ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸುತ್ತಿರುವ ಮೆಜೆಂಟಾ ಕಂಪನಿಯು ಪ್ರಮುಖ ಕಂಪನಿಗಳೊಂಗಿನ ಸಹಭಾಗೀತ್ವ ಯೋಜನೆ ಅಡಿಯಲ್ಲಿ ದೇಶಾದ್ಯಂತ ಇವಿ ನಿಲ್ದಾಣಗಳ ಹೆಚ್ಚಳಕ್ಕಾಗಿ ಬೃಹತ್ ಯೋಜನೆಗಳನ್ನು ಆರಂಭಿಸಿದ್ದು, ಇತ್ತೀಚೆಗೆ ಕಂಪನಿಯು ಇ-ಕಾರ್ಮರ್ಸ್ ದೈತ್ಯ ಅಮೆಜಾನ್ ಜೊತೆಗೂಡಿ ಬೃಹತ್ ಯೋಜನೆಯೊಂದಕ್ಕೆ ಚಾಲನೆ ನೀಡಿದೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ತೈಲ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚವು ಸಹ ಸಾಕಷ್ಟು ಏರಿಕೆಯಾಗುತ್ತಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದು, ಇವಿ ವಾಹನಗಳಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ವಿವಿಧ ರಾಜ್ಯಗಳು ಸಹ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ವ್ಯಯಕ್ತಿಕ ಬಳಕೆಯ ಇವಿ ವಾಹನಗಳು ಮಾತ್ರ ವಾಣಿಜ್ಯ ಬಳಕೆಯ ಇವಿ ವಾಹನಗಳ ಅಳವಡಿಕೆಗೆ ಅಮೆಜಾನ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಕಂಪನಿಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಅಮೆಜಾನ್ ಸೇರಿದಂತೆ ಪ್ರಮುಖ ಕಂಪನಿಗಳು ಗ್ರಾಹಕರ ಸೇವೆಗಳ ವಿಭಾಗದಲ್ಲಿ ಇವಿ ವಾಹನಗಳ ಅಳವಡಿಕೆಗೆ ವೇಗ ನೀಡುತ್ತಿದ್ದು, ಇವಿ ವಾಹನಗಳಿಗೆ ಪೂರಕವಾಗಿ ಕಂಪನಿಯು ಮೆಜಾಂಟಾ ಮೊಬಿಲಿಟಿ ಜೊತೆಗೂಡಿ ಚಾರ್ಜಿಂಗ್ ನಿಲ್ದಾಣ ಸೌಲಭ್ಯವನ್ನು ಬಲಪಡಿಸುತ್ತಿದೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯ ಕೂಡಾ ಪ್ರಮುಖವಾಗಿದ್ದು, ಈಗಾಗಲೇ ಹಲವಾರು ಖಾಸಗಿ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ವಿಸ್ತರಿಸುತ್ತಿವೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ಮುಂಬೈ ಮೂಲದ ಮೆಜೆಂಟಾ ಕಂಪನಿಯು ಕೂಡಾ ಈಗಾಗಲೇ ದೇಶಾದ್ಯಂತ ನೂರಕ್ಕೂ ಹೆಚ್ಚು ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ವಿವಿಧ ಕಂಪನಿಗಳ ಜೊತೆಗೂಡಿ ಸ್ಥಾಪನೆ ಮಾಡಿದ್ದು, ಗ್ರಾಹಕರ ಬೇಡಿಕೆ ಅನುಸಾರವಾಗಿ ಎಸಿ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಜೋಡಣೆ ಮಾಡುತ್ತಿದೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ಇದೀಗ ಅಮೆಜಾನ್ ಕಂಪನಿಯ ಜೊತೆಗೂಡಿರುವ ಮೆಜೆಂಟಾ ಮೊಬಿಲಿಟಿ ಕಂಪನಿಯು ಅಮೆಜಾನ್ ಪಾಲುದಾರರ ಇವಿ ವಾಹನಗಳಿಗೆ ಒಂದೇ ಸೂರಿನಡಿ ವಿವಿಧ ಮಾದರಿಯ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ದೇಶಾದ್ಯಂತ ಪ್ರಮುಖ ನಗರಗಳಲ್ಲಿರುವ ಅಮೆಜಾನ್ ಪ್ರಮುಖ ಇ-ಕಾರ್ಮಸ್ ದಾಸ್ತಾನು ಕೇಂದ್ರಗಳಲ್ಲಿ ಇವಿ ವಾಹನಗಳ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ಎಸಿ ಮತ್ತು ಡಿಸಿ ಚಾರ್ಜರ್‌ಗಳ ಸಂಯೋಜನೆಯು ದ್ವಿಚಕ್ರ ವಾಹನ, ತ್ರಿ ಚಕ್ರ ವಾಹನಗಳು ಮತ್ತು ಕಾರುಗಳಿಗೆ ಚಾರ್ಜಿಂಗ್ ಗ್ರಿಡ್ ಬೆಂಬಲಿಸಲಿದ್ದು, ಇವಿ ಚಾರ್ಜಿಂಗ್ ಸ್ಟೇಷನ್‌ಗಳು ಸಂಪೂರ್ಣವಾಗಿ ಆನ್‌ಲೈನ್ ರಿಮೋಟ್ ಮಾನಿಟರಿಂಗ್‌ ಸಿಸ್ಟಂ ಹೊಂದಿರಲಿವೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ಹೊಸ ಚಾರ್ಜಿಂಗ್ ನಿಲ್ದಾಣಗಳನ್ನು ಕಂಪನಿಯು ಆನ್‌ಲೈನ್ ರಿಮೋಟ್ ಮಾನಿಟರಿಂಗ್ ಮೂಲಕವೇ ಮುಖ್ಯ ಕಚೇರಿಯಿಂದ ನಿರ್ವಹಿಸಲಿದ್ದು, ಆನ್‌ಲೈನ್ ರಿಮೋಟ್ ಮಾನಿಟರಿಂಗ್ ಸಿಸ್ಟಂ ಮೂಲಕವೇ ಸ್ವಯಂಚಾಲಿತ ಪಾವತಿ ಗೇಟ್‌ವೇ ಒದಗಿಸುತ್ತದೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ಆನ್‌ಲೈನ್ ರಿಮೋಟ್ ಸಂಪರ್ಕ ಹೊಂದಿರುವುದರಿಂದ ಸ್ಥಳದಲ್ಲಿ ಚಾರ್ಜರ್‌ಗಳ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಸ್ಟೇಷನ್ ಮಾರ್ಷಲ್‌ಗಳ ಹೊಂದುವ ಅಗತ್ಯವನ್ನು ನಿವಾರಿಸುತ್ತದೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

