ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಜಮರ್ನ್ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ಕಳೆದ ಎರಡು ವರ್ಷಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಹಲವಾರು ಹೊಸ ಕಾರು ಮಾದರಿಗಳನ್ನು ಭಾರತದಲ್ಲೂ ಬಿಡುಗಡೆ ಮಾಡಿದ್ದು, ಕಂಪನಿಯು ಇದೀಗ ತನ್ನ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ಬಿಡುಗಡೆಗೆ ಸಿದ್ದವಾಗಿದೆ.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಭಾರತದಲ್ಲಿ ಸಂಪೂರ್ಣವಾಗಿ ಹೊಸ ಮಾದರಿಯಾಗಿರುವ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಇದೇ ತಿಂಗಳು 19ರಂದು ಬಿಡುಗಡೆಯಾಗಲಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಅನಾವರಣಗೊಳಿಸಿದೆ. ಹೊಸ ಕಾರು ಹ್ಯಾಚ್‌ಬ್ಯಾಕ್ ಮಾದರಿಯಾಗಿದ್ದು, ಎಎಂಜಿ ತಂತ್ರಜ್ಞಾನದೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಮರ್ಸಿಡಿಸ್-ಎಎಂಜಿ ಎ 45 ಎಸ್ ಮಾದರಿಯು ಮರ್ಸಿಡಿಸ್ ಬೆಂಝ್ ಕಂಪನಿಯ ಅತ್ಯಂತ ಶಕ್ತಿಯುತವಾದ ಫೋರ್ ಸಿಲಿಂಡರ್ ಮೋಟಾರ್ ಪ್ರೇರಿತ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 416 ಬಿಎಚ್‌ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಎಎಂಜಿ ಎ 45 ಎಸ್ ಮಾದರಿಯು ಸ್ಟ್ಯಾಂಡರ್ಡ್ ಎ 35 ಸೆಡಾನ್ ಮಾದರಿಗಿಂತಲೂ ಹೆಚ್ಚುವರಿ 115 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, 4 ಮ್ಯಾಟಿಕ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಕೇವಲ 3.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಬಲ್ಲದು.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಕಾರಿನ ವೇಗ ವರ್ದನೆಗೆ ಪೂರಕವಾಗಿ ಹೊಸ ಕಾರಿನಲ್ಲಿ ಒಟ್ಟು ಆರು ಡ್ರೈವ್ ಮೋಡ್‌ಗಳನ್ನು ನೀಡಲಾಗಿದ್ದು, ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್, ಸ್ಲಿಪೆರಿ, ಇಂಡಿವಿಜ್ಯುವಲ್‌ ಮತ್ತು ರೇಸ್ ಮೋಡ್‌ಗಳನ್ನು ಹೊಂದಿದೆ.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಹೊಸ ಕಾರು ಎಎಂಜಿ-ಶೈಲಿಯ ಪನಾಮೆರಿಕಾನಾ ಗ್ರಿಲ್‌ನೊಂದಿಗೆ ಬಲಿಷ್ಠ ವಿನ್ಯಾಸ ಹೊಂದಿದ್ದು, ಹುಡ್‌ನಲ್ಲಿ ಚೂಪಾದ ಟ್ವಿನ್ ಲೈನ್ಸ್, ಸ್ಲಿಕ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ದೊಡ್ಡ ಏರ್ ಡ್ಯಾಮ್‌ಗಳು ಮತ್ತು ಇಂಟಿಗ್ರೇಟೆಡ್ ಸ್ಪ್ಲಿಟರ್ ಕೂಡಾ ಹೊಂದಿದೆ.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಕಡಿಮೆ ಪ್ರೊಫೈಲ್ ಟೈರ್‌ಗಳೊಂದಿಗೆ ದೊಡ್ಡದಾದ 19-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿದ್ದು, ಹಿಂಬದಿಯಲ್ಲಿ ಡಿಫ್ಯೂಸರ್ ಮತ್ತು ಕ್ವಾಡ್ ಎಕ್ಸಾಸ್ಟ್ ಸಿಸ್ಟಮ್ ಮೂಲಕ ಸ್ಪೋರ್ಟಿ ಲುಕ್ ಪಡೆದುಕೊಳ್ಳಲಿದೆ.