80 ರೂಪಾಯಿ ಖರ್ಚಿನಲ್ಲಿ ಸಿದ್ದವಾಗುತ್ತದೆ ಕಾರುಗಳ ರೇರ್ ಎಸಿ ವೆಂಟ್

ಭಾರತವು ಏಪ್ರಿಲ್ - ಮೇ ತಿಂಗಳಿನಲ್ಲಿ ತೀವ್ರ ಬಿಸಿಲನ್ನು ಎದುರಿಸುತ್ತದೆ. ಈ ಅವಧಿಯಲ್ಲಿ ನಾಲ್ಕು ಚಕ್ರ ವಾಹನಗಳಲ್ಲಿ ಪ್ರಯಾಣಿಸುವವರಿಗೆ ಏರ್ ಕಂಡಿಷನ್ ಅಗತ್ಯವಿರುತ್ತದೆ. ಅದರಲ್ಲೂ ದೂರದ ಪ್ರಯಾಣಕ್ಕೆ ಏರ್ ಕಂಡಿಷನ್ ಬೇಕೇ ಬೇಕು.

80 ರೂಪಾಯಿ ಖರ್ಚಿನಲ್ಲಿ ಸಿದ್ದವಾಗುತ್ತದೆ ಕಾರುಗಳ ರೇರ್ ಎಸಿ ವೆಂಟ್

ಈಗ ಮಾರಾಟವಾಗುತ್ತಿರುವ ಬಹುತೇಕ ಕಾರುಗಳು ಫ್ರಂಟ್ ಸೀಟ್ ಚಾಲಕ ಹಾಗೂ ಫ್ರಂಟ್ ಸೀಟ್ ಪ್ರಯಾಣಿಕನ ಬಳಿ ಎಸಿ ವೆಂಟ್'ಗಳನ್ನು ಹೊಂದಿರುತ್ತವೆ. ಆದರೆ ಹೆಚ್ಚು ಕಾರುಗಳು ಹಿಂಬದಿಯ ಪ್ರಯಾಣಿಕರಿಗಾಗಿ ರೇರ್ ಎಸಿ ವೆಂಟ್'ಗಳನ್ನು ಹೊಂದಿರುವುದಿಲ್ಲ.

80 ರೂಪಾಯಿ ಖರ್ಚಿನಲ್ಲಿ ಸಿದ್ದವಾಗುತ್ತದೆ ಕಾರುಗಳ ರೇರ್ ಎಸಿ ವೆಂಟ್

ಈ ಕಾರುಗಳ ಕ್ಯಾಬಿನ್ ಹಿಂಭಾಗವು ತಣ್ಣಗಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಕಾರುಗಳಲ್ಲಿ ರೇರ್ ಎಸಿ ವೆಂಟ್'ಗಳನ್ನು ಅಳವಡಿಸುವ ವೀಡಿಯೊವನ್ನು ಈಸಿ ಲೈಫ್ ಐಡಿಯಾಸ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

80 ರೂಪಾಯಿ ಖರ್ಚಿನಲ್ಲಿ ಸಿದ್ದವಾಗುತ್ತದೆ ಕಾರುಗಳ ರೇರ್ ಎಸಿ ವೆಂಟ್

ಗಮನಿಸಬೇಕಾದ ಸಂಗತಿಯೆಂದರೆ ಈ ರೇರ್ ಎಸಿ ವೆಂಟ್'ಗಳನ್ನು ಅಳವಡಿಸಲು ಕೇವಲ ರೂ.80 ಖರ್ಚಾಗುತ್ತದೆ. ಈ ವೀಡಿಯೊ ರೇರ್ ಎಸಿ ವೆಂಟ್'ನೊಂದಿಗೆ ಆರಂಭವಾಗುತ್ತದೆ. ವೀಡಿಯೊದಲ್ಲಿ ಮೊದಲು ನಾಲ್ಕು ಸ್ಕ್ರೂಗಳನ್ನು ತೆಗೆದುಹಾಕಿ ಸೆಂಟರ್ ಟನೆಲ್ ತೆರೆಯಲಾಗುತ್ತದೆ.

80 ರೂಪಾಯಿ ಖರ್ಚಿನಲ್ಲಿ ಸಿದ್ದವಾಗುತ್ತದೆ ಕಾರುಗಳ ರೇರ್ ಎಸಿ ವೆಂಟ್

ಸ್ಕ್ರೂ ಸಂಯೋಜನೆ ವಾಹನದಿಂದ ವಾಹನಕ್ಕೆ ಬದಲಾಗುತ್ತದೆ. ಸ್ಕ್ರೂ ತೆರೆದ ನಂತರ ಸೆಂಟರ್ ಕನ್ಸೋಲ್ ಅನ್ನು ಸುಲಭವಾಗಿ ಮೇಲಕ್ಕೆ ಎತ್ತಬಹುದು. ಈ ವೀಡಿಯೊದಲ್ಲಿ ಸೆಂಟರ್ ಕನ್ಸೋಲ್ ತೆಗೆದು ಡ್ರಿಲ್ ಮಿಷನ್'ನಿಂದ ಹಿಂಭಾಗದಲ್ಲಿ ರಂಧ್ರ ಮಾಡಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

80 ರೂಪಾಯಿ ಖರ್ಚಿನಲ್ಲಿ ಸಿದ್ದವಾಗುತ್ತದೆ ಕಾರುಗಳ ರೇರ್ ಎಸಿ ವೆಂಟ್

ನಂತರ ಈ ರಂಧ್ರಕ್ಕೆ ಹೊಂದಿಕೊಳ್ಳುವ ಡ್ರೈನ್ ಪೈಪ್ ಸೇರಿಸಲಾಗುತ್ತದೆ. ಪೈಪ್ ಅನ್ನು ಸೆಂಟರ್ ಕನ್ಸೋಲ್ ಅಡಿಯಲ್ಲಿ ಇಡಲಾಗುತ್ತದೆ. ಇದರಿಂದ ಆ ಪೈಪ್ ಕಾಣಿಸುವುದಿಲ್ಲ. ಪೈಪ್ ಅನ್ನು ಹ್ಯಾಂಡ್‌ಬ್ರೇಕ್ ಹಾಗೂ ಗೇರ್ ಲಿವರ್ ನಡುವೆ ಸೆಂಟರ್ ಕನ್ಸೋಲ್‌ನ ಮುಂಭಾಗಕ್ಕೆ ಸರಿಸಲಾಗುತ್ತದೆ.

