2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಟಾಟಾ ಮೋಟಾರ್ಸ್ ತನ್ನ ಪ್ರಮುಖ ಪ್ರಯಾಣಿಕ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದ್ದು, ಹೊಸ ದರವು ಈ ತಿಂಗಳ 8ರಿಂದಲೇ ಅನ್ವಯವಾಗುವಂತೆ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿರುವ ಟಾಟಾ ಮೋಟಾರ್ಸ್ ಕಂಪನಿಯು ಉತ್ಪಾದನಾ ವೆಚ್ಚ ಹೆಚ್ಚಿರುವ ಹಿನ್ನಲೆಯಲ್ಲಿ ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಕಾರುಗಳ ಬೆಲೆಗೆ ಅನುಗುಣವಾಗಿ ಶೇ.1 ರಿಂದ ಶೇ.1.08 ರಷ್ಟು ದರ ಏರಿಕೆ ಮಾಡಲಾಗಿದೆ. ಹೊಸ ದರಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ವಿವಿಧ ಕಾರುಗಳ ಬೆಲೆಯನ್ನು ಕನಿಷ್ಠ ರೂ. 1 ಸಾವಿರದಿಂದ ಗರಿಷ್ಠ ರೂ. 25 ಸಾವಿರ ತನಕ ಹೆಚ್ಚಳ ಮಾಡುವ ಸಾಧ್ಯತೆಗಳಿದ್ದು, ಹೊಸ ದರ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಮೇ 8ರಿಂದ ಕಾರು ಖರೀದಿಸುವ ಗ್ರಾಹಕರಿಗೆ ಮಾತ್ರ ಹೊಸ ದರ ಅನ್ವಯವಾಗಿದೆ ಎಂಬುವುದನ್ನು ಸ್ಪಷ್ಟಪಡಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಬಿಡುಗಡೆಯಾದ ಸಫಾರಿ ಹೊರತುಪಡಿಸಿ ಇನ್ನುಳಿದ ಕಾರು ಮಾದರಿಗಳ ಬೆಲೆ ಹೆಚ್ಚಿಸುವ ಸಾಧ್ಯತೆಗಳಿವೆ.

2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಕಳೆದ ಜನವರಿಯಲ್ಲಿ ವಿವಿಧ ವಾಹನ ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಮತ್ತೆ ಬೆಲೆ ಹೆಚ್ಚಳ ಮಾಡುತ್ತಿದ್ದು, ಟಾಟಾ ಮೋಟಾರ್ಸ್ ಕೂಡಾ ತನ್ನ ಪ್ರಮುಖ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದೆ.

2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಗ್ರಾಹಕರ ಬೇಡಿಕೆಯೆಂತೆ ಟಾಟಾ ಮೋಟಾರ್ಸ್ ಸದ್ಯ ಟಿಯಾಗೊ, ಟಿಗೋರ್, ಆಲ್‌ಟ್ರೊಜ್, ನೆಕ್ಸಾನ್, ನೆಕ್ಸಾನ್ ಇವಿ, ಹ್ಯಾರಿಯರ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಟಾಟಾ ಹೊಸ ಕಾರುಗಳಲ್ಲಿ ನ್ಯೂ ಜನರೇಷನ್ ಸಫಾರಿ ಎಸ್‌ಯುವಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಏಪ್ರಿಲ್ ತಿಂಗಳಿನಲ್ಲಿ ಒಟ್ಟು 25,095 ಪ್ರಯಾಣಿಕ ವಾಹನಗಳನ್ನು ವಿತರಣೆ ಮಾಡಿದ್ದು, ವಾಣಿಜ್ಯ ವಾಹನಗಳ ವಿಭಾಗದಲ್ಲಿ ಒಟ್ಟು 16,644 ಯುನಿಟ್‌ಗಳನ್ನು ವಿತರಿಸಿದೆ.