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಹಾಗೆಯೇ ಹೊಸ ಕಾರಿನ ಕ್ಯಾಬಿನ್ ಕೂಡಾ ಸ್ಪೋರ್ಟಿ ಮತ್ತು ಆಕ್ರಮಣಕಾರಿಯಾಗಿದ್ದು, ಇದು ಎಎಂಜಿ ವಿನ್ಯಾಸ ಪ್ರೇರಣೆಯೊಂದಿಗೆ ಐಷಾರಾಮಿ ಪರ್ಫಾಮೆನ್ಸ್ ಕಾರು ಬಯಸುವ ಗ್ರಾಹಕರನ್ನು ಸೆಳೆಯಲಿದೆ.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಹೊಸ ಕಾರಿನಲ್ಲಿ ಕಪ್ಪು ಆರ್ಟಿಕೊ ಮ್ಯಾನ್ ಮೇಡ್ ಲೆದರ್ ಮತ್ತು ಡೈನಾಮಿಕಾ ಮೈಕ್ರೋಫೈಬರ್ ಸಂಯೋಜನೆಯೊಂದಿಗೆ ಕಾಂಟ್ರಾಸ್ಟ್ ಸ್ಟಿಚಿಂಗ್ ಮತ್ತು ಟ್ರಿಮ್ ಪ್ಯಾಟರ್ನ್‌ನೊಂದಿಗೆ ಬರುವ ಬಕೆಟ್-ಶೈಲಿಯ ಸ್ಪೋರ್ಟ್ ಸೀಟ್‌ಗಳನ್ನು ಹೊಂದಿದ್ದು, ಎಎಂಜಿ ಪರ್ಫಾರ್ಮೆನ್ಸ್ ಸ್ಟೀರಿಂಗ್ ವ್ಹೀಲ್ ಅನ್ನು ನ್ಯಾಪ್ಪಾ ಲೆದರ್/ಡಿನಾಮಿಕಾ ಮೈಕ್ರೋಫೈಬರ್‌ನಲ್ಲಿ ಕಾಂಟ್ರಾಸ್ಟ್ ಯೆಲ್ಲೊ ಟಾಪ್ ಸ್ಟಿಚಿಂಗ್, ಯೆಲ್ಲೊ ಬಣ್ಣದಲ್ಲಿ ಗಂಟೆಯ ಗುರುತು, ಎಎಂಜಿ ಸ್ಟೀರಿಂಗ್ ವ್ಹೀಲ್ ಬಟನ್‌ ಹೊಂದಿರಲಿದೆ.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಜೊತೆಗೆ ಎಎಂಜಿ ಲೋಗೋ, ಆಂಬಿಯೆನ್ಸ್ ಲೈಟಿಂಗ್ಸ್‌ಗಳೊಂದಿಗೆ ಆಸಕ್ತ ಗ್ರಾಹಕರಿಗಾಗಿ ಮರ್ಸಿಡಿಸ್ ಇಂಡಿಯಾ ಕಂಪನಿಯು ತನ್ನ ಡಿಸೈನ್‌ನೊ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಹಲವಾರು ಗ್ರಾಹಕೀಕರಣ ಆಯ್ಕೆಗಳನ್ನು ಸಹ ನೀಡುತ್ತದೆ.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಈ ಕಾರಿನಲ್ಲಿ ಮರ್ಸಿಡಿಸ್ ಕಂಪನಿಯು ಸಿಗ್ನೇಚರ್ ಸಿಂಗಲ್ ಯೂನಿಟ್ ಡಿಸ್ಪ್ಲೇ ಜೊತೆಗೆ ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟೇಶನ್‌ಗಾಗಿ ಎರಡು ಪ್ರತ್ಯೇಕ ಸ್ಕ್ರೀನ್‌ಗಳನ್ನು ನೀಡಿದ್ದು, ಮೊದಲನೆಯದು ಟಚ್‌ಸ್ಕ್ರೀನ್ ಘಟಕವಾಗಿದ್ದರೆ ಎಂಬಕ್ಸ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಇದನ್ನು ಸೆಂಟರ್ ಕನ್ಸೋಲ್‌ನಲ್ಲಿರುವ ಟ್ರ್ಯಾಕ್‌ಪ್ಯಾಡ್, ಟಚ್‌ಸ್ಕ್ರೀನ್ ಡಿಸ್ಪ್ಲೇ, ಸ್ಟೀರಿಂಗ್ ನಿಯಂತ್ರಣಗಳು ಅಥವಾ 'ಹೇ ಮರ್ಸಿಡಿಸ್' ಎಂದು ಹೇಳುವ ಮೂಲಕ ಸರಳವಾಗಿ ಧ್ವನಿ ಆಜ್ಞೆಯನ್ನು ಬಳಸಿ ನಿಯಂತ್ರಿಸಬಹುದಾಗಿದ್ದು, ಕಾರು ಪ್ರೀಮಿಯಂ ಬರ್ಮೆಸ್ಟರ್ ಸೌಂಡ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಪವರ್‌ಫುಲ್ ಎಂಜಿನ್ ಪ್ರೇರಿತ ಮರ್ಸಿಡಿಸ್-ಎಎಂಜಿ ಎ 45 ಎಸ್ ವರ್ಷನ್ ಅನಾವರಣ

ಇದಲ್ಲದೆ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಗ್ರಾಹಕರು ಮೂರು ಎಎಂಜಿ ಡಿಸ್ಪ್ಲೇ ಶೈಲಿಗಳನ್ನು ಪಡೆದುಕೊಳ್ಳಲಿದ್ದು, ಇಲ್ಲಿ "ಕ್ಲಾಸಿಕ್", "ಸ್ಪೋರ್ಟ್" ಮತ್ತು "ಸೂಪರ್‌ ಸ್ಪೋರ್ಟ್" ನಡುವೆ ಆಯ್ಕೆ ಮಾಡಬಹುದಾಗಿದ್ದು, ಹೆಡ್-ಅಪ್ ಡಿಸ್ಪ್ಲೇ, ಬ್ಲೈಂಡ್-ಸ್ಪಾಟ್ ಅಸಿಸ್ಟ್ ಮತ್ತು ಆಕ್ಟಿವ್ ಲೇನ್ ಕೀಪ್ ಅಸಿಸ್ಟ್ ಅನ್ನು ಸಹ ಪಡೆಯುತ್ತದೆ.

Most Read Articles

Kannada
English summary
Most powerful mercedes amg a 45 s unveiled in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X