ಇಂಡೋನೇಷ್ಯಾದಲ್ಲಿ 50ನೇ ವರ್ಷದ ಸಂಭ್ರಮಕ್ಕೆ ಇನೋವಾ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಇಂಡೋನೇಷ್ಯಾದಲ್ಲಿ ತನ್ನ 50ನೇ ವಾರ್ಷಿಕೋತ್ಸವವನ್ನು ಸಂಭ್ರಮಕ್ಕೆ ಹೊಸ ಇನೋವಾ ಲಿಮಿಟೆಡ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಇನೋವಾ ಎಂಪಿವಿಯನ್ನು ಕೇವಲ 50 ಯುನಿ‍‍ಟ್‍‍ಗಳಿಗೆ ಸಿಮೀತವಾಗಿ ಮಾರಾಟ ಮಾಡಲಾಗುತ್ತದೆ.

ಇಂಡೋನೇಷ್ಯಾದಲ್ಲಿ 50ನೇ ವರ್ಷದ ಸಂಭ್ರಮಕ್ಕೆ ಇನೋವಾ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

50ನೇ ವಾರ್ಷಿಕೋತ್ಸವ ಆವೃತ್ತಿಯನ್ನು ಇಂಡೋನೇಷ್ಯಾದಲ್ಲಿ ಕಿಜಾಂಗ್ ಇನೋವಾ ಎಂದು ಕರೆಯುತ್ತಾರೆ. ಸೀಮಿತ ಆವೃತ್ತಿಯ ಇನೋವಾವನ್ನು 2.0-ಲೀಟರ್ ವಿ ಲಕ್ಷ್ಗುರಿ ಎಟಿ ರೂಪಾಂತರ ಮತ್ತು ವೆಂಚರ್ 2.4-ಲೀಟರ್ ಎಟಿ ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ವಿ ಲಕ್ಷ್ಗುರಿ ಎಟಿ ರೂಪಾಂತರವು 30 ಯುನಿ‍‍ಟ್‍‍ಗಳಿಗೆ ಸಿಮೀತಗೊಳಿಸಿದರೆ ವೆಂಚರ್ 2.4-ಲೀಟರ್ ಎಟಿ ರೂಪಾಂತರವನ್ನು 20 ಯುನಿ‍‍ಟ್‍‍ಗಳಿಗೆ ಸೀಮಿತಗೊಳಿಸಿದ್ದಾರೆ.

ಇಂಡೋನೇಷ್ಯಾದಲ್ಲಿ 50ನೇ ವರ್ಷದ ಸಂಭ್ರಮಕ್ಕೆ ಇನೋವಾ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಈ ಹೊಸ ಟೊಯೊಟಾ ಇನೋವಾ ಲಿಮಿಟೆಡ್ ಎಡಿಷನ್ ಬಿಳಿ ಬಣ್ಣವನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಇದರಲ್ಲಿ ಚಿನ್ನದ ಅಸ್ಸೆಂಟ್ ಗಳನ್ನು ಸೈಡ್ ಪ್ಯಾನೆಲ್‌ಗಳಿಂದ ಬಾನೆಟ್ ವರೆಗೆ ವಿಸ್ತರಿಸುತ್ತದೆ. ಇದು ಮುಂಭಾಗದ ಗ್ರಿಲ್‌ನಲ್ಲಿ ಅದೇ ವಿನ್ಯಾಸವನ್ನು ಪಡೆಯುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇಂಡೋನೇಷ್ಯಾದಲ್ಲಿ 50ನೇ ವರ್ಷದ ಸಂಭ್ರಮಕ್ಕೆ ಇನೋವಾ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಇದರ ವಿ ಲಕ್ಷರಿ ರೂಪಾಂತರವು ಕ್ರೋಮ್ ಅಂಶವನ್ನು ಹೊಂದಿದ್ದರೆ, ವೆಂಚರ್ ರೂಪಾಂತರವು ಡಾರ್ಕ್ ಕ್ರೋಮ್ ಲೆವೆರಿಯನ್ನು ಪಡೆಯುತ್ತದೆ. ಸ್ಟ್ಯಾಂಡರ್ಡ್-ಸ್ಪೆಕ್ ಎಂಪಿವಿ ಯಲ್ಲಿ, ಗ್ರಿಲ್ ಅನ್ನು ಕಪ್ಪಾಗಿದೆ. ಇದು ಡಾರ್ಕ್ ಗ್ರೇ ಶೇಡ್ ಅನ್ನು ಹೊಂದಿದೆ.

