Just In
Don't Miss!
- Lifestyle
ಶನಿವಾರದ ದಿನ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- News
Karnataka By Polls 2021 Live: ಮೂರು ಕ್ಷೇತ್ರಗಳ ಮತದಾನಕ್ಕೆ ಕ್ಷಣಗಣನೆ
- Sports
ಪಂಜಾಬ್ ಸೋಲಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನಕ್ಕೇರಿದ ಚೆನ್ನೈ
- Movies
ಮಲಯಾಳಂ ಸಿನಿಮಾವನ್ನು ಹೊಗಳಿ ಬಾಲಿವುಡ್ನ ಕಾಲೆಳೆದ ನಟ
- Finance
ಪಿಎನ್ಬಿ ಪ್ರಕರಣ: ನೀರವ್ ಮೋದಿ ಹಸ್ತಾಂತರಕ್ಕೆ ಬ್ರಿಟನ್ ಸಮ್ಮತಿ
- Education
Bangalore University Exams 2021: ಸ್ನಾತಕ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಗಳು ಮುಂದೂಡಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೊಲೊ ಹ್ಯಾಚ್‌ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್
ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ವರ್ಷದ ಆರಂಭದಿಂದಲೇ ತನ್ನ ಜನಪ್ರಿಯ ಕಾರು ಮಾದರಿಗಳಾದ ಪೊಲೊ ಹ್ಯಾಚ್‌ಬ್ಯಾಕ್ ಮತ್ತು ವೆಂಟೊ ಸೆಡಾನ್ ಮಾದರಿಗಳ ಮೇಲೆ ವಿವಿಧ ಆಫರ್ ಘೋಷಣೆಗಳನ್ನು ಮಾಡಿದ್ದು, ಗ್ರಾಹಕರು ಪೊಲೊ ಮತ್ತು ವೆಂಟೊ ಕಾರುಗಳಲ್ಲಿ ಸ್ಪೆಷಲ್ ಎಡಿಷನ್‌ಗಳನ್ನು ಸಹ ಖರೀದಿ ಮಾಡಬಹುದಾಗಿದೆ.

ಪೊಲೊ ಹ್ಯಾಚ್‌ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಫೋಕ್ಸ್‌ವ್ಯಾಗನ್ ಕಂಪನಿಯು ಕಾರ್ಪೊರೇಟ್ ರಿಯಾಯಿತಿ, ವಿನಿಮಯ ಬೋನಸ್ ಮತ್ತು ನಗದು ರಿಯಾಯಿತಿ ನೀಡುತ್ತಿದ್ದು, 2021ರ ಕಾರು ಮಾದರಿಗಳ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಉತ್ತಮ ಅವಕಾಶ ಎನ್ನಬಹುದು. ಫೋಕ್ಸ್‌ವ್ಯಾಗನ್ ಹೊಸ ಕಾರುಗಳ ಮೇಲೆ ರೂ. 50 ಸಾವಿರದಿಂದ ರೂ. 1.78 ಲಕ್ಷ ತನಕ ಆಫರ್‌ಗಳು ಲಭ್ಯವಿದ್ದು, ಹೊಸ ಆಫರ್‌ಗಳು ವಿವಿಧ ವೆರಿಯೆಂಟ್‌ಗಳ ಖರೀದಿಯ ಆಧಾರದ ಮೇಲೆ ಅನ್ವಯವಾಗುತ್ತವೆ.

ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಹ್ಯಾಚ್‌ಬ್ಯಾಕ್ ಕಾರು ಖರೀದಿ ಮೇಲೆ ರೂ.20 ಸಾವಿರದಷ್ಟು ಎಕ್ಸ್‌ಚೆಂಜ್ ಡಿಸ್ಕೌಂಟ್, ರೂ.10 ಸಾವಿರ ಲೊಯಾಲಿಟಿ ಬೋನಸ್, ರೂ.20 ಸಾವಿರ ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿದೆ.

ಹೊಸ ಆಫರ್‌ಗಳಲ್ಲಿ ವೆಂಟೊ ಸೆಡಾನ್ ಮಾದರಿಯ ಖರೀದಿ ಮೇಲೆ ಗ್ರಾಹಕರು ಹೈ ಲೈನ್ ಖರೀದಿಸಿದ್ದಲ್ಲಿ ರೂ. 40 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.29 ಸಾವಿರ ಎಕ್ಸ್‌ಚೆಂಜ್ ಆಫರ್ ಪಡೆದುಕೊಳ್ಳಬಹುದಾಗಿದ್ದು, ಆಟೋಮ್ಯಾಟಿಕ್ ರೆಡ್ ಅಂಡ್ ವೈಟ್ ಎಡಿಷನ್ ಮೇಲೆ ರೂ.25 ಸಾವಿರ ಎಕ್ಸ್‌ಚೆಂಜ್ ಬೋನಸ್ ನೀಡಲಾಗುತ್ತಿದೆ.

