Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಎಂಜಿ ಮೋಟಾರ್(MG Motor) ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಸ್‌ಯುವಿ ಮಾರಾಟದಲ್ಲಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮಾದರಿಗಳ ಮೂಲಕ ಉತ್ತಮ ಬೇಡಿಕೆ ಹೊಂದಿದ್ದು, ಕಂಪನಿಯು ಗ್ರಾಹಕರ ಬೇಡಿಕೆಯ ಮೇರೆಗೆ ಹೆಕ್ಟರ್ ಪ್ಲಸ್ ಮಾದರಿಯ ಮಾರಾಟದಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸಿದೆ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಪ್ರಸ್ತುತ ಮಾರುಕಟ್ಟೆಯಲ್ಲಿ ಎಂಜಿ ಮೋಟಾರ್ ಕಂಪನಿಯು 5 ಸೀಟರ್ ಮಾದರಿಯಾಗಿ ಹೆಕ್ಟರ್ ಮಾದರಿಯನ್ನು ಮತ್ತು 6 ಸೀಟರ್ ಜೊತೆಗೆ 7 ಸೀಟರ್ ಮಾದರಿಯಾಗಿ ಹೆಕ್ಟರ್ ಪ್ಲಸ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಹೆಕ್ಟರ್ ಪ್ಲಸ್ ಮಾದರಿಯ ಟಾಪ್ ಎಂಡ್ ಮಾದರಿಗಳಲ್ಲಿ ಕೆಲವು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

