ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿವ್ಯಾನ್ ಎಂಪಿವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಜರ್ಮನಿ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಕಮರ್ಷಿಯಲ್ ವೆಹಿಕಲ್ಸ್ ತನ್ನ ಮಲ್ಟಿವ್ಯಾನ್ 7 ಸೀಟರ್ ಪ್ರೀಮಿಯಂ ಎಂಪಿವಿಯನ್ನು ಅನಾವರಣಗೊಳಿಸಿದೆ. 2022ರ ಫೋಕ್ಸ್‌ವ್ಯಾಗನ್ ಮಲ್ಟಿವ್ಯಾನ್ ಹೊಸ ವಿನ್ಯಾಸ, ಅತ್ಯಾಧುನಿಕ ಸೌಲಭ್ಯವುಳ್ಳ ಇಂಟಿರಿಯರ್ ಮತ್ತು ಸುಧಾರಿತ ಕನೆಕ್ಟಿವಿಟಿ ಫೀಚರ್ಸ್ ಅನ್ನು ಹೊಂದಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿವ್ಯಾನ್ ಎಂಪಿವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಮಲ್ಟಿವ್ಯಾನ್ 7 ಸೀಟರ್ ಪ್ರೀಮಿಯಂ ಎಂಪಿವಿಯು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಕ್ಯೂಬಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದನ್ನು ವಿಡಬ್ಲ್ಯೂ ಕ್ಯಾರೆವೆಲ್ ಎಂಪಿವಿ ಯಲ್ಲಿ ಬಳಸಲಾಯಿತು. ಈ ಮಲ್ಟಿವ್ಯಾನ್ ನ್ 4,973 ಮಿಮೀ ಉದ್ದ, 1,941 ಮಿಮೀ ಅಗಲ ಮತ್ತು 1,903 ಮಿಮೀ ಎತ್ತರವನ್ನು ಹೊಂದಿದೆ. ಇನ್ನು ಈ ಎಂಪಿವಿಯು 3,124 ಮಿಮೀ ವ್ಹೀಲ್‌ಬೇಸ್ ಅನ್ನು ಹೊಂದಿದೆ. .ಕಂಪನಿಯು ಉದ್ದವಾದ ಆವೃತ್ತಿಯನ್ನು ಸಹ ನೀಡುತ್ತಿದೆ, ಇದು 5,173 ಮಿಮೀ ಉದ್ದವನ್ನು ಹೊಂದಿರುತ್ತದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿವ್ಯಾನ್ ಎಂಪಿವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಮಲ್ಟಿವ್ಯಾನ್ ಸೀಟರ್ ಪ್ರೀಮಿಯಂ ಎಂಪಿವಿಯು ಕಡಿಮೆ ಪ್ರೊಫೈಲ್ ಅನ್ನು ಹೊಂದಿದೆ, ಇವೆಲ್ಲವೂ ಏರೋಡೈನಾಮಿಕ್ ಸುಧಾರಿಸಲು, ಕಡಿಮೆ ಇಂಧನ ಬಳಕೆ ಮತ್ತು ರೇಂಜ್ ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿವ್ಯಾನ್ ಎಂಪಿವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಇನ್ನು ಈ ಹೊಸ ಮಲ್ಟಿವ್ಯಾನ್ "ಮಲ್ಟಿವಾನ್", "ಲೈಫ್" ಮತ್ತು "ಸ್ಟೈಲ್" ಎಂಬ ಮೂರು ರೂಪಾಂತರಗಳನ್ನು ಹೊಂದಿದೆ. ಈ ಮಲ್ಟಿವ್ಯಾನ್ ಎಂಪಿವಿಯು ಎಂಪಿವಿ ಲೋಇ ಲ್ಯಾಮಿನೇಟೆಡ್ ಸೇಫ್ಟಿ ಗ್ಲಾಸ್, ವಿದ್ಯುತ್ ಚಾಲಿತ ರಿಯರ್ ಹ್ಯಾಚ್ ಮತ್ತು ಪವರ್ ಸ್ಲೈಡಿಂಗ್ ಡೋರ್ ಗಳೊಂದಿಗೆ ಪನೋರೊಮಿಕ್ ಸನ್ ರೂಫ್ ಅನ್ನು ಪಡೆಯುತ್ತದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿವ್ಯಾನ್ ಎಂಪಿವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಇದರ ಒಳಗೆ ಸುಲಭವಾಗಿ ಪ್ರವೇಶಿಸಲು ಸ್ಲೈಡಿಂಗ್ ಡೋರುಗಳನ್ನು ಗೆಸ್ಚರ್ ಕಂಟ್ರೋಲ್ ಗಳೊಂದಿಗೆ ನೀಡಲಾಗಿದೆ. ಇದು ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿದ್ದು, ಇದನ್ನು ಐಕ್ಯೂ.ಲೈಟ್- ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‌ಲೈಟ್‌ಗೆ ಅಪ್‌ಗ್ರೇಡ್ ಮಾಡಬಹುದು.

ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿವ್ಯಾನ್ ಎಂಪಿವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಇದರ ಐಕ್ಯೂ ಲೈಟ್ ಸಿಸ್ಟಂ ರೇಡಿಯೇಟರ್ ಗ್ರಿಲ್‌ನಲ್ಲಿ ಪ್ರಕಾಶಮಾನವಾದ ಎಲ್ಇಡಿ ಲ್ಯಾಟರಲ್ ಬಾರ್ ಅನ್ನು ಹೊಂದಿದೆ. ಹೊಸ ಮಲ್ಟಿವ್ಯಾನ್ ಗಾಗಿ ವಿನ್ಯಾಸಗೊಳಿಸಲಾದ ನವೀನ ಮಲ್ಟಿ-ಫಂಕ್ಷನ್ ಟೇಬಲ್ ಇದೆ. ಸೆಂಟ್ರಲ್ ಟ್ರ್ಯಾಕ್ ಬಳಸಿ, ಇದನ್ನು ಯಾವುದೇ ಸೀಟುಗಳ ನಡುವೆ ಸೆಂಟರ್ ಕನ್ಸೋಲ್ ಆಗಿ ಬಳಸಬಹುದು.

ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿವ್ಯಾನ್ ಎಂಪಿವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಸಂಪೂರ್ಣವಾಗಿ ತೆಗೆಯಬಹುದಾದ ಟೇಬಲ್, ಹೊಂದಾಣಿಕೆ ಎತ್ತರ, ಮೂರು ಕಪ್ ಹೋಲ್ಡ್ ಮತ್ತು ಸ್ಟೋರೇಂಜ್ ಬಿನ್ ಅನ್ನು ಒಳಗೊಂಡಿದೆ.ಎಂಪಿವಿ ಅನ್ನು ಶಿಫ್ಟ್-ಬೈ-ವೈರ್ ತಂತ್ರಜ್ಞಾನದ ಮೂಲಕ ನಿಯಂತ್ರಿಸುವ ಆಟೋಮ್ಯಾಟಿಕ್ ಡಿಎಸ್‌ಜಿ ಗೇರ್‌ಬಾಕ್ಸ್ ಮತ್ತು ಪಾರ್ಕಿಂಗ್ ಬ್ರೇಕ್‌ಗಾಗಿ ಎಲೆಕ್ಟ್ರಾನಿಕ್ ಬಟನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿವ್ಯಾನ್ ಎಂಪಿವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಮೂಲ ಮಾದರಿಯು 469-ಲೀಟರ್ ಲಗೇಜ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಈ ಹೊಸ ಮಲ್ಟಿವ್ಯಾನ್‌ಗೆ 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಸ್ಮಾರ್ಟ್‌ಫೋನ್ ಕನ್ಟೆಕ್ಟಿವಿಟಿ ಮತ್ತು ಇ-ಸಿಮ್ ಆಧಾರಿತ ಕನೆಕ್ಟಿವಿಟಿ ಕಾರ್ ಟೆಕ್ ಅಳವಡಿಸಲಾಗಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿವ್ಯಾನ್ ಎಂಪಿವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಇದು 14 ಹೈ-ಎಂಡ್ ಹಾರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ, 840 ವ್ಯಾಟ್ ಮ್ಯೂಸಿಕ್ ಔಟ್ ಪುಟ್ ಹೊಂದಿರುವ 16-ಚಾನೆಲ್ ಈಥರ್ನೆಟ್ ಆಂಪ್ಲಿಫಯರ್ ಮತ್ತು ನಾಲ್ಕು ಸೌಂಡ್ ಸೆಟ್ಟಿಂಗ್‌ಗಳೊಂದಿಗೆ ಬರುತ್ತದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿವ್ಯಾನ್ ಎಂಪಿವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ವಿಡಬ್ಲ್ಯೂ ಮಲ್ಟಿವ್ಯಾನ್ ಇಹೈಬ್ರಿಡ್ 150 ಬಿಹೆಚ್‍ಪಿ, 1.4 ಎಲ್ ಟಿಎಸ್ಐ ಎಂಜಿನ್ ಅನ್ನು 85 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಇದು 218 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇಹೈಬ್ರಿಡ್ ಬೆಸ್ಪೋಕ್ ಸಿಕ್ಸ್-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ಅನ್ನು ಬಳಸುತ್ತದೆ

ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿವ್ಯಾನ್ ಎಂಪಿವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

13 ಕಿ.ವ್ಯಾಟ್ ಥಿಯಂ-ಐಯಾನ್ ಬ್ಯಾಟರಿಯನ್ನು ಮಲ್ಟಿವ್ಯಾನ್‌ನ ಫ್ಲಾಟ್ ಫ್ಲೋರ್ ಅಡಿಯಲ್ಲಿ ಇರಿಸಲಾಗಿದ್ದು, ಇದರಿಂದ ಆಂತರಿಕ ಜಾಗವನ್ನು ಉಳಿಸುತ್ತದೆ, ಇದರಲ್ಲಿ ಚಾರ್ಜಿಂಗ್ ಪಾಯಿಂಟ್ ಅನ್ನು ಮುಂಭಾಗದಲ್ಲಿ ನೀಡಲಾಗಿದೆ.

Most Read Articles

Kannada
English summary
2022 Volkswagen Multivan 7 Seater Officially Revealed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X