ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಅಮೆರಿಕಾ ಮೂಲದ ಟೆಸ್ಲಾ (Tesla) ಕಂಪನಿಯು ವಿಶ್ವದ ಹಲವು ದೇಶಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ವಿಶ್ವದ ಯಾವುದೇ ಕಂಪನಿಯು ಟೆಸ್ಲಾ ಕಂಪನಿಯ ರೀತಿಯಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿಲ್ಲ. ಇನ್ನು ಟೆಸ್ಲಾ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಸದಾ ಕಾಲ ಸಕ್ರಿಯರಾಗಿರುತ್ತಾರೆ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಅವರು ತಮ್ಮ ಕಂಪನಿಯ ಎಲೆಕ್ಟ್ರಿಕ್ ಕಾರು ಗ್ರಾಹಕರು ಹಾಗೂ ಎಲೆಕ್ಟ್ರಿಕ್ ವಾಹನ ಉತ್ಸಾಹಿಗಳು ಸೇರಿದಂತೆ ಇತರ ನೆಟಿಜನ್‌ಗಳು ಕೇಳುವ ಪ್ರಶ್ನೆಗಳಿಗೆ ಹಾಗೂ ಕಾಮೆಂಟ್‌ಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಇದೇ ವೇಳೆ ಎಲಾನ್ ಮಸ್ಕ್ ಅಂತರ್ಜಾಲದಲ್ಲಿ ವೈರಲ್ ಆಗುವ ವಿಷಯಗಳ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಸದ್ಯಕ್ಕೆ ವಿಶ್ವದ ನಂ 1 ಶ್ರೀಮಂತರಾಗಿರುವ ಅವರ ಟ್ವಿಟರ್ ಖಾತೆಯು ಟೆಸ್ಲಾ ಕಂಪನಿಯ ಕಾರ್ಪೊರೇಟ್ ಸಂಪರ್ಕ ವಿಭಾಗವಾಗಿ ಕಾರ್ಯನಿರ್ವಹಿಸುತ್ತದೆ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಇತ್ತೀಚಿಗೆ ಎಲಾನ್ ಮಸ್ಕ್ ರವರು ಮತ್ತೊಮ್ಮೆ ಗ್ರಾಹಕರೊಬ್ಬರ ದೂರಿಗೆ ತ್ವರಿತವಾಗಿ ಸ್ಪಂದಿಸಿದ್ದಾರೆ. ಅವರ ಈ ನಡೆ ಅವರ ತ್ವರಿತ ಹಾಗೂ ನಿಖರವಾದ ಪ್ರತಿಕ್ರಿಯೆಗೆ ಉದಾಹರಣೆಯಾಗಿದೆ. ದಕ್ಷಿಣ ಕೊರಿಯಾದ ಟೆಸ್ಲಾ ಮಾಡೆಲ್ 3 ಕಾರು ಮಾಲೀಕರೊಬ್ಬರು ತಮ್ಮ ಐಫೋನ್ ಅನ್ನು ತಮ್ಮ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿರುವ ಸಿಸ್ಟಂಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದ್ದಾರೆ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಇದು ಜಾಗತಿಕ ಸಮಸ್ಯೆಯಾಗಿದೆ. ಈ ಬಗ್ಗೆ 3 ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಿದ ಎಲಾನ್ ಮಸ್ಕ್, ಚೆಕಿಂಗ್... ಎಂದು ಹೇಳಿದರು. ನಂತರ ಪ್ರತಿಕ್ರಿಯೆ ನೀಡಿದ ಅವರು ಸರ್ವರ್‌ನಲ್ಲಿ ಸಮಸ್ಯೆ ಇದೆ. ಟೆಸ್ಲಾ ಅಪ್ಲಿಕೇಶನ್‌ನಲ್ಲಿ ಸಮಸ್ಯೆಯ ಮೂಲವನ್ನು ಪೋಸ್ಟ್ ಮಾಡಿದ್ದೇನೆ ಎಂದು ತಿಳಿಸಿದರು. ಈ ಪ್ರತಿಕ್ರಿಯೆಗೆ ಖುಷಿಯಾದ ದಕ್ಷಿಣ ಕೊರಿಯಾದ ಕಾರು ಮಾಲೀಕರು ಧನ್ಯವಾದಗಳು ಎಲಾನ್ ಎಂದು ಕಾಮೆಂಟ್ ಮಾಡಿದರು.