2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಏಪ್ರಿಲ್‌ನಲ್ಲಿ ಒಟ್ಟು 39,530 ವಾಹನಗಳನ್ನು ಮಾರಾಟ ಮಾಡಿದ್ದು, ಇದನ್ನು ಕಳೆದ ಮಾರ್ಚ್ ಅವಧಿಯ ವಾಹನ ಮಾರಾಟಕ್ಕೆ ಹೋಲಿಕೆ ಮಾಡಿದ್ದಲ್ಲಿ ಶೇ.41 ರಷ್ಟು ಕುಸಿತ ಕಂಡಿದೆ. ಮಾರ್ಚ್ ತಿಂಗಳಿನಲ್ಲಿ ಪ್ರಯಾಣಿರಕ ಕಾರುಳು ಮತ್ತು ವಾಣಿಜ್ಯ ವಾಹನಗಳ ವಿಭಾಗದಲ್ಲಿ ಒಟ್ಟು 66,609 ಯುನಿಟ್ ವಿತರಣೆ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಪ್ರಯಾಣಿಕರ ವಾಹಗಳಿಂತ ವಾಣಿಜ್ಯ ವಾಹನ ಮಾರಾಟದಲ್ಲಿ ಸಾಕಷ್ಟು ಕುಸಿತ ಅನುಭವಿಸುತ್ತಿದೆ.

2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಕೋವಿಡ್ ಹೆಚ್ಚಿರುವ ಪರಿಣಾಮ ಮೇ ಅವಧಿಯಲ್ಲಿ ಹೊಸ ವಾಹನಗಳ ಮಾರಾಟವು ಇನ್ನಷ್ಟು ಕುಸಿತ ಕಾಣುವ ಸಾಧ್ಯತೆಗಳಿದ್ದು, ಕೋವಿಡ್ ಭೀತಿಯಿಂದ ಹಲವಾರು ವಾಹನ ಕಂಪನಿಗಳು ಉತ್ಪಾದನೆಯನ್ನೇ ಸ್ಥಗಿತಗೊಳಿಸಿವೆ.

2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ವಾಹನ ಮಾರಾಟವನ್ನು ಸಹ ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಹೊಸ ಸುರಕ್ಷಾ ಮಾರ್ಗಸೂಚಿ ಮಾರಾಟ ಮಾಡುತ್ತಿದ್ದು, ಹೊಸ ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಗ್ರಾಹಕರನ್ನು ಶೋರೂಂ ಭೇಟಿಗೆ ಅವಕಾಶ ನೀಡದೆ ಮನೆ ಬಾಗಿಲಿಗೆ ವಾಹನಗಳನ್ನು ವಿತರಣೆ ಮಾಡಲಾಗುತ್ತಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮಗಳೊಂದಿಗೆ ಕೆಲವೇ ಕೆಲವು ಕಂಪನಿಗಳು ಮಾತ್ರ ವಾಹನ ಉತ್ಪಾದನೆ ಕೈಗೊಳ್ಳುತ್ತಿವೆ.

2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಇದರ ನಡುವೆ ಹೊಸ ವಾಹನಗಳ ಖರೀದಿಗೆ ಬುಕ್ಕಿಂಗ್ ಸಲ್ಲಿಕೆ ತೀವ್ರ ಕಂಡಿರುವುದಲ್ಲದೆ ಈಗಾಗಲೇ ಬುಕ್ಕಿಂಗ್ ಸಲ್ಲಿಕೆ ಮಾಡಿದ್ದ ಲಕ್ಷಾಂತರ ಹೊಸ ವಾಹನ ಖರೀದಿದಾರರು ಬುಕ್ಕಿಂಗ್ ಹಿಂಪಡೆಯುತ್ತಿದ್ದಾರೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

2021ರಲ್ಲಿ ಎರಡನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಸದ್ಯದ ಪರಿಸ್ಥಿತಿಯಲ್ಲಿ ಹೊಸ ವಾಹನ ಖರೀದಿಯು ಆರ್ಥಿಕ ಸಂಕಷ್ಟ ಇನ್ನಷ್ಟು ಹೆಚ್ಚಳವಾಗಬಹುದೆಂಬ ಭೀತಿಯಿಂದ ಹೊಸ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಈ ಪರಿಸ್ಥಿತಿ ಸುಧಾರಣೆಯಾಗಲು ಇನ್ನು ಕೆಲ ತಿಂಗಳುಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.

Most Read Articles

Kannada
English summary
Tata Motors To Hike The Prices Of Cars From 2021 May 8. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X