ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಸ್ವಿಡಿಷ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ವೊಲ್ವೊ ಭಾರತದಲ್ಲಿ ತನ್ನ ಪ್ರಮುಖ ಕಾರು ಮಾದರಿಗಳ ಮಾರಾಟದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಇದೀಗ ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಎಕ್ಸ್‌ಸಿ90 ಮಾದರಿಯನ್ನು ಬಿಡುಗಡೆ ಮಾಡಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಐಷಾರಾಮಿ ಕಾರು ಮಾರಾಟ ಉತ್ತಮ ಬೇಡಿಕೆ ಹೊಂದಿರುವ ಎಸ್ 90 ಮತ್ತು ಎಕ್ಸ್‌ಸಿ90 ಕಾರು ಮಾದರಿಗಳನ್ನು ಹೊಸ ಬದಲಾವಣೆಗಳನ್ನು ಬಿಡುಗಡೆಗೊಳಿಸಲಾಗಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಎಕ್ಸ್‌ಸಿ90 ಎಸ್‌ಯುವಿ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 89.90 ಲಕ್ಷ ಬೆಲೆ ಹೊಂದಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಡೀಸೆಲ್ ಕಾರುಗಳ ಮಾರಾಟವನ್ನು ಹಂತ-ಹಂತವಾಗಿ ಕಡಿತಗೊಳಿಸುತ್ತಿರುವ ವೊಲ್ವೊ ಕಂಪನಿಯು ಪ್ರಮುಖ ಕಾರುಗಳನ್ನು ಹೊಸ ಪೆಟ್ರೋಲ್ ಹೈಬ್ರಿಡ್ ಎಂಜಿನ್‌ಗೆ ಉನ್ನತೀಕರಿಸುತ್ತಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಎಕ್ಸ್‌ಸಿ90 ಕಾರು ಮಾದರಿಯಲ್ಲೂ ಕೂಡಾ ಕಂಪನಿಯು ಕೇವಲ 2.0 ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮಾತ್ರ ನೀಡಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

2022ರಿಂದ ಇನ್ನುಳಿದ ಕಾರು ಮಾದರಿಗಳಲ್ಲೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಿದ್ದು, ಕೇವಲ ಪೆಟ್ರೋಲ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರವೇ ಬಿಡುಗಡೆ ಮಾಡಲಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಹೈಬ್ರಿಡ್ ಎಂಜಿನ್ ವಾಹನ ಉತ್ಪಾದನೆಯಲ್ಲಿ ಈಗಾಗಲೇ ಮುಂಚೂಣಿ ಹೊಂದಿರುವ ವೊಲ್ವೊ ಕಂಪನಿಯು 2023ರ ವೇಳೆಗೆ ಒಟ್ಟು 6 ಕಾರು ಮಾದರಿಗಳನ್ನು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ರೂಪಾಂತರದಲ್ಲಿ ಮಾರಾಟ ಮಾಡುವ ಗುರಿ ಹೊಂದಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಎಕ್ಸ್‌ಸಿ90 ಮಾದರಿಯು ಹೊಸ ಎಂಜಿನ್ ಆಯ್ಕೆ ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಹೊಸ ಕಾರಿನ ನವೀಕೃತ ಮುಂಭಾಗದ ಜೊತೆಗೆ ಕೆಲವು ತಾಂತ್ರಿಕ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಕ್ಯಾಬಿನ್ ಫೀಚರ್ಸ್ ಹೆಚ್ಚಿಸಲಾಗಿದೆ. ಹೊಸ ಕಾರಿನಲ್ಲಿ ಈ ಬಾರಿ ವ್ಯಯಕ್ತಿರಣಗೊಳಿಸಿದ ಡ್ರೈವರ್ ಅಸಿಸ್ಟ್ ಟೆಕ್ನಾಲಜಿ ನೀಡಲಾಗಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಡ್ರೈವರ್ ಅಸಿಸ್ಟ್ ಟೆಕ್ನಾಲಜಿಯಲ್ಲಿ ಅಡ್ವಾಟಿವ್ ಕ್ರೂಸ್ ಕಂಟ್ರೋಲ್, ಲೈನ್ ಕಿಪ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ಫ್ರಂಟ್ ಅಂಡ್ ರಿಯರ್ ಕೂಲಿಷನ್ ಅಲರ್ಟ್, ಕ್ರಾಸ್ ಟ್ರಾಫಿಕ್ ಅಲರ್ಟ್, ಪಾರ್ಕ್ ಅಸಿಸ್ಟ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಹೊಸ ಕಾರಿನ ಟಚ್ ಸ್ಕ್ರೀನ್ ಇಂಟರ್ಫೇಸ್ ಸಹ ನೀಡಲಾಗಿದ್ದು, ಈ ಮೂಲಕ ಕಾರು ಚಾಲನೆಯೊಂದಿಗೆ ಸುಲಭವಾಗಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನುಸರಿಸಲು, ಫೋನ್ ಕರೆಗಳಿಗೆ ಉತ್ತರಿಸಲು ಅನುಕೂಲ ಮಾಡಿಕೊಡಲಾಗಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಇದರೊಂದಿಗೆ ಹೊಸ ಕಾರಿನಲ್ಲಿ ಇನ್-ಕಾರ್ ಎಂಟರ್ಟೈನ್ಮೆಂಟ್ ಅಪ್ಲಿಕೇಶನ್‌ಗಳನ್ನು ಸಹ ನೀಡಲಾಗಿದ್ದು,ಕ್ಯಾಬಿನ್ ಗುಣಮಟ್ಟ ಹೆಚ್ಚಿಸಲು ಪಿಎಂ 2.5 ಏರ್ ಕ್ಲಿನರ್ ತಂತ್ರಜ್ಞಾನದೊಂದಿಗೆ ವುಡ್, ಕ್ರಿಸ್ಟಲ್ ಅತ್ಯಾಧುನಿಕ ಸ್ಕ್ಯಾಂಡಿನೇವಿಯನ್ ವಿನ್ಯಾಸವನ್ನು ಜೋಡಣೆ ಮಾಡಲಾಗಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಹೊಸ ಕಾರಿನಲ್ಲಿ ಕಂಪನಿಯು 2.0 ಲೀಟರ್ (1,969 ಸಿಸಿ) 48 ವಿ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಹೊಂದಿರುವ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಆಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಇದು 8-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್‌ ಮೂಲಕ 296 ಬಿಎಚ್‌ಪಿ ಮತ್ತು 420 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

