Just In
- 1 hr ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 3 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 13 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 15 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- News
ಅಭಿವೃದ್ಧಿ ಯೋಜನೆಗಳು; ಪರಿಸರವಾದಿಗಳ ವಿರುದ್ಧ ಜನಾಕ್ರೋಶ
- Movies
ವಿಶೇಷ ಭಾನುವಾರ: ಮನೋರಂಜನಾ ಲೋಕದಲ್ಲಿ 'ಮದ-ಗಜ'ಗಳ ಕಾದಾಟ
- Sports
ಸ್ಪಿನ್ ಆಗಲು ಆರಂಭವಾದರೆ ಜಗತ್ತು ಅಳಲು ಆರಂಭಿಸುತ್ತದೆ: ಪಿಚ್ ಬಗ್ಗೆ ಟೀಕೆಗೆ ಆಸಿಸ್ ಸ್ಪಿನ್ನರ್ ತಿರುಗೇಟು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಲ್ಟ್ರಾಟ್ಯಾಂಕ್ ಮಾದರಿಯಲ್ಲಿ ಮಾಡಿಫೈಗೊಂಡ ಐಷಾರಾಮಿ ಬೆಂಟ್ಲಿ ಕಾರು
ಹೆಚ್ಚಿನ ವಾಹನ ಪ್ರಿಯರಿಗೆ ತಮ್ಮ ವಾಹನಗಳನ್ನು ಮಾಡಿಫೈಗೊಳಿಸುವ ಕ್ರೇಜ್ ಹೊಂದಿರುತ್ತಾರೆ. ಅದರಲ್ಲೂ ಆಫ್-ರೋಡ್ ಪ್ರಿಯರು ಎಸ್‍ಯುವಿಗಳನ್ನು ಎಲ್ಲಾ ರೀತಿಯ ಭೂ ಪ್ರದೇಶಗಳಲ್ಲಿ ತೆರಳುವ ರೀತಿಯಲ್ಲಿ ರಗಡ್ ಲುಕ್ ನಲ್ಲಿ ಮಾಡಿಫೈ ಮಾಡುವುದು ಒಂದು ಟ್ರೆಂಡ್ ಆಗಿದೆ.

ಸಾಕಷ್ಟು ಮಾಡಿಫೈ ವಾಹನಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತದೆ, ಅದೇ ರೀತಿ ಇತ್ತೀಚೆಗೆ ಮಾಡಿಫೈ ಬೆಂಟ್ಲೆ ಕಾರು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡಿದೆ. ರಷ್ಯಾ ಮೂಲದ ಯೂಟ್ಯೂಬರ್ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ದೈತ್ಯಾಕಾರದ ಟ್ಯಾಂಕ್ ಟ್ರ್ಯಾಕ್ ವಾಹನದಂತೆ ಮಾಡಿಫೈ ಮಾಡಿದ್ದಾರೆ. ಇದು ನೋಡಲು ಹಾಲಿವುಡ್ ಸಿನಿಮಾಗಳಲ್ಲಿ ಕಣುವ ವಾಹನದಂತೆ ಇದೆ.

ಈ ಮಾಡಿಪೈ ವಾಹನವು ಮಾನ್ಸ್ಟರ್ ಲುಕ್ ಅನ್ನು ಹೊಂದಿದೆ. ಇವರು ಈ ರೀತಿ ಮಾಡಿಫೈಗೊಳಿಸಲು ಮೊದಲ ತಲೆಮಾರಿನ ಬೆಂಟ್ಲೆ ಕಾಂಟಿನೆಂಟಲ್ ಜಿಟಿ ಕಾರನ್ನು ಆರಿಸಿಕೊಂಡಿದ್ದಾರೆ. ಇದನ್ನು ಅಲ್ಟ್ರಾಟ್ಯಾಂಕ್ ಎಂದು ಕರೆಯಲಾಗುತ್ತದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಯೂಟ್ಯೂಬರ್ ತಂಡ ಮಡಿಫೈಗೊಳಿಸಲು ಸಕೆಂಡ್ ಹ್ಯಾಡ್ ಬೆಂಟ್ಲೆ ಕಾಂಟಿನೆಂಟಲ್ ಜಿಟಿಯನ್ನು ಕಡಿಮೆ ಬೆಲೆಗೆ ಖರೀದಿಸಿದ್ದಾರೆ. ಈ ಬೆಂಟ್ಲೆ ಕಾಂಟಿನೆಂಟಲ್ ಜಿಟಿ ಕಾರಿನಲ್ಲಿ ಬೃಹತ್ ಟ್ವಿನ್-ಟರ್ಬೊ ಡಬ್ಲ್ಯು12 ಎಂಜಿನ್ ಅನ್ನು ಹೊಂದಿದೆ.

ಆದರೆ ಇವರು ಖರೀದಿಸಿದ ಕಾರಿನ ಎಂಜಿನ್ ಅಷ್ಟು ಚಾಲ್ತಿಯಲ್ಲಿ ಇರಲಿಲ್ಲ. ಆದರೆ ಇದರ ಎಂಜಿನ್ ಅನ್ನು ನವೀಕರಸಿಲು ದೊಡ್ಡ ಮೊತ್ತದ ಅವಶ್ಯಕತೆ ಇದೆ.ಇದರಿಂದ ಅವರು ಟೊಯೊಟಾದ 4.3-ಲೀಟರ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಎಂಜಿನ್ ಅದರ ಹಿಂಬದಿಯ ಚಕ್ರಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಇನ್ನು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಬೆಂಟ್ಲೆ ಕಾಂಟಿನೆಂಟಲ್ ಜಿಟಿ ಕಾರಿ ಡೋರನ್ನು ಕತ್ತರಿಸಿ ರಬ್ಬರ್ ಟ್ರ್ಯಾಕ್ ಅನ್ನು ಬಾಡಿಯ ಸಂಪೂರ್ಣವಾಗಿ ಕೆಳಗಡೆ ಅಳವಡಿಸಿದ್ದಾರೆ.

