ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ವೊಲ್ವೊ ಕಾರುಗಳು

ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾದ ವೊಲ್ವೊ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಆಯ್ದ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಇದರಲ್ಲಿ ವೊಲ್ವೊ ಸಿವಿ40, ಎಕ್ಸ್‌ಸಿ60 ಮತ್ತು ಎಕ್ಸ್‌ಸಿ90 ಗಳನ್ನು ಒಳಗೊಂಡಿರುವ ಎಸ್‌ಯುವಿ ಸರಣಿಯ ಜೊತೆಗೆ ಎಸ್90 ಸೆಡಾನ್ ಕೂಡ ಸೇರಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ವೊಲ್ವೊ ಕಾರುಗಳು

ಬೆಲೆ ಏರಿಕೆಯ ಪ್ರಮಾಣವು ರೂ.1 ಲಕ್ಷದಿಂದ ರೂ.2 ಲಕ್ಷದವರೆಗೆ ಏರಿಸಲಾಗಿದೆ. ಇನ್ನು ಬೆಲೆ ಹೆಚ್ಚಳದ ಪ್ರಮಾಣವು ಮಾದರಿಗಳಿಗೆ ಅನುಗುಣವಾಗು ಬದಲಾವಣೆಯಾಗುತ್ತದೆ. ಹೊಸ ಹಣಕಾಸಿನ ವರ್ಷದಲ್ಲಿ ಹಲವಾರು ವಾಹನ ಉತ್ಪಾದನಾ ಕಂಪನಿಗಳು ಬೆಲೆ ಏರಿಕೆ ಮಾಡಿದೆ. ಆದರೆ ವೊಲ್ವೊ ಕಂಪನಿಯು ತಡವಾಗಿ ಈ ತಿಂಗಳಿನಲ್ಲಿ ತನ್ನ ಆಯ್ದ ಕಾರುಗಳ ಬೆಲೆಯನ್ನು ಹೆಚ್ಚಿಸಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ವೊಲ್ವೊ ಕಾರುಗಳು

ಹೆಚ್ಚುತ್ತಿರುವ ಇನ್-ಪುಟ್ ವೆಚ್ಚಗಳಿಂದಾಗಿ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ಕಾರುಗಳ ಬೆಲೆಯನ್ನು ಏರಿಸಿದೆ. ವೊಲ್ವೊ ಕಂಪನಿಯು 2018ರಲ್ಲಿ ಕೊನೆಯ ಬಾರಿ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಇದರ ಬಳಿಕ ವರ್ಷಗಳ ನಂತರ ಇದೀಗ ಬೆಲೆ ಏರಿಕೆಯನ್ನು ಮಾಡಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ವೊಲ್ವೊ ಕಾರುಗಳು

ಬೆಲೆ ಏರಿಕೆಯ ಬಳಿಕ ವೊಲ್ವೊ ಎಸ್90 ಡಿ4 ಕಾರಿನ ಬೆಲೆಯು ರೂ.60.90 ಲಕ್ಷಗಳಾದರೆ ಎಕ್ಸ್‌ಸಿ40 ಟಿ4 ಆರ್-ಡಿಸೈನ್ ಮಾದರಿಯ ಬೆಲೆಯು ರೂ.41.25 ಲಕ್ಷಗಳಾಗಿದೆ. ಇನ್ನು ಎಕ್ಸ್‌ಸಿ90 ಡಿ5 ಕಾರಿನ ಬೆಲೆಯು ರೂ,60.90 ಲಕ್ಷ ಮತ್ತು ಎಸ್60 ಟಿ4 ಕಾರಿನ ಬೆಲೆಯು ರೂ.45.90 ಲಕ್ಷಗಳಾಗಿರುತ್ತದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೊರೂಂ ಪ್ರಕಾರವಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ವೊಲ್ವೊ ಕಾರುಗಳು

ವೊಲ್ವೊ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ಮಲ್ಹೋತ್ರಾ ಅವರು ಮಾತನಾಡಿ, ಭಾರತೀಯ ವಾಹನ ಉದ್ಯಮವು ಬೆಲೆ ಏರಿಕೆಯ ಮೂಲಕ ಸಾಗುತ್ತಿರುವಾಗ ವೊಲ್ವೊ ನಾವು ನಮ್ಮ ಎಲ್ಲಾ ಮಾದರಿಗಳ 2018 ರಿಂದ ಮೂರು ವರ್ಷಗಳವರೆಗೆ ಬೆಲೆಗಳನ್ನು ಕಾಯ್ದುಕೊಂಡಿದ್ದೇವೆ. ಆದರೆ ಇದೀಗ ಇನ್-ಪುಟ್ ವೆಚ್ಚ ಅಧಿಕವಾಗುತ್ತಿರುವ ಕಾರಣದಿಂದ ಬೆಲೆ ಏರಿಕೆಯು ಅನಿವಾರ್ಯವಾಗಿದೆ ಎಂದು ಹೇಳಿದರು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ವೊಲ್ವೊ ಕಾರುಗಳು

ವೊಲ್ವೊ ಕಂಪನಿಯು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎಸ್60, ಎಕ್ಸ್‌ಸಿ40, ಎಕ್ಸ್‌ಸಿ60, ಎಕ್ಸ್‌ಸಿ90, ಎಸ್90, ವಿ90 ಕ್ರಾಸ್ ಕಂಟ್ರಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಕಂಪನಿಯು ಎಕ್ಸ್‌ಸಿ60 ಮತ್ತು ಎಸ್90 ಸೆಡಾನ್ ಕಾರುಗಳ 2021ರ ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ವೊಲ್ವೊ ಕಾರುಗಳು

ಜಾಗತಿಕ ಮಾರುಕಟ್ಟೆಗಳಲ್ಲಿ ಕಳೆದ ವರ್ಷ 2 ಲಕ್ಷ ಯುನಿಟ್ ಮಾರಾಟವಾಗಿ ಎಕ್ಸ್‌ಸಿ60 ಮಾದರಿಯು ಈ ಹಿಂದಿನ ವರ್ಷದ ಮಾರಾಟಕ್ಕಿಂತ ಶೇ.29ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಇದೀಗ ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆಗಳಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ವೊಲ್ವೊ ಕಾರುಗಳು

ಇನ್ನು ಭಾರತದಲ್ಲಿ ಮಾರಾಟವಾಗುತ್ತಿರುವ ವೊಲ್ವೊ ಎಸ್60 ಕಾರಿನಲ್ಲಿ ಅದೇ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187 ಬಿಹೆಚ್‍ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ವೊಲ್ವೊ ಕಾರುಗಳು

ವೊಲ್ವೊ ಮುಂಬರುವ ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. 2023ರಿಂದ ವೊಲ್ವೊ ನಿರ್ಮಾಣದ ಬಹುತೇಕ ಕಾರುಗಳಲ್ಲಿ ಹಂತ-ಹಂತವಾಗಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಲಾಗುತ್ತಿದೆ.

Most Read Articles

Kannada
Read more on ವೊಲ್ವೊ volvo
English summary
Volvo Car India Announces Price Hike For Select Models. Read In Kannada.
Story first published: Tuesday, May 4, 2021, 15:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X