ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಂಪಿವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. 6 ರಿಂದ 7 ಸೀಟುಗಳನ್ನು ಹೊಂದಿರುವ ಈ ಕಾರುಗಳಲ್ಲಿ ಕುಟುಂಬ ಸಮೇತ ಪ್ರಯಾಣ ಬೆಳಸಬಹುದು.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

ಈ ಕಾರಣಕ್ಕೆ ಕುಟುಂಬದೊಂದಿಗೆ ಹೆಚ್ಚು ಪ್ರಯಾಣ ಮಾಡುವವರು ಎಂಪಿವಿ ಮಾದರಿಯ ವಾಹನಗಳನ್ನು ಖರೀದಿಸುತ್ತಾರೆ. ಯಾವ ಕಂಪನಿಯ ಎಂಪಿವಿ ಕಾರುಗಳು ಹೆಚ್ಚು ಮೈಲೇಜ್ ನೀಡುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

5. ಮಹೀಂದ್ರಾ ಮರಾಜೋ: ಮೈಲೇಜ್ ಪ್ರತಿ ಲೀಟರ್‌ಗೆ 17.31 ಕಿ.ಮೀ (ಮ್ಯಾನುವಲ್ ಟ್ರಾನ್ಸ್'ಮಿಷನ್)

ಮಹೀಂದ್ರಾ ಮರಾಜೋ ಭಾರತದಲ್ಲಿ ಮಾರಾಟವಾಗುವ ಅತಿ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ ಅಳವಡಿಸಿರುವ 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ 12 ಬಿಹೆಚ್‌ಪಿ ಪವರ್ ಹಾಗೂ 300 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

ಈ ಎಂಜಿನ್'ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೋಡಿಸಲಾಗಿದೆ. ಮಹೀಂದ್ರಾ ಮರಾಜೋ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.11.64 ಲಕ್ಷಗಳಾಗಿದೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

4. ರೆನಾಲ್ಟ್ ಟ್ರೈಬರ್: ಮೈಲೇಜ್ ಪ್ರತಿ ಲೀಟರ್‌ಗೆ 19 ಕಿ.ಮೀ (ಮ್ಯಾನುವಲ್ ಟ್ರಾನ್ಸ್'ಮಿಷನ್)

ರೆನಾಲ್ಟ್ ಕಂಪನಿಯ ಟ್ರೈಬರ್ ಎಂಪಿವಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 19 ಕಿ.ಮೀಗಳ ಮೈಲೇಜ್ ನೀಡುತ್ತದೆ. ರೆನಾಲ್ಟ್ ಟ್ರೈಬರ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಂಪಿವಿಗಳಲ್ಲಿ ಒಂದಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.30 ಲಕ್ಷಗಳಿಂದ ರೂ.7.82 ಲಕ್ಷಗಳಾಗಿದೆ. ಈ ಎಂಪಿವಿಯಲ್ಲಿ ಅಳವಡಿಸಿರುವ 1.0 ಲೀಟರ್, 3 ಸಿಲಿಂಡರ್ ಎಂಜಿನ್ ಗರಿಷ್ಠ 70 ಬಿಹೆಚ್‌ಪಿ ಪವರ್ ಹಾಗೂ 96 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

ರೆನಾಲ್ಟ್ ಕಂಪನಿಯು ಟ್ರೈಬರ್ ಕಾರ್ ಅನ್ನು ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

3. ಮಾರುತಿ ಸುಜುಕಿ ಎಕ್ಸ್‌ಎಲ್ 6: ಮೈಲೇಜ್ ಪ್ರತಿ ಲೀಟರ್‌ಗೆ 19.1 ಕಿ.ಮೀ (ಮ್ಯಾನುವಲ್ ಟ್ರಾನ್ಸ್'ಮಿಷನ್)

ಮಾರುತಿ ಸುಜುಕಿ ಕಂಪನಿಯ ಎಕ್ಸ್‌ಎಲ್ 6 ಎಂಪಿವಿಯ ಮ್ಯಾನುವಲ್ ಟ್ರಾನ್ಸ್'ಮಿಷನ್ ಹೊಂದಿರುವ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 19.1 ಕಿ.ಮೀಗಳ ಮೈಲೇಜ್ ನೀಡುತ್ತದೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

ಈ ಕಾರಿನಲ್ಲಿ ಅಳವಡಿಸಿರುವ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 105 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಮಾರುತಿ ಸುಜುಕಿ ಎಕ್ಸ್‌ಎಲ್ 6 ಎಂಪಿವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.94 ಲಕ್ಷಗಳಿಂದ ರೂ.11.73 ಲಕ್ಷಗಳಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

2. ಮಾರುತಿ ಸುಜುಕಿ ಎರ್ಟಿಗಾ: ಮೈಲೇಜ್ ಪ್ರತಿ ಲೀಟರ್‌ಗೆ 19.1 ಕಿ.ಮೀ (ಮ್ಯಾನುವಲ್ ಟ್ರಾನ್ಸ್'ಮಿಷನ್)

ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಎಂಪಿವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.7.81 ಲಕ್ಷಗಳಿಂದ ರೂ.10.59 ಲಕ್ಷಗಳಾಗಿದೆ. ಈ ಕಾರ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

1. ದಟ್ಸನ್ ಗೋ-ಪ್ಲಸ್: ಮೈಲೇಜ್ ಪ್ರತಿ ಲೀಟರ್‌ಗೆ 19.2 ಕಿ.ಮೀ (ಮ್ಯಾನುವಲ್ ಟ್ರಾನ್ಸ್'ಮಿಷನ್)

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳ ಪಟ್ಟಿಯಲ್ಲಿ ದಟ್ಸನ್ ಗೋ ಪ್ಲಸ್ ಕಾರು ಅಗ್ರಸ್ಥಾನದಲ್ಲಿದೆ. ಈ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 19.2 ಕಿ.ಮೀ ಮೈಲೇಜ್ ನೀಡುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಎಂಪಿವಿಗಳಿವು

ದಟ್ಸನ್ ಗೋ ಪ್ಲಸ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4.24 ಲಕ್ಷಗಳಿಂದ ರೂ.6.99 ಲಕ್ಷಗಳಾಗಿದೆ. ಈ ಕಾರ್ ಅನ್ನು ಆಟೋಮ್ಯಾಟಿಕ್ (ಸಿವಿಟಿ) ಹಾಗೂ ಮ್ಯಾನುವಲ್ (5 ಸ್ಪೀಡ್) ಎಂಬ ಎರಡು ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Top Five most fuel efficient MPV's sold in Indian market. Read in Kannada.
Story first published: Thursday, April 22, 2021, 16:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X