ಇನ್ನು ಮೆಟಲ್ ಫ್ರೇಮ್ ಇಡೀ ದೇಹವನ್ನು ಬಲಪಡಿಸಿದರು ಮತ್ತು ಮೆಟಲ್ ಟ್ರ್ಯಾಕ್‌ಗಳನ್ನು ಪಡೆಯುವ ಟ್ಯಾಂಕ್‌ಗಳಂತಲ್ಲದೆ, ಅಲ್ಟ್ರಾಟ್ಯಾಂಕ್‌ಗೆ ರಬ್ಬರ್ ಟ್ರ್ಯಾಕ್‌ಗಳನ್ನು ಜೋಡಿಸಲಾಗಿದೆ. ಇದು ನೋಡಲು ಸ್ವಲ್ಪ ಕೊಯ್ಲು ಮಾಡುವ ಟ್ರಾಕ್ಟರುಗಳ ರೀತಿ ಕಾಣುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಇದನ್ನು ಸಂಪೂರ್ಣವಾಗಿ ಮಾಡಿಫೈಗೊಳಿಸಲು ಯೂಟ್ಯೂಬರ್ ಸುಮಾರು ಒಂಬತ್ತು ತಿಂಗಳುಗಳನ್ನು ತೆಗೆದುಕೊಂಡಿದ್ದಾರೆ. ಕುತೂಹಲಕಾರಿಯಾಗಿ, ಅಲ್ಟ್ರಾಟ್ಯಾಂಕ್ ಬ್ರೇಕ್ ಗಳನ್ನು ಹೊಂದಿಲ್ಲ, ಈ ಬೆಂಟ್ಲೆ ಟ್ಯಾಂಕ್ ಅನ್ನು ಆಫ್ ಮಾಡಲು ಎಡ ಮತ್ತು ಬಲಕ್ಕೆ ಸ್ಟೀಯರಿಂಗ್ ಅನ್ನು ತಿರಿಗಿಸಿ ಆಫ್ ಮಾಡುವ ಟೆಕ್ ನಿಕ್ ಹೊಂದಿದೆ.

ರಷ್ಯಾ ಮೂಲದ ರಷ್ಯಾ ಮೂಲದ ಇದನ್ನು ಇನ್ನು ಕೂಡ ಮಾಡಿಫೈ ಮಾಡಿಲಿದ್ದಾರೆ. ಇದರ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಬಾಡಿ ಟ್ವೀಕ್‌ಗಳನ್ನು ಮಾಡಲು, ಅವರ ತಂಡದೊಂದಿಗೆ ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇದು ಅಲ್ಟ್ರಾಟ್ಯಾಂಕ್ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡಿದೆ.
ಇನ್ನು ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರನ್ನು ಫೋಮ್ ಅಲ್ಯುಮಿನಿಯಂ ತಂತ್ರಜ್ಞಾನ ಪ್ರೇರಣೆಯಿಂದ ಅಭಿವೃದ್ಧಿಸಲಾಗಿದೆ. ಈ ಕಾರಿನ ಒಳಭಾಗದಲ್ಲಿ ವಿಶ್ವದರ್ಜೆಯ ಲೆದರ್ ವ್ಯಾರ್ಪ್ ಆಧರಿತ ಇಂಟಿರಿಯರ್ ಕುಷನ್, ಅಡ್ವಾನ್ಸ್ ಲೈಟಿಂಗ್ ಟೆಕ್ನಾಲಜಿ, ಸಾಂಪ್ರಾದಾಯಿಕ ಬೆಂಟ್ಲಿ ಗ್ರಿಲ್, 21 ಇಂಚಿನ ಫೈವ್ ಸ್ಪೋಕ್ ಚಕ್ರಗಳನ್ನು ಜೋಡಿಸಲಾಗಿದೆ.

ಪ್ರಪಂಚಾದ್ಯಂತ ಕೆಲವೇ ಕೆಲವು ಆಟೋ ಉದ್ಯಮ ಸಂಸ್ಥೆಗಳು ಮಾತ್ರವೇ ಇಂಟಿರಿಯರ್ ಡಿಸೈನ್ ಅಭಿವೃದ್ದಿ ತಂತ್ರಜ್ಞಾನಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಹೊಂದಿದ್ದು, ಇವುಗಳಲ್ಲಿ ಬೆಂಟ್ಲಿ ಮೋಟಾರ್ಸ್ ಕೂಡಾ ಒಂದು ಎನ್ನಲಾಗುತ್ತಿದೆ.

ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು ಕೇವಲ 3.3 ಸೆಕೇಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು ಪ್ರತಿ ಗಂಟೆಗೆ 333 ಕಿ.ಮಿ ಟಾಪ್ ಸ್ಪೀಡ್ ಹೊಂದಿದೆ. ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ.
Image Courtesy: AcademeG