ಲಿಮೋಸಿನ್ ಕಾರಿನಂತೆ ಮಾಡಿಫೈಗೊಂಡ ವ್ಯಾಗನ್ ಆರ್ ಕಾರು

ಎಸ್‌ಯುವಿಗಳು ಭಾರತದಲ್ಲಿ ಬಹಳ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಅದರಲ್ಲೂ ಕಾಂಪ್ಯಾಕ್ಟ್ ಹಾಗೂ ಮಧ್ಯಮ ಗಾತ್ರದ ಎಸ್‌ಯುವಿಗಳಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ.

ಲಿಮೋಸಿನ್ ಕಾರಿನಂತೆ ಮಾಡಿಫೈಗೊಂಡ ವ್ಯಾಗನ್ ಆರ್ ಕಾರು

ಎಸ್‌ಯುವಿಗಳು ಎಷ್ಟೇ ಜನಪ್ರಿಯವಾಗಿದ್ದರೂ, ಹ್ಯಾಚ್‌ಬ್ಯಾಕ್ ಕಾರುಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳು ಮಧ್ಯಮ ವರ್ಗದ ಜನರ ನೆಚ್ಚಿನ ಕಾರುಗಳಾಗಿವೆ. ಮಾರುತಿ ಸುಜುಕಿ ಕಂಪನಿಯ ವ್ಯಾಗನ್ ಆರ್ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ.

ಲಿಮೋಸಿನ್ ಕಾರಿನಂತೆ ಮಾಡಿಫೈಗೊಂಡ ವ್ಯಾಗನ್ ಆರ್ ಕಾರು

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಬಿಡುಗಡೆಯಾಗಿ ಹಲವಾರು ವರ್ಷಗಳು ಕಳೆದಿದ್ದರೂ ಈಗಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ವ್ಯಾಗನ್ ಆರ್ ಹ್ಯಾಚ್‌ಬ್ಯಾಕ್ ಕಾರನ್ನು ಲಿಮೋಸಿನ್ ಕಾರ್ ಆಗಿ ಮಾಡಿಫೈಗೊಳಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಲಿಮೋಸಿನ್ ಕಾರಿನಂತೆ ಮಾಡಿಫೈಗೊಂಡ ವ್ಯಾಗನ್ ಆರ್ ಕಾರು

ಅಂದ ಹಾಗೆ ನಾವು ಹೇಳುತ್ತಿರುವ ಕಾರು ಮಾಡಿಫೈಗೊಂಡಿರುವುದು ಭಾರತದಲ್ಲಲ್ಲ. ಬದಲಿಗೆ ನಮ್ಮ ನೆರೆಯ ದೇಶ ಪಾಕಿಸ್ತಾನದಲ್ಲಿ. ಈ ಕಾರನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ರಿಜಿಸ್ಟರ್ ಮಾಡಲಾಗಿದೆ.

ಲಿಮೋಸಿನ್ ಕಾರಿನಂತೆ ಮಾಡಿಫೈಗೊಂಡ ವ್ಯಾಗನ್ ಆರ್ ಕಾರು

ಸುಜುಕಿ ಕಂಪನಿಯು ವ್ಯಾಗನ್ ಆರ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡುತ್ತದೆ. ಈ ಕಾರಿನ ಬಿಡಿಭಾಗಗಳನ್ನು ಇಂಡೋನೇಷ್ಯಾದಿಂದ ಆಮದು ಮಾಡಿಕೊಂಡು ಪಾಕಿಸ್ತಾನದಲ್ಲಿ ಜೋಡಿಸಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಲಿಮೋಸಿನ್ ಕಾರಿನಂತೆ ಮಾಡಿಫೈಗೊಂಡ ವ್ಯಾಗನ್ ಆರ್ ಕಾರು

6 ಕ್ಯಾಪ್ಟನ್ ಸೀಟುಗಳನ್ನು ಹೊಂದಿರುವ ಸುಜುಕಿ ವ್ಯಾಗನ್ ಆರ್ ಕಾರನ್ನು 7 ಡೋರುಗಳ ಲಿಮೋಸಿನ್ ಕಾರ್ ಆಗಿ ಮಾಡಿಫೈ ಮಾಡಲಾಗಿದೆ.ಮಾಡಿಫೈಗೊಂಡಿರುವ ಈ ಕಾರಿನಲ್ಲಿ ಮೂರು ಸಾಲಿನ ಸೀಟ್ ವ್ಯವಸ್ಥೆಯನ್ನು ಮಾಡಲಾಗಿದೆ.

ಲಿಮೋಸಿನ್ ಕಾರಿನಂತೆ ಮಾಡಿಫೈಗೊಂಡ ವ್ಯಾಗನ್ ಆರ್ ಕಾರು

ಇದರಲ್ಲಿ ಎರಡು ಹಿಂದಿನ ಕ್ಯಾಪ್ಟನ್ ಸೀಟುಗಳನ್ನು ಮಧ್ಯದ ಸಾಲಿನಲ್ಲಿ ಹಾಗೂ ಎರಡು ಫಾರ್ವರ್ಡ್ ಕ್ಯಾಪ್ಟನ್ ಸೀಟುಗಳನ್ನು ಕೊನೆಯ ಸಾಲಿನಲ್ಲಿ ನೀಡಲಾಗಿದೆ. ಕಾರಿನಲ್ಲಿ 6 ಪ್ರತ್ಯೇಕ ಡೋರುಗಳಿವೆ. ಇದರಿಂದಾಗಿ ಕಾರಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಹತ್ತಲು, ಇಳಿಯಲು ಸುಲಭವಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಲಿಮೋಸಿನ್ ಕಾರಿನಂತೆ ಮಾಡಿಫೈಗೊಂಡ ವ್ಯಾಗನ್ ಆರ್ ಕಾರು

ಆದರೆ ಈ ಕಾರಿನಲ್ಲಿದ್ದ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ವರದಿಗಳು ತಿಳಿಸಿವೆ. ಮಾಡಿಫೈಗೊಂಡಿರುವ ಈ ವ್ಯಾಗನ್ ಆರ್ ಕಾರನ್ನು ಮಾರಾಟಕ್ಕೆ ಇಡಲಾಗಿದೆ. ಪಾಕ್ ವ್ಹೀಲ್ಸ್ ವರದಿಗಳ ಪ್ರಕಾರ ಈ ಕಾರಿನ ಬೆಲೆ 26 ಲಕ್ಷ ಪಾಕಿಸ್ತಾನಿ ರೂಪಾಯಿಗಳು ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ 12 ಲಕ್ಷ ರೂಪಾಯಿಗಳಾಗಿದೆ.

ಲಿಮೋಸಿನ್ ಕಾರಿನಂತೆ ಮಾಡಿಫೈಗೊಂಡ ವ್ಯಾಗನ್ ಆರ್ ಕಾರು

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ವ್ಯಾಗನ್ ಆರ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಹಲವು ದಿನಗಳಿಂದ ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿರುವ ಮಾರುತಿ ಸುಜುಕಿಯ ಮೊದಲ ಈ ಎಲೆಕ್ಟ್ರಿಕ್ ಕಾರು ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Suzuki Wagon R modified like Limousine car. Read in Kannada.
Story first published: Monday, January 4, 2021, 20:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X