225 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಹ್ಯಾರಿಯರ್

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷ ತನ್ನ ಹ್ಯಾರಿಯರ್ ಎಸ್‌ಯುವಿಯನ್ನು ಅಪ್ ಡೇಟ್ ಮಾಡಿತ್ತು. ಇಂಪ್ಯಾಕ್ಟ್ 2.0 ಡಿಸೈನ್ ಲ್ಯಾಂಗ್ವೇಜ್'ನಲ್ಲಿ ಅಪ್ ಡೇಟ್ ಮಾಡಲಾದ ಹ್ಯಾರಿಯರ್ ಕಾರಿನ ವಿನ್ಯಾಸವು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದೆ.

225 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಹ್ಯಾರಿಯರ್

2020 ರಲ್ಲಿ ಅಪ್ ಡೇಟ್ ಮಾಡಲಾದ ಹ್ಯಾರಿಯರ್ ಎಸ್‌ಯುವಿಯಲ್ಲಿ 167 ಬಿ‌ಹೆಚ್‌ಪಿ ಪವರ್ ಉತ್ಪಾದಿಸುವ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಅದಕ್ಕೂ ಮುನ್ನ ಈ ಎಸ್‌ಯುವಿಯಲ್ಲಿದ್ದ ಡೀಸೆಲ್ ಎಂಜಿನ್ 137 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತಿತ್ತು.

225 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಹ್ಯಾರಿಯರ್

ಆದರೂ ಕೆಲವು ಗ್ರಾಹಕರು ಈ ಎಸ್‌ಯುವಿಯನ್ನು ಹೆಚ್ಚು ಬಿ‌ಹೆಚ್‌ಪಿ ಪವರ್ ನೀಡುವಂತೆ ಮಾಡಿಫೈಗೊಳಿಸಿದ್ದಾರೆ. ಈಗ ಮಾಡಿಫೈಗೊಂಡಿರುವ ಟಾಟಾ ಹ್ಯಾರಿಯರ್ 225 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

225 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಹ್ಯಾರಿಯರ್

ಚಿತ್ರಕೃಪೆ: ನಿಕ್ ಝೀಕ್

ಮಾಡಿಫೈಗೊಂಡಿರುವ ಹ್ಯಾರಿಯರ್ ಎಸ್‌ಯುವಿಯ ವೀಡಿಯೊವನ್ನು ನಿಕ್ ಝೀಕ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಮಾಡಿಫೈಗೊಂಡಿರುವ ಹ್ಯಾರಿಯರ್ ಡಾರ್ಕ್ ಎಡಿಷನ್ ಆಗಿದೆ.

225 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಹ್ಯಾರಿಯರ್

ಈ ಎಸ್‌ಯುವಿಯು ಇತ್ತೀಚೆಗೆ ಬಿಡುಗಡೆಯಾದ ಹ್ಯಾರಿಯರ್ ಎಕ್ಸ್‌ಟಿ ಪ್ಲಸ್ ಮಾದರಿಯನ್ನು ಆಧರಿಸಿದೆ. ಮಾಡಿಫೈಗೊಂಡ ನಂತರ ಈ ಎಸ್‌ಯುವಿಗೆ ವೇಗದ ಹ್ಯಾರಿಯರ್ ಎಂಬ ಹೆಸರಿಡಲಾಗಿದೆ.

225 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಹ್ಯಾರಿಯರ್

ಮಾಡಿಫೈಗೊಂಡ ಈ ಟಾಟಾ ಹ್ಯಾರಿಯರ್‌ ಎಸ್‌ಯುವಿಯ ಮಾಲೀಕರ ಹೆಸರು ಶುಭಮ್ ಬಾಗುಲ್ ಎಂದು ತಿಳಿದು ಬಂದಿದೆ. ಅವರ ಕೋರಿಕೆಯ ಮೇರೆಗೆ ಕೋಡ್ 6 ಟ್ಯೂನಿಂಗ್‌ ಎಂಬ ಕಸ್ಟಮ್ ಕಂಪನಿಯು ಈ ಟಾಟಾ ಹ್ಯಾರಿಯರ್ ಅನ್ನು ಮಾಡಿಫೈಗೊಳಿಸಿದೆ.

225 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಹ್ಯಾರಿಯರ್

ಮಾಡಿಫೈಗೊಂಡ ನಂತರ ಈ ಹ್ಯಾರಿಯರ್‌ನ ಆರ್‌ಪಿಎಂ 6,000 ಗಳಿಗೆ ಏರಿಕೆಯಾಗಿದೆ. ಮೊದಲು ಗಂಟೆಗೆ 140 - 150 ಕಿ.ಮೀ ವೇಗದಲ್ಲಿ ಸಾಗಲು ಅಸಮರ್ಥವಾಗಿದ್ದ ಈ ಎಸ್‌ಯುವಿಯು ಮಾಡಿಫೈಗೊಂಡ ನಂತರ ಸುಲಭವಾಗಿ ಗಂಟೆಗೆ 215 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.

225 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಹ್ಯಾರಿಯರ್

ಸಾಮಾನ್ಯ ಟಾಟಾ ಹ್ಯಾರಿಯರ್‌ನಲ್ಲಿ ಅಳವಡಿಸಿರುವ ಡೀಸೆಲ್ ಎಂಜಿನ್ 167 ಬಿ‌ಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮಾಡಿಫೈ ಮಾಡಲಾದ ಈ ಹ್ಯಾರಿಯರ್ 225 ಬಿ‌ಹೆಚ್‌ಪಿ ಪವರ್ ಹಾಗೂ 470 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

1,800 ಆರ್‌ಪಿಎಂ ನಂತರ ಪವರ್ ಬಿಡುಗಡೆ ಮಾಡುವಂತೆ ಈ ಡೀಸೆಲ್ ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ. 1800 ಆರ್‌ಪಿಎಂನಲ್ಲಿ ಎಂಜಿನ್‌ನಿಂದ ಉತ್ತಮ ಇಂಧನ ದಕ್ಷತೆಯನ್ನು ಪಡೆಯಬಹುದು.

225 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಹ್ಯಾರಿಯರ್

ಇಸಿಯುವನ್ನು ರಿಮ್ಯಾಪ್ ಮಾಡಿರುವುದರಿಂದ ಈ ಎಸ್‌ಯುವಿ ಪೂರ್ಣ ಸಾಮರ್ಥ್ಯದಲ್ಲಿ ಚಲಿಸುತ್ತದೆ. ಎಂಜಿನ್‌ಗೆ ಗಾಳಿಯನ್ನು ಫಿಲ್ಟರ್ ಮಾಡುವ ಏರ್ ಫಿಲ್ಟರ್ ಅನ್ನು ಹೊಸದಾಗಿ ಅಳವಡಿಸಲಾಗಿದೆ. ಇವುಗಳ ಹೊರತಾಗಿ ಬೇರೆ ಯಾವುದೇ ಮೆಕಾನಿಕಲ್ ಬಿಡಿ ಭಾಗಗಳನ್ನು ಬದಲಿಸಿಲ್ಲ.

Most Read Articles

Kannada
English summary
Modified Tata Harrier produces 225 BHP power. Read in Kannada.
Story first published: Wednesday, July 21, 2021, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X