ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ಐಷಾರಾಮಿ ಕಾರು ತಯಾರಕರಾದ ಲ್ಯಾಂಡ್ ರೋವರ್ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಇತ್ತೀಚೆಗೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿತ್ತು.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯು ಇದೇ ತಿಂಗಳ 26 ರಂದು ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆ ಮಾಡಲಿದೆ, ಇದೀಗ ಈ ಹೊಸ ಐಷಾರಾಮಿ ಎಸ್‍ಯುವಿಯ ಚಿತ್ರಗಳು ಬಹಿರಂಗಗೊಂಡಿವೆ. ಈ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಸೋರಿಕೆಯಾದ ಚಿತ್ರಗಳು ಕಾರಿನ ನೋಟವನ್ನು ನಮಗೆ ನೀಡುತ್ತದೆ. ಈ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯು ಹೂಸ ಬದಲಾವಣೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯ ಮುಂಭಾಗದ ಆಕಾರ, ಗ್ರಿಲ್ ಮತ್ತು ಹೆಡ್‌ಲೈಟ್ ಸಿಸ್ಟಂ ಪ್ರಸ್ತುತ ಜನರೇಷನ್ ರೇಂಜ್ ರೋವರ್ ಮಾದರಿಯಲ್ಲಿರುವಂತೆಯೇ ಇದೆ ಎಂದು ನೀವು ಸ್ಪಷ್ಟವಾಗಿ ನೋಡಬಹುದು. ಆದರೆ ವಿನ್ಯಾಸದ ದೃಷ್ಟಿಯಿಂದ ಹೆಚ್ಚು ಭವಿಷ್ಯವನ್ನು ಕಾಣುತ್ತದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ಈ ಕಾರಿನ ಎರಡು-ಬಾಕ್ಸ್ ಪ್ರೊಫೈಲ್ ಉಳಿದಿದೆ, ಮತ್ತು ಇದು ಎ-ಪಿಲ್ಲರ್ ಬಳಿ ಮುಂಭಾಗದ ಡೋರಿನ ಮೇಲೆ ಲಂಬವಾದ ವಿವರವನ್ನು ನೋಡುತ್ತಿರುವಾಗ ಅದು ಬಲವಾದ ಲೈನ್ ಗಳನ್ನು ಕೂಡ ಕಾಣಬಹುದು. ಈ ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣುವುದು ಕಾರಿನ ಹಿಂಭಾಗ ಮತ್ತು ಟೈಲ್‌ಲೈಟ್ ಟೈಲ್ ಗೇಟ್‌ನಲ್ಲಿ ಪೂರ್ಣವಾಗಿ ಅಗಲವಾಗಿ ಚಲಿಸುತ್ತದೆ ಮತ್ತು ಹಿಂಭಾಗದಲ್ಲಿ ಲೈಟಿಂಗ್ ಕ್ಲಸ್ಟರ್‌ಗಳು ಸಹ ಕಾಣುತ್ತವೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ಕ್ಯಾಬಿನ್‌ನ ಚಿತ್ರವೂ ಕೂಡ ಬಹಿರಂಗವಾಗಿದೆ. ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯು 11.4 ಇಂಚಿನ ಪಿವಿ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನಾವು ಗಮನಿಸುತ್ತೇವೆ, ಇದು ಈಗ ಲ್ಯಾಂಡ್ ರೋವರ್ ಕುಟುಂಬದಿಂದ ಇತರ ಕಾರುಗಳಲ್ಲಿ ಪ್ರಧಾನವಾಗಿದೆ. ಇದರೊಂದಿಗೆ ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಲೆದರ್ ಅಪ್ಹೋಲ್ಸ್ಟರಿ ಅನ್ನು ಒಳಗೊಂಡಿರುತ್ತದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ಇನ್ನು ಈ ಹೊಸ ಎಸ್‍ಯುವಿಯಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಲಾಗಿದೆ. ಇದರೊಂದಿಗೆ ಸರೌಂಡ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಏರ್ ಸಸ್ಪೆಂಕ್ಷನ್, ಪಿಬಿಫಿಲ್ಟರ್‌ನೊಂದಿಗೆ ಕ್ಯಾಬಿನ್ ಏರ್ ಮುಂತಾದ ಸ್ಟ್ಯಾಂಡರ್ಡ್ ಫೀಚರುಗಳನ್ನು ಹೊಂದಿರಲಿದೆ,

