ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಫೋಕ್ಸ್‌ವ್ಯಾಗನ್ ಎಸ್‍ಯುವಿ

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ತಾಲೆಗಾವ್ ಪೂರ್ಣ ಗಾತ್ರದ ಎಸ್‍ಯುವಿಯನ್ನು 2021ರ ಶಾಂಘೈ ಆಟೋ ಶೋನಲ್ಲಿ ಅನಾವರಣಗೊಳಿಸಿದೆ. ಈ ತಾಲೆಗಾವ್ ಮಾದರಿಯು ಫೋಕ್ಸ್‌ವ್ಯಾಗನ್ ಕಂಪನಿಯ ಅತಿದೊಡ್ಡ ಎಸ್‍ಯುವಿಯಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಫೋಕ್ಸ್‌ವ್ಯಾಗನ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ತಾಲೆಗಾವ್ ಪೂರ್ಣ ಗಾತ್ರದ ಎಸ್‍ಯುವಿಯನ್ನು ಚೀನಾದಲ್ಲಿಎಫ್‌ಎಡಬ್ಲ್ಯೂ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದು ಮೂಲತಃ ಎಸ್‌ಎಂವಿ ಪರಿಕಲ್ಪನೆಯ ಉತ್ಪಾದನಾ ಆವೃತ್ತಿಯಾಗಿದ್ದು, ಇದನ್ನು ಎರಡು ವರ್ಷಗಳ ಹಿಂದೆ ಅನಾವರಣಗೊಳಿಸಲಾಗಿತ್ತು. ಈ ಎಸ್‍ಯುವಿಯ ಹೆಚ್ಚಿನ ಸ್ಟೈಲಿಂಗ್ ಅನ್ನು ಉಳಿಸಿಕೊಂಡಿದೆ. ಆದರೆ ವಿಡಬ್ಲ್ಯೂ ಎಂಜಿನಿಯರ್‌ಗಳು ಇದನ್ನು ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಫೋಕ್ಸ್‌ವ್ಯಾಗನ್ ಎಸ್‍ಯುವಿ

ಹೊಸ ಫೋಕ್ಸ್‌ವ್ಯಾಗನ್ ತಾಲೆಗಾವ್ ಎಸ್‌ಯುವಿ 5,152 ಎಂಎಂ ಉದ್ದ, 2,002 ಎಂಎಂ ಅಗಲ ಮತ್ತು 1,795 ಎಂಎಂ ಎತ್ತರವಿದೆ. ಇದು ಫೋಕ್ಸ್‌ವ್ಯಾಗನ್ ಅಟ್ಲಾಸ್ ಎಸ್‍ಯುವಿಗಿಂತ ಸುಮಾರು 112 ಎಂಎಂ ಉದ್ದ, 12 ಎಂಎಂ ಅಗಲ ಮತ್ತು 15 ಎಂಎಂ ಎತ್ತರವನ್ನು ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಫೋಕ್ಸ್‌ವ್ಯಾಗನ್ ಎಸ್‍ಯುವಿ

