ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ಒಂದೇ ಕಂಪನಿಯ 5 ಎಲೆಕ್ಟ್ರಿಕ್ ವಾಹನಗಳ ಅನಾವರಣ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾದಂತೆ ಹೊಸ ಇವಿ ಕಂಪನಿಗಳು ಸಾಲು ಸಾಲು ವಾಹನಗಳನ್ನು ಪರಿಚಯಿಸುತ್ತಿವೆ. ಇದೀಗ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಮುಂದಿನ ತಿಂಗಳು 2023 ಆಟೋ ಎಕ್ಸ್‌ಪೋದಲ್ಲಿ 5 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಸದ್ಯ ಎಲೆಕ್ಟ್ರಿಕ್ ವಾಹನಗಳು ಇಂಧನ ಚಾಲಿತ ವಾಹನಗಳನ್ನು ಸಂಪೂರ್ಣ ಹಿಂದಿಕ್ಕಲು ಹೊರಟಿವೆ. ಮುಂದಿನ ಹತ್ತು ವರ್ಷಗಳಲ್ಲಿ ವಾಹನ ಉದ್ಯಮ ಸಂಪೂರ್ಣ ಬದಲಾಗಲಿದೆ. ಭವಿಷ್ಯವನ್ನು ಅರಿತಿರುವ ಬಹುತೇಕ ಪ್ರಮುಖ ವಾಹನ ತಯಾರಕರು ಇಂಧನ ಚಾಲಿತ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಸೇಫರ್ ಸೈಡ್ ಎಂಬಂತೆ ಒಂದೊಂದಾಗಿ ಪರಿಚಯಿಸುತ್ತಿವೆ. ಇವು ಒಂದೆಡೆಯಾದರೆ ಮತ್ತೊಂದೆಡೆ ಹೊಸ ಸ್ಟಾರ್ಟ್ ಅಪ್ ಕಂಪನಿಗಳು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿರುವುದು ಗೊತ್ತೇ ಇದೆ.

ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ಒಂದೇ ಕಂಪನಿಯ 5 ಎಲೆಕ್ಟ್ರಿಕ್ ವಾಹನಗಳ ಅನಾವರಣ

ಇಂತಹ ಕಂಪನಿಗಳಲ್ಲಿ ಒಂದಾದ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಭಾರತದಲ್ಲಿ ಆಂಪಿಯರ್ ಬ್ರ್ಯಾಂಡ್ ಅಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತದೆ. ಕಂಪನಿಯು ಭಾರತದಲ್ಲಿನ ಅಗ್ರ 3 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟಗಾರರಲ್ಲಿ ಒಂದಾಗಿದೆ. ಜನರ ಅಗತ್ಯಗಳನ್ನು ಅರಿತು ವಾಹನಗಳನ್ನು ಮಾರಾಟ ಮಾಡುವ ಕಂಪನಿಯೆಂದು ಜನಪ್ರಿಯತೆ ಪಡೆದಿದೆ. ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿಯೇ ಕಂಪನಿಯು ಬರೋಬ್ಬರಿ 33 ಸಾವಿರ 2 ಮತ್ತು 3 ಚಕ್ರದ ವಾಹನಗಳನ್ನು ಮಾರಾಟ ಮಾಡಿದೆ.

ಕಂಪನಿಯು ಮುಂಬರುವ 2023 ರಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ತಲುಪಲು ಯೋಜಿಸುತ್ತಿದೆ. ಹೀಗಾಗಿ, 2023 ರಲ್ಲಿ ಕ್ಷೇತ್ರಕ್ಕೆ ಬರಲು ತನ್ನ 5 ಹೊಸ ಉತ್ಪನ್ನಗಳನ್ನು ಸಿದ್ಧಪಡಿಸಿದೆ. 2023 ರ ಜನವರಿಯಲ್ಲಿ ಮುಂಬರುವ ಆಟೋ ಎಕ್ಸ್‌ಪೋದಲ್ಲಿ ತನ್ನ ಎಲ್ಲಾ 5 ಉತ್ಪನ್ನಗಳನ್ನು ಪರಿಚಯಿಸಲು ನಿರ್ಧರಿಸಿದೆ. ಈ 5 ಉತ್ಪನ್ನಗಳಲ್ಲಿ 2 ವೀಲರ್ ಮತ್ತು 3 ವೀಲರ್ ಸೇರಿವೆ. ಕಂಪನಿಯ ಎಲ್ಲಾ ವಾಹನ ವಿನ್ಯಾಸಗಳನ್ನು ಭಾರತೀಯ ರಸ್ತೆಗಳು ಮತ್ತು ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಅದರ ಎಲ್ಲಾ 2 ಮತ್ತು 3 ಚಕ್ರದ ವಾಹನಗಳು ಹ್ಯುಮನೈಜಿಂಗ್ ತಂತ್ರಜ್ಞಾನದಿಂದ ಚಾಲಿತವಾಗಿವೆ. ಕಂಪನಿಯ ಉತ್ಪನ್ನಗಳನ್ನು ಉನ್ನತ ತಂತ್ರಜ್ಞಾನ ಮತ್ತು ಸುರಕ್ಷತೆಯನ್ನು ಸಂಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಈಗ, 5 ಹೊಸದಾಗಿ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಹೊಸ ವಿನ್ಯಾಸ ಮತ್ತು ಮುಂದಿನ ಪೀಳಿಗೆಯ ಏರೋ ಡೈನಮಿಕ್ ಕಾರ್ಗೋ 3-ವೀಲರ್ ಪರಿಕಲ್ಪನೆಯನ್ನು ಆಧರಿಸಿವೆ. ಕಂಪನಿಯ ಪ್ರಕಾರ, ಮೇಕ್-ಇನ್-ಇಂಡಿಯಾ ನೀತಿಯ ಪ್ರಕಾರ ಎಲ್ಲಾ ವಾಹನಗಳ ಹೆಚ್ಚಿನ ಬಿಡಿಭಾಗಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ.

