ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಜನಪ್ರಿಯ ಲೆಜೆಂಡ್ರಿ 407 ಮಧ್ಯಮ ಕ್ರಮಾಂಕದ ವಾಣಿಜ್ಯ ವಾಹನವನ್ನು ಸಿಎನ್‌ಜಿ ಆವೃತ್ತಿಯೊಂದಿಗೆ ಬಿಡುಗಡೆ ಮಾಡಿದೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ವಿಶ್ವಾದ್ಯಂತ ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲಾಗುತ್ತಿದ್ದು, ಬಹುತೇಕ ವಾಹನ ಮಾರಾಟ ಕಂಪನಿಗಳು ಕೂಡಾ ಭವಿಷ್ಯದ ವಾಹನ ಮಾದರಿಗಳ ಬಗೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಹೊಸ ಕಾರುಗಳ ಮಾರಾಟದಲ್ಲಿ ಈಗಾಗಲೇ ಹಲವಾರು ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಪ್ರಮುಖ ವಾಹನ ಕಂಪನಿಗಳು ಇಂಧನ ಆಧಾರಿತ ವಾಹನಗಳ ಜೊತೆ ಜೊತೆಗೆ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನ ಮಾರಾಟದಲ್ಲೂ ಗಮನಸೆಳೆಯುತ್ತಿವೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ತಂತ್ರಜ್ಞಾನವು ವಾಹನ ಮೈಲೇಜ್ ವಿಚಾರದಲ್ಲಿ ಪ್ರಮುಖ ಪಾತ್ರವಹಿಸುವುದರ ಜೊತೆಗೆ ಮಾಲಿನ್ಯ ತಗ್ಗಿಸುವಲ್ಲಿ ಸಾಕಷ್ಟು ಸಹಕಾರಿಯಾಗಿದ್ದು, ಟಾಟಾ ಮೋಟಾರ್ಸ್ ಕೂಡಾ ತನ್ನ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಾಗಿ ಸಿಎನ್‌ಜಿ ಮಾದರಿಗಳತ್ತ ಮುಖಮಾಡಿದೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟರ್ಸ್ ಕಂಪನಿಯು ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ಮೂಲಕ ಗಮನಸೆಳೆಯುತ್ತಿದ್ದು, ವಾಣಿಜ್ಯ ವಾಹನಗಳ ವಿಭಾಗದಲ್ಲೂ ಹೊಸ ಬದಲಾವಣೆಗಾಗಿ ಸಿಎನ್‌ಜಿ ಆವೃತ್ತಿಯನ್ನು ಪರಿಚಯಿಸಿದೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ದೇಶದ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ 407 ಮಧ್ಯಮ ಕ್ರಮಾಂಕದ ವಾಣಿಜ್ಯ ವಾಹನ ಮಾದರಿಯಲ್ಲಿ ಸಿಎನ್‌ಜಿ ಮಾದರಿಯನ್ನು ಪರಿಚಯಿಸಿದ್ದು, ಹೊಸ ವಾಹನವು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 12.07 ಲಕ್ಷ ಬೆಲೆ ಹೊಂದಿದೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೊಸ ವಾಹನವು 'ನಾನ್ ಸ್ಟಾಪ್ ಫ್ರಾಫಿಟ್ ಮೆಷಿನ್' ಎಂಬ ಖ್ಯಾತಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಈ ವಾಹನವು ಡೀಸೆಲ್ ವೇರಿಯಂಟ್ ಗಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಶೇ.35ರಷ್ಟು ಹೆಚ್ಚುವರಿ ಲಾಭವನ್ನು ತಂದುಕೊಡಲಿದೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