80 ರೂಪಾಯಿ ಖರ್ಚಿನಲ್ಲಿ ಸಿದ್ದವಾಗುತ್ತದೆ ಕಾರುಗಳ ರೇರ್ ಎಸಿ ವೆಂಟ್

ಪೈಪ್‌ನ ಇನ್ನೊಂದು ತುದಿಯನ್ನು ಡ್ಯಾಶ್‌ಬೋರ್ಡ್ ಅಡಿಯಲ್ಲಿರುವ ಏರ್ ಕಂಡಿಷನ್ ವೆಂಟ್'ಗೆ ಕನೆಕ್ಟ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಏರ್ ಕಂಡಿಷನ್ ವೆಂಟ್ ಅನ್ನು ಮುಂಭಾಗದ ಪ್ರಯಾಣಿಕರ ಪಾದಗಳನ್ನು ತಂಪಾಗಿಡಲು ಬಳಸಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

80 ರೂಪಾಯಿ ಖರ್ಚಿನಲ್ಲಿ ಸಿದ್ದವಾಗುತ್ತದೆ ಕಾರುಗಳ ರೇರ್ ಎಸಿ ವೆಂಟ್

ಆದರೆ ಈ ವೀಡಿಯೊದಲ್ಲಿ ಕ್ಯಾಬಿನ್‌ನ ಹಿಂಭಾಗವನ್ನು ತಂಪಾಗಿಡಲು ಈ ವೆಂಟ್ ಬಳಸಲಾಗಿದೆ. ಈ ಮಾಡಿಫಿಕೇಷನ್ ನಂತರ ಮೇಲಕ್ಕೆ ಹಾಗೂ ಕೆಳಕ್ಕೆ ಗಾಳಿ ಬೀಸುವ ಆಯ್ಕೆಯನ್ನು ಆರಿಸಿದಾಗ ಎಸಿಯಿಂದ ಫ್ರಂಟ್ ಹಾಗೂ ರೇರ್ ಸೀಟಿನಲ್ಲಿ ಗಾಳಿಯಾಡುತ್ತದೆ.

80 ರೂಪಾಯಿ ಖರ್ಚಿನಲ್ಲಿ ಸಿದ್ದವಾಗುತ್ತದೆ ಕಾರುಗಳ ರೇರ್ ಎಸಿ ವೆಂಟ್

ಈ ಮಾಡಿಫಿಕೇಷನ್ ಮಾಡುವ ಮುನ್ನ ಕೆಲವು ವಿಷಯಗಳನ್ನು ಗಮನಿಸಬೇಕು. ಈ ಮಾಡಿಫಿಕೇಷನ್'ನಿಂದ ಕಾರಿಗೆ ಹಾನಿಯುಂಟಾಗುತ್ತದೆ. ಗೇರ್ ಟನೆಲ್ ಕೆಳಗಿನಭಾಗವು ತುಂಬಾ ಬಿಸಿಯಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಡ್ರೈನ್ ಪೈಪ್ ದಪ್ಪ ಪ್ಲಾಸ್ಟಿಕ್‌ನಿಂದ ತಯಾರಾಗದ ಕಾರಣ ಕರಗುವ ಸಾಧ್ಯತೆಗಳಿವೆ. ಒಂದು ವೇಳೆ ಪೈಪ್ ಸೋರಿಕೆಯಾದರೆ ತಂಪಾದ ಗಾಳಿಯು ಗೇರ್ ಲಿವರ್ ಹಾಗೂ ಟ್ರಾನ್ಸ್ ಮಿಷನ್ ಹಾಳಾಗಲು ಕಾರಣವಾಗಬಹುದು.

80 ರೂಪಾಯಿ ಖರ್ಚಿನಲ್ಲಿ ಸಿದ್ದವಾಗುತ್ತದೆ ಕಾರುಗಳ ರೇರ್ ಎಸಿ ವೆಂಟ್

ಈ ಮಾಡಿಫಿಕೇಷನ್'ನಿಂದ ಕಾರಿನ ವಾರಂಟಿ ಸಿಗದೇ ಹೋಗಬಹುದು. ಡ್ರೈನ್ ಪೈಪ್ ಅನ್ನು ಸೆಂಟರ್ ಕನ್ಸೋಲ್ ನಡುವೆ ಸರಿಯಾಗಿ ತಿರುಗಿಸದಿದ್ದರೆ ಅದು ಕಾರಿನ ಕಾರ್ಯದ ಮೇಲೆ ಪರಿಣಾಮ ಬೀರಬಹುದು.

ಚಿತ್ರ ಕೃಪೆ: ಈಸಿ ಲೈಫ್ ಐಡಿಯಾಸ್

Most Read Articles

Kannada
English summary
Rear AC vents can be installed in any car for just Rupees 80. Read in Kannada.
Story first published: Saturday, April 24, 2021, 20:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X