ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಭಾರತೀಯ ಆಟೋ ಮಾರುಕಟ್ಟೆಯ ವಾಹನ ಮಾರಾಟದ ಮೇಲೆ ಕೋವಿಡ್ ಭೀತಿ ಭಾರೀ ಪರಿಣಾಮವನ್ನು ಬೀರಿದೆ. ಇದರ ಜೊತೆಗೆ ಸೆಮಿಕಂಡಕ್ಟರ್ ಕೊರತೆಯು ವಾಹನಗಳ ಉತ್ಪಾದನೆಯ ಕೂಡಾ ತಗ್ಗಿದ್ದು ಈ ಕಾರಣಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಹಲವು ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿದೆ.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಕೋವಿಡ್ ಅಬ್ಬರದ ನಡುವೆ ಅಮರಿಕಾ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಪೋರ್ಡ್ ಕಂಪನಿಯು ಭಾರೀ ನಷ್ಟದಿಂದ ಭಾರತದಲ್ಲಿ ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಇದರ ಪರಿಣಾಮವಾಗಿ ಫೋರ್ಡ್ ಕಂಪನಿಯ ಜನಪ್ರಿಯ ಕಾರುಗಳು ಸ್ಥಗಿತವಾಗಿದೆ. ಇದರ ಜೊತೆ ಇತರೆ ಹಲವಾರು ಜನಪ್ರಿಯ ಕಾರುಗಳು ಕೂಡ ಸ್ಥಗಿತಗೊಂಡಿದೆ. ಇದರಿಂದ ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಫೋರ್ಡ್ ಎಂಡೀವರ್

ಈ ಫೋರ್ಡ್ ಎಂಡೀವರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಫುಲ್ ಸೈಜ್ ಎಸ್‍ಯುವಿಯಾಗಿತ್ತು, ಇದು ಕಳೆದ 18 ವರ್ಷಗಳಿಂದ ಭಾರತದಲ್ಲಿ ಮಾರಾಟವಾಗುತ್ತಿದೆ ಮತ್ತು ಅದರ ವಿಭಾಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡ ಮಾದರಿ. ಈ ಎಂಡೀವರ್ ಎಸ್‍ಯುವಿಯು 2003ರಲ್ಲಿ ಬಿಡುಗಡೆಯಾದಾಗ ಭಾರತದಲ್ಲಿ ಫೋರ್ಡ್‌ನ ಮೊದಲ ಎಸ್‌ಯುವಿ ಕೊಡುಗೆಯಾಗಿತ್ತು ಮತ್ತು ಎರಡನೇ ತಲೆಮಾರಿನವರು 2016 ರಲ್ಲಿ ಬಿಡುಗಡೆಗೊಂಡಿತ್ತು.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಎಂಡೀವರ್ ಮಾರುಕಟ್ಟೆಯಲ್ಲಿ ಬ್ರಾಂಡ್‌ನ ದೀರ್ಘಾವಧಿಯ ಮೋನಿಕರ್ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ ಹೊಸ ಸ್ಪರ್ಧಿಗಳ ಆಗಮನದ ಹೊರತಾಗಿಯೂ ಇದು ವಿಭಾಗದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಭಾರತದಲ್ಲಿ ಫೋರ್ಡ್ ಕಂಪನಿಯು ಉತ್ಪಾದನೆತಯು ನಿಲ್ಲಿಸುವ ಸಂದರ್ಭದಲ್ಲಿ ಈ ಜನಪ್ರಿಯ ಎಂಡೀವರ್ ಎಸ್‍ಯುವಿ ಸ್ಥಗಿತಗೊಂಡಿದೆ, ಫೋರ್ಡ್ ಕಂಪನಿಯ ನಿರ್ಧಾರವು ಕಳೆದ ಹತ್ತು ವರ್ಷಗಳಲ್ಲಿ 2 ಶತಕೋಟಿ ಡಾಲರ್‌ಗಳಷ್ಟು ನಷ್ಟವೇ ಪ್ರಮುಖ ಕಾರಣವಾಗಿದೆ.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಮುನ್ನ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಎಂಡೀವರ್ ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿತು. ಆದ ಈ ಪ್ರಯತ್ನಯು ವಿಫಲವಾಯ್ತು. ಇದರಿಂದ ಎಂಡೀವರ್ ಎಸ್‍ಯುವಿಯನ್ನು ಉಳಿಸುವಲ್ಲಿ ವಿಫಲವಾಗಿತ್ತು. ಈ ಪ್ರೀಮಿಯಂ ಎಸ್‌ಯುವಿಯಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿತ್ತು. ಈ ಎಂಜಿನ್ 168 ಬಿ‍‍ಹೆಚ್‍‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿ‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಫೋರ್ಡ್ ಇಕೋಸ್ಪೋರ್ಟ್

