ಸೋರಿಕೆಯಾಯ್ತು 1000ಕ್ಕೂ ಹೆಚ್ಚು ಮರ್ಸಿಡಿಸ್ ಬೆಂಝ್ ಗ್ರಾಹಕರ ಮಾಹಿತಿ

ವಿಶ್ವದ ಪ್ರಮುಖ ಐಷಾರಾಮಿ ಕಾರು ತಯಾರಕ ಕಂಪನಿಗಳಲ್ಲಿ ಮರ್ಸಿಡಿಸ್ ಬೆಂಝ್ ಸಹ ಸೇರಿದೆ. ಈ ಕಂಪನಿಯ ಸಾವಿರಕ್ಕೂ ಹೆಚ್ಚು ಗ್ರಾಹಕರ ಮಾಹಿತಿ ಆಕಸ್ಮಿಕವಾಗಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.

ಸೋರಿಕೆಯಾಯ್ತು 1000ಕ್ಕೂ ಹೆಚ್ಚು ಮರ್ಸಿಡಿಸ್ ಬೆಂಝ್ ಗ್ರಾಹಕರ ಮಾಹಿತಿ

ಮರ್ಸಿಡಿಸ್ ಬೆಂಝ್ ಗ್ರಾಹಕರ ವೈಯಕ್ತಿಕ ಮಾಹಿತಿ ಹಾಗೂ ಕ್ರೆಡಿಟ್ ಕಾರ್ಡ್ ಮಾಹಿತಿಗಳು ಸೋರಿಕೆಯಾಗಿವೆ. ಈ ಮಾಹಿತಿಗಳು ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಗ್ರಾಹಕರು ಸಂಕಷ್ಟಕ್ಕೆ ಸಿಲುಕುವುದು ಬಹುತೇಕ ಖಚಿತವಾಗಿದೆ.

ಸೋರಿಕೆಯಾಯ್ತು 1000ಕ್ಕೂ ಹೆಚ್ಚು ಮರ್ಸಿಡಿಸ್ ಬೆಂಝ್ ಗ್ರಾಹಕರ ಮಾಹಿತಿ

ಮರ್ಸಿಡಿಸ್ ಬೆಂಝ್ ಅಮೆರಿಕಾದಿಂದ ಈ ಪ್ರಮಾದ ಉಂಟಾಗಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಕ್ಲೌಡ್ ಸ್ಟೋರೇಜ್ ಮೂಲಕ ತನ್ನ ಗ್ರಾಹಕರ ಖಾತೆಗಳನ್ನು ನಿರ್ವಹಿಸುತ್ತದೆ. ಇದರಿಂದ ಗ್ರಾಹಕರ ವೈಯಕ್ತಿಕ ವಿವರಗಳು ಆಕಸ್ಮಾತ್ ಆಗಿ ಸೋರಿಕೆಯಾಗಿವೆ.

ಸೋರಿಕೆಯಾಯ್ತು 1000ಕ್ಕೂ ಹೆಚ್ಚು ಮರ್ಸಿಡಿಸ್ ಬೆಂಝ್ ಗ್ರಾಹಕರ ಮಾಹಿತಿ

ಇದುವರೆಗೂ ಮಾಹಿತಿ ಸೋರಿಕೆಯಾದ ಗ್ರಾಹಕರಿಗೆ ಯಾವುದೇ ಸಮಸ್ಯೆಗಳು ಉಂಟಾದ ಬಗ್ಗೆ ವರದಿಯಾಗಿಲ್ಲವೆಂದು ಮರ್ಸಿಡಿಸ್ ಬೆಂಝ್ ಕಂಪನಿ ಹೇಳಿಕೊಂಡಿದೆ. ಯಾವುದೇ ಗ್ರಾಹಕರು ಹಣ ಕಳೆದುಕೊಂಡಿಲ್ಲವೆಂದು ಮರ್ಸಿಡಿಸ್ ಬೆಂಝ್ ಕಂಪನಿ ತಿಳಿಸಿದೆ.

ಸೋರಿಕೆಯಾಯ್ತು 1000ಕ್ಕೂ ಹೆಚ್ಚು ಮರ್ಸಿಡಿಸ್ ಬೆಂಝ್ ಗ್ರಾಹಕರ ಮಾಹಿತಿ

2014ರ ಜನವರಿಯಿಂದ 2017ರ ಜೂನ್'ವರೆಗೆ ಸಂಗ್ರಹಿಸಲಾದ ಗ್ರಾಹಕರ ಹಾಗೂ ವಿತರಕರ ಮಾಹಿತಿಗಳು ಸೋರಿಕೆಯಾಗಿವೆ. ಈ ಗ್ರಾಹಕರಲ್ಲಿ ಯಾರೂ ಚಿಂತೆ ಪಡುವ ಅಗತ್ಯವಿಲ್ಲವೆಂದು ತಿಳಿಸಿರುವ ಬೆಂಝ್ ಕಂಪನಿಯು ಅವರಿಗೆ ಸಮಾಧಾನಕರ ಬಹುಮಾನಗಳನ್ನು ಘೋಷಿಸಿದೆ.