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಎಲಾನ್ ಮಸ್ಕ್ ರವರ ಈ ನಡೆ ನೆಟಿಜನ್‌ಗಳ ಗಮನ ಸೆಳೆದಿದೆ. ಇದಕ್ಕೆ ನೆಟಿಜನ್‌ಗಳು ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ನವೆಂಬರ್ 19 ರಂದು ಹಲವು ದೇಶಗಳಲ್ಲಿ ಟೆಸ್ಲಾ ಕಾರುಗಳಲ್ಲಿ ಸಾಫ್ಟ್‌ವೇರ್ ಸಮಸ್ಯೆ ಎದುರಾಗಿತ್ತು. ಇದರಿಂದ ಬಹುತೇಕ ಟೆಸ್ಲಾ ಕಾರು ಗ್ರಾಹಕರು ತಮ್ಮ ಕಾರಿನಲ್ಲಿ ಟೆಸ್ಲಾ ಒದಗಿಸಿದ್ದ ಪ್ರೊಸೆಸರ್‌ಗೆ ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಸಕ್ರಿಯರಾಗುತ್ತಾರೆ ಎಂದು ತಿಳಿದಿರುವ ಕೆಲವರು ಈ ಬಗ್ಗೆ ಅವರಿಗೆ ದೂರು ನೀಡಿದ್ದಾರೆ. ಈ ದೂರುಗಳಿಗೆ ಸ್ಪಂದಿಸಿರುವ ಎಲಾನ್ ಮಸ್ಕ್ ಉತ್ತರವನ್ನೂ ನೀಡಿದ್ದಾರೆ. ಅದರಲ್ಲಿ ಈ ಮೇಲಿನ ಉತ್ತರವೂ ಸೇರಿದೆ. ಗಮನಿಸಬೇಕಾದ ಸಂಗತಿಯೆಂದರೆ ಕಂಪನಿಯ ಕಡೆಯಿಂದ ಕಂಡು ಬರುವ ಯಾವುದೇ ಸಮಸ್ಯೆಗಳಿಗೆ ಕ್ಷಮೆಯಾಚಿಸಲು ಎಲೋನ್ ಮಸ್ಕ್ ಹಿಂಜರಿಯುವುದಿಲ್ಲ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ತೃಪ್ತಿದಾಯಕ ಗ್ರಾಹಕ ಸೇವೆಯನ್ನು ಒದಗಿಸುವ ಕಂಪನಿಗಳಲ್ಲಿ ಟೆಸ್ಲಾ ಮುಂಚೂಣಿಯಲ್ಲಿದೆ. ಟೆಸ್ಲಾ ತನ್ನ ಗ್ರಾಹಕರ ಅಗತ್ಯಗಳನ್ನು ತಕ್ಷಣವೇ ಪೂರೈಸಲು ಸದಾ ಸಿದ್ಧವಾಗಿರುತ್ತದೆ. ಆದರೆ ಚಾಲಕರಹಿತ ವಾಹನಗಳ ವಿಷಯದಲ್ಲಿ ಟೆಸ್ಲಾ ಕೆಲವು ಬಾರಿ ಹಿನ್ನಡೆ ಅನುಭವಿಸಿದೆ. ಈ ಬಗ್ಗೆ ಇಂಟರ್ ನೆಟ್ ನಲ್ಲಿ ಹಲವಾರು ಮೀಮ್‌ ಹಾಗೂ ವೀಡಿಯೊಗಳು ಹರಿದಾಡುತ್ತಿವೆ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಅಂದ ಹಾಗೆ ಟೆಸ್ಲಾ ಕಂಪನಿಯ ಕಾರುಗಳು ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ. ಟೆಸ್ಲಾ ಕಂಪನಿಯು ವಿಶ್ವಾದಾದ್ಯಂತ 1 ಟ್ರಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದೆ. ಅಮೆರಿಕಾದ ಜನಪ್ರಿಯ ಬಾಡಿಗೆ ಕಾರು ಕಂಪನಿಯಾದ ಹರ್ಟ್ಜ್ ಟೆಸ್ಲಾ ಕಂಪನಿಯಿಂದ 1 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದೆ. ಇದಾದ ನಂತರ ಟೆಸ್ಲಾ ಕಂಪನಿಯ ಆಸ್ತಿ ಮೌಲ್ಯವು 1 ಟ್ರಿಲಿಯನ್ ಡಾಲರ್ ಗಳನ್ನು ಮೀರಿದೆ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಪ್ರಪಂಚದಾದ್ಯಂತದ ಎಲೆಕ್ಟ್ರಿಕ್ ಕಾರುಗಳನ್ನು ವೈಯಕ್ತಿಕ ಬಳಕೆದಾರರು ಹಾಗೂ ಹರ್ಟ್ಜ್‌ನಂತಹ ಬಾಡಿಗೆ ಕಾರು ಕಂಪನಿಗಳು ಹೆಚ್ಚು ಖರೀದಿಸುತ್ತಿದ್ದಾರೆ. ಇದರಿಂದಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಟೆಸ್ಲಾ ಕಂಪನಿಯು ಸದಾ ಕಾಲ ಕ್ರಿಯಾಶೀಲರಾಗಿರುವುದರಿಂದ ಹರ್ಟ್ಜ್‌ನಂತಹ ಹೊಸ ಕಂಪನಿಗಳೊಂದಿಗೆ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿದೆ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಟೆಸ್ಲಾ ಹಾಗೂ ಹರ್ಟ್ಜ್ ನಡುವಿನ ಒಪ್ಪಂದವು 4 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ಬೆಲೆ ಅಮೆರಿಕಾದಲ್ಲಿ 40,000 ಡಾಲರ್ ಗಳಾಗಿದೆ. ಈ ಮೂಲಕ ಟೆಸ್ಲಾ ಹಾಗೂ ಹರ್ಟ್ಜ್ ನಡುವೆ 4 ಬಿಲಿಯನ್ ಡಾಲರ್ ಒಪ್ಪಂದವೇರ್ಪಟ್ಟಿದ್ದು, ಟೆಸ್ಲಾ ಕಂಪನಿಯ ಆಸ್ತಿ ಮೌಲ್ಯವು 1 ಟ್ರಿಲಿಯನ್ ಡಾಲರ್ ದಾಟಿದೆ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಈ ಸುದ್ದಿ ಟೆಸ್ಲಾ ಕಂಪನಿಯ ಷೇರುಗಳನ್ನು ಖರೀದಿಸಿದವರಿಗೆ ಸಿಹಿ ನೀಡಿದೆ. ಇದರಿಂದ ಟೆಸ್ಲಾ ಕಂಪನಿಯ ಷೇರು ಬೆಲೆ 1,024.86 ಡಾಲರ್ ಗಳಿಗೆ ಏರಿಕೆಯಾಗಿದೆ. ಅಂದರೆ ಮೊದಲಿಗಿಂತ 13% ನಷ್ಟು ಏರಿಕೆಯಾಗಿದೆ. ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ರವರು ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 255.8 ಬಿಲಿಯನ್ ಡಾಲರ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಎಲಾನ್ ಮಸ್ಕ್ ರವರ ಆಸ್ತಿ ಮೌಲ್ಯವು 11.4% ನಷ್ಟು ಹೆಚ್ಚಾಗಿದೆ. ಅಂದ ಹಾಗೆ ಟೆಸ್ಲಾ ಕಂಪನಿಯು ಈ ವರ್ಷದ ಜನವರಿಯಲ್ಲಿ ತನ್ನ ಕಚೇರಿಯನ್ನು ನಮ್ಮ ಬೆಂಗಳೂರಿನಲ್ಲಿ ನೋಂದಾಯಿಸಿತ್ತು. ಭಾರತೀಯ ಗ್ರಾಹಕರು ಟೆಸ್ಲಾ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುವುದನ್ನು