2021ರ ಮಿನಿ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜಾನ್ ಕೂಪರ್ ವರ್ಕ್ಸ್ ಬಿಡುಗಡೆ

ಐಷಾರಾಮಿ ಕಾಾರು ಉತ್ಪಾದನಾ ಕಂಪನಿ ಮಿನಿ ತನ್ನ ಜನಪ್ರಿಯ ಕಾರು ಮಾದರಿಗಳಾದ ತ್ರಿ ಡೋರ್ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜಾನ್ ಕೂಪರ್ ವರ್ಕ್ಸ್(ಜೆಸಿಡಬ್ಲ್ಯು) ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಮಿನಿ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜೆಸಿಡಬ್ಲ್ಯು ಬಿಡುಗಡೆ

ತ್ರಿ ಡೋರ್ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜಾನ್ ಕೂಪರ್ ವರ್ಕ್ಸ್(ಜೆಸಿಡಬ್ಲ್ಯು) ಆವೃತ್ತಿಗಳ ಬಿಡುಗಡೆಯೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 38 ಲಕ್ಷ ಬೆಲೆ ಹೊಂದಿವೆ. ಗ್ರಾಹಕರು ತಮ್ಮ ಬೇಡಿಕೆಯೆಂತೆ ಮಿನಿ ಹೊಸ ಕಾರು ಮಾದರಿಗಳನ್ನು ತ್ರಿ ಡೋರ್ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜಾನ್ ಕೂಪರ್ ವರ್ಕ್ಸ್ ಆವೃತ್ತಿಗಳಲ್ಲಿ ಖರೀದಿಸಬಹುದಾಗಿದ್ದು, ಹೊಸ ಮಾದರಿಗಳು ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಪಡೆದುಕೊಂಡಿವೆ.

ಮಿನಿ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜೆಸಿಡಬ್ಲ್ಯು ಬಿಡುಗಡೆ

ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ತ್ರಿ ಡೋರ್ ಹ್ಯಾಚ್‌ಬ್ಯಾಕ್ ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 38 ಲಕ್ಷ ಬೆಲೆ ಹೊಂದಿದ್ದರೆ ಕನ್ವರ್ಟಿಬಲ್ ಮಾದರಿಯು ರೂ. 44 ಲಕ್ಷ ಮತ್ತು ಜಾನ್ ಕೂಪರ್ ವರ್ಕ್ಸ್(ಜೆಸಿಡಬ್ಲ್ಯು) ಆವೃತ್ತಿಯು ರೂ. 45.50 ಲಕ್ಷ ಬೆಲೆ ಹೊಂದಿದೆ.

ಮಿನಿ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜೆಸಿಡಬ್ಲ್ಯು ಬಿಡುಗಡೆ

ಹೊಸ ತ್ರಿ ಡೋರ್ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜಾನ್ ಕೂಪರ್ ವರ್ಕ್ಸ್ ಆವೃತ್ತಿಗಳಲ್ಲಿ ಕಂಪನಿಯು ನವೀಕರಿಸಿದ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್‌ಲ್ಯಾಂಪ್, ಹುಡ್ ಸ್ಕೋಪ್, ಸರೌಂಡ್ ಬಾಡಿ ಕ್ಲ್ಯಾಂಡಿಂಗ್, ಎಲ್ಇಡಿ ಡಿಆರ್‌ಎಲ್ಎಸ್ ಜೊತೆ ಟರ್ನ್ ಇಂಡಿಕೇಟರ್ ಮತ್ತು 17-ಇಂಚಿನ ಅಲಾಯ್ ವೀಲ್ಹ್ ಜೋಡಣೆ ಹೊಂದಿವೆ.

ಮಿನಿ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜೆಸಿಡಬ್ಲ್ಯು ಬಿಡುಗಡೆ

ಹೈ ಎಂಡ್ ಮಾದರಿಯಾದ ಜಾನ್ ಕೂಪರ್ ವರ್ಕ್ಸ್ ಆವೃತ್ತಿಯಲ್ಲಿ ಇತರೆ ಕಾರು ಆವೃತ್ತಿಗಳಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳು ಲಭ್ಯವಿದ್ದು, ಬ್ಯಾನೆಟ್ ಸ್ಟ್ರೀಪ್, ಕಾಂಟ್ರಾಸ್ಟ್ರಿಂಗ್ ಫಿನಿಂಗ್ ಹೊಂದಿರುವ ರೂಫ್, ಮಿರರ್ ಕ್ಯಾಪ್ಸ್, 18 ಇಂಚಿನ ಅಲಾಯ್ ವೀಲ್ಹ್ ಮತ್ತು ಸ್ಪೋರ್ಟಿ ಎಡ್ಜ್ ವಿನ್ಯಾಸ ಹೊಂದಿದೆ.