ಸೋರಿಕೆಯಾಯ್ತು 1000ಕ್ಕೂ ಹೆಚ್ಚು ಮರ್ಸಿಡಿಸ್ ಬೆಂಝ್ ಗ್ರಾಹಕರ ಮಾಹಿತಿ

ಕ್ರೆಡಿಟ್ ಕಾರ್ಡ್‌ ಹಾಗೂ ಡ್ರೈವಿಂಗ್ ಲೈಸೆನ್ಸ್'ನಂತಹ ಪ್ರಮುಖ ದಾಖಲೆಗಳ ಮಾಹಿತಿ ಬಹಿರಂಗವಾಗಿರುವ ಗ್ರಾಹಕರಿಗೆ ಕಂಪನಿಯು ಎರಡು ವರ್ಷಗಳ ಉಚಿತ ಚಂದಾದಾರಿಕೆ ನೀಡಲಿದೆ.

ಸೋರಿಕೆಯಾಯ್ತು 1000ಕ್ಕೂ ಹೆಚ್ಚು ಮರ್ಸಿಡಿಸ್ ಬೆಂಝ್ ಗ್ರಾಹಕರ ಮಾಹಿತಿ

ಮರ್ಸಿಡಿಸ್ ಬೆಂಝ್ ಕಂಪನಿಯು ಇತ್ತೀಚೆಗಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಎಸ್-ಕ್ಲಾಸ್ ಐಷಾರಾಮಿ ಸೆಡಾನ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಈ ಕಾರನ್ನು ಸಿಬಿಯು ಮೂಲಕ ದೇಶದಲ್ಲಿ ಮಾರಾಟ ಮಾಡಲಿದೆ.

ಸೋರಿಕೆಯಾಯ್ತು 1000ಕ್ಕೂ ಹೆಚ್ಚು ಮರ್ಸಿಡಿಸ್ ಬೆಂಝ್ ಗ್ರಾಹಕರ ಮಾಹಿತಿ

ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಹೊಸ ಎಸ್-ಕ್ಲಾಸ್ ಐಷಾರಾಮಿ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಜೂನ್ 17ರಂದು ಈ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು.

ಸೋರಿಕೆಯಾಯ್ತು 1000ಕ್ಕೂ ಹೆಚ್ಚು ಮರ್ಸಿಡಿಸ್ ಬೆಂಝ್ ಗ್ರಾಹಕರ ಮಾಹಿತಿ

ಈ ಕಾರಿನ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.2.17 ಕೋಟಿಗಳಾಗಿದೆ. ಎಸ್-ಕ್ಲಾಸ್ ಐಷಾರಾಮಿ ಸೆಡಾನ್ ಕಾರ್ ಅನ್ನು ಎಸ್ 400 ಡಿ 4 ಮ್ಯಾಟಿಕ್ ಹಾಗೂ ಎಸ್ 450 4 ಮ್ಯಾಟಿಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಸೋರಿಕೆಯಾಯ್ತು 1000ಕ್ಕೂ ಹೆಚ್ಚು ಮರ್ಸಿಡಿಸ್ ಬೆಂಝ್ ಗ್ರಾಹಕರ ಮಾಹಿತಿ

ಈ ಕಾರು ಹಲವಾರು ಸುರಕ್ಷತಾ ಹಾಗೂ ತಂತ್ರಜ್ಞಾನದ ಫೀಚರ್'ಗಳನ್ನು ಹೊಂದಿದೆ. ಉದ್ಯಮಿಗಳನ್ನು ಹಾಗೂ ಸೆಲೆಬ್ರಿಟಿಗಳನ್ನು ಸೆಳೆಯಲೆಂದು ಈ ಕಾರಿನಲ್ಲಿ ಹಲವಾರು ಐಷಾರಾಮಿ ಫೀಚರ್'ಗಳನ್ನು ನೀಡಲಾಗಿದೆ.

Most Read Articles

Kannada
English summary
Nearly 1000 Mercedes Benz USA customers information leaked accidentally. Read in Kannada.
Story first published: Tuesday, June 29, 2021, 20:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X