ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಾಗಿ ಐಡಿ6 ಸರಣಿ ಇವಿ ಕಾರುಗಳನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಫೋಕ್ಸ್‌ವ್ಯಾಗನ್ ಶೀಘ್ರದಲ್ಲೇ ತನ್ನ ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳ ಮಾರಾಟವನ್ನು ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ವಿಸ್ತರಿಸುವ ಯೋಜನೆಯಲ್ಲಿದ್ದು, ಕಂಪನಿಯ ಹೊಸ ಐಡಿ ಸರಣಿಯಲ್ಲಿ ಐಡಿ.6 ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅನಾವರಣಗೊಳಿಸಿದೆ.

ಐಡಿ6 ಸರಣಿ ಇವಿ ಕಾರುಗಳನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಮ್ಯಾಡುಲರ್ ಎಲೆಕ್ಟ್ರಿಕ್ ಡ್ರೈವ್ ಮ್ಯಾಟ್ರಿಕ್ಸ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಸಿದ್ದಗೊಂಡಿರುವ ಫೋಕ್ಸ್‌ವ್ಯಾಗನ್ ಕಂಪನಿಯ ಹೊಸ ಇವಿ ಕಾರು ಮಾದರಿಗಳು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದು, ಐಡಿ.4 ಎಲೆಕ್ಟ್ರಿಕ್ ಸರಣಿ ಕಾರುಗಳ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್ ವಿಚಾರದಲ್ಲೂ ಗಮನಸೆಳೆಯುತ್ತಿದೆ.

ಐಡಿ6 ಸರಣಿ ಇವಿ ಕಾರುಗಳನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

2025ರ ವಿಶ್ವಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ 20ಕ್ಕೂ ಹೆಚ್ಚು ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಕಂಪನಿಯು ಇತ್ತೀಚೆಗೆ ಹೊಸ ಪ್ಲ್ಯಾಟ್‌ಫಾರ್ಮ್ ಆಧರಿತ ಐಡಿ.6 ಎಸ್‌ಯುವಿ ಕಾರು ಸರಣಿಯನ್ನು ಅನಾವರಣಗೊಳಿಸಿತು.

ಐಡಿ6 ಸರಣಿ ಇವಿ ಕಾರುಗಳನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಐಡಿ.6 ಎಲೆಕ್ಟ್ರಿಕ್ ಎಸ್‌ಯುವಿ ಸರಣಿಗಳು ಮೂರು-ಸಾಲಿನ ಆಸನ ವ್ಯವಸ್ಥೆಯನ್ನು ಹೊಂದಿರಲಿದ್ದು, ಹೊಸ ಎಸ್‌ಯುವಿ ಕಾರುಗಳು ಗ್ರಾಹಕರ ಬೇಡಿಕೆಯೆಂತೆ 2+2+2 ಮತ್ತು ಮತ್ತು 2+3+2 ಮಾದರಿಯ ಆಸನಗಳ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿರಲಿವೆ.

ಐಡಿ6 ಸರಣಿ ಇವಿ ಕಾರುಗಳನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಐಡಿ.6 ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳು ಕಂಪನಿಯ ಇವಿ ಮಾದರಿಗಳಲ್ಲೇ ಅತಿದೊಡ್ಡ ವಾಹನವಾಗಿದ್ದು, ಐಡಿ.6 ಎಕ್ಸ್ ಮತ್ತು ಐಡಿ.6 ಕ್ರಾಸ್ ಎನ್ನುವ ಎರಡು ಮಾದರಿಗಳೊಂದಿಗೆ ವಿಭಿನ್ನ ಅಭಿರುಚಿ ಹೊಂದಿರುವ ಗ್ರಾಹಕರನ್ನು ಸೆಳೆಯಲಿವೆ. ಹೊಸ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಐಡಿ.4 ಆಧರಿಸಿ ನಿರ್ಮಾಣವಾಗಿದ್ದು, ಎರಡು ವಿಭಿನ್ನ ರೂಪಾಂತರಗಳೊಂದಿಗೆ ಐಷಾರಾಮಿ ಕಾರು ಮಾದರಿಗಳಾಗಿ ಮಾರಾಟಗೊಳ್ಳಲಿವೆ.

ಐಡಿ6 ಸರಣಿ ಇವಿ ಕಾರುಗಳನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಮಾಹಿತಿಗಳ ಪ್ರಕಾರ, ಹೊಸ ಐಡಿ.6 ಮಾದರಿಗಳನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಆರಂಭಿಕವಾಗಿ ಚೀನಿ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಚೀನಿ ಮಾರುಕಟ್ಟೆಯಲ್ಲಿನ ಸಹಭಾಗೀತ್ವದ ಕಂಪನಿಗಳ ಸೈಕ್ ಮತ್ತು ಫಾವ್ ಮೋಟಾರ್ಸ್ ಕಂಪನಿಗಳೊಂದಿಗೆ ಹೊಸ ಕಾರುಗಳನ್ನು ರೀಬ್ಯಾಡ್ಜ್ ಮಾದರಿಯಾಗಿ ಮಾರಾಟಗೊಳಿಸಲು ಸಿದ್ದವಾಗಿದೆ.