ಇಂಡೋನೇಷ್ಯಾದಲ್ಲಿ 50ನೇ ವರ್ಷದ ಸಂಭ್ರಮಕ್ಕೆ ಇನೋವಾ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಇನ್ನು ಇದರಲ್ಲಿ 18-ಇಂಚಿನ 6-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಸಾಮಾನ್ಯ ಇನೋವಾ ಮಾದರಿಯಿಂದ ಮತ್ತಷ್ಟು ಪ್ರತ್ಯೇಕಿಸಲು ಇದು ಟೈಲ್‌ಗೇಟ್‌ನಲ್ಲಿ ಮತ್ತು ವಿಶೇಷ ಕಾರ್ಪೆಟ್‌ನಲ್ಲಿ 50ನೇ ವಾರ್ಷಿಕೋತ್ಸವದ ಬ್ಯಾಡ್ಜಿಂಗ್ ಅನ್ನು ಪಡೆಯುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇಂಡೋನೇಷ್ಯಾದಲ್ಲಿ 50ನೇ ವರ್ಷದ ಸಂಭ್ರಮಕ್ಕೆ ಇನೋವಾ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಇನ್ನು ಇಂಟಿರಿಯರ್ ನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದರಲ್ಲಿ ಪ್ರೀಮಿಯಂ ನೋಬಲ್ ಬ್ರೌನ್ ಬಣ್ಣ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಗ್ರೇ ಬಣ್ಣದಲ್ಲಿದೆ. ಇನು ಗ್ರೇ ಬಣ್ಣದ ಲೆಥೆರೆಟ್ ಸೀಟ್ ಗಳನ್ನು ಹೊಂದಿದೆ.

ಇಂಡೋನೇಷ್ಯಾದಲ್ಲಿ 50ನೇ ವರ್ಷದ ಸಂಭ್ರಮಕ್ಕೆ ಇನೋವಾ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

2021ರ ಟೊಯೊಟಾ ಇನೋವಾ ಲಿಮಿಟೆಡ್ ಎಡಿಷನ್ ಹೊಸ ಜೆಬಿಎಲ್ ಸಿಸ್ಟಂ ಉತ್ತಮ ಸೌಂಡ್ ಕ್ವಾಲಿಟಿಯನ್ನು ಹೊಂದಿದೆ. ಇದಲ್ಲದೆ ಉಳಿದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್ ಮೆಂಟ್ ಸಿಸ್ಟಂ ಸಾಮಾನ್ಯ ಮಾದರಿಗೆ ಹೋಲುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇಂಡೋನೇಷ್ಯಾದಲ್ಲಿ 50ನೇ ವರ್ಷದ ಸಂಭ್ರಮಕ್ಕೆ ಇನೋವಾ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಈ ಇನೋವಾ ಲಿಮಿಟೆಡ್ ಎಡಿಷನ್ ನ್ 2.0-ಲೀಟರ್ ವಿ ಲಕ್ಷರಿ ರೂಪಾಂತರದಲ್ಲಿ 2.0-ಲೀಟರ್ ಇನ್-ಲೈನ್ 4 ಸಿಲಿಂಡರ್ ಡಿಒಹೆಚ್‌ಸಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 137 ಬಿಹೆಚ್‌ಪಿ ಮತ್ತು 183 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇಂಡೋನೇಷ್ಯಾದಲ್ಲಿ 50ನೇ ವರ್ಷದ ಸಂಭ್ರಮಕ್ಕೆ ಇನೋವಾ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಇನ್ನು 2.4-ಲೀಟರ್ ವೆಂಚರ್ ರೂಪಾಂತರದಲ್ಲಿ 2.4-ಲೀಟರ್ ಡೀಸೆಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 147 ಬಿಹೆಚ್‌ಪಿ ಮತ್ತು 360 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇಂಡೋನೇಷ್ಯಾದಲ್ಲಿ 50ನೇ ವರ್ಷದ ಸಂಭ್ರಮಕ್ಕೆ ಇನೋವಾ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಟೊಯೊಟಾ ಇನೋವಾ ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಂಪಿವಿಗಳಲ್ಲಿ ಒಂದಾಗಿದೆ. ಇಂಡೋನೇಷ್ಯಾ ಮಾರುಕಟ್ಟೆಯಲ್ಲಿಯು ಇನೋವಾ ಬಹುಬೇಡಿಕೆಯ ಎಂಪಿವಿಯಾಗಿದೆ. ಇದೇ ಕಾರಣದಿಂದ ಇಂಡೋನೇಷ್ಯಾದಲ್ಲಿ ತನ್ನ 50ನೇ ವಾರ್ಷಿಕೋತ್ಸವವನ್ನು ಸಂಭ್ರಮಕ್ಕೆ ಇನೋವಾದ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

Most Read Articles

Kannada
English summary
2021 Toyota Innova Limited Edition Celebrates 50th Anniversary Of Toyota Indonesia In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X