ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಬಿಡುಗಡೆ

ಲ್ಯಾಂಡ್ ರೋವರ್ ಕಂಪನಿಯು ತನ್ನ ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಮಾದರಿಗಳನ್ನು ಬ್ರಿಟನ್ ನಲ್ಲಿ ಅನಾವರಣಗೊಳಿಸಿದೆ. ಈ ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಮಾದರಿಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಬಿಡುಗಡೆ

ಲ್ಯಾಂಡ್ ರೋವರ್ ವಿಶೇಷ ವಾಹನ ಕಾರ್ಯಾಚರಣೆಗಳ ವಾಣಿಜ್ಯ ವಿಭಾಗದ ನಿರ್ದೇಶಕ ಮಾರ್ಕ್ ಟರ್ನರ್ ಮಾತನಾಡಿ, ರೇಂಜ್ ರೋವರ್ ಐಷಾರಾಮಿ ಎಸ್‌ಯುವಿ ವಿಭಾಗವನ್ನು ಅರ್ಧ ಶತಮಾನಕ್ಕೂ ಹೆಚ್ಚು ಕಾಲವನ್ನು ಪೂರೈಸಿದೆ. ನಮ್ಮ ಎಸ್‌ವಿಆಟೋಬಯಾಗ್ರಫಿ ಮಾದರಿಗಳು ಗ್ರಾಹಕರಿಗೆ ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ನೀಡುತ್ತವೆ. ಹೊಸ ಅಲ್ಟಿಮೇಟ್ ಆವೃತ್ತಿಗಳು ಆ ಪರಿಷ್ಕರಣೆ ಮತ್ತು ಅತ್ಯಾಧುನಿಕತೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದು ಹೇಳಿದ್ದಾರೆ.

ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಬಿಡುಗಡೆ

ರೇಂಜ್ ರೋವರ್‌ಗೆ ವಿಶೇಷವಾದ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಆವೃತ್ತಿಗಳು ಹೊಸ ಸ್ಯಾಟಿನ್-ಸಿದ್ಧಪಡಿಸಿದ ಆರ್ಚರ್ಡ್ ಗ್ರೀನ್ ಬಣ್ಣವನ್ನು ಹೊಂದಿದೆ. ಇದು ನಾರ್ವಿಕ್ ಬ್ಲ್ಯಾಕ್ ರೂಫ್ ಅನ್ನು ಹೊಂದಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಬಿಡುಗಡೆ

ಇನ್ನು ಈ ಎಸ್‍ಯುವಿಯಲ್ಲಿ ಬಾನೆಟ್ ಮತ್ತು ಟೈಲ್‌ಗೇಟ್‌ನಲ್ಲಿ ಗ್ಲೋಸ್ ಬ್ಲ್ಯಾಕ್ ನರ್ಲ್ಡ್ ಇನ್ಫಿಲ್ ಮತ್ತು ಮೆಟಲ್ ರೇಂಜ್ ರೋವರ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ. ಎಸ್‌ವಿ ರೌಂಡೆಲ್ ಬಿ-ಪಿಲ್ಲರ್‌ನಲ್ಲಿ ಕಾಪರ್ ಲೇಪನ ಮತ್ತು ಬ್ಲ್ಯಾಕ್ ಎನ್ ಎಮೆಲ್ ಪಡೆಯುತ್ತದೆ.

ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಬಿಡುಗಡೆ

ಲ್ಯಾಂಡ್ ರೋವರ್ ಈ ಸ್ಪಷಲ್ ಎಡಿಷನ್ ಮಾದರಿಗಳಲ್ಲಿ ಹೊರಭಾಗದಲ್ಲಿ ಸೈಡ್ ವೆಂಟ್ಸ್, ಬಾನೆಟ್ ಫಿನಿಶರ್, ಗ್ರಿಲ್ ಮತ್ತು ಫ್ರಂಟ್ ಬಂಪರ್ ಅಸ್ಸೆಂಟ್ ಗಳೊಂದಿಗೆ ಗ್ರ್ಯಾಫೈಟ್ ಅಟ್ಲಾಸ್ ಫಿನಿಶ್ ಪಡೆಯುತ್ತದೆ. ಈ ಎಸ್‍ಯುವಿ 22-ಇಂಚಿನ ಬೃಹತ್ ಅಲಾಯ್ ವ್ಹೀಲ್ ಗಳಲನ್ನು ಹೊಂದಿವೆ. ಇದು ಗ್ಲೋಸ್ ಡಾರ್ಕ್ ಗ್ರೇ ಫಿನಿಶಿಂಗ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಬಿಡುಗಡೆ

