Just In
- 2 hrs ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 4 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 16 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Movies
ರಾಖಿ ಸಾವಂತ್ ಬಯೋಪಿಕ್ ಈ ಸ್ಟಾರ್ ನಟಿಯೇ ಮಾಡಬೇಕಂತೆ
- News
Breaking: ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?
- Sports
ಐಪಿಎಲ್ 2021: ಈ ಬಾರಿಯ ಆವೃತ್ತಿಯ ಕೆಲ ಗಮನಾರ್ಹ ಬದಲಾವಣೆಗಳು
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒರಿಕ್ಸ್ ಮತ್ತು ಝೂಮ್ ಕಾರ್‌ನಲ್ಲಿ ಎಂಜಿ ಜೆಡ್ಎಸ್ ಇವಿ ಸೆಲ್ಪ್ ಡ್ರೈವ್ ರೆಂಟಲ್ ಲಭ್ಯ
ಕರೋನಾ ವೈರಸ್‌ನಿಂದಾಗಿ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ವಾಹನಗಳ ಮೇಲೆ ಲೀಸ್ ಆಯ್ಕೆಯನ್ನು ಹೆಚ್ಚಿಸುತ್ತಿದ್ದು, ಎಂಜಿ ಮೋಟಾರ್ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ವಿವಿಧ ಕಾರ್ ರೆಂಟಲ್ ಕಂಪನಿಗಳೊಂದಿಗೆ ಲೀಸ್ ಆಯ್ಕೆ ನೀಡುತ್ತಿದೆ.

ಆಟೋ ಕಂಪನಿಗಳಿಗೆ ಕರೋನಾ ವೈರಸ್‌ನಿಂದಾದ ಆರ್ಥಿಕ ಸಂಕಷ್ಟದಿಂದ ಹೊರಬರಲು ಕಾರ್ ಸಬ್‌ಸ್ಕೈಬ್ ಯೋಜನೆಗಳು ಸಾಕಷ್ಟು ಸಹಕಾರಿಯಾಗಿದ್ದು, ಎಂಜಿ ಮೋಟಾರ್ ಕಂಪನಿಯು ತನ್ನ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಒರಿಕ್ಸ್ ಮತ್ತು ಝೂಮ್ ಕಾರ್ ರೆಂಟಲ್‌ನಲ್ಲಿ ಪರಿಚಯಿಸಿದೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಗ್ರಾಹಕರು ಹೊಸ ವಾಹನಗಳ ಖರೀದಿಗೆ ಬದಲು ತಾತ್ಕಲಿಕವಾಗಿ ಸೆಲ್ಫ್ ಡ್ರೈವ್ ಲೀಸ್ ವಾಹನಗಳ ಮಾಲೀಕತ್ವವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಪ್ರಮುಖ ಕಾರು ಕಂಪನಿಗಳು ಲೀಸ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

ಎಂಜಿ ಮೋಟಾರ್ ಕೂಡಾ ಈ ನಿಟ್ಟಿನಲ್ಲಿ ಈಗಾಗಲೇ ಝೂಮ್ ಕಾರ್ ಮತ್ತು ಒರಿಕ್ಸ್ ಸೆಲ್ಪ್ ಡ್ರೈವ್ ಕಾರ್ ರೆಂಟಲ್ ಕಂಪನಿಯ ಜೊತೆಗೂಡಿ ಜೆಡ್ಎಸ್ ಇವಿ ಕಾರು ಮಾದರಿಯನ್ನು 12, 24, 36 ತಿಂಗಳ ಅವಧಿಗೆ ಲೀಸ್ ನೀಡುತ್ತಿದೆ.

ವೆರಿಯೆಂಟ್‌ಗಳಿಗೆ ಅನುಗುಣವಾಗಿ ಪ್ರತಿ ತಿಂಗಳು ಆರಂಭಿಕವಾಗಿ ರೂ. 49,999 ಚಂದಾದಾರಿಕೆ ದರ ನಿಗದಿಪಡಿಸಲಾಗಿದ್ದು, ಸೆಲ್ಪ್ ಡ್ರೈವ್ ಕಾರ್ ರೆಂಟಲ್ ಪಡೆದುಕೊಳ್ಳುವ ಗ್ರಾಹಕರನ್ನು ಕನಿಷ್ಠ 12 ತಿಂಗಳು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಲೀಸ್ ಪಡೆದ ಕಾರುಗಳ ದರವನ್ನು ಪ್ರತಿ ತಿಂಗಳು ಪಾವತಿಸಬೇಕಿದ್ದು, ಗ್ರಾಹಕರ ತಮ್ಮ ಆದ್ಯತೆ ಮೇರೆಗೆ ಕಾರುಗಳನ್ನು 12ರಿಂದ 24, 36 ತಿಂಗಳಿಗೆ ಲೀಸ್ ಪಡೆದುಕೊಳ್ಳಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಕಾರಿನ ನಿರ್ವಹಣಾ ವೆಚ್ಚ, ಪಾಲಿಸಿ ಶುಲ್ಕಗಳು ಒಳಗೊಂಡಿರುತ್ತವೆ. ಲೀಸ್‌ನಲ್ಲಿ ನೀಡಲಾಗುವ ಪ್ರತಿ ಕಾರು ಮಾದರಿಯು ಸಹ ಹೊಸ ಕಾರು ಆವೃತ್ತಿಯಾಗಿದ್ದು, ಮಾಲೀಕ್ವದ ಸಂದರ್ಭದಲ್ಲಿ ಸಾಮಾನ್ಯ ತಾಂತ್ರಿಕ ಅಂಶಗಳ ಸಮಸ್ಯೆಗಳನ್ನು ಹೊರತುಪಡಿಸಿ ತಪ್ಪು ಚಾಲನೆಯಿಂದಾಗುವ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಚಂದಾದಾರರೇ ಹೊಣೆಯಾಗಿರುತ್ತಾರೆ.