ಮಿನಿ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜೆಸಿಡಬ್ಲ್ಯು ಬಿಡುಗಡೆ

ಜೊತೆಗೆ ಹೊಸ ಕಾರುಗಳ ಒಳಭಾಗದಲ್ಲೂ ಕೆಲವು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ರೌಂಡ್ ಶೇಫ್ ಥೀಮ್ ಹೊಂದಿರುವ ಕ್ಯಾಬಿನ್, ಸ್ಪೋರ್ಟಿ ಸೀಟ್‌ಗಳು, ಡಾರ್ಕ್ ಇಂಟಿರಿಯರ್, ರೆಡ್ ಕಾಂಟ್ರಾಸ್ಟ್ ಹೊಂದಿದೆ.

ಮಿನಿ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜೆಸಿಡಬ್ಲ್ಯು ಬಿಡುಗಡೆ

ಹೊಸ ಕಾರುಗಳಲ್ಲಿ 8.8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 5-ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆ್ಯಪಲ್ ಕಾರ್‌ಪ್ಲೇ, ಆ್ಯಂಬಿಯೆಂಟ್ ಲೈಟಿಂಗ್ಸ್, ಹಾರ್ಮನ್ ಕಾರ್ಡೊನ್ ಆಡಿಯೋ ಸಿಸ್ಟಂ, ಕ್ರೂಸ್ ಕಂಟ್ರೋಲ್ ಸೌಲಭ್ಯಗಳನ್ನು ಹೊಂದಿದೆ.

ಮಿನಿ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜೆಸಿಡಬ್ಲ್ಯು ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಮಿನಿ ಕಂಪನಿಯು ತ್ರಿ ಡೋರ್ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜಾನ್ ಕೂಪರ್ ವರ್ಕ್ಸ್ ಮಾದರಿಗಳಲ್ಲಿ ಒಂದೇ ಮಾದರಿಯ 2.0-ಲೀಟರ್ ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ತ್ರಿ ಡೋರ್ ಹ್ಯಾಚ್‌ಬ್ಯಾಕ್ ಮತ್ತು ಕನ್ವರ್ಟಿಬಲ್ ಮಾದರಿಯಲ್ಲಿ ಒಂದು ಮಾದರಿಯ ಪರ್ಫಾಮೆನ್ಸ್ ಹೊಂದಿದ್ದರೆ ಜಾನ್ ಕೂಪರ್ ವರ್ಕ್ಸ್ ಮಾದರಿಯು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ನೀಡಬಲ್ಲದು.

ಮಿನಿ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜೆಸಿಡಬ್ಲ್ಯು ಬಿಡುಗಡೆ

ತ್ರಿ ಡೋರ್ ಹ್ಯಾಚ್‌ಬ್ಯಾಕ್ ಮತ್ತು ಕನ್ವರ್ಟಿಬಲ್ ಮಾದರಿಗಳು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನೊಂದಿಗೆ 189-ಬಿಎಚ್‌ಪಿ, 280-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಜಾನ್ ಕೂಪರ್ ವರ್ಕ್ಸ್ ಮಾದರಿಯು 8-ಸ್ಪೀಡ್ ಸ್ಟೆಪ್ಟ್ರಾನಿಕ್ಸ್ ಸ್ಪೋರ್ಟ್ ಟ್ರಾನ್ಸ್‌ಮಿಷನ್‌ನೊಂದಿಗೆ 228-ಬಿಎಚ್‌ಪಿ, 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಮಿನಿ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜೆಸಿಡಬ್ಲ್ಯು ಬಿಡುಗಡೆ

ಹೊಸ ಕಾರಿನಲ್ಲಿ ಕಂಪನಿಯು ವಿವಿಧ ಮಾದರಿಗಳಿಗೆ ಅನುಗುಣವಾಗಿ 11 ಬಣ್ಣಗಳ ಆಯ್ಕೆ ನೀಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಮಲ್ಟಿ ಏರ್‌ಬ್ಯಾಗ್, ಬ್ರೇಕ್ ಅಸಿಸ್ಟ್, ರಿಯರ್ ಕ್ಯಾಮೆರಾದೊಂದಿಗೆ ಪಾರ್ಕ್ ಅಸಿಸ್ಟ್, ರನ್‌ಪ್ಲ್ಯಾಟ್ ಇಂಡಿಕೇಟರ್, ಡೈನಾಮಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ ಮತ್ತು ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ ಸೌಲಭ್ಯವಿದೆ.

Most Read Articles

Kannada
English summary
2021 Mini Hatchback, Convertible & John Cooper Works (JCW) Launched.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X