ಫೋಕ್ಸ್‌ವ್ಯಾಗನ್ ಕಂಪನಿಯು ವೆಂಟೊ ಹೈ ಎಂಡ್ ಮ್ಯಾನುವಲ್ ಆವೃತ್ತಿಯ ಮೇಲೆ 1.78 ಲಕ್ಷದಷ್ಟು ಡಿಸ್ಕೌಂಟ್ ನೀಡುತ್ತಿದ್ದು, ಇದರಲ್ಲಿ ಎಕ್ಸ್‌ಚೆಂಜ್ ಆಫರ್, ಲೊಯಾಲಿಟಿ ಬೋನಸ್, ಕ್ಯಾಶ್ ಡಿಸ್ಕೌಂಟ್ ಒಳಗೊಂಡಿದೆ. ಹೊಸ ಆಫರ್‌ಗಳು ಈ ತಿಂಗಳ ಕೊನೆಯ ತನಕ ಅನ್ವಯವಾಗಲಿದ್ದು, ಸೆಡಾನ್ ಕಾರು ಖರೀದಿದಾರರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಇನ್ನು ಹೊಸ ಆಫರ್‌ಗಳಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಹೈ ಎಂಡ್ ಮಾದರಿಗಳಾದ ಟಿ-ರಾಕ್ ಮತ್ತು ಟಿಗ್ವಾನ್ ಕಾರುಗಳ ಮೇಲೆ ಯಾವುದೇ ಆಫರ್ ನೀಡಿಲ್ಲವಾದರೂ ನಿಗದಿತ ಅವಧಿಯಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಸರ್ವಿಸ್ ಸೇವೆಗಳು ಲಭ್ಯವಾಗಲಿವೆ ಎನ್ನಲಾಗಿದೆ.

ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಹ್ಯಾಚ್‌ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳಲ್ಲಿ ಬಿಡುಗಡೆ ಮಾಡಲಾದ ರೆಡ್ ಅಂಡ್ ವೈಟ್ ಆವೃತ್ತಿಗಳೊಂದಿಗೆ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದು, ಹೊಸ ಬಣ್ಣದ ಆಯ್ಕೆಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸ್ಪೆಷಲ್ ಎಡಿಷನ್ ಪೊಲೊ ಹ್ಯಾಚ್‌ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.19 ಲಕ್ಷಕ್ಕೆ ಮತ್ತು 11.49 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಹೊಸ ಕಾರುಗಳು ಬಣ್ಣಗಳ ಆಯ್ಕೆ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲೇ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿವೆ.

ರೆಡ್ ಆ್ಯಂಡ್ ವೈಟ್ ಪೊಲೊ ಮತ್ತು ವೆಂಟೊ ಕಾರುಗಳ ಮಾದರಿಗಳಿಗಾಗಿ ಯಾವುದೇ ಹೆಚ್ಚುವರಿ ದರ ವಿಧಿಸದ ಫೋಕ್ಸ್‌ವ್ಯಾಗನ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲೇ ಮಾರಾಟ ಮಾಡಲಿದ್ದು, ಸ್ಪೆಷಲ್ ಎಡಿಷನ್ ಮಾದರಿಗಳು ಹೈ ಎಂಡ್ ವೆರಿಯೆಂಟ್‌ಗಳಲ್ಲಿ ಪರಿಚಯಿಸಲಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಪೊಲೊ ಮತ್ತು ವೆಂಟೊ ಹೈಲೈನ್ ಆಟೋಮ್ಯಾಟಿಕ್ ವೆರಿಯೆಂಟ್‌ಗಳಲ್ಲಿ ಸ್ಪೆಷಲ್ ಎಡಿಷನ್ ಆಫರ್ ಮಾಡಲಾಗುತ್ತಿದ್ದು, ರೆಡ್ ಆ್ಯಂಡ್ ವೈಟ್ ಮಾದರಿಯು ಫ್ಯಾಶ್ ರೆಡ್, ಸನ್‌ಸೆಟ್ ರೆಡ್ ಮತ್ತು ಕ್ಯಾಂಡಿ ವೈಟ್ ಬಣ್ಣಗಳನ್ನು ಆಧರಿಸಿ ಸ್ಪೆಷಲ್ ಎಡಿಷನ್ ಅಭಿವೃದ್ದಿಗೊಳಿಸಿದೆ.