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ಈ ಹೊಸ ರೇಂಜ್ ರೋವರ್ ಕಂಪನಿಯ ಹೊಚ್ಚ ಹೊಸ ಎಂಎಲ್‌ಎ ಫ್ಲೆಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಮೊದಲ ಲ್ಯಾಂಡ್ ರೋವರ್ ಆಗಿದೆ. ಇದನ್ನು ಆಂತರಿಕ ದಹನಕಾರಿ ಎಂಜಿನ್, ಪ್ಲಗ್-ಇನ್ ಹೈಬ್ರಿಡ್ ಮತ್ತು ಸಂಪೂರ್ಣ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ಇನ್ನು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ತನ್ನ ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಗಿತ್ತು. ಈ ಹೊಸ ಎಸ್‌ವಿಆರ್ ರೇಂಜ್ ರೋವರ್ ಸ್ಪೋರ್ಟ್‌ನ ಟಾಪ್ ವೆರಿಯೆಂಟ್ ಆಗಿದೆ. ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯ ಭಾರತದಲ್ಲಿ ಸಿಬಿಯು(ಕಂಪ್ಲೀಟ್ಲಿ ಬಿಲ್ಟ್-ಅಪ್ ಯುನಿಟ್) ಆಗಿ ಬರುತ್ತದೆ. ಈ ಎಸ್‍ಯುವಿಯಲ್ಲಿ 5.0 ಲೀಟರ್ ಸೂಪರ್ ಚಾರ್ಜ್ಡ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ಈ ಎಂಜಿನ್ 567 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯು ಕೇವಲ 4.5 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಸ್‍ಯುವಿಯು 283 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯಯು ಎಸ್‌ವಿಆರ್ ಎಲೆಕ್ಟ್ರಾನಿಕ್ ಏರ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಈ ಏರ್ ಸಸ್ಪೆಂಕ್ಷನ್ ಆಯಾ ಡ್ರೈವಿಂಗ್ ಮೋಡ್‌ಗಳ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಎಸ್‍ಯುವಿಯಲ್ಲಿ ಕಂಫರ್ಟ್, ಗ್ರಾಸ್/ಗ್ರ್ಯಾವೆಲ್/ಸ್ನೊ, ಮಡ್, ರುಟ್ಸ್, ಸ್ಯಾಂಡ್ ಮತ್ತು ಇಕೋ ಎಂಬ ಡ್ರೈವಿಂಗ್ ಮೋಡ್ ಗಳಿವೆ, ರೇಂಜ್ ರೋವರ್ ಸ್ಪೋರ್ಟ್‌ನ ಇತರ ಮಾದರಿಗೆ ಹೋಲಿಸಿದರೆ ಎಸ್‌ವಿಆರ್ ವೆರಿಯೆಂಟ್ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ಈ ಎಸ್‍ಯುವಿಯಲ್ಲಿ ಡಿಆರ್‌ಎಲ್‌ಗಳೊಂದಿಗಿನ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್ ಗಳು, ಬೂಟ್ ಲಿಡ್ ನಲ್ಲಿ ಕಾರ್ಬನ್ ಫೈಬರ್ ಮತ್ತು ಎಸ್‌ವಿಆರ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ.ಇನ್ನು ಈ ಎಸ್‍ಯುವಿಯಲ್ಲಿ 21 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಬ್ಲ್ಯಾಕ್ ಕಾಂಟ್ರಸ್ಟ್ ರೂಫ್ ಅನ್ನು ಹೊಂದಿದೆ. ಇನ್ನು ಸುರಕ್ಷತೆಗಾಗಿ, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯೂಷನ್(ಇಬಿಡಿ), ಎಲೆಕ್ಟ್ರಾನಿಕ್ ಟ್ರ್ಯಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ರೋಲ್ ಸ್ಟೆಬಿಲಿಟಿ ಕಂಟ್ರೋಲ್, 8 ಏರ್ ಬ್ಯಾಗ್ ಗಳು ಸೇರಿದಂತೆ ಹಲವಾರು ಫೀಚರ್ಸ್ ಗಳನ್ನು ಒಳಗೊಂಡಿವೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿ

ಇನ್ನು ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯು ಬಿಡುಗದೆಯಾದ ಬಳಿಕ ಎಕ್ಸ್5 ಮತ್ತು ಎಕ್ಸ್7 ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಈ ಐಷಾರಾಮಿ ಎಸ್‍ಯುವಿಯು ಇದೇ ತಿಂಗಳಿನಲ್ಲಿ ಅನಾವರಣವಗಲಿದೆ. ಇನ್ನು ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
New generation range rover suv pictures details
Story first published: Thursday, October 21, 2021, 14:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X