ನೆಕ್ಸಾನ್ ಕಾರಿನ ಬ್ಲ್ಯೂ ಬಣ್ಣದ ಆಯ್ಕೆಯನ್ನು ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಉನ್ನತೀಕರಿಸಿದ್ದು, ಕಂಪನಿಯು ನೆಕ್ಸಾನ್ ಕಾರಿನ ಬಣ್ಣದ ಆಯ್ಕೆಯಲ್ಲೂ ಕೆಲವು ಹೊಸ ಆಯ್ಕೆಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ.

ನೆಕ್ಸಾನ್ ಕಾರಿನ ಬ್ಲ್ಯೂ ಬಣ್ಣದ ಆಯ್ಕೆಯನ್ನು ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ನೆಕ್ಸಾನ್ ಕಾರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಲು ಸದ್ಯ ಮಾರುಕಟ್ಟೆಯಲ್ಲಿ ಟೆಕ್ಟೊನಿಕ್ ಬ್ಲ್ಯೂ ಬಣ್ಣದ ಆಯ್ಕೆ ಕೈಬಿಡಲಾಗಿದ್ದು, ಇತ್ತೀಚೆಗೆ ಟಿಯಾಗೋ ಹ್ಯಾಚ್‍‌ಬ್ಯಾಕ್ ಮಾದರಿಯಲ್ಲಿ ನೀಡಲಾಗಿರುವ ಅರಿಜೋನಾ ಬ್ಲ್ಯೂ ಬಣ್ಣದ ಆಯ್ಕೆಯನ್ನು ನೆಕ್ಸಾನ್ ಮಾದರಿಯಲ್ಲೂ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ನೆಕ್ಸಾನ್ ಮಾದರಿಯಲ್ಲಿ ಸದ್ಯ ಲಭ್ಯವಿರುವ ಆರು ಬಣ್ಣದ ಆಯ್ಕೆಗಳಲ್ಲಿ ಟೆಕ್ಟೊನಿಕ್ ಬ್ಲ್ಯೂ ಅತಿ ಕಡಿಮೆ ಬೇಡಿಕೆ ಮಾದರಿಯಾಗಿದ್ದು, ಈ ಹಿನ್ನಲೆಯಲ್ಲಿ ಹೊಸ ಬಣ್ಣದ ಆಯ್ಕೆ ನೀಡಲು ನಿರ್ಧರಿಸಲಾಗಿದೆ.

ನೆಕ್ಸಾನ್ ಕಾರಿನ ಬ್ಲ್ಯೂ ಬಣ್ಣದ ಆಯ್ಕೆಯನ್ನು ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಟಿಯಾಗೋ ಹ್ಯಾಚ್‍‌ಬ್ಯಾಕ್‌ನಲ್ಲಿ ನೀಡಲಾಗಿರುವ ಅರಿಜೋನಾ ಬ್ಲ್ಯೂ ಬಣ್ಣದ ಆಯ್ಕೆಯು ನೆಕ್ಸಾನ್ ಮಾದರಿಯಲ್ಲೂ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಅರಿಜೋನಾ ಬ್ಲ್ಯೂ ಬಣ್ಣದ ಆಯ್ಕೆಗೆ ಉತ್ತಮ ಬೇಡಿಕೆ ಹರಿದುಬರುತ್ತಿದೆ.

ನೆಕ್ಸಾನ್ ಕಾರಿನ ಬ್ಲ್ಯೂ ಬಣ್ಣದ ಆಯ್ಕೆಯನ್ನು ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ನೆಕ್ಸಾನ್ ಕಾರಿನಲ್ಲಿ ಸದ್ಯ ಒಲಿಜ್ ಗ್ರಿನ್, ಕಾಲ್‌ಗ್ರೇ ವೈಟ್, ಫ್ಲೆಮ್ ರೆಡ್, ಪ್ಯೂರ್ ಸಿಲ್ವರ್ ಮತ್ತು ಡೇ ಟೊನಾ ಗ್ರೆ ಬಣ್ಣಗಳ ಆಯ್ಕೆ ಹೊಂದಿದ್ದು, ಸ್ಥಗಿತ ಮಾಡಲಾಗಿರುವ ಟೆಕ್ಟೊನಿಕ್ ಬ್ಲ್ಯೂ ಬದಲಾಗಿ ಅರಿಜೋನಾ ಬ್ಲ್ಯೂ ಉತ್ತಮ ಬೇಡಿಕೆ ಪಡೆದುಕೊಳ್ಳಬಹುದೆಂಬ ನೀರಿಕ್ಷೆಗಳಿವೆ.

ನೆಕ್ಸಾನ್ ಕಾರಿನ ಬ್ಲ್ಯೂ ಬಣ್ಣದ ಆಯ್ಕೆಯನ್ನು ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಕಾರು ಉತ್ಪನ್ನಗಳಲ್ಲಿ ಪ್ರತಿ ಎರಡು ತಿಂಗಳಿಗೆ ಒಂದು ಹೊಸ ಹೊಸ ಬದಲಾವಣೆಗಳನ್ನು ಪರಿಚಯಿಸುವ ಯೋಜನೆಗೆ ಚಾಲನೆ ನೀಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಬದಲಾವಣೆಗಳೊಂದಿಗೆ ಬೇಡಿಕೆ ಕಾಯ್ದುಕೊಳ್ಳಲು ಹೊಸ ಯೋಜನೆ ಟಾಟಾ ಕಂಪನಿಗೆ ಸಾಕಷ್ಟು ಸಹಕಾರಿಯಾಗಿದೆ.