ಐಡಿ6 ಸರಣಿ ಇವಿ ಕಾರುಗಳನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಚೀನಿ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ಸೈಕ್ ಕಂಪನಿಯು ವಿಶ್ವದ ಪ್ರಮುಖ ಆಟೋಮೊಬೈಲ್ ಕಂಪನಿಗಳ ಜೊತೆ ಸಹಭಾಗೀತ್ವದ ಹೊಂದಿದ್ದು, ಫೋಕ್ಸ್‌ವ್ಯಾಗನ್ ಕಂಪನಿಯು ಕೂಡಾ ಚೀನಾದಲ್ಲಿ ಸೈಕ್ ಜೊತೆಗೆ ಕೆಲವು ಮಾದರಿಗಳನ್ನು ಮತ್ತು ಮತ್ತೊಂದು ಪ್ರಮುಖ ಕಾರು ತಯಾರಕ ಕಂಪನಿಯಾದ ಫಾವ್ ಜೊತೆಗೆ ಕೆಲವು ಕಾರು ಮಾದರಿಗಳನ್ನು ರೀಬ್ಯಾಡ್ಜ್ ಮಾದರಿಯಾಗಿ ಮಾರಾಟ ಮಾಡುತ್ತಿದೆ.

ಐಡಿ6 ಸರಣಿ ಇವಿ ಕಾರುಗಳನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಇದೀಗ ಅನಾವರಣಗೊಳಿಸಲಾಗಿರುವ ಐಡಿ.6 ಸರಣಿಯಲ್ಲಿನ ಐಡಿ.6 ಎಕ್ಸ್ ಮತ್ತು ಐಡಿ.6 ಕ್ರಾಸ್ ಕಾರುಗಳಲ್ಲಿ ಒಂದು ಕಾರು ಮಾದರಿಯನ್ನು ಸೈಕ್ ಮತ್ತು ಮತ್ತೊಂದು ಕಾರು ಮಾದರಿಯನ್ನು ಫಾವ್ ಮೋಟಾರ್ಸ್ ಮಾರಾಟ ಮಾಡಲಿದ್ದು, ಚೀನಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟವು ತೀವ್ರಗೊಂಡಿರುವುದೇ ಪ್ರಮುಖ ಇವಿ ಕಾರುಗಳು ಬಿಡುಗಡೆಗೆ ಸಿದ್ದವಾಗುತ್ತಿವೆ.

ಐಡಿ6 ಸರಣಿ ಇವಿ ಕಾರುಗಳನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ತಾಂತ್ರಿಕವಾಗಿ ಒಂದೇ ಆಗಿದ್ದರೂ ವಿಭಿನ್ನವಾದ ವಿನ್ಯಾಸ ಹೊಂದಿರುವ ಐಡಿ.6 ಕಾರು ಮಾದರಿಗಳು ಡ್ಯುಯಲ್ ಮೋಟಾರ್ ಸೌಲಭ್ಯದೊಂದಿಗೆ 58 ಕಿ.ವ್ಯಾ ಮತ್ತು 77 ಕಿ.ವ್ಯಾ ರೂಪಾಂತರಗಳನ್ನು ಹೊಂದಿರಲಿದ್ದು, ಪ್ರತಿ ಚಾರ್ಜ್‌ಗೆ ಕ್ರಮವಾಗಿ 436 ಕಿ.ಮೀ ಮತ್ತು 588 ಕಿ.ಮೀ ವ್ಯಾಪ್ತಿಯನ್ನು ಹೊಂದಿವೆ.

ಐಡಿ6 ಸರಣಿ ಇವಿ ಕಾರುಗಳನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಚೀನಿ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯ 2023ರ ವೇಳೆಗೆ ಒಟ್ಟು ಎಂಟು ವಿವಿಧ ಕಾರು ಮಾದರಿಗಳನ್ನು ಬಿಡುಗಡೆಯ ಸಿದ್ದತೆಯಲ್ಲಿ ಅನಾವರಣಗೊಳಿಸಲಾದ ಐಡಿ.6 ಮಾದರಿಯನ್ನು ಮುಂದಿನ ಕೆಲವೇ ತಿಂಗಳಿನಲ್ಲಿ ಮಾರಾಟ ಆರಂಭಿಸಲಿದೆ.

ಐಡಿ6 ಸರಣಿ ಇವಿ ಕಾರುಗಳನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಭಾರತದಲ್ಲಿ ಸದ್ಯಕ್ಕೆ ಐಡಿ.4 ಸರಣಿ ಕಾರುಗಳನ್ನು ಮಾತ್ರ ಬಿಡುಗಡೆಯ ಯೋಜನೆಯಲ್ಲಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಈ ವರ್ಷಾಂತ್ಯಕ್ಕೆ ತನ್ನ ಮೊದಲ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಮ್ಯಾಡುಲರ್ ಎಲೆಕ್ಟ್ರಿಕ್ ಡ್ರೈವ್ ಮ್ಯಾಟ್ರಿಕ್ಸ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಸಿದ್ದಗೊಂಡಿರುವ ಐಡಿ.4 ಹೊಸ ಇವಿ ಕಾರು ಮಾದರಿಗಳು ಬ್ಯಾಟರಿ ಸಾಮಾರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಚಾರ್ಜ್‌ಗೆ 450 ಕಿ.ಮೀ ನಿಂದ 505 ಕಿ.ಮೀ ಮೈಲೇಜ್ ವ್ಯಾಪ್ತಿ ಹೊಂದಿವೆ.

Most Read Articles

Kannada
English summary
Volkswagen Revealed New ID6 SUVs With 3 Row Seating And Twin Motor Setup. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X