ಈ ವರ್ಷ ಫೋರ್ಡ್ ಇಕೋಸ್ಪೋರ್ಟ್‌ಗೆ ವಿದಾಯ ಹೇಳಬೇಕಾಗಿತ್ತು. ಇದು ಭಾರತದಲ್ಲಿ ಸಬ್‌ಕಾಂಪ್ಯಾಕ್ಟ್ಎಸ್‍ಯುವಿಗಳ ಪ್ರವೃತ್ತಿಯನ್ನು ಪ್ರಾರಂಭಿಸಿದ ಮಾದರಿಯಾಗಿತ್ತು. ಸುಮಾರು 9 ವರ್ಷಗಳಿಂದ ಹಲವು ನವೀಕರಣವನ್ನು ಪಡೆದು ಮಾರಾಟವಾದ ಬಹುಜನಪ್ರಿಯ ಮಾದರಿಯಾಗಿತ್ತು.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಭಾರತದಲ್ಲಿ ಮಾರಾಟವಾಗುತ್ತಿದ್ದ, ಫೋರ್ಡ್ ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‌ಯುವಿಯು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿತ್ತು. ಇದು ಬಿಎಸ್ 6 ಪ್ರೇರಿತ 1.5-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಗಿದೆ. ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 149 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ನವೀಕರಿಸಿದ 1.5-ಲೀಟರ್ ಡೀಸೆಲ್ ಎಂಜಿನ್ 99 ಬಿಎಚ್‌ಪಿ ಮತ್ತು 215 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಫೋರ್ಡ್ ಫಿಗೋ, ಫ್ರೀಸ್ಟೈಲ್, ಆಸ್ಪೈರ್

ಫೋರ್ಡ್ ಸ್ಥಳೀಯ ಉತ್ಪಾದನೆಯನ್ನು ಕೊನೆಗೊಳಿಸುವುದರ ಅರ್ಥ ಅದರ ಎಂಟ್ರಿ ಲೆವೆಲ್ ಮಾದರಿಗಳು ಹಾಗೆಯೇ ಫಿಗೋ, ಫ್ರೀಸ್ಟೈಲ್ ಮತ್ತು ಆಸ್ಪೈರ್ ಮಾದರಿಗಳು ಕೂಡ ಸ್ಥಗಿತವಾಗಿದೆ. ಎಲ್ಲಾ 3 ಕಾರುಗಳು ಒಂದೇ ಫಿಗೋ ಕುಟುಂಬದ ಭಾಗವಾಗಿದ್ದವು, ಒಂದೇ ಫ್ಲಾಟ್ ಫಾರ್ಮ್ ಅನ್ನು ಆಧರಿಸಿವೆ ಮತ್ತು ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹಂಚಿಕೊಂಡಿವೆ.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಈ ವರ್ಷದ ಆರಂಭದಲ್ಲಿ ಜುಲೈನಲ್ಲಿ ಫೋರ್ಡ್ ಇಂಡಿಯಾ ಫಿಗೋ ಹ್ಯಾಚ್‌ಬ್ಯಾಕ್‌ನ 1.2-ಲೀಟರ್ ಆಟೋಮ್ಯಾಟಿಕ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿತು.ಆದರೆ 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಕಂಪನಿಯು ಭಾರತದಿಂದ ನಿರ್ಗಮಿಸಲು ನಿರ್ಧರಿಸಿತು. ಆಸ್ಪೈರ್ ಸಬ್‌ಕಾಂಪ್ಯಾಕ್ಟ್ ಸೆಡಾನ್ ಮತ್ತು ಫ್ರೀಸ್ಟೈಲ್ ಕ್ರಾಸ್-ಹ್ಯಾಚ್ ಎರಡೂ ಫಿಗೋ ಕಾಂಪ್ಯಾಕ್ಟ್ ಹ್ಯಾಚ್ ಅನ್ನು ಆಧರಿಸಿವೆ. ಈ ಕಾರುಗಳಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ ಅನ್ನು ಒಳಗೊಂಡಿತ್ತು.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಸ್ಕೋಡಾ ರ‍್ಯಾಪಿಡ್