ಎದುರು ನೋಡುತ್ತಿದ್ದಾರೆ. ಟೆಸ್ಲಾ ಕಂಪನಿಯ ಮಾಡೆಲ್ 3 ಕಾರ್ ಅನ್ನು ಭಾರತದ ರಸ್ತೆಗಳಲ್ಲಿ ಹಲವು ಬಾರಿ ಪರೀಕ್ಷಿಸಲಾಗಿದೆ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಇತ್ತೀಚೆಗೆ ಎಲಾನ್ ಮಸ್ಕ್'ರವರು ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಭಾರತದಲ್ಲಿ ಟೆಸ್ಲಾ ಕಂಪನಿಯ ಕಾರುಗಳಿಗೆ ವಿಶ್ವದಲ್ಲೇ ಅತಿ ಹೆಚ್ಚು ಆಮದು ಸುಂಕ ವಿಧಿಸಲಾಗುತ್ತಿದೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಟೆಸ್ಲಾ ಕಂಪನಿಯ ಕಾರುಗಳು ದುಬಾರಿ ಬೆಲೆಯನ್ನು ಹೊಂದಿವೆ.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಟೆಸ್ಲಾ ಕಂಪನಿಯ ಕಾರುಗಳ ಮೇಲೆ ವಿಧಿಸಲಾಗುವ ಆಮದು ಸುಂಕವನ್ನು ಕಡಿಮೆ ಮಾಡುವ ಬಗ್ಗೆ ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರವು ಹೇಳಿದೆ. ಇದರಿಂದ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಮಾರಾಟವು ಶೀಘ್ರದಲ್ಲೇ ಭಾರತದಲ್ಲಿ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಎಲಾನ್ ಮಸ್ಕ್'ರವರು ಭಾರತದಲ್ಲಿ ಹೆಚ್ಚಿನ ಆಮದು ಸುಂಕವನ್ನು ವಿಧಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಗ್ರಾಹಕರ ದೂರಿಗೆ ತ್ವರಿತವಾಗಿ ಸ್ಪಂದಿಸಿದ Tesla ಕಂಪನಿ ಸಿಇಒ

ಟೆಸ್ಲಾ ಕಾರುಗಳು ಭಾರತದಲ್ಲಿಯೇ ಉತ್ಪಾದನೆಯಾದಾಗ ಮಾತ್ರ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಆಲೋಚನೆಯನ್ನು ಪರಿಗಣಿಸಬಹುದು ಎಂದು ಕಂಪನಿ ಹೇಳಿದೆ. ತಮ್ಮ ಕಾರುಗಳನ್ನು ಐಷಾರಾಮಿ ಕಾರುಗಳಂತೆ ಪರಿಗಣಿಸಬಾರದು ಎಂದು ಟೆಸ್ಲಾ ಕಂಪನಿಯು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಎಕನಾಮಿಕ್ ಟೈಮ್ಸ್'ಗೆ ಮಾಹಿತಿ ನೀಡಿದ್ದರು.

Most Read Articles

Kannada
Read more on ಟೆಸ್ಲಾ tesla
English summary
Tesla company ceo responds to customers problem quickly details
Story first published: Tuesday, November 23, 2021, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X