2021ರ ಎಕ್ಸ್‌ಸಿ90 ಮಾದರಿಯು ಓನಿಕ್ಸ್ ಬ್ಲಾಕ್, ಡೆನಿಮ್ ಬ್ಲೂ, ಪೈನ್ ಗ್ರೇ ಮತ್ತು ವೈಟ್ ಪರ್ಲ್ ಎನ್ನುವ ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಮರ್ಸಿಡಿಸ್ ಬೆಂಝ್ ಜಿಎಲ್ಎಸ್, ಬಿಎಂಡಬ್ಲ್ಯು ಎಕ್ಸ್7 ಮತ್ತು ರೇಂಜ್ ರೋವರ್ ವೆಲಾರ್‌ ಕಾರುಗಳಿಗೆ ಪ್ರಬಲ ಪ್ರತಿಸ್ಪರ್ಧಿ ಮಾದರಿಯಾಗಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಇನ್ನು ವೊಲ್ವೊ ಕಂಪನಿಯು ಕೂಡಾ ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, 2022ರಿಂದ ಇನ್ನುಳಿದ ಕಾರು ಮಾದರಿಗಳಲ್ಲಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಭಾರತ ಸೇರಿ ವಿಶ್ವದ ಪ್ರಮುಖ ರಾಷ್ಟ್ರಗಳು 2030ರ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಚಾಲಿತ ವಾಹನ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಗೊಳಿಸುವ ಸಿದ್ದತೆಯಲ್ಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳಿಗೆ ಪರ್ಯಾಯವಾಗಿ ಹೆಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಹೊಸ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ90 ಎಸ್‌ಯುವಿ

ಡೀಸೆಲ್ ಎಂಜಿನ್ ವಾಹನಗಳ ಬಳಕೆಗೆ ನಿರ್ಬಂಧ ವಿಧಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಖರೀದಿ ಉತ್ತೇಜಿಸಲು ತೆರಿಗೆ ವಿನಾಯ್ತಿ, ಜಿಎಸ್‌ಟಿ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವೊಲ್ವೊ ಕಂಪನಿಯು ಕೂಡಾ ವಿಶ್ವಾದ್ಯಂತ ಪರಿಸರ ಸ್ನೇಹಿ ವಾಹನಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

Most Read Articles

Kannada
Read more on ವೊಲ್ವೊ volvo
English summary
Volvo xc90 petrol mild hybrid launched in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X