ಅನಾವರಣವಾಯ್ತು ಪವರ್‌ಫುಲ್ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಕೊನೆಗೂ ತನ್ನ ಹೊಸ ಎಂ5 ಸಿಎಸ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಇದು ಬಿಎಂಡಬ್ಲ್ಯು ಕಾರುಗಳ ಸರಣಿಯಲ್ಲಿ ಅತ್ಯಂತ ಪವರ್‌ಫುಲ್ ಮಾದರಿ ಇದಾಗಿದೆ.

ಅನಾವರಣವಾಯ್ತು ಪವರ್‌ಫುಲ್ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು

ಈ ಹೊಸ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು 4.4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,000 ಆರ್‌ಪಿಎಂನಲ್ಲಿ 635 ಬಿಹೆಚ್‍ಪಿ ಪವರ್ ಮತ್ತು 1,800 ಆರ್‌ಪಿಎಂ ಮತ್ತು 5,950 ಆರ್‌ಪಿಎಂ ನಡುವೆ 750 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು ಎಂ ಎಕ್ಸ್‌ಡ್ರೈವ್‌ಗೆ ಜೋಡಿಯಾಗಿ ಬರುತ್ತದೆ. ಜೊತೆಗೆ ಎಡಬ್ಲ್ಯುಡಿ ಸಿಸ್ಟಂ ಅನ್ನು ಹೊಂದಿದೆ.

ಅನಾವರಣವಾಯ್ತು ಪವರ್‌ಫುಲ್ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು

ಹೊಸ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು ಕೇವಲ 3 ಸೆಕೆಂಡುಗಳ 0 ದಿಂದ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು 10.4 ಸೆಕೆಂಡುಗಳ 0 ದಿಂದ 200 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಪವರ್‌ಫುಲ್ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು

ಇನ್ನು ಈ ಹೊಸ ಬಿಎಂಡಬ್ಲ್ಯು ಎಂ5 ಸಿಎಸ್ ಕಾರಿನ ಟಾಪ್ ಸ್ಪೀಡ್ 300 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ. ಇನ್ನು ಕಂಪನಿಯ ಪ್ರಕಾರ, ಆಯಿಲ್ ಪ್ಯಾನ್, ಹೆಚ್ಚುವರಿ ಸಂಪ್ ಮತ್ತು ಎಂಜಿನ್‌ಗೆ ಹೆಚ್ಚು ಕಟ್ಟುನಿಟ್ಟಾದ ನವೀಕರಣವನ್ನು ಪಡೆದುಕೊಂಡಿದೆ.

ಅನಾವರಣವಾಯ್ತು ಪವರ್‌ಫುಲ್ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು

ಹೊಸ ಬಿಎಂಡಬ್ಲ್ಯು ಎಂ5 ಸಿಎಸ್ 20 ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ. ಈ ಪವರ್‌ಫುಲ್ ಕಾರಿನ ಸಸ್ಪೆಂಕ್ಷನ್ ಸೆಟಪ್ ಎಂ8 ಗ್ರ್ಯಾನ್ ಕೂಪೆ ಕಾಂಪಿಟೇಷನ್ ಮಾದರಿಯಿಂದ ಪಡೆದುಕೊಂಡಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಅನಾವರಣವಾಯ್ತು ಪವರ್‌ಫುಲ್ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು

ಇನ್ನು ಈ ಬಿಎಡಬ್ಲ್ಯು ಎಂ ಕಾರು ಎಂ ಕಾರ್ಬನ್-ಸೆರಾಮಿಕ್ ಬ್ರೇಕ್‌ಗಳನ್ನು ಸ್ಟ್ಯಾಂಡರ್ಡ್‌ನಂತೆ ಪಡೆಯುತ್ತದೆ, ಮುಂಭಾಗದಲ್ಲಿ 6-ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್‌ಗಳು ಮತ್ತು ಹಿಂಭಾಗದಲ್ಲಿ ವ್ಹೀಲ್ ಗಳಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ಗಳು ಇವೆ.

ಅನಾವರಣವಾಯ್ತು ಪವರ್‌ಫುಲ್ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು

ಬವೇರಿಯನ್ ಕಾರು ತಯಾರಕರು ಕಾರಿನ ಹುಡ್‌ಗಾಗಿ ಕಾರ್ಬನ್ ಫೈಬರ್ ಪ್ಲಾಸ್ಟಿಕ್ ಅನ್ನು ಬಳಸಿದ್ದಾರೆ. ಇನ್ನು ಸ್ಪ್ಲಿಟರ್, ರಿಯರ್ ಸ್ಪಾಯ್ಲರ್, ಮಿರರ್ ಕ್ಯಾಪ್ಸ್, ರಿಯರ್ ಡಿಫ್ಯೂಸರ್, ಮತ್ತು ಸೀಟುಗಳು (ಕ್ಯಾಬಿನ್‌ನಲ್ಲಿರುವ ಎಲ್ಲಾ ನಾಲ್ಕು ಬಕೆಟ್ ಸೀಟುಗಳು) ಕಾರ್ಬನ್ ಫೈಬರ್ ಅನ್ನು ಬಳಸಿಕೊಳ್ಳುತ್ತವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಅನಾವರಣವಾಯ್ತು ಪವರ್‌ಫುಲ್ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು

ಇನ್ನು ಬಿಎಂಡಬ್ಲ್ಯು ಎಂ5 ಸಿಎಸ್ 20 ಕಾರಿನಲ್ಲಿ ಲೇಸರ್ಲೈಟ್ ಹೆಡ್‌ಲ್ಯಾಂಪ್‌ಗಳು , ಗ್ರಿಲ್‌ಗೆ ಗೋಲ್ಡನ್ ಬಣ್ಣದ ಫೀನಿಶಿಂಗ್ ಮತ್ತು ಕ್ವಾಡ್ ಟೈಲ್‌ಪೈಪ್‌ಗಳೊಂದಿಗೆ ಸ್ಟೇನ್‌ಲೆಸ್ ಸ್ಟೀಲ್ ಸ್ಪೋರ್ಟ್ಸ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಅನಾವರಣವಾಯ್ತು ಪವರ್‌ಫುಲ್ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು

ಇನ್ನು ಈ ಪರ್ಫಾಮೆನ್ಸ್ ಬಿಎಂಡಬ್ಲ್ಯು ಎಂ ಕಾರಿನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ವರ್ಚುವಲ್ ಕಾಕ್‌ಪಿಟ್, ಕಾರ್ಬನ್ ಫೈಬರ್ ಪೆಡಲ್ ಶಿಫ್ಟರ್‌ಗಳನ್ನು ಹೊಂದಿರುವ ಎಂ ಅಲ್ಕಾಂಟರಾ ಸ್ಟೀಯರಿಂಗ್ ವೀಲ್ ಮತ್ತು ಅಲ್ಕಾಂಟರಾ ಹೆಡ್‌ಲೈನರ್ ಅನ್ನು ಸಹ ಪಡೆಯುತ್ತದೆ.

Most Read Articles

Kannada
English summary
BMW M5 CS Debuts As The Most Powerful ‘M’ Car. Read In Kannada.
Story first published: Thursday, January 28, 2021, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X