ಸ್ಕೋಡಾ ಕಂಪನಿಯು ಕೂಡ ರ‍್ಯಾಪಿಡ್ ಸೆಡಾನ್ ಉತ್ಪಾದನೆಯನ್ನು ಇತ್ತೀಚೆಗೆ ಕೊನೆಗೊಳಿಸಿತು. ಭಾರತದಲ್ಲಿ ಕಾರು ಬಿಡುಗಡೆಯಾದ ಸುಮಾರು ಒಂದು ದಶಕದ ನಂತರ. ರ‍್ಯಾಪಿಡ್ ಕಂಪನಿಯ ಸಾಲಿನಲ್ಲಿ ಹೆಚ್ಚು ಮಾರಾಟವಾದ ಕಾರು, ಇದು ಜನರೇಷನ್ ನವೀಕರಣ ಅಥವಾ ಬದಲಿ ಅಗತ್ಯವಾಗಿತ್ತು.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಸ್ಕೋಡಾ ಎರಡನೆಯದರೊಂದಿಗೆ ಹೋಗಲು ನಿರ್ಧರಿಸಿತು ಮತ್ತು ಇತ್ತೀಚೆಗೆ MQB-A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಸ್ಕೋಡಾ ಸ್ಲಾವಿಯಾವನ್ನು ಪರಿಚಯಿಸಿತು. ಕಂಪನಿಯು ರ‍್ಯಾಪಿಡ್ ವಿಶೇಷ ಮ್ಯಾಟ್ ಆವೃತ್ತಿಯನ್ನು ಬಿಡುಗಡೆ ಮಾಡಿತು, ರ‍್ಯಾಪಿಡ್ ಸೆಡಾನ್‌ಗಳ ಕೊನೆಯ ಭಾಗವಾಗಿದೆ. ರಾಪಿಡ್ 1.0-TSI ಎಂಜಿನ್ ಜೊತೆಗೆ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ ಬರುತ್ತಿತ್ತು.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಟೊಯೊಟಾ ಯಾರಿಸ್

ಕಳೆದ ವರ್ಷ ಭಾರತೀಯ ಮಾರುಕಟ್ಟೆಯಿಂದ ಹೊರಬಂದ ಮತ್ತೊಂದು ಕಾಂಪ್ಯಾಕ್ಟ್ ಸೆಡಾನ್ ಟೊಯೊಟಾ ಯಾರಿಸ್. 3 ವರ್ಷಗಳ ಕಾಲ ಮಾರುಕಟ್ಟೆಯಲ್ಲಿದ್ದ ನಂತರ ಸೆಡಾನ್ ಅನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಯಿತು. ದುಃಖಕರವೆಂದರೆ, ಯಾರಿಸ್ ಭಾರತೀಯ ಕಾರು ಖರೀದಿದಾರರ ಮೇಲೆ ಶಾಶ್ವತವಾದ ಛಾಪು ಮೂಡಿಸಲು ವಿಫಲವಾಗಿದೆ ಮತ್ತು ಮಾರಾಟದ ಕುಸಿತದೊಂದಿಗೆ, ಕಂಪನಿಯು ಉತ್ತಮ ಮಾದರಿಯನ್ನು ನಿಲ್ಲಿಸಲು ನಿರ್ಧರಿಸಿದೆ.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಯಾರಿಸ್ ಸೆಡಾನ್ ಅನ್ನು ಮಾರುತಿ ಸುಜುಕಿ ಸಿಯಾಜ್‌ನ ಟೊಯೊಟಾ-ಬ್ಯಾಡ್ಜ್ ಆವೃತ್ತಿಯಿಂದ ಬದಲಾಯಿಸುವ ನಿರೀಕ್ಷೆಯಿದೆ, ಇದನ್ನು ಟೊಯೊಟಾ ಬೆಲ್ಟಾ ಎಂದು ಕರೆಯುವ ಸಾಧ್ಯತೆಯಿದೆ. ಈ ಕಾರು ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಮಾರಾಟದಲ್ಲಿದೆ.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಫೋಕ್ಸ್‌ವ್ಯಾಗನ್ ಟಿ-ರಾಕ್