10 ಅಡಿ ಲೋಡ್ ಡೆಕ್ ಸೌಲಭ್ಯ ಹೊಂದಿರುವ ಹೊಸ 407 ಸಿಎನ್‌ಜಿ ಮಾದರಿಯು ಹೆಚ್ಚಿನ ಮಟ್ಟದ ಲೋಡ್-ಸಾಗಿಸುವ ಸಾಮರ್ಥ್ಯ ಹೊಂದಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ಹೊಸ ವಾಹನವು 5 ಟನ್ ನಿಂದ 16 ಟನ್ ತನಕ ಲೋಡಿಂಗ್ ಸಾಮರ್ಥ್ಯ ಹೊಂದಿವೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಪರಿಣಾಮಕಾರಿ ಇಂಧನ ದಕ್ಷತೆಯನ್ನು ಹೊಂದಿರುವ ಹೊಸ 407 ಸಿಎನ್‌ಜಿ ಮಾದರಿಯು 3.8 ಲೀಟರ್ ಎಂಜಿನ್ ಹೊಂದಿದ್ದು, ಗರಿಷ್ಠ 85 ಬಿಎಚ್‌ಪಿಯೊಂದಿಗೆ ಕಡಿಮೆ ಆರ್‌ಪಿಎಂನಲ್ಲಿ 285ಎನ್‌ಎಂ ಅತ್ಯುತ್ತಮ ದರ್ಜೆಯ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

4,995 ಕೆಜಿ ಜಿವಿಡಬ್ಲ್ಯೂ ವಾಹನವು ವೇಗವಾಗಿ ಟರ್ನ್ ಅರೌಂಡ್ ಸಮಯ ಮತ್ತು ಹೆಚ್ಚಿನ ಉತ್ಪಾದಕತೆಯನ್ನು ಖಚಿತಪಡಿಸಿಕೊಳ್ಳಲು 180-ಲೀಟರ್ ಇಂಧನ ಟ್ಯಾಂಕ್ ಸೌಲಭ್ಯ ಹೊಂದಿದ್ದು, ಸೆಮಿ-ಫಾರ್ವರ್ಡ್ ಕಂಟ್ರೋಲ್ ಕ್ಯಾಬಿನ್ ಅನ್ನು ಉನ್ನತ ದರ್ಜೆಯ ಬಿಡಿಭಾಗಗಳೊಂದಿಗೆ ನಿರ್ಮಿಸಲಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇದು ಚಾಲಕರು ಮತ್ತು ಮಾಲೀಕರಿಗೆ ಸುರಕ್ಷಿತ ಮತ್ತು ಆತ್ಮವಿಶ್ವಾಸವನ್ನು ನೀಡಲಿದ್ದು, ಫ್ರಂಟ್ ಪ್ಯಾರಾಬೋಲಿಕ್ ಸಸ್ಪೆನ್ಷನ್ ಸೌಲಭ್ಯವು ಗಮನಾರ್ಹವಾಗಿ ಕಡಿಮೆ ಕ್ಲಚ್ ಮತ್ತು ಗೇರ್ ಶಿಫ್ಟ್ ಪ್ರಯತ್ನ ಮತ್ತು ಕಡಿಮೆ ಎನ್ ವಿಎಚ್ ಮಟ್ಟಗಳನ್ನು ನೀಡುತ್ತದೆ.v

