ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಂಡಿರುವ ಟೊಯೊಟಾ ಅರ್ಬನ್ ಕ್ರೂಸರ್ ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಕಳೆದ ತಿಂಗಳ ಲಾಕ್‌ಡೌನ್ ಸಂದರ್ಭದಲ್ಲೂ 2 ಸಾವಿರ ಯುನಿಟ್ ಮಾರಾಟಗೊಂಡಿದೆ.

ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್

ಏಪ್ರಿಲ್ ತಿಂಗಳಿನ ಮಧ್ಯಂತರದಿಂದ ಹೆಚ್ಚಳವಾದ ಕೋವಿಡ್ 2ನೇ ಅಲೆಯಿಂದಾಗಿ ಮಾರಾಟ ಪ್ರಮಾಣದಲ್ಲಿ ಇಳಿಕೆಯಾದರೂ ಕೂಡಾ ಯುಗಾದಿ ಸಂಭ್ರಮದ ನಡುವೆ ಹಲವು ಹೊಸ ವಾಹನಗಳು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡವು. ಆದರೆ ಯುಗಾದಿ ನಂತರ ವಾಹನ ಮಾರಾಟ ತುಸು ಇಳಿಕೆಯಾಗುತ್ತಿರುವ ಸಂದರ್ಭದಲ್ಲಿ ಕೋವಿಡ್ ಹೆಚ್ಚುವಾಗುತ್ತಿದ್ದಂತೆ ಕಾರು ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇದೀಗ ಹೊಸ ವಾಹನ ಮಾರಾಟಕ್ಕೆ ಕೆಲವು ಕಡೆಗಳಲ್ಲಿ ಷರತ್ತುಬದ್ದ ಅವಕಾಶಗಳಿದ್ದರೂ ಕೋವಿಡ್ ಭೀತಿಯು ವಾಹನ ಖರೀದಿ ವಹಿವಾಟಿನ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.

ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್

ಇನ್ನು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಕಂಪನಿಯ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟವಾಗುತ್ತಿರುಪ ಅರ್ಬನ್ ಕ್ರೂಸರ್ ಮಾದರಿಯು ಮೂಲ ಮಾದರಿಗಿಂತಲೂ ವಿನೂತನ ಫೀಚರ್ಸ್ ಹೊಂದಿದ್ದು, ಹೊಸ ಕಾರು ಇದುವರೆಗೆ 20 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದೆ.

ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್

ಹೊಸ ಅರ್ಬನ್ ಕ್ರೂಸರ್ ಕಾರು ಮಾದರಿಯು ಮಿಡ್, ಹೈ ಮತ್ತು ಪ್ರೀಮಿಯಂ ಎಂಬ ಮೂರು ರೂಪಾಂತರ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.62 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.11.40 ಲಕ್ಷ ಬೆಲೆ ಪಡೆದುಕೊಂಡಿದೆ.

ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್

ವಿನೂತನ ವಿನ್ಯಾಸ ಮತ್ತು ವೈಶಿಷ್ಟ್ಯತೆ ಹೊಂದಿರುವ ಹೊಸ ಅರ್ಬನ್ ಕ್ರೂಸರ್ ಕಾರು ಮಾದರಿಯು ಎರಡು ಸ್ಲಾಟ್ ಹೊಂದಿರುವ ಫ್ರಂಟ್ ಗ್ರಿಲ್, ಎರಡು ತುದಿಗಳಲ್ಲೂ ದಪ್ಪದಾದ ಕ್ರೊಮ್ ಮೂಲಕ ಆವೃತ್ತವಾಗಿದೆ. ಹೆಡ್‌ಲ್ಯಾಂಪ್‌ಗಳು ಗ್ರಿಲ್‌ನ ಎರಡೂ ಬದಿಯಲ್ಲಿವೆ ಮತ್ತು ಎಲ್‌ಇಡಿ ಪ್ರೊಜೆಕ್ಟರ್ ಘಟಕಗಳನ್ನು ಹೊಂದಿದೆ.

ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್

ಹಾಗೆಯೇ ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್‌ಗಳೊಂದಿಗೆ ಸ್ಟೈಲಿಶ್ ಆಗಿರುವ 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಹ್ ಮತ್ತು ಬಾಡಿ ಕಲರ್ ಒಳಗೊಂಡಿರುವ ಒಆರ್‌ವಿಎಂಗಳು ಪ್ರಮುಖ ತಾಂತ್ರಿಕ ಅಂಶಗಳಾಗಿವೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್

ಅರ್ಬನ್ ಕ್ರೂಸರ್ ಕಾರಿನಲ್ಲಿ ಒಳಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಡ್ಯಾಶ್‌ಬೋರ್ಡ್ ಮತ್ತು ಕ್ಯಾಬಿನ್ ವಿನ್ಯಾಸವು ಗಮನಸೆಳೆಯುತ್ತದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸೋಲ್‌ನಲ್ಲಿರುವ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಇತರ ಹೆಚ್ಚಿನ ತಾಂತ್ರಿಕ ಅಂಶಗಳನ್ನು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಲ್ಲಿರುವಂತೆಯೆ ಮುಂದುವರಿಸಲಾಗಿದೆ.

ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್

ಹೊಸ ಕಾರಿನಲ್ಲಿ ಬಿಎಸ್-6 ಪ್ರೇರಿತ ಕೆ-ಸೀರಿಸ್ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 104-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಪೆಟ್ರೋಲ್ ಎಂಜಿನ್ ಮಾದರಿಯು ಆರಂಭಿಕ ಆವೃತ್ತಿಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಹೈ ಎಂಡ್ ಮಾದರಿಗಳಲ್ಲಿ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್

ಅರ್ಬನ್ ಕ್ರೂಸರ್ 1.5-ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 17.3ಕಿ.ಮೀ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18.76 ಕಿ.ಮೀ ಮೈಲೇಜ್ ನೀಡಲಿದ್ದು, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದಿಂದಾಗಿ ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಉತ್ತಮ ಇಂಧನ ಕಾರ್ಯಕ್ಷಮತೆ ಪಡೆದುಕೊಂಡಿದೆ.

Most Read Articles

Kannada
English summary
Toyota Urban Cruiser Clocks 2000 Unit Sales. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X