ಇನ್ನು ಒಳಗೆ ಕ್ಯಾಬಿನ್ ರೋಟರಿ ಶಿಫ್ಟ್ ಕಂಟ್ರೋಲ್ ಮತ್ತು ಸ್ಟಾರ್ಟರ್ ಬಟನ್ ಮತ್ತು ಪೆಡಲ್‌ಗಳನ್ನು ಹೊಂದಿವೆ. ಪ್ಯಾಡಲ್ ಶಿಫ್ಟರ್‌ಗಳನ್ನು ಕೆಂಪು ಬಣ್ಣದಲ್ಲಿದೆ. ಅಲ್ಟಿಮೇಟ್ ಆವೃತ್ತಿಯ ಟ್ರೆಡ್‌ಪ್ಲೇಟ್‌ಗಳ ಜೊತೆಗೆ ನಾಲ್ಕು ಹೆಡ್‌ರೆಸ್ಟ್‌ಗಳಲ್ಲಿ ಎಸ್‌ವಿ ರೌಂಡಲ್‌ಗಳಿವೆ.

ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಬಿಡುಗಡೆ

ಫಿನಿಶಿಂಗ್ ಟಚ್ ಸೆಂಟರ್ ಕನ್ಸೋಲ್‌ನಲ್ಲಿ 'ಎಸ್‌ವಿ ಬೆಸ್‌ಪೋಕ್ ಅಲ್ಟಿಮೇಟ್ ಎಡಿಶನ್' ಕಮಿಷನಿಂಗ್ ಪ್ಲೇಕ್ ಆಗಿದೆ, ಇದು ಕೂಪರ್ ಎಸ್‌ವಿ ರೌಂಡೆಲ್ ಅನ್ನು ಹೊಂದಿದೆ. ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಆವೃತ್ತಿಗಳನ್ನು ಸ್ಟ್ಯಾಂಡರ್ಡ್ ಮತ್ತು ಲಾಂಗ್-ವೀಲ್‌ಬೇಸ್ ಆವೃತ್ತಿಗಳಲ್ಲಿ ನೀಡಲಾಗುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಬಿಡುಗಡೆ

ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಎಸ್‍ಯುವಿಗಳಲ್ಲಿ 5.0-ಲೀಟರ್ ಸೂಪರ್‌ಚಾರ್ಜ್ಡ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 557 ಹೆಚ್‌ಪಿ ಅಭಿವೃದ್ಧಿಪಡಿಸುತ್ತದೆ ಇನ್ನು ಲಾಂಗ್-ವೀಲ್‌ಬೇಸ್ ಮಾದರಿಯಲ್ಲಿ ಪ್ಲಗ್-ಇನ್ ಹೈಬ್ರಿಡ್ ಸಹ ಇದೆ.

ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಬಿಡುಗಡೆ

ಲ್ಯಾಂಡ್ ರೋವರ್ ಕಂಪನಿಯು ತನ್ನ ಡಿಫೆಂಡರ್ ವಿ8 ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವಾರಣಗೊಳಿಸಿತು. ಈ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿಯು ಎರಡೂ ಆವೃತ್ತಿಗಳಲ್ಲಿ ಲಭ್ಯವಿರಲಿದೆ.

ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಬಿಡುಗಡೆ

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ 90 ಎಂಬ ಮೂರೂ ಡೋರಿನ ಮತ್ತು 110 ಎಂಬ ಐದು ಡೋರಿನ ಎರಡೂ ಆವೃತ್ತಿಗಳನ್ನು ಒಳಗೊಂಡಿದೆ. ಇನ್ನು ಈ ಹೊಸ ಲ್ಯಾಂಡ್ ರೋವರ್ ಎಸ್‍ಯುವಿಯಲ್ಲಿ ಸೂಪರ್ಚಾರ್ಜ್ಡ್ 5.0-ಲೀಟರ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ರೇಂಜ್ ರೋವರ್ ಎಸ್‌ವಿಆಟೋಬಯಾಗ್ರಫಿ ಅಲ್ಟಿಮೇಟ್ ಬಿಡುಗಡೆ

ಈ ಎಂಜಿನ್ 525 ಬಿಹೆಚ್‍ಪಿ ಪವರ್ ಮತ್ತು 625 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಇನ್ನು ಈ ಪವರ್ ಫುಲ್ ಎಸ್‍ಯುವಿಯು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Range Rover SVAutobiography Ultimate Editions Launched. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X