ಈ ಕುರಿತು ಪ್ರತಿಕ್ರಿಯಿಸಿದ ಗ್ರೀವ್ಸ್ ಕಾಟನ್‌ನ ಉಪಾಧ್ಯಕ್ಷ ನಾಗೇಶ್ ಬಸವನಹಳ್ಳಿ, "ಆಟೋ ಎಕ್ಸ್‌ಪೋ ಗ್ರೀವ್ಸ್‌ಗೆ ಒಂದು ಮೈಲಿಗಲ್ಲು, ನಾವು ಮೊದಲ ಬಾರಿಗೆ ನಮ್ಮ ಭವಿಷ್ಯವನ್ನು ಪ್ರದರ್ಶಿಸುತ್ತಿದ್ದೇವೆ. ಇದು ನಮ್ಮ 2 ಮತ್ತು 3 ವೀಲರ್ ಉತ್ಪನ್ನಗಳನ್ನು ಹೆಚ್ಚಿಸುತ್ತದೆ. ಜೊತೆಗೆ B2B ಮತ್ತು B2C ವ್ಯಾಪಾರವನ್ನು ಹೆಚ್ಚಿಸುವುದರ ಜೊತೆಗೆ ಗ್ರಾಹಕರೂ ಹೆಚ್ಚುತ್ತಾರೆ. ನಮ್ಮ ಹೊಸ ವಿನ್ಯಾಸ ಭಾಷೆಯು ಈ ವಿಭಾಗಕ್ಕೆ ಹೊಸ ಆಯಾಮವನ್ನು ತರುತ್ತದೆ. ಅಲ್ಲದೇ ದೇಶದಲ್ಲಿ ಪ್ರಮಾಣಿತ ವಾಹನಗಳ ಉತ್ಪಾದನೆಯಲ್ಲಿ ನಾವು ಅಗ್ರಸ್ಥಾನಕ್ಕೇರಲು ಇದೊಂದು ಉತ್ತಮ ಅವಕಾಶವಾಗಿದೆ ಎಂದರು.

ಈ 5 ಉತ್ಪನ್ನಗಳಲ್ಲಿ 2 ವೀಲರ್‌ಗಳು ಮತ್ತು 3 ವೀಲರ್‌ಗಳು ಎಂಬುದು ತಿಳಿದು ಬಂದಿದೆಯಾದರೂ ಇವು ಯಾವ ರೀತಿಯ ವಾಹನ ಮತ್ತು ಯಾವ ವಲಯಕ್ಕಾಗಿ ಬಳಸಲು ತಯಾರಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿಲ್ಲ. ಇದೆಲ್ಲವೂ 2023 ಆಟೋ ಎಕ್ಸ್‌ಪೋದಲ್ಲಿ ಬಹಿರಂಗಗೊಳ್ಳಲಿದೆ. ಇನ್ನೇನು ಆಟೋ ಎಕ್ಸ್‌ಪೋಗೆ 30 ದಿನ ಬಾಕಿಯಿದೆ. ಗ್ರೀವ್ಸ್‌ ಜೊತೆಗೆ ಈ ಬಾರಿ ಹಲವು ಕಂಪನಿಗಳು ಕೂಡ ತಮ್ಮ ಭವಿಷ್ಯದ ವಾಹನಗಳನ್ನು ಬಹಿರಂಗಪಡಿಸಲಿದ್ದು ಆಟೋ ಉತ್ಸಾಹಿಗಳು ಇದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
5 evs from the same company to be launched at this Auto Expo
Story first published: Saturday, December 10, 2022, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X