ಸ್ಕೋಡಾದ ಸಹೋದರ ಬ್ರ್ಯಾಂಡ್, ಫೋಕ್ಸ್‌ವ್ಯಾಗನ್ ಇಂಡಿಯಾ ಕೂಡ ತನ್ನ ಟಿ-ರಾಕ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಕಂಪನಿಯು ರೂ.20 ಲಕ್ಷದೊಳಗೆ ಎಸ್‍ಯುವಿ ಹೊಂದಿಲ್ಲವೆಂದು ಪರಿಗಣಿಸಿ, ಕಂಪನಿಯು ಟಿ-ರಾಕ್ ಅನ್ನು ಸಂಪೂರ್ಣವಾಗಿ ನಿರ್ಮಿಸಿದ ಯುನಿಟ್ (CBU) ಮಾದರಿಯಾಗಿ ತಂದಿತು,

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಅದು ಟೈಗನ್‌ನೊಂದಿಗೆ ಸಿದ್ಧವಾಗುವವರೆಗೆ. ಈಗ, ಮಾರುಕಟ್ಟೆಯಲ್ಲಿ ಕಂಪನಿಯು ಟಿ-ರಾಕ್ ಅನ್ನು ನಿಲ್ಲಿಸಲು ನಿರ್ಧರಿಸಿದೆ. ಈ ಎಸ್‍ಯುವಿ 1.5-ಲೀಟರ್ TSI ಎಂಜಿನ್‌ನೊಂದಿಗೆ ನೀಡಲಾಯಿತು, DSG ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್

ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಯಲ್ಲಿ ಟಿಗ್ವಾನ್ ಆಲ್‌ಸ್ಪೇಸ್ 7-ಸೀಟರ್ ಎಸ್‍ಯುವಿಯನ್ನು ಸ್ಥಗಿತಗೊಳಿಸಿದೆ. ಟಿಗ್ವಾನ್ ಆಲ್‌ಸ್ಪೇಸ್ ಅನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಪ್ರಮುಖ ಎಸ್‍ಯುವಿಯಾಗಿ ಪರಿಚಯಿಸಲಾಯಿತು, ಆದರೆ ಕಂಪನಿಯು ಈ ಎಸ್‍ಯುವಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಇದರ ಬದಲಾಗಿ ತನ್ನದೇ ಆದ 5-ಸೀಟರ್ ಟಿಗ್ವಾನ್ ಮಾದರಿಯನ್ನು ಪರಿಚಯಿಸಲಾಗಿದೆ.

ಈ ವರ್ಷ ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಕಾರುಗಳಿವು..

ಈ ಟಿಗ್ವಾನ್ ಆಲ್‌ಸ್ಪೇಸ್ 7-ಸೀಟರ್ ಎಸ್‍ಯುವಿಯ ಕೊನೆಯ ಸಾಲಿನ ಸೀಟುಗಳು ವಯಸ್ಕರಿಗೆ ಬದಲಾಗಿ ಮಕ್ಕಳಿಗೆ ಹೆಚ್ಚು ಸೂಕ್ತವಾಗಿತ್ತು. ಈ ಎಸ್‍‍ಯುವಿಯನ್ನು ಭಾರತಕ್ಕೆ ಸಿಕೆಡಿ ರೂಪದಲ್ಲಿ ಆಮದು ಮಾಡಿಕೊಳ್ಳಲಾಗಿತ್ತು. ಈ ಎಸ್‍‍ಯುವಿಯಲ್ಲಿ 2.0 ಲೀಟರಿನ ಟರ್ಬೊ‍‍ಚಾರ್ಜ್ಡ್ ಟಿ‍ಎಸ್‍ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿತ್ತು. ಈ ಎಂಜಿನ್ 187 ಬಿ‍‍ಹೆಚ್‍‍ಪಿ ಪವರ್ ಹಾಗೂ 370 ಎನ್‍ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Popular cars that were discontinued in india 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X