Just In
Don't Miss!
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನಪ್ರಿಯ ರೆನಾಲ್ಟ್ ಕಾರುಗಳ ಮೇಲೆ ಭರ್ಜರಿ ಆಫರ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಇಂಡಿಯಾ ಹೊಸ ವರ್ಷದಲ್ಲಿ ತನ್ನ ಆಯ್ದ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಅನ್ನು ಘೋಷಿಸಿದೆ. ರೆನಾಲ್ಟ್ ತನ್ನ ಕಾರುಗಳ ಮೇಲೆ ರೂಪಾಂತರಗಳನ್ನು ಆಧರಿಸಿ ರೂ.65 ಸಾವಿರಗಳವರೆಗೆ ಡಿಸ್ಕೌಂಟ್ ನೀಡಿದೆ.

ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಕಾರುಗಳ ಮೇಲೆ ನಗದು ರಿಯಾಯಿತಿ, ಎಕ್ಸ್‌ಚೆಂಜ್ ಬೋನಸ್ ಪ್ಯಾಕೇಜ್‌ಗಳನ್ನು ಘೋಷಿಸಿದೆ. ರೆನಾಲ್ಟ್ ತನ್ನ ಕ್ವಿಡ್ ಮತ್ತು ಡಸ್ಟರ್ ಮಾದರಿಗಳ ಆಫರ್ ಅನ್ನು ನೀಡಿದೆ. ರೆನಾಲ್ಟ್ ಪೋರ್ಟ್ಫೋಲಿಯೊದಿಂದ ಕಾರುಗಳನ್ನು ಖರೀದಿಸಲು ಬಯಸಿದರೆ ಈ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.

ರೆನಾಲ್ಟ್ ಕ್ವಿಡ್
ಈ ರೆನಾಲ್ಟ್ ಕ್ವಿಡ್ ಕಾರಿನ ಮೇಲೆ ಒಟ್ಟು ರೂ.50,000 ಗಳವರೆಗೆ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ ರೂ.15,000 ಗಳ ನಗದು ರಿಯಾಯಿತಿ, ರೂ.15,000 ಗಳ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.10,000 ಗಳ ಲಾಯಲ್ಟಿ ಬೋನಸ್ ಅನ್ನು ಹೊಂದಿದೆ. ಇನ್ನು ಇದರೊಂದಿಗೆ ರೂ.10,000 ಗಳ ಕಾರ್ಪೊರೇಟ್ ರಿಯಾಯಿತಿಯನ್ನು ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ರೆನಾಲ್ಟ್ ಟ್ರೈಬರ್
ರೆನಾಲ್ಟ್ ಟ್ರೈಬರ್ ಎಂಪಿವಿಯ ಮೇಲೆ ಒಟ್ಟು ರೂ.60,000 ಗಳವರೆಗೆ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ ರೂ.10,000 ಗಳ ನಗದು ರಿಯಾಯಿತಿಯನ್ನು ಹೊಂದ್ದಿದರೆ, ಎಂಪಿವಿಯ ಎಎಂಟಿ ವೆರಿಯೆಂಟ್ ಮೇಲೆ ರೂ.20,000 ಗಳ ನಗದು ರಿಯಾಯಿತಿಯನ್ನು ನೀಡಿದೆ.

ಇನ್ನು ಈ ಎಂಪಿವಿಯ ಮೇಲೆ ರೂ.20,000 ಗಳ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.10,000 ಗಳ ಲಾಯಲ್ಟಿ ಬೋನಸ್ ಅನ್ನು ಹೊಂದಿದೆ. ಇನ್ನು ಇದರೊಂದಿಗೆ ರೂ.10,000 ಗಳ ಕಾರ್ಪೊರೇಟ್ ರಿಯಾಯಿತಿಯನ್ನು ಹೊಂದಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ರೆನಾಲ್ಟ್ ಡಸ್ಟರ್
ಈ ರೆನಾಲ್ಟ್ ಡಸ್ಟರ್ ಎಸ್‍ಯುವಿಯ ಮೇಲೆ ಒಟ್ಟು ರೂ.65,000 ಗಳವರೆಗೆ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ ರೆನಾಲ್ಟ್ ಡಸ್ಟರ್ ಎಸ್‍ಯುವಿಯ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಯಾವುದೇ ನಗದು ರಿಯಾಯಿತಿಯನ್ನು ನೀಡಿಲ್ಲ. ಇನ್ನು ರೂ.30,000 ಗಳ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.15,000 ಗಳ ಲಾಯಲ್ಟಿ ಬೋನಸ್ ಅನ್ನು ಹೊಂದಿದೆ. ಇನ್ನು ರೂ.30,000 ಗಳ ಕಾರ್ಪೊರೇಟ್ ಬೋನಸ್ ಅನ್ನು ಹೊಂದಿದೆ.

ಇನ್ನು ಟರ್ಬೋ ವೆರಿಯೆಂಟ್ ಮೇಲೆ ರೂ.20,000 ಗಳ ನಗದು ರಿಯಾಯಿತಿ, ರೂ.30,000 ಗಳ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.15,000 ಗಳ ಲಾಯಲ್ಟಿ ಬೋನಸ್ ಅನ್ನು ಹೊಂದಿದೆ. ಇದರೊಂದಿಗೆ ರೂ.30,000 ಗಳ ಕಾರ್ಪೊರೇಟ್ ಬೋನಸ್ ಅನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಕಿಗರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರಿಂದಾಗಿ ಹೊಸ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತ್ತಿಯು ಮತ್ತಷ್ಟು ತಡವಾಗಲಿದೆ.

ಇನ್ನು ರೆನಾಲ್ಟ್ ತನ್ನ ಜೊಯ್ ಎಲೆಕ್ಟ್ರಿಕ್ ಕಾರನ್ನು ಕೂಡ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಎಲೆಕ್ಟ್ರಿಕ್ ಕಾರಿನ ಸ್ಪಾಟ್ ಟೆಸ್ಟ್ ಅನ್ನು ಆರಂಭಿಸಲಾಗಿದೆ. ಇನ್ನು ರೆನಾಲ್ಟ್ ಈ ಹೊಸ ಜೊಯ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.