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇದು ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಆರಾಮದಾಯಕ ಚಾಲನೆಗೆ ಸಹಕಾರಿಯಾಗಿದ್ದು, ಕ್ಯಾಬಿನ್ ಮನರಂಜನೆಗಾಗಿ ಹೊಸ ವಾಹನದಲ್ಲಿ ಯುಎಸ್ ಬಿ ಮೊಬೈಲ್ ಚಾರ್ಜಿಂಗ್ ಪೋರ್ಟ್ ಮತ್ತು ಬ್ಲೌಪಂಕ್ಟ್ ಮ್ಯೂಸಿಕ್ ವ್ಯವಸ್ಥೆಯನ್ನು ಜೋಡಿಸಲಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಫ್ಲೀಟ್ ಎಡ್ಜ್ ಸೌಲಭ್ಯ ಹೊಂದಿರುವ ಟಾಟಾ ಹೊಸ ವಾಹನವು ನ್ಯೂ-ಜನರೇಷನ್ ಸಂಪರ್ಕಿತ ಸೌಲಭ್ಯ ಹೊಂದಿದ್ದು, ಪರಿಣಾಮಕಾರಿ ಫ್ಲೀಟ್ ನಿರ್ವಹಣೆಗಾಗಿ, ಅಪ್ ಟೈಮ್ ಅನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಮಾಲೀಕತ್ವದ ಒಟ್ಟು ವೆಚ್ಚವನ್ನು ಕಡಿಮೆ ಮಾಡಲು 2 ವರ್ಷಗಳ ಉಚಿತ ಚಂದಾದಾರಿಕೆ ಸೇವೆಗಳನ್ನು ಒದಗಿಸಲಿದೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಜೊತೆಗೆ 407 ಸಿಎನ್‌ಜಿ ಮಾದರಿಯ ಮೇಲೆ ಟಾಟಾ ಕಂಪನಿಯು 3 ವರ್ಷ/ 3 ಲಕ್ಷ ಕಿಲೋಮೀಟರ್ ಗಳ ಅತ್ಯುತ್ತಮ ವಾರಂಟಿಯನ್ನು ನೀಡಿದ್ದು, ಸಂಪೂರ್ಣ ಸೇವಾ 2.0 ಸಮಗ್ರ ಸೇವಾ ಪ್ಯಾಕೇಜ್‌ನಲ್ಲಿ ವಾಣಿಜ್ಯ ವಾಹನಗಳ ಪಾಲನೆ ಮತ್ತು ನಿರ್ವಹಣೆಗೆ ಸಂಪೂರ್ಣ ಪರಿಹಾರವನ್ನು ನೀಡುತ್ತದೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ 35 ವರ್ಷಗಳ ಪರಂಪರೆಯನ್ನು ಹೊಂದಿರುವ ಭಾರತದ ಅತ್ಯಂತ ಹಳೆಯ ವಾಣಿಜ್ಯ ವಾಹನವಾದ 407 ಮಾದರಿಯು ನಿರಂತರವಾಗಿ ಬದಲಾಗುತ್ತಾ ಗ್ರಾಹಕರ ನೆಚ್ಚಿನ ವಾಹನವಾಗಿ ಉಳಿದಿದೆ.

ಹೊಸ ತಂತ್ರಜ್ಞಾನ ಪ್ರೇರಿತ 407 ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇದು ಇದುವರೆಗೆ ಭಾರತದಲ್ಲಿ ಸುಮಾರು 1.2 ಮಿಲಿಯನ್ ಯುನಿಟ್ ಗಳನ್ನು ಮಾರಾಟ ದಾಖಲೆ ಹೊಂದಿದ್ದು, ಕನಿಷ್ಠ ಕಾರ್ಯಾಚರಣೆ ವೆಚ್ಚಗಳಲ್ಲಿ ಸಾಟಿಯಿಲ್ಲದ ಕಾರ್ಯಕ್ಷಮತೆಯು 407 ಬೇಡಿಕೆ ಹೆಚ್ಚಳದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದೀಗ ಸಿಎನ್‌ಜಿ ಶ್ರೇಣಿಯ ಜೊತೆಗೆ 407 ವಾಹನವು ಗ್ರಾಹಕರಿಗೆ ಮತ್ತಷ್ಟು ಲಾಭಾದಾಯಕ ವಾಹನ ಮಾದರಿಯಾಗಲಿದ್ದು, ಶೀಘ್ರದಲ್ಲೇ ಮತ್ತಷ್ಟು ವಾಣಿಜ್ಯ ಮಾದರಿಗಳು ಸಿಎನ್‌ಜಿ ಮಾದರಿಯಲ್ಲಿ ಬಿಡುಗಡೆಯಾಗಲಿವೆ.

Most Read Articles

Kannada
English summary
Tata 407 cng launched in india priced from rs 12 07 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X