ಇನ್ನು ಈ ಹೊಸ ತಾಲೆಗಾವ್ ಎಸ್‌ಯುವಿಯು 2,980 ಎಂಎಂ ವ್ಹೀಲ್‌ಬೇಸ್‌ ಅನ್ನು ಹೊಂದಿದೆ. ಈ ಎಸ್‍ಯುವಿಯು ವಿಡಬ್ಲ್ಯೂ ಗ್ರೂಪ್‌ನ ಎಂಕ್ಯೂಬಿ ಇವಿಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಹೊಸ ಗಾಲ್ಫ್, ಸ್ಕೋಡಾ ಆಕ್ಟೀವಾ, ಸೀಟ್ ಲಿಯಾನ್, ಆಡಿ ಎ3 ಮತ್ತು ಇತರ ಮಾದರಿಗಳಿಗೆ ಆಧಾರವಾಗಿದೆ. ಇದು ವಿಡಬ್ಲ್ಯೂ ಗ್ರೂಪ್‌ನ ಎಂಕ್ಯೂಬಿ ಪ್ಲಾಟ್‌ಫಾರ್ಮ್ ಆಧಾರಿತ ಅತಿದೊಡ್ಡ ಎಸ್‍ಯುವಿ ಕೂಡ ಆಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಫೋಕ್ಸ್‌ವ್ಯಾಗನ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ತಾಲೆಗಾವ್ ಎಸ್‌ಯುವಿಯು ಸ್ಟೈಲಿಂಗ್ ವಿಷಯದಲ್ಲಿ ಐ,ಡಿ ಎಲೆಕ್ಟ್ರಿಕ್ ಎಸ್‌ಯುವಿಯಿಂದ ಸ್ಫೂರ್ತಿ ಪಡೆದ ವಿನ್ಯಾಸ ಅಂಶಗಳನ್ನು ಒಳಗೊಂಡಿದೆ. ಇದು ಮುಂಭಾಗದ ಗ್ರಿಲ್ ಮತ್ತು ಹಲವು ಕ್ರೋಮ್ ಅಂಶಗಳನ್ನು ಪಡೆಯುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಫೋಕ್ಸ್‌ವ್ಯಾಗನ್ ಎಸ್‍ಯುವಿ

ಇದು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿಂದ ಸಂಯೋಜಿತ ಎಲ್ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. ಎಸ್‍ಯುವಿ ಮುಂಭಾಗ ಏರ್ ಡ್ಯಾಮ್ ಅನ್ನು ಪಡೆಯುತ್ತದೆ. ಎಸ್‌ಯುವಿ ದೊಡ್ಡ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್‌ಗಳು, ಫ್ಲೋಟಿಂಗ್ ರೂಫ್‌ಲೈನ್, ಎಲ್‌ಇಡಿ ಸ್ಟ್ರಿಪ್‌ನಿಂದ ಕನೆಕ್ಟ್ ಹೊಂದಿದ ನಯವಾದ ಎಲ್‌ಇಡಿ ಟೈಲ್-ಲ್ಯಾಂಪ್‌ಗಳು ಮತ್ತು ಸಿಲ್ವರ್ ರೂಫ್ ರೈಲ್ ಅನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಫೋಕ್ಸ್‌ವ್ಯಾಗನ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ತಾಲೆಗಾವ್ ಅನ್ನು ಆರು ಮತ್ತು ಏಳು ಆಸನಗಳ ವಿನ್ಯಾಸಗಳಲ್ಲಿ ನೀಡಲಾಗುವುದು. ಇದರ ಒಳಭಾಗದಲ್ಲಿ ಅಟ್ಲಾಸ್ ಅಥವಾ ಟೆರಾಮಾಂಟ್ ಎಸ್‍ಯುವಿಗಳೊಂದಿಗೆ ಹಂಚಿಕೊಳ್ಳುತ್ತದೆ. ಎಸ್‌ಯುವಿ ಮೂರು-ಸ್ಪೋಕ್ ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್ ಅನ್ನು ಪಡೆಯುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಫೋಕ್ಸ್‌ವ್ಯಾಗನ್ ಎಸ್‍ಯುವಿ

ಇನ್ನು ಈ ಎಸ್‍ಯುವಿಯಲ್ಲಿ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಂ, ಇನ್ಸ್ ಟ್ರೂಮೆಂಟ್ ಕನ್ಸೋಲ್, ಬೃಹತ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಫೋಕ್ಸ್‌ವ್ಯಾಗನ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ತಾಲೆಗಾವ್ ಎಸ್‍ಯುವಿಯಲ್ಲಿ 2.5-ಲೀಟರ್ ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 291 ಬಿಹೆಚ್‌ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 7-ಸ್ಪೀಡ್, ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಈ ಎಸ್‍ಯುವಿಯು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯಬಹುದು.

Most Read Articles

Kannada
English summary
Volkswagen Talagon Full-Sized SUV Unveiled. Read In Kannada.
Story first published: Monday, April 26, 2021, 19:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X