್ಕೆ ಅಥ್ಲೆಟಿಕ್ ವಿಭಾಗದಲ್ಲಿ ಬಂಗಾರದ ಪದಕ ಗೆದ್ದು ಕೊಟ್ಟಿದ್ದಾರೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ ಎಂಜಿ ಮೋಟಾರ್

ನೀರಜ್ ಚೋಪ್ರಾರವರು ಮಾತ್ರ ಕಾರನ್ನು ಉಡುಗೊರೆಯಾಗಿ ಪಡೆದಿಲ್ಲ. ಟೋಕಿಯೊ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ರವರಿಗೂ ಸಹ ರೆನಾಲ್ಟ್ ಕಂಪನಿಯು ಕಾರ್ ಅನ್ನು ಉಡುಗೊರೆಯಾಗಿ ನೀಡಿದೆ. ಇವರ ಜೊತೆಗೆ ಪದಕ ಗೆದ್ದ ಎಲ್ಲಾ ಕ್ರೀಡಾ ಪಟುಗಳಿಗೆ ಹಲವು ವಾಹನ ತಯಾರಕ ಕಂಪನಿಗಳು ಉಡುಗೊರೆ ನೀಡಿವೆ. ಟಾಟಾ ಮೋಟಾರ್ಸ್ ಕಂಪನಿಯು ಕಂಚಿನ ಪದಕ ಗೆಲ್ಲಲು ವಿಫಲರಾದ ಕ್ರೀಡಾ ಪಟುಗಳಿಗೂ ಕಾರ್ ಅನ್ನು ಉಡುಗೊರೆಯಾಗಿ ನೀಡಿದೆ. ಟಾಟಾ ಮೋಟಾರ್ಸ್ ಕಂಪನಿಯ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Most Read Articles

Kannada
English summary
Mg motor india to honor paralympics silver medalist with new car details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X