Just In
- 25 min ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 2 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 12 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 14 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- News
ರಾಮನಗರ; ಟ್ರಕ್ಕಿಂಗ್ ಮೂಲಕ ತ್ಯಾಜ್ಯ ಸಂಗ್ರಹಿಸಿದ ಸಿಇಓ
- Movies
ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ಮೆಗಾಸ್ಟಾರ್ ಅಮಿತಾಭ್ ಬಚ್ಚನ್
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Sports
"ಮೈಲಿಗಲ್ಲುಗಳ ಬಗ್ಗೆ ಬಹಳಷ್ಟು ಹಿಂದೆಯೇ ಯೋಚಿಸುವುದು ಬಿಟ್ಟಿದ್ದೇನೆ"
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೇವಲ 2 ಸೆಕೆಂಡ್‌ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ, 837 ಕಿ.ಮೀ ಮೈಲೇಜ್ ನೀಡುತ್ತೆ ಟೆಸ್ಲಾ ಹೊಸ ಎಲೆಕ್ಟ್ರಿಕ್ ಕಾರು
ಅಮೆರಿಕಾ ಮೂಲದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಟೆಸ್ಲಾ ತನ್ನ ಮಾಡೆಲ್ ಎಸ್ ಎಲೆಕ್ಟ್ರಿಕ್ ಸೆಡಾನ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಟೆಸ್ಲಾ ತನ್ನ ಈ ಮಾಡೆಲ್ ಎಸ್ ಎಲೆಕ್ಟ್ರಿಕ್ ಸೆಡಾನ್ ಅನ್ನು ಹಲವಾರು ಬದಲಾವಣೆಗಳನ್ನು ನಡೆಸಿ ಅನಾವರಣಗೊಳಿಸಲಾಗಿದೆ.

ಟೆಸ್ಲಾ ಮಾಡೆಲ್ ಎಸ್ ಎಲೆಕ್ಟ್ರಿಕ್ ಕಾರು ಪ್ಲೈಡ್ ಮತ್ತು ಪ್ಲೈಡ್ ಪ್ಲಸ್ ಮತ್ತು ಲಾಂಗ್ ರೇಂಜ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಪ್ಲೈಡ್ ಮತ್ತು ಪ್ಲೈಡ್ ಪ್ಲಸ್ ರೂಪಾಂತರಗಳು ಮೂರು ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿದ್ದರೆ, ಲಾಂಗ್ ರೇಂಜ್ ಮಾದರಿಯು ಆಕ್ಸಲ್‌ನಲ್ಲಿ ಜೋಡಿಸಲಾದ ಡ್ಯುಯಲ್ ಎಲೆಕ್ಟ್ರಿಕ್ ಮೋಟರ್‌ಗಳನ್ನು ಒಳಗೊಂಡಿದೆ.

ಮಾಡೆಲ್ ಎಸ್ ಸ್ಟ್ಯಾಂಡರ್ಡ್ 100 ಕಿಲೋವ್ಯಾಟ್ ಲಿಥಿಯಂ-ಅಯಾನ್ ಬ್ಯಾಟರಿಯನ್ನು ಹೊಂದಿದೆ. ಪ್ಲೈಡ್ ಮತ್ತು ಪ್ಲೈಡ್ ಪ್ಲಸ್ ಮಾದರಿಗಳನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಕ್ರಮವಾಗಿ 627 ಕಿ.ಮೀ ಮತ್ತು 837 ಕಿ.ಮೀ ವರೆಗೆ ಚಲಿಸುತ್ತದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಮೂರು ಎಲೆಕ್ಟ್ರಿಕ್ ಮೋಟರ್‌ಗಳನ್ನು ಬಳಸಿ ಪ್ಲೈಡ್ ಪ್ಲಸ್ ರೂಪಾಂತರ 1,100 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಇದು ಕೇವಲ ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದು ವಿಶ್ವದ ಅತಿ ವೇಗದ ಉತ್ಪಾದನಾ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನು ಪ್ಲೈಡ್ ರೂಪಾಂತರ ಪವರ್‌ಟ್ರೇನ್ 1,020 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಕೂಡ 0 ದಿಂದ 100 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಕೊನೆಯ ಲಾಂಗ್ ರೇಂಜ್ ರೂಪಾಂತರವು 670 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಕೇವಲ 3.1 ಸೆಕೆಂಡುಗಳಲ್ಲಿ 0 ದಿಂದ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಲಾಂಗ್ ರೇಂಜ್ ರೂಪಾಂತರವನ್ನು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 663 ಕಿ.ಮೀ ಚಲಿಸುತ್ತದೆ.ಟೆಸ್ಲಾ ಮಾಡೆಲ್ ಎಸ್‌ನಲ್ಲಿ ಚಾರ್ಜಿಂಗ್ ಆಯ್ಕೆಗಳು ಆನ್-ಬೋರ್ಡ್ 11.5 ಕಿ.ವ್ಯಾಟ್ ಚಾರ್ಜರ್ ಅನ್ನು ಒಳಗೊಂಡಿರುತ್ತದೆ,

ಇದು ಸೂಪರ್ಚಾರ್ಜರ್ಸ್ ಎಂದು ಕರೆಯಲ್ಪಡುವ ಬ್ರ್ಯಾಂಡ್ ಫಾಸ್ಟ್-ಚಾರ್ಜಿಂಗ್ ಸೌಲಭ್ಯವನ್ನು ಬಳಸಿದರೆ, ಇದು ಗರಿಷ್ಠ 250 ಕಿ.ವ್ಯಾಟ್ ಉತ್ಪಾದಿಸುತ್ತದೆ ಮತ್ತು ಮಾಡೆಲ್ ಎಸ್ ಅನ್ನು 30 ನಿಮಿಷ ಮತ್ತು 90 ನಿಮಿಷಗಳ ನಡುವೆ ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ.
MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

2021ರ ಮಾಡೆಲ್ ಎಸ್ ಒಳಭಾಗದಲ್ಲಿ ಹಿಂದಿನ ಮಾದರಿಯ ಬದಲಾವಣೆಗಳನ್ನು ಹೊಂದಿದೆ. ಇದು ಮರ ಅಥವಾ ಕಾರ್ಬನ್-ಫೈಬರ್ ಸಿದ್ಧಪಡಿಸಿದ ಡ್ಯಾಶ್‌ಬೋರ್ಡ್‌ನೊಂದಿಗೆ ಎಲ್ಲ ಹೊಸ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ 17 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಯುನೀಟ್ ಅನ್ನು ಸಹ ಹೊಂದಿದೆ.

ಟೆಸ್ಲಾ ಮಾಡೆಲ್ ಎಸ್ ಎಲೆಕ್ಟ್ರಿಕ್ ಕಾರು ವಿಶ್ವದ ಅತಿ ವೇಗದ ಉತ್ಪಾದನಾ ಕಾರು ಎಂಬ ಖ್ಯಾತಿಗೂ ಒಳಗಾಗಿದೆ. ಈ ಡೆಲ್ ಎಸ್ ಎಲೆಕ್ಟ್ರಿಕ್ ಕಾರು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿರುವ ಮಾದರಿಯಾಗಿದೆ.