ಇನ್ನು ಮೆಜೆಂಟಾ ಕಂಪನಿಯ ಅಧೀನದಲ್ಲಿ ಸದ್ಯ ಕಾರ್ಯನಿರ್ವಹಣೆಯಲ್ಲಿರುವ 4,500 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ 2950 ಚಾರ್ಜಿಂಗ್ ನಿಲ್ದಾಣಗಳನ್ನು ಫೇಮ್ 2 ಯೋಜನೆ ಅಡಿ ನಿರ್ಮಾಣ ಮಾಡಿದ್ದು, ಇನ್ನುಳಿದ 1200 ಚಾರ್ಜಿಂಗ್ ನಿಲ್ದಾಣಗಳನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್‌ಗಳಲ್ಲಿ, ಫ್ರೆನ್ ಹೋಟೆಲ್‌ಗಳ ಆವರಣದಲ್ಲಿ ಮತ್ತು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್‌ ಜೊತೆಗೆ ಪ್ರಮುಖ ವಸತಿ ಕಟ್ಟಡಗಳಲ್ಲಿ ಫಾಸ್ಟ್ ಚಾರ್ಜರ್‌ಗಳನ್ನು ಸ್ಥಾಪನೆ ಮಾಡುತ್ತಿದೆ.

ಅಮೆಜಾನ್ ಇ-ಕಾರ್ಮಸ್ ಸೇವೆಗಳ ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲಿದೆ ಮೆಜೆಂಟಾ

2026ರ ವೇಳೆಗೆ ಸಂಭಾವ್ಯವಾಗಿ ಸಂಚರಿಸಬಹುದಾದ ಎರಡು ಮಿಲಿಯನ್ ಎಲೆಕ್ಟ್ರಿಕ್ ವಾಹನಗಳ(ಇವಿ) ಚಾರ್ಜಿಂಗ್ ಅಗತ್ಯವನ್ನು ಪೂರೈಸಲು 4 ಲಕ್ಷ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಸರ್ಕಾರದ ಉಪಕ್ರಮವನ್ನು ಪ್ರಮುಖ ಚಾರ್ಜಿಂಗ್ ನಿಲ್ದಾಣ ನಿರ್ಮಾಣಗಳು ಬೆಂಬಲಿಸುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗಲಿವೆ.

Most Read Articles

Kannada
English summary
Amazon and magenta mobility partnership for electric vehicles fleet charging
Story first published: Monday, July 25, 2022, 20:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X