ನೆಕ್ಸಾನ್ ಕಾರಿನ ಬ್ಲ್ಯೂ ಬಣ್ಣದ ಆಯ್ಕೆಯನ್ನು ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಹೀಗಾಗಿ ಹೊಸ ಬಣ್ಣದ ಆಯ್ಕೆ ಹೊಂದಿರುವ ನೆಕ್ಸಾನ್ ಕಾರು ಮಾದರಿಯು ಶೀಘ್ರದಲ್ಲೇ ಪರಿಚಯಿಸಬಹುದಾಗಿದ್ದು, ಹೊಸ ಬಣ್ಣದ ಆಯ್ಕೆ ಯಾವುದೇ ಹೆಚ್ಚುವರಿ ದರವಿಲ್ಲದೆ ಮಾರುಕಟ್ಟೆ ಪ್ರವೇಶಿಸಲಿದೆ.

ನೆಕ್ಸಾನ್ ಕಾರಿನ ಬ್ಲ್ಯೂ ಬಣ್ಣದ ಆಯ್ಕೆಯನ್ನು ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಇನ್ನು ಟಾಟಾ ಕಂಪನಿಯು ಹೊಸ ಕಾರುಗಳನ್ನು OMEGA ಕಾರು ಉತ್ಪಾದನಾ ತಂತ್ರಜ್ಞಾನದಡಿಯಲ್ಲಿ ಕಾರು ಅಭಿವೃದ್ದಿ ಮಾಡುತ್ತಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿನ ನೆಕ್ಸಾನ್ ಕಾರು ಮಾದರಿಯು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದೆ.

ನೆಕ್ಸಾನ್ ಕಾರಿನ ಬ್ಲ್ಯೂ ಬಣ್ಣದ ಆಯ್ಕೆಯನ್ನು ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಎಪ್ರಿಲ್ ಅವಧಿಯಲ್ಲಿ ಒಟ್ಟು 6,938 ಯುನಿಟ್ ಮಾರಾಟದೊಂದಿಗೆ ನೆಕ್ಸಾನ್ ಕಾರು ಮಾದತರಿಯು ಟಾಟಾ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮಾರ್ಚ್ ಅವಧಿಗೆ ಹೋಲಿಕೆ ಮಾಡಿದ್ದಲ್ಲಿ ತುಸು ಕಡಿಮೆ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದರೂ ಕೋವಿಡ್‌ನಿಂದಾಗಿ ಆರ್ಥಿಕ ಹಿಂಜರಿತದಲ್ಲೂ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ ಎನ್ನಬಹುದು.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ನೆಕ್ಸಾನ್ ಕಾರಿನ ಬ್ಲ್ಯೂ ಬಣ್ಣದ ಆಯ್ಕೆಯನ್ನು ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

2020ರ ಆರಂಭದಲ್ಲಿ ಪ್ರತಿ ತಿಂಗಳಿಗೆ 2500ರಿಂದ 3 ಸಾವಿರ ಯುನಿಟ್ ಮಾತ್ರ ಮಾರಾಟವಾಗಿದ್ದ ನೆಕ್ಸಾನ್ ಕಾರು ಮಾದರಿಯು ಹೊಸ ಬದಲಾವಣೆಗಳಿಂಗಾಗಿ ಇದೀಗ ಪ್ರತಿ ತಿಂಗಳು 6 ಸಾವಿರ 7 ಸಾವಿರ ಯುನಿಟ್ ಸರಾಸರಿಯಾಗಿ ಮಾರಾಟಗೊಳ್ಳುತ್ತಿದೆ.

ನೆಕ್ಸಾನ್ ಕಾರಿನ ಬ್ಲ್ಯೂ ಬಣ್ಣದ ಆಯ್ಕೆಯನ್ನು ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಹೊಸ ಕಾರು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್‌ ಪಡೆದ ನಂತರ ಕಾರು ಮಾರಾಟವು ನಿರಂತವಾಗಿ ಏರಿಕೆಯಾಗುತ್ತಿದ್ದು, ಸ್ವದೇಶಿ ಕಂಪನಿಗಳ ನಿರ್ಮಿತ ವಾಹನ ಬಳಕೆಗೆ ಗ್ರಾಹಕರ ಒಲವು ತೋರುತ್ತಿರುವುದು ಕೂಡಾ ಟಾಟಾ ಕಾರುಗಳ ಮಾರಾಟ ಬೆಳವಣಿಗೆ ಮತ್ತೊಂದು ಕಾರಣವಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನೆಕ್ಸಾನ್ ಕಾರಿನ ಬ್ಲ್ಯೂ ಬಣ್ಣದ ಆಯ್ಕೆಯನ್ನು ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಬಿಎಸ್-6 ಪ್ರೇರಣೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.95 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Tata Nexon Tectonic Blue Colour Discontinued. Read in Kannada.
Story first published: Saturday, May 22, 2021, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X