2019ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಹೆಕ್ಟರ್ ಪ್ಲಸ್ ಮಾದರಿಯು ಮೊದಲ ಹಂತದಲ್ಲಿ 6 ಸೀಟರ್ ಮಾದರಿಯಾಗಿ ತದನಂತರ 7 ಸೀಟರ್ ಸೀಟರ್ ಮಾದರಿಯಲ್ಲಿ ಬಿಡುಗಡೆಗೊಂಡಿತ್ತು.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಸ್ಟ್ಯಾಂಡರ್ಡ್ ಹೆಕ್ಟರ್ ಮಾದರಿಯೊಂದಿಗೆ ಪ್ಲ್ಯಾಟ್‌ಫಾರ್ಮ್ ಹಂಚಿಕೊಂಡಿರುವ ಹೆಕ್ಟರ್ ಪ್ಲಸ್ ಮಾದರಿಯು ಎಂಜಿನ್, ತಾಂತ್ರಿಕ ಅಂಶಗಳು ಒಂದೇ ರೀತಿಯಾಗಿದ್ದು, ಹೆಕ್ಟರ್ ಪ್ಲಸ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಮೂರನೇ ಸಾಲಿನ ಆಸನವನ್ನು ನೀಡಲಾಗಿದೆ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಆರಂಭದಲ್ಲಿ ಹೆಕ್ಟರ್ ಪ್ಲಸ್ ಮಾದರಿಯಲ್ಲೂ ಹಲವಾರು ವೆರಿಯೆಂಟ್ ಪರಿಚಯಿಸಿದ್ದರೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಲವೇ ವೆರಿಯೆಂಟ್‌ಗಳು ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಬೇಡಿಕೆಯಿಲ್ಲ ಕೆಲವು ವೆರಿಯೆಂಟ್‌ಗಳನ್ನು ಕಂಪನಿಯು ಸ್ಥಗಿತಗೊಳಿಸಿದೆ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಹೆಕ್ಟರ್ ಪ್ಲಸ್ ಎಸ್‌ಯುವಿಯ ಸ್ಟೈಲ್ ಮಾದರಿಯಲ್ಲಿನ 1.5 ಪೆಟ್ರೋಲ್ ಟರ್ಬೊ ಹೈಬ್ರಿಡ್ ಮ್ಯಾನುವಲ್ 7-ಸೀಟರ್ ಮತ್ತು ಸೂಪರ್ ಮಾದರಿಯಲ್ಲಿ 2.0 ಡೀಸೆಲ್ ಟರ್ಬೊ ಮ್ಯಾನುವಲ್ 6 ಸೀಟರ್ ವೆರಿಯಂಟ್ ಸ್ಥಗಿತಗೊಳಿಸಲಾಗಿದೆ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಮಧ್ಯಮ ಕ್ರಮಾಂಕದ ವೆರಿಯೆಂಟ್ ಸ್ಥಗಿತದ ನಂತರ ಹೆಕ್ಟರ್ ಪ್ಲಸ್ 7 ಆಸನ ಹೊಂದಿರುವ ಪೆಟ್ರೋಲ್ ಮಾದರಿಯು ಇದೀಗ ಸೂಪರ್ ಆವೃತ್ತಿಯಲ್ಲಿ ಮಾತ್ರ ಆಯ್ಕೆ ಮಾಡಬಹುದಾಗಿದ್ದು, 7 ಸೀಟರ್ ಮಾದರಿಯಲ್ಲಿ ಯಾವುದೇ ಹೈಬ್ರಿಡ್ ಮಾದರಿಯು ಖರೀದಿಗೆ ಲಭ್ಯವಿರುವುದಿಲ್ಲ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಇನ್ನು ಹೆಕ್ಟಕ್ ಪ್ಲಸ್ ಕಾರು ಕಳೆದ ಏಪ್ರಿಲ್‌ನಲ್ಲಿ ಹೊಸ ವೆರಿಯೆಂಟ್ ಸೇರ್ಪಡೆಯೊಂದಿಗೆ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಉನ್ನತೀಕರಣಗೊಂಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 15.39 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.19.94 ಲಕ್ಷ ಬೆಲೆ ಹೊಂದಿದೆ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಹೊಸ ಕಾರಿನಲ್ಲಿ ಗ್ರಾಹಕರು ತಮ್ಮಅಗತ್ಯಕ್ಕೆ ಅನುಗುಣವಾಗಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದ್ದು, ಅತ್ಯುತ್ತಮ ಮೈಲೇಜ್ ಜೊತೆ ಪರ್ಫಾಮೆನ್ಸ್ ಮಾದರಿಯಾಗಿರುವ ಪೆಟ್ರೋಲ್ ಹೈಬ್ರಿಡ್ ಮಾದರಿಗೆ ಉತ್ತಮ ಬೇಡಿಕೆಯಿದೆ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 141 ಬಿಹೆಚ್‌ಪಿ, 250 ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಮಾದರಿಯು 168 ಬಿಹೆಚ್‌ಪಿ, 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಮೈಲ್ಡ್ ಹೈಬ್ರಿಡ್ ಮಾದರಿಯು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಆಯ್ದ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಹೊಸ ಕಾರಿನ ಎಂಜಿನ್‌ಗಳನ್ನು 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಮತ್ತು 6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಯಾಗಿ ಹೊಂದಿದೆ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಇದರೊಂದಿಗೆ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಂಜಿ ಕಂಪನಿಯು ಹೊಸ ಕಾರಿನ ಮೂಲಕ ಎಂಪಿವಿ ಕಾರು ಖರೀದಿದಾರನ್ನು ಸೆಳೆಯುತ್ತಿದೆ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಹೊಚ್ಚ ಹೊಸ ಹೆಕ್ಟರ್ ಪ್ಲಸ್ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಹೇಳುವುದಾದರೇ, ಹೊಸ ಕಾರು ಸಾಮಾನ್ಯ ಹೆಕ್ಟರ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಸಿದ್ದಗೊಂಡಿದ್ದು, 2+2+2, 2+3+ 2 ಮಾದರಿಯ ಆಸನ ವಿನ್ಯಾಸವನ್ನು ಪಡೆದುಕೊಂಡಿದೆ.

Hector Plus ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ MG Motor

ಹೊಸ ಕಾರಿನ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ರೌನ್ ಲೆದರ್ ಆಸನವು ಹೆಡ್ ರೆಸ್ಟ್ ಮತ್ತು ಸೆಂಟರ್ ಆರ್ಮ್ ರೆಸ್ಟ್ ಫೀಚರ್ಸ್ ಪಡೆದುಕೊಂಡಿದೆ. ಜೊತೆಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹೊಸ ಕಾರು 4,720-ಎಂಎಂ ಉದ್ದ, 1,835-ಎಂಎಂ ಅಗಲ, 1,760-ಎಂಎಂ ಅಗಲ ಮತ್ತು 2,720-ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, ಇದು ಸಾಮಾನ್ಯ ಹೆಕ್ಟರ್ ಮಾದರಿಗಿಂತ 65-ಎಂಎಂ ಹೆಚ್ಚುವರಿ ಉದ್ದವನ್ನು ಪಡೆದುಕೊಂಡಿದೆ.

Most Read Articles

Kannada
English summary
Mg motors discontinued hector plus two main variants
Story first published: Thursday, October 21, 2021, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X