ಲೀಸ್ ಹೊಂದಿರುವ ಕಾರುಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಸಲುವಾಗಿ ಕಂಪನಿಯು ಬಂಪರ್ ಟು ಬಂಪರ್ ಸುರಕ್ಷೆಗೆಗಾಗಿ ದುಬಾರಿ ಬೆಲೆಯ ಸಮಗ್ರ ವಿಮಾ ಪಾಲಿಸಿ ಹೊಂದಿರಲಿದ್ದು, ಲೀಸ್ ಸಂದರ್ಭದಲ್ಲಿ ಕಾರುಗಳ ಚಾಲನೆಗೆ ಪ್ರತಿ ತಿಂಗಳು ಇಂತಿಷ್ಟು ಕಿ.ಮೀ ನಿಗದಿಪಡಿಸಲಾಗಿರುತ್ತದೆ.

ಲೀಸ್‌ಗೆ ಪಡೆದ ಕಾರುಗಳು ವಾರ್ಷಿಕವಾಗಿ ನಿಗದಿಪಡಿಸಿದ ಕಿ.ಮೀಗಿಂತಲೂ ಹೆಚ್ಚು ಸಂಚರಿಸಿದ್ದಲ್ಲಿ ಪ್ರತಿ ಕಿ.ಮೀ ಇಂತಿಷ್ಟು ಹೆಚ್ಚುವರಿ ಪಾವತಿ ಮಾಡಬೇಕಿದ್ದು, ಚಾರ್ಜಿಂಗ್ ಸಮಸ್ಯೆ ನಿವಾರಿಸಲು ಫಾಸ್ಟ್ ಚಾರ್ಜಿಂಗ್ ಸೆಟ್ಅಪ್ ನೀಡಲಾಗುತ್ತದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇದು ಹೊಸ ಕಾರು ಖರೀದಿಯಿಂದಾಗುವ ಆರ್ಥಿಕ ಹೊರೆಗಿಂತ ತುಸು ಭಿನ್ನವಾಗಿದ್ದು, ನಮಗೆ ಕಾರಿನ ಬಳಕೆಯ ಅವಶ್ಯಕತೆಯಿಲ್ಲ ಎಂದಾದಲ್ಲಿ ವಾಪಸ್ ನೀಡಬಹುದಾದ ಆಯ್ಕೆಯಿರುತ್ತದೆ. ಆದರೆ ಹೊಸ ವಾಹನ ಖರೀದಿ ನಂತರ ಆರ್ಥಿಕ ಹೊರೆಯಾದರೂ ನೀವು ಅದನ್ನು ನಿರ್ವಹಣೆ ಮಾಡಲೇಬೇಕಾದ ಅನಿವಾರ್ಯತೆಯಿರುತ್ತದೆ.

ಹೀಗಾಗಿ ಲೀಸ್ ಕಾರುಗಳು ಅವಶ್ಯಕ ಸಂದರ್ಭಗಳಲ್ಲಿ ಸಾಕಷ್ಟು ಅನುಕೂಲ ಎನ್ನಬಹುದಾಗಿದ್ದು, ಇನ್ನಷ್ಟು ಮಾಹಿತಿಯನ್ನು ತಿಳಿಯಲು ಒರಿಕ್ಸ್ ಅಥವಾ ಝೂಮ್ ಕಾರ್ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಬಹುದು.
MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಸದ್ಯಕ್ಕೆ ಒರಿಕ್ಸ್ ಮತ್ತು ಝೂಮ್ ಕಾರ್ ಕಂಪನಿಗಳು ಎಂಜಿ ಜೆಡ್ಎಸ್ ಮಾದರಿಯನ್ನು ಕೆಲವೇ ಕೆಲವು ಮಹಾನಗರಗಳಲ್ಲಿ ಮಾತ್ರವೇ ಲೀಸ್ ಆಯ್ಕೆ ನೀಡುತ್ತಿದ್ದು, ಚಾರ್ಜಿಂಗ್ ಸೌಲಭ್ಯ ಹೆಚ್ಚಿದಂತೆ ಜೆಡ್ಎಸ್ ಇವಿ ಲೀಸ್ ಆಯ್ಕೆಯನ್ನು ಇತರೆ ನಗರಗಳಿಗೂ ವಿಸ್ತರಿಸಲಿದೆ.